Back
Home » ಇತ್ತೀಚಿನ
ರೆಡ್ಮಿ 9 ಪ್ರೈಮ್ ಮತ್ತು ಗ್ಯಾಲಕ್ಸಿ M11: ಭಿನ್ನತೆಗಳೆನು?..ಯಾವುದು ಬೆಸ್ಟ್?
Gizbot | 15th Aug, 2020 01:20 PM
 • ರೆಡ್ಮಿ 9

  ಶಿಯೋಮಿ ಸಂಸ್ಥೆಯ ಹೊಸ ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌, ಸ್ಯಾಮ್‌ಸಂಗ್‌ನ ಗ್ಯಾಲಕ್ಸಿ M11 ಫೋನ್ ಎರಡು ಒಂದೇ ಕೇಟಗೆರಿಯಲ್ಲಿ ಕಾಣಿಸಿಕೊಳ್ಳುತ್ತವೆ. ಈ ಎರಡು ಸ್ಮಾರ್ಟ್‌ಫೋನ್‌ಗಳ ಕೆಲವು ಫೀಚರ್ಸ್‌ಗಳಲ್ಲಿ ಸಾಮ್ಯತೆ ಕಂಡುಬರುತ್ತವೆ. ಅದಾಗ್ಯೂ ಕೆಲವೊಂದು ಫೀಚರ್‌ಗಳಲ್ಲಿ ಭಿನ್ನತೆಗಳು ಇವೆ. ಹೀಗಾಗಿ ಈ ಎರಡು ಫೋನ್‌ಗಳಲ್ಲಿ ಬಜೆಟ್‌ ದರದಲ್ಲಿ ಯಾವುದು ಉತ್ತಮ ಆಯ್ಕೆ ಎಂಬುದನ್ನು ತಿಳಿಯಲು ಮುಂದೆ ಓದಿರಿ.


 • ಡಿಸ್‌ಪ್ಲೇ ಡಿಸೈನ್

  ರೆಡ್‌ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌ 1080x2340 ಪಿಕ್ಸೆಲ್‌ ಸ್ಕ್ರೀನ್‌ ರೆಸಲ್ಯೂಶನ್‌ ಸಾಮರ್ಥ್ಯದ 6.53-ಇಂಚಿನ ಫುಲ್‌ ಹೆಚ್‌ಡಿ + ಡಿಸ್‌ಪ್ಲೇ ಯನ್ನು ಹೊಂದಿದೆ. ಈ ಡಿಸ್‌ಪ್ಲೇಯು 19.5: 9 ರಚನೆಯ ಅನುಪಾತವನ್ನು ಹೊಂದಿದ್ದು, 394 pp ಪಿಕ್ಸೆಲ್ ಸಾಂದ್ರತೆಯನ್ನ ಒಳಗೊಂಡಿದೆ. ಅದೇ ರೀತಿ ಸ್ಯಾಮ್‌ಸಂಗ್‌ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ 6.4 ಇಂಚಿನ ಹೆಚ್‌ಡಿ ಡಿಸ್‌ಪ್ಲೇ ಯನ್ನ ಹೊಂದಿದ್ದು, ಸ್ಕ್ರೀನ್ ಪಿಕ್ಸಲ್ ರೆಸಲ್ಯೂಶನ್ 720x1560 ಸಾಮರ್ಥ್ಯದಲ್ಲಿದೆ. ಡಿಸ್‌ಪ್ಲೇಯು ಇನ್‌ಫಿನಿಟಿ ಮಾದರಿಯಲ್ಲಿದ್ದು, 19.5:9 ಅನುಪಾತವನ್ನು ಪಡೆದಿದೆ.


