Back
Home » ಇತ್ತೀಚಿನ
ಸ್ಯಾಮ್‌ಸಂಗ್‌ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್‌ ಬಿಡುಗಡೆಗೆ ಮುಹೂರ್ತ್ ಫಿಕ್ಸ್‌!
Gizbot | 24th Sep, 2020 05:59 PM
 • ಸ್ಯಾಮ್‌ಸಂಗ್‌

  ಹೌದು, ಸ್ಯಾಮ್‌ಸಂಗ್‌ ಸಂಸ್ಥೆ ತನ್ನ ಬಹುನಿರೀಕ್ಷಿತ ಗ್ಯಾಲಕ್ಸಿ F41 ಸ್ಮಾರ್ಟ್‌ಫೋನ್‌ ಅನ್ನು ಮಾರುಕಟ್ಟೆಗೆ ಪರಿಚಯಿಸಲು ಸಿದ್ಧವಾಗಿದೆ. ಗ್ಯಾಲಕ್ಸಿ F41 ಫೋನ್ ಇದೇ ಅಕ್ಟೋಬರ್ 8ರಂದು ಲಾಂಚ್ ಆಗಲಿದೆ ಎಂದು ಫ್ಲಿಪ್‌ಕಾರ್ಟ್‌ ಟೀಸರ್ ಪ್ರದರ್ಶಿಸಿದೆ. ಸಾಕಷ್ಟು ನಿರೀಕ್ಷೆಗಳನ್ನು ಮೂಡಿಸಿರುವ ಈ ಸ್ಮಾರ್ಟ್‌ಫೋನ್ 6000mAh ಬ್ಯಾಟರಿ ಬ್ಯಾಕ್‌ಅಪ್‌ ಹೊಂದಿರಲಿದೆ ಎಂಬ ಸುಳಿವು ಹೊರಹಾಕಿದೆ.


 • ಸ್ಮಾರ್ಟ್‌ಫೋನ್‌

  ಇನ್ನು ಗ್ಯಾಲಕ್ಸಿ F ಸರಣಿಯ ಸ್ಮಾರ್ಟ್‌ಫೋನ್‌ AMOLED ಡಿಸ್‌ಪ್ಲೇ ವಿನ್ಯಾಸದೊಂದಿಗೆ ಬರಲಿದೆ ಎಂದು ಹೇಳಲಾಗ್ತಿದೆ. ಈ ಸ್ಮಾರ್ಟ್‌ಫೋನ್ ತ್ರಿವಳಿ ಕ್ಯಾಮೆರಾ ಸೆಟ್‌ಅಪ್‌ ಹೊಂದಿರಲಿದ್ದು, ಜೊತೆಗೆ ನವೀನ ಮಾದರಿಯ ಕ್ಯಾಮೆರಾ ವಿನ್ಯಾಸವನ್ನು ಇದು ಹೊಂದಿರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಇದಲ್ಲದೆ ಗ್ಯಾಲಕ್ಸಿ M ನಂತರ ಕಂಪನಿಯು ಬಜೆಟ್‌ ಸ್ಮಾರ್ಟ್‌ಫೋನ್‌ ವಿಭಾಗದಲ್ಲಿ ಇದು ತನ್ನ ಸ್ಥಾನವನ್ನು ಇನ್ನಷ್ಟು ಬಲಪಡಿಸಲು ಸಹಾಯ ಮಾಡುತ್ತದೆ ಎಂದು ನಿರೀಕ್ಷಿಸಲಾಗಿದೆ.


