Back
Home » ಗಾಸಿಪ್
ದೂದ್ ಪೇಡಾ ದಿಗಂತ್ ಮದುವೆ ಆಗ್ತಾರಂತೆ..!
Oneindia | 3rd Dec, 2015 10:37 AM

ಸ್ಯಾಂಡಲ್ ವುಡ್ ನ ದೂದ್ ಪೇಡಾ ದಿಗಂತ್ ಅವರು ಕೊನೆಗೂ ತಮ್ಮ ಮದುವೆಯ ವಿಚಾರದಲ್ಲಿ ಮೌನ ಮುರಿದಿದ್ದಾರೆ. ಅಲ್ಲದೇ 2017ಕ್ಕೆ ಮದುವೆ ಗ್ಯಾರಂಟಿ ಎಂದು ಸ್ವತಃ ದಿಗಂತ್ ಅವರೇ ಹೇಳಿಕೊಂಡಿದ್ದಾರೆ.

ಹೀಗೇ ಓಡಾಡ್ಕೊಂಡು ಇರ್ತಿರಾ? ಅಥವಾ ಮದುವೆ ಆಗೋ ಯೋಚನೆ ಏನಾದ್ರೂ ಇದೆಯಾ? ಅಂತ ಕೇಳಿದ್ರೆ, ಮತ್ತದೇ ನಗು ಬೀರುತ್ತಾರೆ, ಬಿಳಿ ಜಿರಳೆ ನಟ ದಿಗಂತ್ ಅವರು.[ಡಿಸೆಂಬರ್ 11 ರಂದು ದಿಗಂತ್ 'ಶಾರ್ಪ್ ಶೂಟರ್' ರಿಲೀಸ್ ]

'ಮದುವೆಗೆ ಒತ್ತಡ ಹೆಚ್ಚಾಗುತ್ತಿದೆ. ಫ್ರೆಂಡ್ಸ್ ಎಲ್ಲಾ ಮದುವೆ ಆಗಿ ಸೆಟ್ಲ್ ಆದ್ರು. ಹೀಗಾಗಿ ಒಂದು ನಿರ್ಧಾರಕ್ಕೆ ಬಂದಿದ್ದೇನೆ. 2017 ಕ್ಕೆ ಮದುವೆ ಆಗೋದು ಗ್ಯಾರಂಟಿ' ಎಂದು ನಟ ದಿಗಂತ್ ಅವರು ಉತ್ತರಿಸಿದ್ದಾರೆ.

ಆದರೆ ಒತ್ತಡ ಹೆಚ್ಚಾಗಿರುವುದ ಯಾರಿಂದ? ಅನ್ನೋ ಪ್ರಶ್ನೆಗೆ ದಿಗಂತ್ ಅವರು ಉತ್ತರ ನೀಡುವ ಬದಲು ಬಾಯ್ತುಂಬ ನಕ್ಕಿದ್ದು, ಮಾತ್ರ ಅವರ ಮದುವೆಯ ವಿಚಾರದಲ್ಲಿ ಹಬ್ಬಿರುವ ರೂಮರ್ಸ್ ಗಳನ್ನು ಖಚಿತಪಡಿಸಿದಂತಿದೆ.[ಗನ್ನು ಹಿಡಿದು ರಾಂಗ್ ಆದ ದಿಗಂತ್ 'ಶಾರ್ಪ್ ಶೂಟರ್']

ಬಹುತೇಕ ನಟ ದಿಗಂತ್ ಅವರ ಹೆಸರಿಗೆ ತಳುಕು ಹಾಕಿಕೊಂಡಿರುವ ನಟಿಯ ಜೊತೆಗೆ ಮದುವೆ ಆಗುವುದು ಖಚಿತವಾಗಿದೆ. ಆದರೆ ಅದು ಅಧಿಕೃತವಾಗಿ ಅನೌನ್ಸ್ ಆಗುವುದೊಂದೇ ಬಾಕಿ ಇದ್ದು, ಮುಂದೆನಾಗುತ್ತದೆ ಎಂದು ಕಾದು ನೋಡಬೇಕಿದೆ.

ಒಟ್ನಲ್ಲಿ ದೂದ್ ಪೇಡಾ ದಿಗಂತ್ ಅವರು ಮದುವೆ ಆದರೆ ಅವರ ಹುಡುಗಿಯರ ಫ್ಯಾನ್ಸ್ ಗೆ ಬೇಜಾರಾಗೋದು ಅಂತೂ ಗ್ಯಾರಂಟಿ.

Source: kannada.filmibeat.com

   
 
ಹೆಲ್ತ್