Back
Home » ಇತ್ತೀಚಿನ
ಶಿಯೋಮಿ ಎಂಐ ಎ2 ಕುರಿತು ನೀವು ತಿಳಿದುಕೊಳ್ಳಲೇಬೇಕಾದ ವಿಷಯಗಳು
Gizbot | 12th Jul, 2018 08:30 PM
 • ಶಿಯೋಮಿ ಎಂಐ ಎ2 ಬಿಡುಗಡೆ ದಿನಾಂಕ

  ಶಿಯೋಮಿ ಇಂಡಿಯಾ ವಿಭಾಗವು ನೀಡಿರುವ ಇತ್ತೀಚೆಗಿನ ಟ್ವೀಟರ್ ಮಾಹಿತಿಯ ಅನುಸಾರ ಸದಸ್ಯದಲ್ಲೇ ಬರುವ ಗ್ಲೋಬಲ್ ಇವೆಂಟ್ ನಲ್ಲಿ ಎಂಐ ಎ2 ಬಿಡುಗಡೆಗೊಳ್ಳುವ ನಿರೀಕ್ಷೆ ಇದೆ. ಆದರೆ ಟ್ವೀಟ್ ನಲ್ಲಿ ಯಾವುದೇ ದಿನಾಂಕ, ಸ್ಥಳ, ಅಥವ ಸಮಯವನ್ನು ನಮೂದಿಸಿಲ್ಲ. ಎಂಐ ನ ಸಿರೀಸ್ ಗಳು ಭಾರತದಿಂದ ಹೊರಗೆಲ್ಲೋ ನಡೆಯುವ ಸಮಾರಂಭದಲ್ಲಿ ಮೊದಲು ಬಿಡುಗಡೆಯಾಗಲಿದೆ ಎಂಬುದು ಮಾತ್ರ ಸ್ವಷ್ಟ.
  ಟ್ವೀಟರ್ ನಲ್ಲಿ ಎಂಐ ಅಭಿಮಾನಿಗಳ ಬಳಿ ಎಲ್ಲಿ ಬಿಡುಗಡೆಯಾಗುವುದು ನಿಮ್ಮ ಇಚ್ಛೆಯಾಗಿದೆ ಎಂದು ಶಿಯೋಮಿ ಕೇಳಿದೆ. ಆದರೆ ಕಳೆದ ವರ್ಷ ಎಂಐನ ಗ್ಲೋಬಲ್ ಇವೆಂಟ್ ನವದೆಹಲಿಯಲ್ಲಿ ನಡೆದಿತ್ತು ಮತ್ತು ಎಂಐ ಎ1 ಅದೇ ಸಮಾರಂಭದಲ್ಲಿ ಬಿಡುಗಡೆಯಾಗಿತ್ತು. ಮುಂದಿನ ಕೆಲವೇ ದಿನಗಳಲ್ಲಿ ಕಂಪೆನಿಯ ಕಡೆಯಿಂದ ಸ್ಪಷ್ಟ ಚಿತ್ರಣ ಸಿಗುವ ನಿರೀಕ್ಷೆ ಇದ್ದು, ಬಿಡುಗಡೆಯ ದಿನಾಂಕ, ಸ್ಥಳ ಸೇರಿದಂತೆ ಇತರೆ ಮಾಹಿತಿಗಳು ಲಭ್ಯವಾಗಲಿದೆ.