 • ಗ್ಯಾಲಕ್ಸಿ

  ಇದಲ್ಲದೆ ಈ ಸ್ಮಾರ್ಟ್‌ಫೋನ್‌ ಪವರ್ ಪ್ಯಾಕ್ಡ್ ಪರ್ಫಾರ್ಮೆನ್ಸ್ ನೀಡುವ ಸ್ಮಾರ್ಟ್‌ಫೋನ್‌ ಆಗಿರಲಿದೆ ಎಂದು ಹೇಳಲಾಗ್ತಿದೆ. ಸದ್ಯ ಈ ಹೊಸ ಗ್ಯಾಲಕ್ಸಿ ಎಫ್ ಸರಣಿಯನ್ನು ಪ್ರಾರಂಭಿಸುವ ಮೂಲಕ ಸ್ಯಾಮ್‌ಸಂಗ್ ತನ್ನ ಮಾರುಕಟ್ಟೆಯನ್ನು ಭಾರತದಲ್ಲಿ ಇನ್ನಷ್ಟು ವಿಸ್ತರಿಸಲಿದೆ ಎಂದು ಹೇಳಲಾಗ್ತಿದೆ. ಇನ್ನು ಈ ಸ್ಮಾರ್ಟ್‌ಫೋನ್‌ ಕ್ಯಾಮೆರಾ ಫೀಚರ್ಸ್‌ಗಳಲ್ಲಿ ಆಪ್ಡೇಟ್ ಟೆಕ್ನಾಲಜಿಯನ್ನು ನೀಡಲಾಗುತ್ತೆ ಎಂದು ಹೇಳಲಾಗ್ತಿದೆ. ಅಲ್ಲದೆ ಇದು ಕ್ವಾಡ್‌ ಕ್ಯಾಮೆರಾ ಸೆಟ್‌ ಅಪ್‌ ಹೊಂದಿರಲಿದ್ದು, ಮುಖ್ಯ ಕ್ಯಾಮೆರಾ 64 ಮೆಗಾಪಿಕ್ಸೆಲ್‌ ಸೆನ್ಸಾರ್‌ ಹೊಂದಿರಲಿದೆ ಎನ್ನಲಾಗ್ತಿದೆ.


 • ಅಕ್ಟೋಬರ್

  ಇನ್ನು ಇದೇ ಅಕ್ಟೋಬರ್ 8ರಂದು ಈ ಸ್ಮಾರ್ಟ್‌ಫೋನ್‌ ಬಿಡುಗಡೆಯ ಆಗಲಿದೆ. ಅಂದಹಾಗೆ ಈ ಫೋನ್ ಬೆಲೆ 15 ಸಾವಿರದಿಂದ 20,000 ರೂ.ಗಳವರೆಗೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ. ಅಲ್ಲದೆ ಇದರ ಬ್ಯಾಟರಿ ಫೀಚರ್‌ ಪ್ರಮುಖ ಹೈಲೈಟ್‌ ಆಗಿ ಕಾಣಿಸಿಕೊಳ್ಳಲಿದೆ. ಆದರೆ ಇದು ಹೊಸ ಮಾದರಿಯ ಸ್ಮಾರ್ಟ್‌ಫೋನ್‌ ಆಗಿರಲಿದ್ದು, ಬಳೆಕಾದರರಿಗೆ ಹೊಸ ಅನುಭವ ನೀಡಲಿದೆ ಎಂದು ನಿರೀಕ್ಷಿಸಲಾಗಿದೆ.
ಜನಪ್ರಿಯ ಸ್ಮಾರ್ಟ್‌ಫೋನ್‌ ತಯಾರಿಕಾ ಸಂಸ್ಥೆ ಸ್ಯಾಮ್‌ಸಂಗ್ ಈಗಾಗಲೇ ಗ್ಯಾಲಕ್ಸಿ ಸರಣಿಯಲ್ಲಿ ಹಲವು ಭಿನ್ನ ಶ್ರೇಣಿಯ ಸ್ಮಾರ್ಟ್‌ಫೋನ್‌ಗಳನ್ನು ಮಾರುಕಟ್ಟೆಯಲ್ಲಿ ಪರಿಚಯಿಸಿದೆ. ಮುಖ್ಯವಾಗಿ ಗ್ಯಾಲಕ್ಸಿ M ಮತ್ತು ಗ್ಯಾಲಕ್ಸಿ A ಸರಣಿಯಲ್ಲಿ ಸ್ಮಾರ್ಟ್‌ಫೋನ್‌ಗಳು ಬಜೆಟ್‌ ದರದಲ್ಲಿ ಗ್ರಾಹಕರನ್ನು ಆಕರ್ಷಿಸಿವೆ. ಇದರ ಮುಂದುವರಿದ ಭಾಗವಾಗಿ ಸ್ಯಾಮ್‌ಸಂಗ್ ಇದೀಗ ಗ್ಯಾಲಕ್ಸಿ F ಸರಣಿಯಲ್ಲಿ ಮತ್ತೊಂದು ಬಜೆಟ್‌ ಸ್ಮಾರ್ಟ್‌ಫೋನ್ ಬಿಡುಗಡೆ ಮಾಡಲು ಸಜ್ಜಾಗಿದೆ.

 
ಹೆಲ್ತ್