Back
Home » ಇತ್ತೀಚಿನ
ಫ್ಲಿಪ್‌ಕಾರ್ಟ್‌ನಲ್ಲಿ ಇಂದು ರಿಯಲ್‌ ಮಿ 6i ಸ್ಮಾರ್ಟ್‌ಫೋನ್ ಸೇಲ್‌!
Gizbot | 13th Aug, 2020 09:29 AM
 • ರಿಯಲ್‌ಮಿ 6i

  ಹೌದು, ರಿಯಲ್‌ಮಿ ಕಂಪೆನಿಯ ರಿಯಲ್‌ಮಿ 6i ಸ್ಮಾರ್ಟ್‌ಫೋನ್‌ ಇಂದು ಮತ್ತೆ ಸೇಲ್‌ ಆರಂಭಿಸಲಿದೆ. ಈ ಸ್ಮಾರ್ಟ್‌ಫೋನ್‌ 4GB + 64GB ಮತ್ತು 6GB + 64GB ಆಂತರಿಕ ಸ್ಟೋರೇಜ್‌ ಸಾಮರ್ಥ್ಯದ ವೇರಿಯಂಟ್‌ ಆಯ್ಕೆಗಳನ್ನು ಒಳಗೊಂಡಿದೆ. ಬ್ಲ್ಯಾಕ್‌ ಹಾಗೂ ಲೂನಾರ್ ವೈಟ್‌ ಬಣ್ಣಗಳ ಆಯ್ಕೆ ಪಡೆದಿದೆ. ನೋ ಕಾಸ್ಟ್‌ ಇಎಮ್‌ಐ ಹಾಗೂ ಕ್ಯಾಶ್‌ಬ್ಯಾಕ್ ಆಫರ್‌ಗಳು ಲಭ್ಯವಾಗಲಿದೆ. ಇನ್ನು ರಿಯಲ್‌ ಮಿ 6i ಫೋನಿನ ಫೀಚರ್ಸ್‌ಗಳು ಹೇಗಿವೆ ಎಂಬುದನ್ನು ಮುಂದೆ ನೋಡೋಣ ಬನ್ನಿರಿ.


 • ಡಿಸ್‌ಪ್ಲೇ ರಚನೆ

  ರಿಯಲ್‌ ಮಿ 6i ಸ್ಮಾರ್ಟ್‌ಫೋನ್ 1080x2400 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇ ಹೊಂದಿದೆ. ಡಿಸ್‌ಪ್ಲೇಯು LCD ಮಾದರಿಯಲ್ಲಿ ಇದ್ದು, ಪಂಚ್‌ಹೋಲ್ ವಿನ್ಯಾಸ ಪಡೆದಿದೆ. ಸ್ಕ್ರೀನ್‌ನಿಂದ ಬಾಹ್ಯ ಬಾಡಿಯ ನಡುವಿನ ಅನುಪಾತ 90.5% ಆಗಿದ್ದು, 90Hz ಸಾಮರ್ಥ್ಯ ಪಡೆದಿದೆ. ಗೊರಿಲ್ಲಾ ಗ್ಲಾಸ್ ಸಪೋರ್ಟ್ ಇದೆ.


 • ಪ್ರೊಸೆಸರ್ ಕಾರ್ಯ

  ರಿಯಲ್‌ ಮಿ 6i ಸ್ಮಾರ್ಟ್‌ಫೋನ್ ಮೀಡಿಯಾ ಟೆಕ್ ಹಿಲಿಯೊ G90 ಪ್ರೊಸೆಸರ್‌ ಅನ್ನು ಒಳಗೊಂಡಿದ್ದು, ಇದಕ್ಕೆ ಬೆಂಬಲವಾಗಿ ಆಂಡ್ರಾಯ್ಡ್ 10 ಓಎಸ್‌ ಪಡೆದಿದೆ. ಇನ್ನು ಈ ಸ್ಮಾರ್ಟ್‌ಫೋನ್ 4GB RAM ಸಾಮರ್ಥ್ಯ ಮತ್ತು 64GB ಆಂತರಿಕ ಸ್ಟೋರೇಜ್‌ನ ಆಯ್ಕೆಯನ್ನು ಒಳಗೊಂಡಿದೆ. ಎಸ್‌ಡಿ ಕಾರ್ಡ್‌ ಮೂಲಕ ಮೆಮೊರಿ ಹೆಚ್ಚಿಸಲು ಅವಕಾಶ ನೀಡಿದೆ.


