Back
Home » ಇತ್ತೀಚಿನ
ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ!
Gizbot | 5th Aug, 2020 08:29 PM
 • ಸ್ಯಾಮ್‌ಸಂಗ್ ಸಂಸ್ಥೆ

  ಹೌದು, ಸ್ಯಾಮ್‌ಸಂಗ್ ಸಂಸ್ಥೆಯು ಇಂದು ಹೊಸ 'ಗ್ಯಾಲಕ್ಸಿ ನೋಟ್‌ 20' ಫ್ಲ್ಯಾಗ್‌ಶಿಪ್ ಸ್ಮಾರ್ಟ್‌ಫೋನ್‌ ಅನ್ನು ಬಿಡುಗಡೆ ಮಾಡಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ 20 ಮತ್ತು ಗ್ಯಾಲಕ್ಸಿ 20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳು ಪ್ರಮುಖ ಹೈಲೈಟ್‌ನಲ್ಲಿ ಕಾಣಿಸಿಕೊಂಡಿವೆ. ಈ ಎರಡು ಸ್ಮಾರ್ಟ್‌ಫೋನ್‌ಗಳು 5G ಬೆಂಬಲ ಒಳಗೊಂಡಿದ್ದು, S ಪೆನ್ ಸೌಲಭ್ಯ ಪಡೆದಿದೆ. ಹಾಗಾದರೆ ಸ್ಯಾಮ್‌ಸಂಗ್ ಗ್ಯಾಲಕ್ಸಿ ನೋಟ್‌ 20 ಮತ್ತು ಗ್ಯಾಲಕ್ಸಿ 20 ಅಲ್ಟ್ರಾ ಸ್ಮಾರ್ಟ್‌ಫೋನ್‌ಗಳ ಬೆಲೆ ಎಷ್ಟು ಹಾಗೂ ಇತರೆ ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ತಿಳಿಯೋಣ.


 • ಗ್ಯಾಲಕ್ಸಿ ನೋಟ್‌ 20-ಡಿಸ್‌ಪ್ಲೇ

  ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.7 ಇಂಚಿನ ಸೂಪರ್‌ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ರೀಫ್ರೇಶ್‌ ರೇಟ್‌ 60Hz ಸಾಮರ್ಥ್ಯದಲ್ಲಿದೆ.


 • ಗ್ಯಾಲಕ್ಸಿ ನೋಟ್‌ 20-ಪ್ರೊಸೆಸರ್

  ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಕಂಪನಿಯ Exynos 990 SoC ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ.


 • ಗ್ಯಾಲಕ್ಸಿ ನೋಟ್‌ 20-ಕ್ಯಾಮೆರಾ

  ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 64ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ.


 • ಗ್ಯಾಲಕ್ಸಿ ನೋಟ್‌ 20-ಬ್ಯಾಟರಿ

  ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ 4,500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಹಾಗೆಯೇ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಇದರೊಂದಿಗೆ 5G ಸಪೋರ್ಟ್‌ ಹಾಗೂ ಐಕಾನಿಕ್ S ಪೆನ್ ಸೌಲಭ್ಯ ಇದೆ. ಗ್ರೀನ್‌, ಗ್ರೇ ಹಾಗೂ ಬ್ರೌಂಜ್‌ ಬಣ್ಣಗಳ ಆಯ್ಕೆ ಹೊಂದಿದೆ.


 • ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಡಿಸ್‌ಪ್ಲೇ

  ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ 3200x1440 ಪಿಕ್ಸಲ್‌ ಸಾಮರ್ಥ್ಯದೊಂದಿಗೆ 6.9 ಇಂಚಿನ ಡೈನಾಮಿಕ್ AMOLED ಡಿಸ್‌ಪ್ಲೇ ಹೊಂದಿದೆ. ಹಾಗೆಯೇ ಡಿಸ್‌ಪ್ಲೇಯ ರೀಫ್ರೇಶ್‌ ರೇಟ್‌ 120Hz ಸಾಮರ್ಥ್ಯದಲ್ಲಿದೆ. ಹಾಗೆಯೇ ಗೊರಿಲ್ಲಾ ಗ್ಲಾಸ್‌ 7 ಪಡೆದಿದೆ.


 • ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಪ್ರೊಸೆಸರ್

  ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ ಕಂಪನಿಯ Exynos 990 SoC ಚಿಪ್‌ಸೆಟ್‌ ಸಾಮರ್ಥ್ಯದ ಪ್ರೊಸೆಸರ್ ಹೊಂದಿದ್ದು, ಅದಕ್ಕೆ ಪೂರಕವಾಗಿ ಒನ್ UI 2.0 ಬೆಂಬಲಿತ ಆಂಡ್ರಾಯ್ಡ್‌ 10 ಓಎಸ್‌ ಸಪೋರ್ಟ್ ಇದೆ.


 • ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಕ್ಯಾಮೆರಾ

  ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಒಟ್ಟು ಮೂರು ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಮುಖ್ಯ ಕ್ಯಾಮೆರಾವು 108ಎಂಪಿ ಸೆನ್ಸಾರ್‌ ಹೊಂದಿದೆ. ಇನ್ನು ಸೆಕೆಂಡರಿ ಮತ್ತು ತೃತೀಯ ಕ್ಯಾಮೆರಾಗಳೆರಡು ಸಹ ಕ್ರಮವಾಗಿ 12ಎಂಪಿಯ ಸೆನ್ಸಾರ್ ಸಾಮರ್ಥ್ಯವನ್ನು ಪಡೆದಿವೆ. ಸೆಲ್ಫಿ ಕ್ಯಾಮೆರಾವು 10ಎಂಪಿ ಸೆನ್ಸಾರ್‌ ಪಡೆದಿದೆ.


 • ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ-ಬ್ಯಾಟರಿ

  ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ 4500mAh ಬ್ಯಾಟರಿ ಸಾಮರ್ಥ್ಯವನ್ನು ಪಡೆದಿದ್ದು, ಇದರೊಂದಿಗೆ ಫಾಸ್ಟ್‌ ಚಾರ್ಜಿಂಗ್ ಬೆಂಬಲವನ್ನು ಸಹ ಹೊಂದಿದೆ. ಜೊತೆಗೆ 5G ಸಪೋರ್ಟ್‌ ಹಾಗೂ ಐಕಾನಿಕ್ S ಪೆನ್ ಸೌಲಭ್ಯ ಇದೆ. ಬ್ರಾಂಜ್‌, ಬ್ಲ್ಯಾಕ್ ಹಾಗೂ ವೈಟ್‌ ಬಣ್ಣಗಳ ಆಯ್ಕೆ ಪಡೆದಿದೆ.


 • ಬೆಲೆ ಎಷ್ಟು ಮತ್ತು ಲಭ್ಯತೆ?

  ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಬೆಲೆಯು ಯುಎಸ್‌ನಲ್ಲಿ $999.99ರೂ. (ಭಾರತದಲ್ಲಿ ಅಂದಾಜು 75,400ರೂ), ಗ್ಯಾಲಕ್ಸಿ ನೋಟ್‌ 20 ಅಲ್ಟ್ರಾ ಸ್ಮಾರ್ಟ್‌ಫೋನ್ ಬೆಲೆಯು ಯುಎಸ್‌ನಲ್ಲಿ $1,299.99 ಆಗಿದೆ (ಭಾರತದಲ್ಲಿ ಅಂದಾಜು 97,500ರೂ). ಈ ಎರಡು ಫೋನ್‌ಗಳು ಆಗಸ್ಟ್‌ 21ರಂದು ಸೇಲ್ ಆರಂಭಿಸಲಿವೆ.
ದಕ್ಷಿಣ ಕೊರಿಯಾ ಟೆಕ್ ಸಂಸ್ಥೆ ಸ್ಯಾಮ್‌ಸಂಗ್‌ನ ಬಹುನಿರೀಕ್ಷಿತ 'ಗ್ಯಾಲಕ್ಸಿ ನೋಟ್‌ 20 ಸ್ಮಾರ್ಟ್‌ಫೋನ್ ಸರಣಿ' ಇಂದು (ಆ.5) ಬಿಡುಗಡೆ ಆಗಿದೆ. ಹೊಸ ಗ್ಯಾಲಕ್ಸಿ ನೋಟ್‌ 20 ಸರಣಿಯು ಗ್ಯಾಲಕ್ಸಿ ಅನ್‌ಪ್ಯಾಕ್ಡ್ 2020 ಹೆಸರಿನ ಆನ್‌ಲೈನ್‌ ಲೈವ್‌ ಸ್ಟ್ರೀಮಿಂಗ್ ಕಾರ್ಯಕ್ರಮದ ಮೂಲಕ ಅನಾವರಣ ಮಾಡಲಾಗಿದೆ. ಈ ಸರಣಿಯಲ್ಲಿ ಗ್ಯಾಲಕ್ಸಿ 20 ಮತ್ತು ಗ್ಯಾಲಕ್ಸಿ 20 ಅಲ್ಟ್ರಾ ಹೈಎಂಡ್‌ ಫ್ಲ್ಯಾಗ್‌ಶಿಫ್‌ ಸ್ಮಾರ್ಟ್‌ಫೋನ್‌ಗಳು ಅನಾವರಣ ಆಗಿವೆ.

 
ಹೆಲ್ತ್