Back
Home » ಇತ್ತೀಚಿನ
ಭಾರತದಲ್ಲಿ ರಿಯಲ್‌ ಮಿ Narzo 20 ಸ್ಮಾರ್ಟ್‌ಫೋನ್ ಸರಣಿ ಲಾಂಚ್!..ಬೆಲೆ ಎಷ್ಟು?
Gizbot | 21st Sep, 2020 01:45 PM
 • ರಿಯಲ್‌ ಮಿ

  ಹೌದು, ರಿಯಲ್‌ ಮಿ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ತನ್ನ Narzo 20 ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಮಾಡಿದೆ. ಈ ಸರಣಿಯಲ್ಲಿ Narzo 20 ಹಾಗೂ Narzo 20A ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿದ್ದು, Narzo 20 ಪ್ರೊ ಫೋನ್ ಕ್ವಾಡ್‌ ಕ್ಯಾಮೆರಾ ರಚನೆಯನ್ನು ಪಡೆದಿದೆ. ಇದರೊಂದಿಗೆ ಮತ್ತಷ್ಟು ಗಮನ ಸೆಳೆವ ಫೀಚರ್ಸ್‌ಗಳನ್ನು ಈ ಸರಣಿಯು ಒಳಗೊಂಡಿದೆ. ಹಾಗಾದರೇ ರಿಯಲ್‌ ಮಿ ನಾರ್ಜೊ 20 ಸ್ಮಾರ್ಟ್‌ಫೋನ್ ಸರಣಿಯ ಫೋನ್‌ಗಳ ಬೆಲೆ ಎಷ್ಟು ಮತ್ತು ಫೀಚರ್ಸ್‌ಗಳೆನು ಎಂಬುದನ್ನು ಮುಂದೆ ನೋಡೊಣ ಬನ್ನಿರಿ.


 • ರಿಯಲ್‌ ಮಿ Narzo 20

  ರಿಯಲ್‌ ಮಿ Narzo 20 ಸ್ಮಾರ್ಟ್‌ಫೋನ್ 6.5 ಇಂಚಿನ ಪೂರ್ಣ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದೆ. ಇನ್ನು ಈ ಫೋನ್ ಮೀಡಿಯಾ ಟೆಕ್ G85 SoC ಪ್ರೊಸೆಸರ್‌ನಲ್ಲಿ ಒಳಗೊಂಡಿದ್ದು, 4GB RAM ಮತ್ತು 128GB ವೇರಿಯಂಟ್ ಆಯ್ಕೆ ಪಡೆದಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿರಲಿದೆ. ಹಾಗೆಯೇ 6,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ.


 • ರಿಯಲ್‌ ಮಿ Narzo 20A

  ರಿಯಲ್‌ ಮಿ Narzo 20A ಸ್ಮಾರ್ಟ್‌ಫೋನ್ 6.5 ಇಂಚಿನ LCD ಸ್ಕ್ರೀನ್ ಹೆಚ್‌ಡಿ ಪ್ಲಸ್‌ ಡಿಸ್‌ಪ್ಲೇಯನ್ನು ಹೊಂದಿದ್ದು, ಗೊರಿಲ್ಲಾ ಗ್ಲಾಸ್‌ ಪಡೆದಿದೆ. ಇನ್ನು ಈ ಫೋನ್ ಸ್ನ್ಯಾಪ್‌ಡ್ರಾಗನ್ 665 ಪ್ರೊಸೆಸರ್‌ನಲ್ಲಿ ಒಳಗೊಂಡಿದ್ದು, 4GB RAM ಮತ್ತು 64GB ವೇರಿಯಂಟ್ ಆಯ್ಕೆ ಪಡೆದಿದೆ. ಇದರೊಂದಿಗೆ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 12ಎಂಪಿ ಸೆನ್ಸಾರ್‌ನಲ್ಲಿರಲಿದೆ. ಹಾಗೆಯೇ 5,000mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದೆ.