 • ಶಿಯೋಮಿ ಎಂಐ ಎ2 ಬೆಲೆ

  ಸದ್ಯಕ್ಕೆ ಬಿಡುಗಡೆಯ ದಿನಾಂಕ ಪ್ರಕಟಗೊಳ್ಳದ ಹಿನ್ನೆಲೆಯಲ್ಲಿ ಸ್ವಿಝ್ ವೆಬ್ ಸೈಟ್ ಒಂದು ಶಿಯೋಮಿ ಎಂಐ ಎ2 ನ ಬೆಲೆಯನ್ನು ಪ್ರಕಟಗೊಳಿಸಿದೆ. ಆದರೆ ಇದು ಪಕ್ಕಾ ಎಂದು ಹೇಳಲಾಗುವುದಿಲ್ಲ. ಆದರೆ ಈ ಪಟ್ಟಿಯ ಅನುಸಾರ ಎಂಐ ಎ2 32 ಜಿಬಿ ಸ್ಟೋರೇಜ್ ವೇರಿಯಂಟ್ ನ ಬೆಲೆಯು CHF 289 (ಅಂದಾಜು Rs. 20,000),ಅದೇ 64ಜಿಬಿ ಮಾಡೆಲ್ ನ ಬೆಲೆ CHF 329 (ಅಂದಾಜು Rs. 22,800) ಮತ್ತು 128ಜಿಬಿ ವೇರಿಯಂಟ್ ನ ಬೆಲೆಯು CHF 369 (ಅಂದಾಜು Rs. 25,600).


 • ಶಿಯೋಮಿ ಎಂಐ ಎ2 ಕ್ಯಾಮರಾ

  ಕಳೆದ ವರ್ಷದ ಎಂಐ ಎ1 ನಂತೆಯೇ, ಶಿಯೋಮಿ ಎಂಐ ಎ2 ಕೂಡ ಎರಡು ಹಿಂಭಾಗದ ಕ್ಯಾಮರಾ ಸೆಟ್ ಅಪ್ ಹೊಂದಿರಲಿದೆ.ಆದರೆ ಈ ಬಾರಿ, ಶಿಯೋಮಿ ವರ್ಟಿಕಲ್ ಕ್ಯಾಮರಾ ಸೆಟ್ ಅಪ್ ಗೆ ಹೆಚ್ಚಿನ ಆದ್ಯತೆ ನೀಡಿರುವ ಸಾಧ್ಯತೆ ಇದೆ. ಕಳೆದ ಬಾರಿಯ ಎಂಐ 6ಎಕ್ಸ್ ನ್ನು ಗಮನಿಸಿದರೆ ಕ್ಯಾಮರಾ ಸೆಟ್ ಅಪ್ ಲಂಬವಾಗಿರಲಿಲ್ಲ ಬದಲಾಗಿ ಅಡ್ಡವಾಗಿತ್ತು.. ಎರಡೂ ಕ್ಯಾಮರಾ ಸೆಟ್ ಅಪ್ ಗಳು 12 ಮೆಗಾಪಿಕ್ಸಲ್ ಪ್ರೈಮರಿ ಸೆನ್ಸರ್ ಹೊಂದಿದ್ದು, LED ಫ್ಲ್ಯಾಶ್ ಸೌಲಭ್ಯವನ್ನು ಹೊಂದಿದೆ.


