Back
Home » ಇತ್ತೀಚಿನ
ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಮೂರು ಕ್ಯಾಮೆರಾ: ಬಿಡುಗಡೆ ಡೇಟ್ ಫಿಕ್ಸ್..!
Gizbot | 12th Sep, 2018 06:55 PM
 • ಮೂರು ಕ್ಯಾಮೆರಾ:

  ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಹಿಂಭಾಗದಲ್ಲಿ ಹೊಸ ಮಾದರಿಯ ಮೂರು ಲೆನ್ಸ್ ಗಳನ್ನು ಕಾಣಬಹುದಾಗಿದೆ. ಆಕ್ಟೋಬರ್ 17 ರಂದು ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ ಲಾಂಚ್ ಮಾಡಲು ಸಿದ್ದತೆಯನ್ನು ಮಾಡಲಿದೆ ಎನ್ನಲಾಗಿದೆ. ಈ ಹಿನ್ನಲೆಯಲ್ಲಿ ಲೀಕ್ ಆಗಿರುವ ಮಾಹಿತಿಯೂ ಹೆಚ್ಚಿನ ಪ್ರಮಾಣದಲ್ಲಿ ಸದ್ದು ಮಾಡುತ್ತಿದೆ.


 • 'ಆನ್‌ಲಾಕ್ ದ ಸ್ಪೀಡ್'

  ಪ್ರತಿ ಸ್ಮಾರ್ಟ್‌ಫೋನ್ ಲಾಂಚ್ ಸಂದರ್ಭದಲ್ಲಿಯೂ ಹೊಸ ಮಾದರಿಯ ಟ್ಯಾಗ್ಸ್ ಲೈನ್ ಅನ್ನು ನೀಡುವ ಒನ್‌ಪ್ಲಸ್, ಈ ಬಾರಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್‌ಗೆ 'ಆನ್‌ಲಾಕ್ ದ ಸ್ಪೀಡ್' ಎಂಬ ಟ್ಯಾಗ್ಸ್‌ಲೈನ್‌ ಅನ್ನು ನೀಡಿದ್ದು, ಈ ಸ್ಮಾರ್ಟ್‌ಫೋನ್ ಸಹ ವೇಗವಾಗಿ ಕಾರ್ಯನಿರ್ವಹಿಸಲಿದೆ ಎಂಬುದನ್ನು ತಿಳಿಸಿದೆ.


 • ವಾಟರ್‌ ಡ್ರಾಪ್ ಡಿಸ್‌ಪ್ಲೇ:

  ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಹೊಸ ಮಾದರಿಯ ಡಿಸ್‌ಪ್ಲೇ ನೋಚ್ ಅನ್ನು ಕಾಣಬಹುದಾಗಿದೆ. ಒಪ್ಪೋ F9 ಪ್ರೋ ಸ್ಮಾರ್ಟ್‌ಫೋನಿನಲ್ಲಿ ಕಾಣಿಸಿಕೊಂಡ ವಾಟರ್ ಡ್ರಾಪ್ ಮಾದರಿಯ ನೋಚ್ ಡಿಸ್‌ಪ್ಲೇಯನ್ನು ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಕಾಣಬಹುದಾಗಿದೆ. ಇದರಿಂದಾಗಿ ಬಳಕೆದಾರರಿಗೆ ದೊಡ್ಡ ಮಟ್ಟದಲ್ಲಿ ಅಗಲವಾದ ಸ್ಕ್ರಿನ್ ಅನ್ನು ಕಾಣಬಹುದಾಗಿದೆ.


 • ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್:

  ಇದಲ್ಲದೇ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಮಾರುಕಟ್ಟೆಯಲ್ಲಿ ಸದ್ದು ಮಾಡುತ್ತಿರುವ ಇನ್‌ ಡಿಸ್‌ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅನ್ನು ಕಾಣಬಹುದಾಗಿದೆ. ಇದು ಸದ್ಯದ ಮಾರುಕಟ್ಟೆಯ ಟ್ರೆಂಡ್ ಆಗಿದ್ದು, ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಇದು ಮುಖ್ಯ ಆಕರ್ಷಣೆಯಾಗಲಿದೆ.