 • ಪ್ರೊಸೆಸರ್‌ ಕಾರ್ಯವೈಖರಿ

  ರೆಡ್‌ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌ ಆಕ್ಟಾ-ಕೋರ್ ಮೀಡಿಯಾ ಟೆಕ್ ಹಿಲಿಯೊ G80 ಪ್ರೊಸೆಸರ್ ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಜೊತೆಗೆ ಇದನ್ನು ಮಾಲಿ-ಜಿ 52 ಜಿಪಿಯು ಬೆಂಬಲಿಸುತ್ತದೆ. ಹಾಗೇಯೆ ಈ ಸ್ಮಾರ್ಟ್‌ಫೋನ್ 4GB RAM ಮತ್ತು 64GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಹೊಂದಿದೆ. ಇನ್ನು ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ ಕ್ವಾಲ್ಕಾಮ್‌ ಸ್ನಾಪ್‌ಡ್ರಾಗನ್‌ 439 SoC ಪ್ರೊಸೆಸರ್‌ ಅನ್ನು ಹೊಂದಿದ್ದು, ಆಂಡ್ರಾಯ್ಡ್‌ 10 ಬೆಂಬಲದೊಂದಿಗೆ ಕಾರ್ಯನಿರ್ವಹಿಸಲಿದೆ. ಹಾಗೆಯೇ 3GB RAM + 32GB ಮತ್ತು 4GB RAM ಮತ್ತು 64GB ಆಂತರಿಕ ಸಂಗ್ರಹಣೆ ಸಾಮರ್ಥ್ಯದ ಆಯ್ಕೆಗಳಿವೆ.


 • ಕ್ಯಾಮೆರಾ ವಿನ್ಯಾಸ

  ರೆಡ್‌ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌ ಕ್ವಾಡ್ ರಿಯರ್ ಕ್ಯಾಮೆರಾ ಸೆಟ್‌ಅಪ್ ಅನ್ನು ಒಳಗೊಂಡಿದೆ. ಇದರಲ್ಲಿ 13 ಮೆಗಾಪಿಕ್ಸೆಲ್ ಮುಖ್ಯ ಕ್ಯಾಮೆರಾ ಅನ್ನು ಹೊಂದಿದೆ. ಎರಡನೇ ಕ್ಯಾಮೆರಾ 8 ಸೆನ್ಸಾರ್, ಮೂರನೇ ಕ್ಯಾಮೆರಾ 5 ಎಂಪಿ ಸೆನ್ಸಾರ್, ಹಾಗೂ ನಾಲ್ಕನೇ ಕ್ಯಾಮೆರಾ 2ಎಂಪಿ ಸೆನ್ಸಾರ್‌ನಲ್ಲಿವೆ. ಸೆಲ್ಫಿ ಕ್ಯಾಮೆರಾವು 8ಎಂಪಿ ಸೆನ್ಸಾರ್‌ನಲ್ಲಿದೆ. ಇನ್ನು ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ ಟ್ರಿಪಲ್‌ ರಿಯರ್‌ ಕ್ಯಾಮೆರಾ ಸೆಟ್‌ಅಪ್‌ ಹೊಂದಿದೆ. ಇದರಲ್ಲಿ ಮುಖ್ಯ ಕ್ಯಾಮೆರಾ 13 ಮೆಗಾಪಿಕ್ಸೆಲ್ ಸೆನ್ಸಾರ್‌, ಎರಡನೇ ಕ್ಯಾಮೆರಾ 2 ಮೆಗಾಪಿಕ್ಸೆಲ್ ಡೆಪ್ತ್‌ ಸೆನ್ಸಾರ್‌, ಮತ್ತು ಮೂರನೇ ಕ್ಯಾಮೆರಾ 5 ಮೆಗಾಪಿಕ್ಸೆಲ್‌ ಅಲ್ಟ್ರಾ-ವೈಡ್ ಲೆನ್ಸ್ ಹೊಂದಿದೆ. ಜೊತೆಗೆ 8 ಮೆಗಾಪಿಕ್ಸೆಲ್‌ ಸೆಲ್ಫಿ ಕ್ಯಾಮೆರಾವನ್ನು ಸಹ ನೀಡಲಾಗಿದೆ.