 • AI ಕ್ಯಾಮೆರಾ ಸಾಧ್ಯತೆ

  ಇತ್ತೀಚೆಗೆ ಎಂಐ ಫೋರಮ್ಸ್ ನಲ್ಲಿ ಹಂಚಿಕೊಳ್ಳಲಾಗಿದ್ದು ಎಂಐ 2 ನಿಂದ ತೆಗೆದ ಫೋಟೋ, ಇದರಲ್ಲಿ f/1.75 ದ್ಯುತಿರಂಧ್ರವಿರುವ ಬಗ್ಗೆ ಹೇಳುತ್ತಿತ್ತು. ಎಂಐ 6ಎಕ್ಸ್ ಗೆ ಹೋಲಿಸಿದರೆ ಇದರಲ್ಲಿ ಯಾವುದೇ ಅಪ್ ಗ್ರೇಡ್ ಆಗಿರುವ ಆಪ್ಟಿಕ್ಸ್ ಗಳು ಇರುವ ಬಗ್ಗೆ ಸೂಚನೆ ಇಲ್ಲ. ಆದರೆ ಸೆಕೆಂಡರಿ ಸೆನ್ಸರ್ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಆದರೆ ಇದು ಕೂಡ 20 ಮೆಗಾಪಿಕ್ಸಲ್ ಸೆನ್ಸರ್ ಮತ್ತು f/1.75 ದ್ಯುತಿರಂಧ್ರ ಹೊಂದಿರಬಹುದೆಂದು ಊಹಿಸಲಾಗುತ್ತಿದೆ. ಶಿಯೋಮಿ ಅಂದ ಮೇಲೆ ಸೆಲ್ಫೀಗೆ ಮಹತ್ವ ಇರಲೇಬೇಕಲ್ಲ, ಎಂಐ ಎ 2 20 ಮೆಗಾಪಿಕ್ಸಲ್ ನ ಮುಂಭಾಗದ ಕ್ಯಾಮರಾ ಸೆನ್ಸರ್ ಒಳಗೊಂಡಿರುತ್ತದೆ ಎಂದು ಹೇಳಲಾಗುತ್ತಿದೆ. ಶಿಯೋಮಿ ಕೃತಕ ಬುದ್ಧಿಮತ್ತೆಯನ್ನು ಬಳಸಿ, ಪೋಟ್ರೈಟ್ ಮೋಡ್ ನಲ್ಲ ಚಿತ್ರೀಕರಿಸಲು ಈ ಹ್ಯಾಂಡ್ ಸೆಟ್ ನಲ್ಲಿ ಅವಕಾಶ ನೀಡಿರುವ ಸಾಧ್ಯತೆ ಇದೆ.


 • ಶಿಯೋಮಿ ಎಂಐ ಎ2 ಸಾಫ್ಟ್ ವೇರ್

  ಗೂಗಲ್ ನ ಆಂಡ್ರಾಯ್ಡ್ ಒನ್ ಪ್ರೊಗ್ರಾಮ್ ನ ಭಾಗವಾಗಿರುವ ಶಿಯೋಮಿ, ಎಂಐ ಎ2 ನಲ್ಲೂ ಆಂಡ್ರಾಯ್ಡ್ ಓರಿಯೋ ಓಟ್-ಆಫ್-ದಿ-ಬಾಕ್ಸ್ ಜೊತೆಗೆ ನೂತನ ಆಂಡ್ರಾಯ್ಡ್ ಸೆಕ್ಯುರಿಟಿ ಪ್ಯಾಚ್ ಮೂಲಕ ರನ್ ಆಗುವ ನಿರೀಕ್ಷೆ ಇದೆ. ಹ್ಯಾಂಡ್ ಸೆಟ್ ಚಿತ್ರಣವು ನಮಗೆ ಆಂಡ್ರಾಯ್ಡ್ 8.1 ಓರಿಯೋ ಬೇಸ್ಡ್ ಆಗಿರುವ ಆಂಡ್ರಾಯ್ಡ್ ಪ್ಯಾಚ್ ನ ಪರೀಕ್ಷೆ ನಡೆಯುತ್ತಿರುವುನದನ್ನು ಸೂಚಿಸುತ್ತದೆ. ಕಸ್ಟಮ್ MIUI ಇರುವ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಎಂಐ ಎ2 ವೆನ್ನಿಲ್ಲಾ ಆಂಡ್ರಾಯ್ಡ್ ಎಕ್ಸ್ ಪೀರಿಯನ್ಸ್ ನೀಡಲಿದೆ. ಆಂಡ್ರಾಯ್ಡ್ ಪಿ ಅಪ್ ಡೇಟ್ ನ್ನು ಈ ವರ್ಷದ ನಂತರದ ದಿನಗಳಲ್ಲಿ ನಿರೀಕ್ಷಿಸಬಹುದಾಗಿದೆ.