 • ರಿಯಲ್‌ ಮಿ Narzo 20 ಪ್ರೊ

  ರಿಯಲ್‌ ಮಿ Narzo 20 ಪ್ರೊ ಸ್ಮಾರ್ಟ್‌ಫೋನ್ 6.5 ಇಂಚಿನ ಫುಲ್ ಹೆಚ್‌ಡಿ ಪ್ಲಸ್‌ ರೆಸಲ್ಯೂಶನ್ ಡಿಸ್‌ಪ್ಲೇಯನ್ನು ಹೊಂದಿದ್ದು, 90Hz ಸ್ಕ್ರೀನ್ ರೀಫ್ರೇಶ್ ರೇಟ್ ಪಡೆದಿದೆ. ಇನ್ನು ಈ ಫೋನ್‌ ಮೀಡಿಯಾ ಟೆಕ್ ಹಿಲಿಯೊ G95 ಪ್ರೊಸೆಸರ್‌ನಲ್ಲಿ ಒಳಗೊಂಡಿದ್ದು, ಈ ಫೋನ್ 6GB + 64GB ಮತ್ತು 8GB + 128GB ವೇರಿಯಂಟ್ ಆಯ್ಕೆಗಳನ್ನು ಲಭ್ಯ. ಇದರೊಂದಿಗೆ ಕ್ವಾಡ್‌ ಕ್ಯಾಮೆರಾ ಸೆಟ್‌ಅಪ್‌ ರಚನೆ ಹೊಂದಿದ್ದು, ಮುಖ್ಯ ಕ್ಯಾಮೆರಾವು 48ಎಂಪಿ ಸೆನ್ಸಾರ್‌ನಲ್ಲಿರಲಿದೆ. ಹಾಗೆಯೇ 4,500mAh ಬ್ಯಾಟರಿ ಬ್ಯಾಕ್‌ಅಪ್‌ ಸಾಮರ್ಥ್ಯ ಪಡೆದಿದ್ದು, 65W ಸಾಮರ್ಥ್ಯದ ಫಾಸ್ಟ್ ಚಾರ್ಜಿಂಗ್ ಸೌಲಭ್ಯ ಹೊಂದಿದೆ.


 • ಬೆಲೆ ಎಷ್ಟು ?

  ಭಾರತದಲ್ಲಿ ರಿಯಲ್‌ ಮಿ Narzo 20 ಸ್ಮಾರ್ಟ್‌ಫೋನ್ ಸರಣಿ ಲಾಂಚ್ ಆಗಿದೆ. ಈ ಸರಣಿಯಲ್ಲಿ ರಿಯಲ್‌ ಮಿ Narzo 20 ಫೋನಿನ 4GB RAM+ 64GB ವೇರಿಯಂಟ್ ದರವು 10,499ರೂ. ಆಗಿದೆ. ಹಾಗೆಯೇ 6GB + 128GB ಬೆಲೆಯು 11,499ರೂ. ಆಗಿದೆ. ಇದೇ ಸೆ. 28 ಫಸ್ಟ್ ಸೇಲ್ ಆರಂಭಿಸಲಿದೆ. ಇನ್ನು Narzo 20A ಸ್ಮಾರ್ಟ್‌ಫೋನ್ 3GB RAM + 32GB ವೇರಿಯಂಟ್ 8,499ರೂ. ಆಗಿದೆ. ಹಾಗೆಯೇ 4GB + 64GB ಬೆಲೆಯು 9,499ರೂ. ಆಗಿದ್ದು, ಮೊದಲ ಸೇಲ್ ಇದೇ ಸೆ.30 ಶುರುವಾಗಲಿದೆ. Narzo 20 ಪ್ರೊ ಫೋನಿನ 6GB + 64GB ವೇರಿಯಂಟ್ ದರವು 14,999ರೂ. ಆಗಿದೆ. ಹಾಗೆಯೇ 8GB + 128GB ದರವು 16,999ರೂ ಆಗಿದೆ. ಇದೇ ಸೆ.25 ಫಸ್ಟ್ ಸೇಲ್ ಆರಂಭವಾಗಲಿದೆ.
ರಿಯಲ್‌ ಮಿ ಸಂಸ್ಥೆಯ ಬಹುನಿರೀಕ್ಷಿತ ರಿಯಲ್‌ ಮಿ Narzo 20 ಸ್ಮಾರ್ಟ್‌ಫೋನ್ ಸರಣಿ ಬಿಡುಗಡೆ ಆಗಿದೆ. ಈ ಹೊಸ ಸರಣಿಯು ಈ ಹಿಂದಿನ Narzo 10 ಸ್ಮಾರ್ಟ್‌ಫೋನ್ ಸರಣಿಯ ಮುಂದುವರಿದ ಆವೃತ್ತಿಯಾಗಿದೆ. ನಿರೀಕ್ಷೆಯಂತೆ ಈ ಸರಣಿಯು Narzo 20, Narzo 20A ಮತ್ತು Narzo 20 ಪ್ರೊ ಮಾಡೆಲ್‌ ಸ್ಮಾರ್ಟ್‌ಫೋನ್‌ಗಳನ್ನು ಒಳಗೊಂಡಿದೆ. ಈ ಮೂರು ಸ್ಮಾರ್ಟ್‌ಫೋನ್‌ಗಳು ಆಕರ್ಷಕ ಫೀಚರ್ಸ್‌ಗಳನ್ನು ಹೊಂದಿವೆ.

 
ಹೆಲ್ತ್