Back
Home » ಇತ್ತೀಚಿನ
ಅಮೆಜಾನ್ ಫ್ರೀಡಂ ಸೇಲ್‌: ಡಿಸ್ಕೌಂಟ್ಸ್‌ ದರದಲ್ಲಿ ಲಭ್ಯವಾಗುವ ಟಾಪ್‌ ಡೀಲ್ಸ್!
Gizbot | 10th Aug, 2020 08:23 PM
 • ಅಮೆಜಾನ್‌ ಫ್ರೀಡಂ ಸೇಲ್‌

  ಹೌದು, ಅಮೆಜಾನ್‌ ಆಯೋಜಿಸಿರುವ ಅಮೆಜಾನ್‌ ಫ್ರೀಡಂ ಸೇಲ್‌ನಲ್ಲಿ ಸ್ಮಾರ್ಟ್‌ಟಿವಿ, ಎಲೆಕ್ಟ್ರಾನಿಕ್ಸ್‌ ಉತ್ಪನ್ನಗಳ ಮೇಲೆ ಭಾರಿ ರಿಯಾಯಿತಿ ದೊರೆಯುತ್ತಿದೆ. ಸಾಕಷ್ಟು ಸ್ಮಾರ್ಟ್‌ಪ್ರಾಡಕ್ಟ್‌ಗಳು ಭಾರಿ ರಿಯಾಯಿತಿ ಧರದಲ್ಲಿ ಲಬ್ಯವಾಗುತ್ತಿದ್ದು, ಗ್ರಾಹಕರು ತಮ್ಮ ನೆಚ್ಚಿನ ಸ್ಮಾರ್ಟ್‌ ಗ್ಯಾಜೆಟ್ಸ್‌ಗಳನ್ನ ಆಯ್ಕೆ ಮಾಡಿಕೊಳ್ಳಬಹುದಾಗಿದೆ. ಇನ್ನುಳಿದಂತೆ ಅಮೆಜಾನ್‌ ಫ್ರೀಡಂ ಸೇಲ್‌ನಲ್ಲಿ ಯಾವೆಲ್ಲಾ ರಿಯಾಯಿತಿ ದರದಲ್ಲಿ ಲಭ್ಯವಾಗುವ ಟಾಪ್‌ ಗ್ಯಾಜೆಟ್ಸ್‌ಗಳ ಬಗ್ಗೆ ಈ ಲೇಖನದಲ್ಲಿ ತಿಳಿದುಕೊಳ್ಳೋಣ ಬನ್ನಿರಿ.


 • ಸೋನಿ WH-1000XM3 ಬ್ಲೂಟೂತ್ ಹೆಡ್‌ಫೋನ್‌

  ಸೋನಿ ಸಂಸ್ಥೆಯ WH-1000XM3 ಬ್ಲೂಟೂತ್ ಹೆಡ್‌ಫೋನ್‌ಗಳು ಅಮೆಜಾನ್‌ ಫ್ರೀಡಂ ಸೇಲ್‌ನಲ್ಲಿ ಭಾರಿ ರಿಯಾಯಿತಿಯನ್ನು ಪಡೆದಿದೆ. ಇದೀಗ ಇದರ ಬೆಲೆ ಕೇವಲ 19,990 ರೂ ಆಗಿದೆ. ಇನ್ನು ಈ ಹೆಡ್‌ಫೋನ್‌ಗಳು ಅಲೆಕ್ಸಾ ಜೊತೆ ಆಕ್ಟಿವ್‌ ನಾಯ್ಸ್‌ ಕ್ಯಾನ್ಸಲೇಶನ್‌ ಮತ್ತು ವಾಯ್ಸ್‌ ಅಸಿಸ್ಟೆಂಟ್‌ ಬೆಂಬಲವನ್ನು ಹೊಂದಿದೆ. ಇದಲ್ಲದೆ ಸೋನಿ WH-1000XM3 ಹೆಡ್‌ಫೋನ್‌ 30 ಗಂಟೆಗಳ ಬ್ಯಾಟರಿ ಅವಧಿಯನ್ನು ಹೊಂದಿದ್ದು, 10min ಚಾರ್ಜ್ ಮಾಡಿದರೆ 5 ಗಂಟೆಗಳ ಪ್ಲೇಬ್ಯಾಕ್ ಅನ್ನು ನೀಡುತ್ತದೆ.


 • ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3I

  ಲೆನೊವೊ ಐಡಿಯಾಪ್ಯಾಡ್ ಸ್ಲಿಮ್ 3I ಇದೀಗ 30,990 ರೂಗಳಿಂದ ಲಭ್ಯವಿದೆ. ಸ್ಲಿಮ್ 3i ಅನ್ನು 10 ನೇ ಜನ್ ಇಂಟೆಲ್ ಕೋರ್ i3-1005G1 ಮತ್ತು ಕೋರ್ i5-1035G1 ಪ್ರೊಸೆಸರ್‌ಗಳೊಂದಿಗೆ ಕಾನ್ಫಿಗರ್ ಮಾಡಬಹುದಾಗಿದೆ. ಅಲ್ಲದೆ ಇದು ಬಹಳ ತೆಳುವಾದ ಮತ್ತು ಹಗುರವಾದ ವಿನ್ಯಾಸವನ್ನು ಹೊಂದಿದೆ.


