Back
Home » ಇತ್ತೀಚಿನ
ಆಧಾರ್ ಗೆ ಸಂಬಂಧಿಸಿದ ದೂರುಗಳನ್ನು ಆನ್ ಲೈನ್ ನಲ್ಲಿ ದಾಖಲಿಸುವುದು ಹೇಗೆ?
Gizbot | 1st Oct, 2020 07:00 PM

ಯೂನಿಕ್ ಐಡೆಂಟಿಫಿಕೇಷನ್ ಅಥೋರಿಟಿ ಆಫ್ ಇಂಡಿಯಾ ಅಥವಾ ಯುಐಡಿಎಐ ಇತ್ತೀಚೆಗೆ ಹೊಸದಾಗಿ ಆಧಾರ್ ಸಹಾಯ ಕೇಂದ್ರವನ್ನು ಆರಂಭಿಸಿದ್ದು ಇದರಲ್ಲಿ ಆಧಾರ್ ಸೇವೆಗಳಿಗೆ ಸಂಬಂಧಿಸಿದ ದೂರುಗಳನ್ನು ದಾಖಲಿಸುವುದಕ್ಕೆ ಅವಕಾಶವಿರುತ್ತದೆ. ಆಧಾರ್ ಸೇವೆಗಳಲ್ಲಿ ಒಂದು ವೇಳೆ ಭ್ರಷ್ಟಾಚಾರ, ತಪ್ಪು ನಡವಳಿಕೆ ಅಥವಾ ಇತ್ಯಾದಿ ಯಾವುದೇ ರೀತಿಯ ತೊಂದರೆಯನ್ನು ಗ್ರಾಹಕರು ಅನುಭವಿಸಿದರೆ ಅದಕ್ಕೆ ಸಂಬಂಧಿಸಿದಂತೆ ಕರೆಗಳ ಮೂಲಕ, ಇಮೇಲ್ ಮೂಲಕ ಅಥವಾ ಅಧಿಕೃತ ಆಧಾರ್ ವೆಬ್ ಸೈಟ್ ನಲ್ಲಿ ದೂರು ದಾಖಲಿಸುವುದಕ್ಕೆ ಅವಕಾಶವಿರುತ್ತದೆ.

ಒಂದು ವೇಳೆ ನೀವೇನಾದ್ರೂ ಅಂತಹ ಸಮಸ್ಯೆ ಎದುರಿಸಿದರೆ ಯುಐಡಿಎಐ ನಲ್ಲಿ ಈ ಕೆಳಗಿನ ಹಂತಗಳನ್ನು ಅನುಸರಿಸಬಹುದು ಮತ್ತು ಆ ಮೂಲಕ ನಿಮ್ಮ ದೂರನ್ನು ಆಧಾರ್ ಕೇಂದ್ರಕ್ಕೆ ಸಲ್ಲಿಸಬಹುದು.

ಮೊದಲಿಗೆ ಇಲ್ಲಿ ದೂರು ಯಾರೆಲ್ಲಾ ದಾಖಲಿಸಬಹುದು ಎಂಬ ಬಗ್ಗೆ ತಿಳಿಯೋಣ. ಅಧಿಕೃತ ವೆಬ್ ಸೈಟ್ ಹೇಳುವ ಪ್ರಕಾರ ಈ ಕೆಳಗಿನವರು ದೂರು ದಾಖಲಿಸುವುದಕ್ಕೆ ಅವಕಾಶವಿರುತ್ತದೆ:

ಆಪರೇಟರ್ ಮತ್ತು ಎನ್ರೋಲ್ಮೆಂಟ್ ಏಜೆನ್ಸಿಯವರು (ಎನ್ರೋಲ್ಮೆಂಟ್ ಐಡಿ ಐಚ್ಛಿಕವಾಗಿರುತ್ತದೆ)