 • ಕ್ಯಾಮೆರಾ ವಿಶೇಷ

  ರಿಯಲ್‌ ಮಿ 6i ಸ್ಮಾರ್ಟ್‌ಫೋನ್ ಕ್ವಾಡ್ ಕ್ಯಾಮೆರಾ ಸೆಟ್‌ಅಪ್ ಪಡೆದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿದೆ. ಸೆಕೆಂಡರಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿರಲಿದ್ದು, ತೃತೀಯ ಮತ್ತು ನಾಲ್ಕನೇ ಕ್ಯಾಮೆರಾಗಳು ಕ್ರಮವಾಗಿ 2ಎಂಪಿ ಸೆನ್ಸಾರ್‌ನಲ್ಲಿರಲಿವೆ. ಹಾಗೆಯೇ 16ಎಂಪಿಯ ಸೆಲ್ಫಿ ಕ್ಯಾಮೆರಾ ಒದಗಿಸಲಾಗಿದೆ.


 • ಬ್ಯಾಟರಿ ಪವರ್

  ರಿಯಲ್‌ ಮಿ 6i ಸ್ಮಾರ್ಟ್‌ಫೋನ್ 4300mAh ಸಾಮರ್ಥ್ಯದ ಬ್ಯಾಟರಿ ಬಾಳಿಕೆಯನ್ನು ಒಳಗೊಂಡಿದ್ದು, ಅದಕ್ಕೆ ಪೂರಕವಾಗಿ 30W ಚಾರ್ಜಿಂಗ್ ಸೌಲಭ್ಯವನ್ನು ಒದಗಿಸಲಾಗಿದೆ. ಹಾಗೆಯೇ ಇದರೊಂದಿಗೆ ವೈಫೈ-802.11ac, ಜಿಪಿಎಸ್‌, ಬ್ಲೂಟೂತ್, ಫಿಂಗರ್‌ಪ್ರಿಂಟ್ ಸೆನ್ಸಾರ್, 4G VoLTE, ಆಂಬಿಯಂಟ್ ಲೈಟ್ ಸೆನ್ಸಾರ್, ಆಡಿಯೊ ಜಾಕ್ ನಂತಹ ಇತ್ತೀಚಿನ ಫೀಚರ್ಸ್‌ಗಳನ್ನು ಒಳಗೊಂಡಿದೆ.


 • ಬೆಲೆ?

  ರಿಯಲ್‌ ಮಿ 6i ಸ್ಮಾರ್ಟ್‌ಫೋನ್ ಎರಡು ವೇರಿಯಂಟ್ ಆಯ್ಕೆ ಹೊಂದಿದೆ. ಬೇಸ್‌ ವೇರಿಯಂಟ್ 4GB + 64GB ಬೆಲೆಯು 12,999ರೂ. ಆಗಿದೆ. ಮತ್ತು 6GB + 64GB ಬೆಲೆಯು 14,999ರೂ. ಆಗಿದೆ.
ರಿಯಲ್‌ಮಿ ಕಂಪನಿ ಹೊಸ ಬಜೆಟ್‌ ಸ್ಮಾರ್ಟ್‌ಫೋನ್ ಈಗಾಗಲೇ ಭಾರತೀಯ ಮಾರುಕಟ್ಟೆಯಲ್ಲಿ ಮಾರಾಟ ಕಂಡಿದೆ. ಈ ಸ್ಮಾರ್ಟ್‌ಫೋನ್‌ ಇಂದು (ಆ.13) ಮಧ್ಯಾಹ್ನ 12ರಂದು ಇ-ಕಾಮರ್ಸ್‌ ತಾಣ ಫ್ಲಿಪ್‌ಕಾರ್ಟ್‌ ಮತ್ತು ರಿಯಲ್‌ಮಿಯ ವೆಬ್‌ಸೈಟ್‌ನಲ್ಲಿ ಮತ್ತೆ ಮಾರಾಟ ಪ್ರಾರಂಭಿಸಲಿದೆ. ಇನ್ನು ಈ ಸ್ಮಾರ್ಟ್‌ಫೋನಿನ ಆರಂಭಿಕ ಬೆಲೆಯು 12,999ರೂ.ಗಳು ಆಗಿದೆ.

 
ಹೆಲ್ತ್