 • Crucial P1 500GB 3D NAND PCIe M.2 SSD

  Crucial P1 500GB 3D NAND PCIe M.2 SSD ಅಮೆಜಾನ್ ಫ್ರೀಡಂ ಸೇಲ್‌ನಲ್ಲಿ ಕೇವಲ 5,499 ರೂಗಳಿಗೆ ಲಭ್ಯವಿದೆ.ಇದು SSD 2,000MB /s ವರೆಗಿನ ವೇಗವನ್ನು ಓದುತ್ತದೆ ಮತ್ತು 1,700MB / s ವರೆಗೆ ಬರೆಯುವ ವೇಗವನ್ನು ನೀಡಲಿದೆ. ಇದಲ್ಲದೆ SATA SSD ಮತ್ತು HDD ಸಂಗ್ರಹಣೆಯ ಮೇಲೆ ಭಾರಿ ವೇಗ ವರ್ಧಕವನ್ನು ನೀಡುತ್ತದೆ.


 • ಅಮೆಜಾನ್ ಎಕೋ ಡಾಟ್

  ಅಮೆಜಾನ್ ಎಕೋ ಡಾಟ್ ಕೂಡ ಅಮೆಜಾನ್‌ನಲ್ಲಿ ರಿಯಾಯಿತಿ ದರದಲ್ಲಿ ದೊರೆಯುತ್ತಿದ್ದು, ಇದೀಗ ನಿವು ಕೇವಲ 2,599 ರೂಗಳಿಗೆ ಖರೀದಿಸಬಹುದಾಗಿದೆ. ಆದಾಗ್ಯೂ, ನೀವು ಹೆಚ್ಚುವರಿ 99 ರೂಗಳನ್ನು ಪಾವತಿಸಿದರೆ ವಿಪ್ರೋ 9 ಡಬ್ಲ್ಯೂ ಎಲ್ಇಡಿ ಸ್ಮಾರ್ಟ್ ಬಲ್ಬ್‌ ನೊಂದಿಗೆ ಎಕೋ ಡಾಟ್ ಅನ್ನು ಪಡೆಯಬಹುದಾಗಿದೆ.


 • ಎಲ್‌ಜಿ ಅಲ್ಟ್ರಾಗಿಯರ್ ಗೇಮಿಂಗ್ ಮಾನಿಟರ್

  ಎಲ್‌ಜಿ ಅಲ್ಟ್ರಾಗಿಯರ್ ಗೇಮಿಂಗ್ ಮಾನಿಟರ್ ಇದೀಗ 15,000 ರೂ.ಗಿಂತ ಕಡಿಮೆ ಇರುವ ಅತ್ಯುತ್ತಮ ಗೇಮಿಂಗ್ ಮಾನಿಟರ್‌ಗಳಲ್ಲಿ ಒಂದಾಗಿದೆ. ಅಲ್ಟ್ರಾಗಿಯರ್ ಮಾನಿಟರ್ 1080p ರೆಸಲ್ಯೂಶನ್ ಹೊಂದಿರುವ 24 ಇಂಚಿನ ಟಿಎನ್ ಪ್ಯಾನಲ್ ಅನ್ನು ಹೊಂದಿದೆ. ಇನ್ನು ಈ ಮಾನಿಟರ್ 144Hz ರಿಫ್ರೆಶ್ ರೇಟ್‌ ಮತ್ತು 1ms ರೆಸ್ಪಾನ್ಸ್‌ ಟೈಂ ಅನ್ನು ಹೊಂದಿದೆ.
ಇ-ಕಾಮರ್ಸ್‌ ದೈತ್ಯ ಅಮೆಜಾನ್‌ ಆಗಸ್ಟ್‌ 6-7 ಎರಡು ದಿನಗಳ ಕಾಲ ಅಮೆಜಾನ್‌ ಪ್ರೈಮ್ ಡೇ ಸೇಲ್‌ ಅನ್ನು ಆಯೋಜಿಸಿತ್ತು. ಇದು ಮುಕ್ತಾಯವಾದ ಕೆಲವೇ ಕ್ಷಣಗಳಲ್ಲಿ, ಅಮೆಜಾನ್ ಫ್ರೀಡಂ ಸೇಲ್‌ ಅನ್ನು ಆರಂಭಿಸಿದ್ದಯ, ಗ್ರಾಹಕರಿಗೆ ಭರ್ಜರಿ ಡಿಸ್ಕೌಂಟ್‌ ನೀಡುತ್ತಿದೆ. ಸದ್ಯ ಅಮೆಜಾನ್‌ ಫ್ರೀಡಂ ಸೇಲ್‌ ಈಗಾಗಲೇ ಅಮೆಜಾನ್ ಇಂಡಿಯಾದಲ್ಲಿ ಲೈವ್ ಆಗಿದೆ ಮತ್ತು ಆಗಸ್ಟ್ 11 ರಂದು ಕೊನೆಗೊಳ್ಳುತ್ತದೆ. ಇನ್ನು ಅಮೆಜಾನ್ ಫ್ರೀಡಮ್ ಸೇಲ್ ನಲ್ಲಿ ಎಲೆಕ್ಟ್ರಾನಿಕ್ಸ್‌ನಿಂದ ಹಿಡಿದು ಬಿಡಿಭಾಗಗಳವರೆಗೆ ಹಲವಾರು ವಿಭಾಗಗಳಲ್ಲಿ ಹಲವಾರು ಉತ್ಪನ್ನಗಳ ಮೇಲೆ ದೊಡ್ಡ ರಿಯಾಯಿತಿಗಳು ಮತ್ತು ಆಕರ್ಷಕ ವ್ಯವಹಾರಗಳನ್ನು ಪರಿಚಯಿಸುತ್ತಿದೆ.

 
ಹೆಲ್ತ್