 • ಶಿಯೋಮಿ ಎಂಐ ಎ2 ವೈಶಿಷ್ಟ್ಯತೆಗಳು

  ಪ್ರಾಥಮಿಕ ಹಂತದ ಮಾಹಿತಿಯ ಪ್ರಕಾರ, ಶಿಯೋಮಿ ಎಂಐ ಎ2 5.99-ಇಂಚಿನ ಫುಲ್ -HD+ (1080x2160 ಪಿಕ್ಸಲ್) ಡಿಸ್ಪ್ಲೇ ಜೊತೆಗೆ 18:9 ಅನುಪಾತವಿರಲಿದೆ.ಹ್ಯಾಂಡ್ ಸೆಟ್ ಕ್ವಾಲ್ಕಂ ಸ್ನ್ಯಾಪ್ ಡ್ರ್ಯಾಗನ್ 660ಸಿ ಸಾಕೆಟ್ ಹೊಂದಿರಲಿದ್ದು, ಅದು 4ಜಿಬಿ ಮೆಮೊರಿಯೊಂದಿಗೆ ಕಪಲ್ ಆಗಿರುತ್ತದೆ.ಗಾಸಿಪ್ ಸುದ್ದಿಯ ಅನ್ವಯ ಹೇಳುವುದಾದರೆ ಇದರಲ್ಲಿ 128 ಜಿಬಿ ಆನ್ ಬೋರ್ಡ್ ಸ್ಟೋರೇಜ್ ಆಯ್ಕೆ ಇರಲಿದೆಯಂತೆ. ಇದರಲ್ಲಿ 3010mAh ಬ್ಯಾಟರಿ ಜೊತೆಗೆ Quick Charge 3.0 ಬೆಂಬಲವಿರುತ್ತದೆ.ಕನೆಕ್ಟಿವಿಟಿ ವಿಚಾರದಲ್ಲಿ ಹೇಳುವುದಾದರೆ 4G LTE, ವೈ-ಫೈ 802.11ac, ಬ್ಲೂಟೂತ್ v5.0, GPS/ A-GPS, USB ಟೈಪ್-C,ಮತ್ತು 3.5ಎಂಎಂ ಹೆಡ್ ಫೋನ್ ಜಾಕ್ ಇರಲಿದೆ.