 • ಬ್ಯಾಟರಿ ಬಲಾಬಲ

  ರೆಡ್‌ಮಿ 9 ಪ್ರೈಮ್ ಸ್ಮಾರ್ಟ್‌ಫೋನ್‌ 5,020mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದ್ದು, 18W ವೇಗದ ಚಾರ್ಜಿಂಗ್ ಅನ್ನು ಬೆಂಬಲಿಸಲಿದೆ. ಆದರೆ ಸದ್ಯ ಇದು 10W ಚಾರ್ಜರ್‌ನೊಂದಿಗೆ ರವಾನಿಸುತ್ತದೆ. ಹಾಗೆಯೇ ಗ್ಯಾಲಕ್ಸಿ M11 ಸ್ಮಾರ್ಟ್‌ಫೋನ್‌ 5,000mAh ಸಾಮರ್ಥ್ಯದ ಬ್ಯಾಟರಿ ಪ್ಯಾಕ್‌ಅಪ್‌ ಅನ್ನು ಹೊಂದಿದೆ. ಇದರೊಂದಿಗೆ 15 W ಫಾಸ್ಟ್ ಚಾರ್ಜಿಂಗ್ ಟೆಕ್ನಾಲಜಿಯನ್ನ ಒಳಗೊಂಡಿದೆ.


 • ಕೊನೆಯ ಮಾತು

  ರೆಡ್ಮಿ 9 ಪ್ರೈಮ್ ಆರಂಭಿಕ ವೇರಿಯಂಟ್ ಬೆಲೆಯು 9,999ರೂ.ಗಳಾಗಿದೆ. ಅದೇ ರೀತಿ ಸ್ಯಾಮ್‌ಸಂಗ್ ಗ್ಯಾಲಕ್ಸಿ M11 ಫೋನ್ ಆರಂಭಿಕ ವೇರಿಯಂಟ್ ದರವು 10,000ರೂ.ಗಳು ಆಗಿದೆ. ಫೀಚರ್ಸ್‌ಗಳಲ್ಲಿ ಹೆಚ್ಚಿನ ಭಿನ್ನತೆಗಳಿಲ್ಲ ಅನಿಸಿದರೂ, ರೆಡ್ಮಿ 9 ಪ್ರೈಮ್‌ ಫೋನಿನ ಡಿಸ್‌ಪ್ಲೇ ರೆಸಲ್ಯೂಶನ್ ಗ್ಯಾಲಕ್ಸಿ ಎಂ11 ಗಿಂತ ಉತ್ತಮ ಅನಿಸಲಿದೆ. ಬೆಲೆಯ ದೃಷ್ಠಿಕೋನದಿಂದ ಎರಡು ಒಂದೇ ಅನಿಸಲಿವೆ.
ಪ್ರಸ್ತುತ ಬಜೆಟ್ ದರದ ಸ್ಮಾರ್ಟ್‌ಫೋನ್‌ಗಳಿಗೆ ಮಾರುಕಟ್ಟೆಯಲ್ಲಿ ಡಿಮ್ಯಾಂಡ್ ಹೆಚ್ಚಾಗಿದೆ. ಈ ನಿಟ್ಟಿನಲ್ಲಿ ಪ್ರತಿಷ್ಠಿತ ಮೊಬೈಲ್ ಕಂಪನಿಗಳು ಅಗ್ಗದ ದರದಲ್ಲಿ ಉತ್ತಮ ಫೀಚರ್ಸ್‌ಗಳ ಫೋನ್ ಬಿಡುಗಡೆ ಮಾಡುತ್ತ ಸಾಗಿವೆ. ಈ ಪೈಕಿ ಶಿಯೋಮಿ ಸಂಸ್ಥೆಯು ಇತ್ತೀಚಿಗಷ್ಟೆ ರೆಡ್ಮಿ 9 ಪ್ರೈಮ್ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಿದೆ. ಅದೇ ರೀತಿ ಸ್ಯಾಮ್‌ಸಂಗ್ ಸಹ ಇತ್ತೀಚಿಗೆ ಬಜೆಟ್ ದರದಲ್ಲಿ ಗ್ಯಾಲಕ್ಸಿ M11 ಫೋನ್ ಬಿಡುಗಡೆ ಮಾಡಿದೆ.

 
ಹೆಲ್ತ್