Back
Home » ಇತ್ತೀಚಿನ
ಬಿಎಸ್‌ಎನ್‌ಎಲ್‌ನ 849ರೂ. ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಈಗ 100Mbps ನಲ್ಲಿ ಲಭ್ಯ!
Gizbot | 6th Aug, 2020 02:05 PM
 • ಬಿಎಸ್‌ಎನ್‌ಎಲ್‌

  ಹೌದು, ಬಿಎಸ್‌ಎನ್‌ಎಲ್‌ CS359 CUL ಬ್ರಾಡ್‌ಬ್ಯಾಂಡ್ ಬ್ರೌಸಿಂಗ್ ವೇಗವನ್ನು ಹೆಚ್ಚಿಸಿದೆ. ತಿಂಗಳಿಗೆ 849ರೂ. ಬೆಲೆಯಲ್ಲಿ ಲಭ್ಯವಿರುವ ಈ ಯೋಜನೆಯಲ್ಲಿ ತಿಂಗಳಿಗೆ 600GB ಡೇಟಾ ಲಭ್ಯವಾಗುತ್ತದೆ. ಮಧ್ಯಪ್ರದೇಶದ ವಲಯದಲ್ಲಿರುವ ಬಿಎಸ್‌ಎನ್‌ಎಲ್‌ ಭಾರತ್ ಫೈಬರ್ ಬಳಕೆದಾರರು ಈ ಯೋಜನೆಗೆ ಚಂದಾದಾರರಾಗಬಹುದು. ಈ ಆಕರ್ಷಕ ಕೊಡುಗೆಯು ಈ ಯೋಜನೆಯ ಕೊಡುಗೆಯು ಅಕ್ಟೋಬರ್ 5, 2020 ರವರೆಗೆ ಇರಲಿದೆ.


 • ಬಿಎಸ್‌ಎನ್‌ಎಲ್‌-849ರೂ.ಪ್ಲ್ಯಾನ್

  ಬಿಎಸ್‌ಎನ್‌ಎಲ್‌ನ ಈ ಬ್ರಾಡ್‌ಬಾಂಡ್‌ ಪ್ಲ್ಯಾನಿನಲ್ಲಿ ಒಂದು ತಿಂಗಳಿಗೆ ಒಟ್ಟು 600GB ಡೇಟಾ ಮಿತಿಯನ್ನು ನೀಡಲಾಗಿದ್ದು, ಯಾವುದೇ ದೈನಂದಿನ FUP ಮಿತಿ ಇರುವುದಿಲ್ಲ. ಈ ಪ್ಲ್ಯಾನ್‌ನಲ್ಲಿ ಡೇಟಾ ವೇಗವು 50 Mbps ಸಾಮರ್ಥ್ಯದಲ್ಲಿದೆ. ಆಯ್ದ ಟೆಲಿಕಾಂ ಸರ್ಕಲ್‌ಗಳಲ್ಲಿ ಈಗ 100Mbps ಗೆ ಹೆಚ್ಚಿಸಲಾಗಿದೆ. ಹಾಗೆಯೇ ಇತರೆ ನೆಟವರ್ಕ್‌ಗಳಿಗೆ ಅನಿಯಮಿತ ಉಚಿತ ಕರೆಗಳ ಸೌಲಭ್ಯವನ್ನು ಪಡೆದಿದೆ.


 • ಬಿಎಸ್‌ಎನ್‌ಎಲ್‌-777ರೂ.ಪ್ಲ್ಯಾನ್

  ಬಿಎಸ್‌ಎನ್‌ಎಲ್‌ ಸಂಸ್ಥೆಯ ಈ 777ರೂ.ಪ್ಲ್ಯಾನ್‌ ಒಂದು ತಿಂಗಳಿನಲ್ಲಿ 500GB ಡೇಟಾ ಸಿಗಲಿದೆ. ಡೇಟಾ ವೇಗದ ಮಿತಿಯು 50 Mbps ಸಾಮರ್ಥ್ಯದಲ್ಲಿರಲಿದ್ದು, ತಿಂಗಳ ನಿಗದಿತ ಡೇಟಾ ಬಳಕೆ ಮುಗಿದ ಬಳಿಕ 2Mbps ವೇಗದಲ್ಲಿ ಡೇಟಾ ಸೌಲಭ್ಯ ಮುಂದವರೆಯಲಿದೆ.


 • ಬಿಎಸ್‌ಎನ್‌ಎಲ್‌ 499ರೂ. ಪ್ಲ್ಯಾನ್

  ಬಿಎಸ್‌ಎನ್‌ಎಲ್‌ 499ರೂ.ಗಳ ಭಾರತ ಫೈಬರ್‌ ಪ್ಲ್ಯಾನ್‌ ಒಂದು ಅಗ್ಗದ ಬ್ರಾಡ್‌ಬ್ಯಾಂಡ್‌ ಪ್ಲ್ಯಾನ್‌ ಆಗಿದೆ. ಚಂದಾದಾರರಿಗೆ ಈ ಪ್ಲ್ಯಾನ್‌ನಲ್ಲಿ ತಿಂಗಳಿಗೆ 100GB ಡೇಟಾ ಸೌಲಭ್ಯವು FUP ಮಿತಿ ಇರುತ್ತದೆ. 20 Mbps ವೇಗದಲ್ಲಿ ಇಂಟರ್ನೆಟ್ ದೊರೆಯುತ್ತದೆ. ಇದರೊಂದಿಗೆ ಅನಿಯಮಿತ ವಾಯಿಸ್‌ ಕರೆಗಳ ಪ್ರಯೋಜನವು ಲಭ್ಯವಿದೆ. ನಿಗದಿತ ಡೇಟಾ ಮಿತಿ ಮುಗಿದ ಬಳಿಕ 2 Mbps ವೇಗದಲ್ಲಿ ಇಂಟರ್ನೆಟ್ ಮುಂದುವರೆಯುತ್ತದೆ. ಆಯ್ದ ಟೆಲಿಕಾಂ ಸರ್ಕಲ್‌ ವ್ಯಾಪ್ತಿಯಲ್ಲಿ ಲಭ್ಯ.
ಸರ್ಕಾರಿ ಸ್ವಾಮ್ಯದ ಭಾರತ್ ಸಂಚಾರ್ ನಿಗಮ್ ಲಿಮಿಟೆಡ್ (ಬಿಎಸ್ಎನ್ಎಲ್) ಇತ್ತೀಚಿಗೆ ಹಲವು ಆಕರ್ಷಕ ಬ್ರಾಡ್‌ಬ್ಯಾಂಡ್‌ ಯೋಜನೆಗಳನ್ನು ಪರಿಚಯಿಸಿದೆ. ಅವುಗಳಲ್ಲಿ ಅಗ್ಗದ ಪ್ರೈಸ್‌ಟ್ಯಾಗ್‌ನ ಯೋಜನೆಗಳು ಹೆಚ್ಚು ಗ್ರಾಹಕರನ್ನು ಸೆಳೆದಿವೆ. ಆ ಪೈಕಿ ಬಿಎಸ್‌ಎನ್‌ಎಲ್‌ CS359 CUL ಯೋಜನೆಯು ಇದೀಗ ಇಂಟರ್ನೆಟ್ ಬ್ರೌಸ್‌ ವೇಗವನ್ನು 100Mbps ಗೆ ಹೆಚ್ಚಳ ಮಾಡಿದೆ. ಈ ಯೋಜನೆಯ ತಿಂಗಳ ಬೆಲೆಯು 849ರೂ. ಆಗಿದೆ.

 
ಹೆಲ್ತ್