 • ಎಂಐ 6ಎಕ್ಸ್‌ಗೆ ಹೋಲಿಕೆ

  ಮೇಲಿನ ಎಲ್ಲಾ ವೈಶಿಷ್ಟ್ಯತೆಗಳು ಎಂಐ 6ಎಕ್ಸ್ ಗೆ ಹೊಂದಿಕೆಯಾಗುತ್ತದೆ. ಅದರ ಅನುಸಾರವಾಗಿಯೇ ಎಂಐ ಎ2 ಬಿಡುಗಡೆಯಾಗುತ್ತದೆ ಎಂಬ ಊಹಾಪೋಹವೂ ಇದೆ. ಎಂಐ 6ಎಕ್ಸ್ ನಲ್ಲೂ ಡುಯಲ್ ನ್ಯಾನೋ ಸಿಮ್ ಬಳಸಬಹುದು. ಶಿಯೋಮಿ ಎಂಐ 6ಎಕ್ಸ 5.99-ಇಂಚಿನ ಫುಲ್-HD+ (1080x2160 ಪಿಕ್ಸಲ್) ಡಿಸ್ಪ್ಲೇ ಜೊತೆಗೆ 18:9 ಅನುಪಾತವನ್ನು ಹೊಂದಿದೆ.ಸ್ನ್ಯಾಪ್ ಡ್ರ್ಯಾಗನ್ 660 ಸಾಕೆಟ್ ನ್ನು ಇದು ಹೊಂದಿದ್ದು 6ಜಿಬಿ LPDDR4x ಡುಯಲ್ ಚಾನಲ್ ನ ಮೆಮೊರಿಯನ್ನು ಒಳಗೊಂಡಿದೆ.
  128ಜಿಬಿ ಬಿಲ್ಟ್ ಇನ್ ಸ್ಟೋರೇಜ್ ವ್ಯವಸ್ಥೆ ಇದ್ದು 20-ಮೆಗಾಪಿಕ್ಸಲ್ ಸೋನಿ IMX376 ಮುಂಭಾಗದ ಕ್ಯಾಮರಾ ಸೆನ್ಸರ್ ಮತ್ತು ಸಾಫ್ಟ್-LED ಫ್ಲ್ಯಾಶ್ ಲೈಟ್ ಒಳಗೊಂಡಿದೆ. ಡುಯುಲ್ ಹಿಂಭಾಗದ ಕ್ಯಾಮರಾ ವ್ಯವಸ್ಥೆಯು 12- ಮೆಗಾಪಿಕ್ಸಲ್ ಪ್ರೈಮರಿ ಸೋನಿ IMX486 ಸೆನ್ಸರ್ ನ್ನು ಒಳಗೊಂಡಿದೆ. 20-ಮೆಗಾಪಿಕ್ಸಲ್ ಸೆಕೆಂಡರಿ ಕ್ಯಾಮರಾ ಸೋನಿ IMX376 ಸೆನ್ಸರ್,ಫೇಸ್-ಡಿಟೆಕ್ಷನ್ ಆಟೋಫೋಕಸ್ ಮತ್ತು ಡುಯಲ್ ಟೋನ್ LED ಫ್ಲ್ಯಾಶ್ ನ್ನು ಒಳಗೊಂಡಿದೆ.


 • ಎಂಐ 6ಎಕ್ಸ್‌ ಕೂಡ 3010mAh ಬ್ಯಾಟರಿ ಹೊಂದಿತ್ತು

  ಎಂಐ 6ಎಕ್ಸ್ 3010mAh ಬ್ಯಾಟರಿಯನ್ನು ಹೊಂದಿತ್ತು ಮತ್ತು ಬಹಳ ವೇಗವಾದ ಚಾರ್ಜಿಂಗ್ ಗೆ QuickCharge 3.0 ಬೆಂಬಲಿಸುತ್ತಿತ್ತು. ಕನೆಕ್ಟಿವಿಟಿ ವಿಚಾರಕ್ಕೆ ಬಂದರೆ ಎಂಐ 6ಎಕ್ಸ್ / ಎಂಐ ಎ2 ಎರಡೂ ಕೂಡ 4ಜಿ LTE, ಡುಯಲ್-ಬ್ಯಾಂಡ್ ವೈ-ಫೈ a/b/g/n/ac, ವೈ-ಫೈ ಡೈರೆಕ್ಟ, ಮಿರಾಕಾಸ್ಟ್,ಬ್ಲೂಟೂತ್ 5.0,ಐಆರ್ ಎಮ್ಮಿಟರ್, ಯುಎಸ್ ಬಿ ಟೈಪ್ -ಸಿ ಪೋರ್ಟ್ ಹೊಂದಿದೆ. ಆದರೆ ಆ ಬಾರಿ 3.5ಎಂಎಂ ಇಯರ್ ಫೋನ್ ಜಾಕ್ ಇರುವುದಿಲ್ಲ.
  ಸೆನ್ಸರ್ ಗಳು ಅಕ್ಸೆಲೋಮೀಟರ್, ಆಂಟಿಯಂಟ್ ಬೆಳಕಿನ ಸೆನ್ಸರ್, ಗೈರೋಸ್ಕೋಪ್, ಪ್ರಾಕ್ಸಿಮಿಟಿ ಸೆನ್ಸರ್ ಗಳನ್ನು ಒಳಗೊಂಡಿರುತ್ತದೆ. ಸಂಪೂರ್ಣ ಲೋಹದ ಮೇಲ್ಮೈ ಹೊಂದಿರುತ್ತದೆ. ಎರಡು ಸ್ಪೀಕರ್ ಗಳನ್ನು ಕೆಳಭಾಗದಲ್ಲಿ ಹೊಂದಿರುತ್ತದೆ. 5 ಬಣ್ಣಗಳ ಆಯ್ಕೆಯಲ್ಲಿ ಈ ಮೊಬೈಲ್ ಲಭ್ಯವಾಗುತ್ತದೆ - ಕೆಂಪು, ಚಿನ್ನದ ಬಣ್ಣ, ಗುಲಾಬಿ ಚಿನ್ನದ ಬಣ್ಣ, ನೀಲಿ ಮತ್ತು ಕಪ್ಪು. ಸ್ಮಾರ್ಟ್ ಫೋನಿನ ಒಟ್ಟು ಸುತ್ತಳತೆ 158.7x75.4x7.3ಎಂಎಂ ಆಗಿದೆ ಮತ್ತು ತೂಕ 168ಗ್ರಾಂಗಳಾಗಿದೆ.
ಶಿಯೋಮಿಯ ಮುಂದಿನ ಜನರೇಷನ್ನಿನ ಎಂಐ ಎ2 ಫೋನಿಗಾಗಿ ಎಲ್ಲರೂ ಕಾತರರಾಗಿದ್ದಾರೆ ಮತ್ತು ಇದು ಎಂಐ 6ಎಕ್ಸ್ ನ ಮುಂದಿನ ವೇರಿಯಂಟ್ ಆಗಿರಲಿದೆ ಎಂಬ ಗುಸುಗುಸು ಸುದ್ದಿಯೂ ಮೊಬೈಲ್ ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ. ಇಂತಹ ಹಲವಾರು ಗಾಸಿಪ್ ಮತ್ತು ಚರ್ಚೆಗಳ ನಡುವೆಯೇ ಎಂಐ ಎ2 ಬಿಡುಗಡೆಗೆ ಸಿದ್ಧವಾಗುತ್ತಿದೆ.