 • ದೊಡ್ಡ ಡಿಸ್‌ಪ್ಲೇ:

  ಈ ಹಿಂದೆ 18:9 ಅನುಪಾತದ ಡಿಸ್‌ಪ್ಲೇಯನ್ನು ಹೊಂದಿದ್ದ ಒನ್‌ಪ್ಲಸ್ 5T ಸ್ಮಾರ್ಟ್‌ಫೋನ್ ಬಳಕೆದಾರರ ಮೆಚ್ಚುಗೆಗೆ ಪಾತ್ರವಾಗಿತ್ತು. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿಯೂ 18:9 ಅನುಪಾತದ ಡಿಸ್‌ಪ್ಲೇಯನ್ನು ಅಳವಡಿಸಲು ಒನ್‌ಪ್ಲಸ್ ಮುಂದಾಗಿದೆ ಎನ್ನಲಾಗಿದೆ.


 • 256 GB ಮೆಮೊರಿ:

  ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನಲ್ಲಿ ಸ್ನಾಪ್‌ಡ್ರಾಗನ್ 835 ಪ್ರೋಸೆಸರ್ ನೊಂದಿಗೆ 8GB RAM ಮತ್ತು 256 GB ಇಂಟರ್ನಲ್ ಮೆಮೊರಿಯೊಂದಿಗೆ ಮಾರಾಟವಾಗಲಿದೆ ಎನ್ನಲಾಗಿದೆ. ಮಾರುಕಟ್ಟೆಯಲ್ಲಿ ಪೊಕೊ F1 ಲಾಂಚ್ ಆಗಿರುವ ಹಿನ್ನಲೆಯಲ್ಲಿ ಬೆಲೆಯೂ ಕಡಿಮೆ ಇರುವ ಸಾಧ್ಯತೆ ಇದೆ.
ಈಗಾಗಲೇ ಮಾರುಕಟ್ಟೆಯಲ್ಲಿ ಸದ್ದು ಶುರು ಮಾಡಿರುವ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಕುರಿತ ಮಾಹಿತಿಯೂ ಒಂದೊಂದಾಗಿ ಲೀಕ್ ಆಗುತ್ತಿದೆ. ಮಾರುಕಟ್ಟೆಯಲ್ಲಿ ಹೊಸ ಮಾದರಿಯ ವಿನ್ಯಾಸ ಸೇರಿದಂತೆ ಹೊಸ ಬಗೆಯ ಆಯ್ಕೆಗಳೊಂದಿಗೆ ಮಾರುಕಟ್ಟೆಗೆ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಲಾಂಚ್ ಆಗಲಿದೆ ಎನ್ನಲಾಗಿದೆ.

ಸದ್ಯ ಲೀಕ್ ಆಗಿರುವ ಕೇಸ್ ವೊಂದರ ಫೋಟೋದಲ್ಲಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನಿನ ಹಿಂಭಾಗದಲ್ಲಿ ಮೂರು ಕ್ಯಾಮೆರಾವನ್ನು ಅಳವಡಿಸಲಾಗಿದೆ ಎನ್ನಲಾಗಿದೆ. ಸ್ಮಾರ್ಟ್‌ಫೋನ್ ಫೊಟೋಗ್ರಫಿಯ ದಿಕ್ಕನ್ನು ಈ ಹೊಸ ವಿನ್ಯಾಸವು ಬದಲಾವಣೆ ಮಾಡಲಿದೆ. ಈ ಹಿನ್ನಲೆಯಲ್ಲಿ ಒನ್‌ಪ್ಲಸ್ 6T ಸ್ಮಾರ್ಟ್‌ಫೋನ್ ಕುರಿತ ಹೆಚ್ಚಿನ ಮಾಹಿತಿಯೂ ಮುಂದಿದೆ.

ಕೃಪೆ

   
 
ಹೆಲ್ತ್