Back
Home » ಇತ್ತೀಚಿನ
ನೋಕಿಯಾ 2.4 ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಫೀಚರ್‌ ಲೀಕ್!
Gizbot | 13th Aug, 2020 07:15 PM
 • ನೋಕಿಯಾ

  ಹೌದು, ನೋಕಿಯಾ ಹೊಸದಾಗಿ ನೋಕಿಯಾ 2.4 ಸ್ಮಾರ್ಟ್‌ಫೋನ್ ಲಾಂಚ್ ಮಾಡಲಿದೆ. ಲೀಖ್ ಮಾಹಿತಿ ಪ್ರಕಾರ ಈ ಫೋನ್ ಎರಡು ವೇರಿಯಂಟ್ ಮಾದರಿಗಳನ್ನು ಒಳಗೊಂಡಿರಲಿದ್ದು, ಅವುಗಳು ಕ್ರಮವಾಗಿ 2GB + 32GB ಮತ್ತು 3GB + 64GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿರಲಿದೆ ಎನ್ನಲಾಗಿದೆ. ಲೀಕ್ ಮಾಹಿತಿಯಂತೆ ನೋಕಿಯಾ 2.4 ಸ್ಮಾರ್ಟ್‌ಫೋನಿನ ಇನ್ನುಳಿದ ಇತರೆ ಫೀಚರ್ಸ್‌ಗಳ ಬಗ್ಗೆ ಮುಂದೆ ತಿಳಿಯೋಣ ಬನ್ನಿರಿ.


 • ಡಿಸ್‌ಪ್ಲೇ ರಚನೆ

  ನೋಕಿಯಾ 2.4 ಸ್ಮಾರ್ಟ್‌ಫೋನ್‌ 6.5 ಇಂಚಿನ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿರಲಿದೆ. ಡಿಸ್‌ಪ್ಲೇಯ ಅನುಪಾತವು 19:9 ಆಗಿರಲಿದ್ದು, ತನ್ನ ವರ್ಗದಲ್ಲಿಯೇ ಉತ್ತಮ ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯವನ್ನು ಹೊಂದಿರಲಿದೆ.


 • ಪ್ರೊಸೆಸರ್‌ ಶಕ್ತಿ

  ನೋಕಿಯಾ 2.4 ಸ್ಮಾರ್ಟ್‌ಫೋನ್ 'ಆಕ್ಟಾ ಕೋರ್ ಮೀಡಿಯಾ ಟೆಕ್‌ ಹಿಲಿಯೊ P22 SoC' ಪ್ರೊಸೆಸರ್ ಅನ್ನು ಒಳಗೊಂಡಿರಲಿದೆ. ಹಾಗೆಯೇ 2GB + 32GB ಮತ್ತು 3GB + 64GB ಸ್ಟೋರೇಜ್ ಆಯ್ಕೆಗಳನ್ನು ಹೊಂದಿರಲಿದೆ.


 • ಕ್ಯಾಮೆರಾ ವಿಶೇಷತೆ

  ನೋಕಿಯಾ 2.4 ಸ್ಮಾರ್ಟ್‌ಫೋನ್‌ ಹಿಂಬದಿಯಲ್ಲಿ ಡ್ಯುಯಲ್ ರಿಯರ್ ಕ್ಯಾಮೆರಾ ಹೊಂದಿರಲಿದೆ. ಪ್ರಾಥಮಿಕ ಕ್ಯಾಮೆರಾವು 13ಎಂಪಿ ಸಾಮರ್ಥ್ಯದಲ್ಲಿರಲಿದ್ದು, ಸೆಕೆಂಡರಿ ಕ್ಯಾಮೆರಾವು 2ಎಂಪಿ ಸೆನ್ಸಾರ್‌ ಪಡೆದಿರಲಿದೆ. ಇನ್ನು ಸೆಲ್ಫಿಗಾಗಿ 5ಎಂಪಿ ಕ್ಯಾಮೆರಾವನ್ನು ನೀಡಲಾಗಿದ್ದು, ಫ್ರಂಟ್‌ ಫೇಸಿಂಗ್ ಆಯ್ಕೆಯನ್ನು ಒಳಗೊಂಡಿದೆ.


 • ಬ್ಯಾಟರಿ ಶಕ್ತಿ

  ನೋಕಿಯಾ 2.4 ಎಂಟ್ರಿ ಲೆವಲ್ ಸ್ಮಾರ್ಟ್‌ಫೋನ್‌ 4,500mAh ಸಾಮರ್ಥ್ಯದ ಬ್ಯಾಟರಿ ಬಲವನ್ನು ಹೊಂದಿರಲಿದೆ. ಇದರೊಂದಿಗೆ ವೇಗದ ಚಾರ್ಜಿಂಗ್ ಸೌಲಭ್ಯ ನೀಡುವ ಸಾಧ್ಯತೆಗಳು ಇವೆ. ಹಾಗೆಯೇ ಮೈಕ್ರೋ USB, ವೈ ಫೈ ಸೌಲಭ್ಯಗಳನ್ನು ಪಡೆದಿರಲಿದೆ.
ಜನಪ್ರಿಯ ನೋಕಿಯಾ ಇತ್ತೀಚಿಗೆ ಹಲವು ಅತ್ಯುತ್ತಮ ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡಿದ್ದು, ಅವುಗಳ ಜೊತೆಗೆ ಕೆಲವು ಜನಪ್ರಿಯ ಸ್ಮಾರ್ಟ್‌ಫೋನ್‌ಗಳ ಬೆಲೆ ಇಳಿಕೆ ಸಹ ಮಾಡಿದೆ. ಅದೇ ರೀತಿ ನೋಕಿಯಾ ಇದೀಗ ಮತ್ತೊಂದು ಎಂಟ್ರಿ ಲೆವೆಲ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ತಯಾರಾಗಿದೆ. ಅದುವೇ ನೋಕಿಯಾ 2.4 ಸ್ಮಾರ್ಟ್‌ಫೋನ್‌. ಈ ಫೋನಿನ ಫೀಚರ್ಸ್‌ಗಳ ಬಗ್ಗೆ ಲೀಕ್ ಮಾಹಿತಿ ಹೊರಬಂದಿದೆ.

 
ಹೆಲ್ತ್