ಆಧಾರ್ ಜನರೇಟ್ ಆಗಿಲ್ಲ ( ಎನ್ರೋಲ್ಮೆಂಟ್ ಐಡಿ ಕಡ್ಡಾಯ)

ಇತರೆ ಯಾವುದೇ ರೀತಿಯ ದೂರುಗಳಿಗೆ ನೀವು ಕರೆ ಮಾಡಬಹುದು

ಫೋನ್ ಅಥವಾ ಇಮೇಲ್ ಬಳಸಿ ಆಧಾರ್ ರಿಜಿಸ್ಟರ್ ಗೆ ಸಂಬಂಧಿಸಿದ ದೂರು ನೀಡಬಹುದು.

ಗ್ರಾಹಕರಿಗೆ UIDAI ನಿರ್ಧಿಷ್ಟ ಟಾಲ್ ಫ್ರೀ ನಂಬರ್ ನ್ನು ನಡಿದೆ. ನೀವು ಮಾಡಬೇಕಾಗಿರುವುದು ಇಷ್ಟೇ. ನಿಮ್ಮ ಸ್ಮಾರ್ಟ್ ಫೋನ್ ಬಳಸಿ '1947' ನಂಬರ್ ಗೆ ಕರೆ ಮಾಡಿ ದೂರು ದಾಖಲಿಸಬಹುದು. ಇಲ್ಲವೇ ನೀವು help@uidai.gov.in ಗೆ ಬರವಣಿಗೆ ಮೂಲಕವೂ ಇಮೇಲ್ ಮಾಡಿ ದೂರು ಕೊಡುವುದಕ್ಕೆ ಅವಕಾಶವಿರುತ್ತದೆ.

ಆಧಾರ್ ಗೆ ಸಂಬಂಧಿಸಿದ ದೂರುಗಳನ್ನು ಅಧಿಕೃತ ವೆಬ್ ಸೈಟ್ ನಲ್ಲಿ ಹೇಗೆ ದಾಖಲಿಸುವುದು

1.'https://resident.uidai.gov.in/file-complaint' ಇಲ್ಲಿಗೆ ಭೇಟಿ ನೀಡಿ.

2.ಸ್ಕ್ರೋಲ್ ಡೌನ್ ಮಾಡಿ. ಎನ್ರೋಲ್ಮೆಂಟ್ ಐಡಿ, ದಿನಾಂಕ, ಸಮಯ, ಕಾಂಟ್ಯಾಕ್ಟ್ ವಿವರ ಮತ್ತು ಇತ್ಯಾದಿ ಗಳನ್ನು ಎಂಟರ್ ಮಾಡಿ

3.ಇದಾದ ನಂತರ ನಿಮ್ಮ ದೂರು ಏನೆಂಬುದನ್ನು ದಾಖಲಿಸಲು ಹೇಳಲಾಗುತ್ತದೆ. ಕೆಟಗರಿ ಮತ್ತು ವಿವರ ಜೊತೆಗೆ ಮಾಹಿತಿಯನ್ನು ಕೇಳಲಾಗುತ್ತದೆ.

4.ಇದಿಷ್ಟು ಮುಗಿದ ನಂತರ, ಕ್ಯಾಪ್ಚಾ ಕೋಡ್ ಇರುತ್ತದೆ. ಅದನ್ನು ಬರೆದ ನಂತರ ಸಬ್ಮಿಟ್ ಬಟನ್ ನ್ನು ಕ್ಲಿಕ್ಕಿಸಿ ದೂರನ್ನು ರಿಜಿಸ್ಟರ್ ಮಾಡಿದರೆ ಆಯಿತು.

ಹೀಗೆ ಸುಲಭವಾಗಿ ಆಧಾರ್ ಗೆ ಸಂಬಂಧಿಸಿದ ದೂರನ್ನು ಆನ್ ಲೈನ್ ನಲ್ಲಿಯೇ ಸಲ್ಲಿಸಬಹುದು.

 
ಹೆಲ್ತ್