ಶಿಯೋಮಿಯು ಕಳೆದೊಂದು ವರ್ಷದಿಂದ ಭಾರಿ ಯಶಸ್ಸನ್ನು ಕಳಿಸುತ್ತಿದ್ದು, ಅದರ ಎಂಐ 5ಎಕ್ಸ್, ಎಂಐ 6ಎಕ್ಸ್ ಮತ್ತು ಎಂಐ ಎ1 ಫೋನ್ ಗಳು ಮಾರುಕಟ್ಟೆಯಲ್ಲಿ ಜನಮನ್ನಣೆ ಗಳಿಸಿದ್ದವು. ಈಗ ಶಿಯೋಮಿ ಈ ಬಾರಿಯ ಗ್ಲೋಬಲ್ ಇವೆಂಟ್ ನಲ್ಲಿ ಮತ್ತೊಂದು ಫೋನ್ ಬಿಡುಗಡೆಗೊಳಿಸಲು ಸನ್ನದ್ಧವಾಗಿದೆ. ಅದುವೇ ಶಿಯೋಮಿ ಎಂಐ ಎ2. ಹಾಗಾದ್ರೆ ಈ ಫೋನ್ ಹೇಗಿರಲಿದೆ?ಇದರ ವೈಶಿಷ್ಟ್ಯತೆಗಳೇನು? ಬೆಲೆ ಎಷ್ಟಿರಬಹುದು? ಕ್ಯಾಮರಾ ಹೇಗಿರಬಹುದು? ಇದರೊಳಗಿನ ಸಾಫ್ಟವೇರ್ ಯಾವುದು? ಇಂತಹ ಪ್ರಶ್ನೆಗಳ ಬಗೆಗಿನ ಮುನ್ನೋಟ ಇಲ್ಲಿದೆ ನೋಡಿ.

   
 
ಹೆಲ್ತ್