Back
Home » ಆರೋಗ್ಯ
ಮಳೆಗಾಲದಲ್ಲಿ ಕಾಡುವ ಕೆಮ್ಮಿಗೆ ಪವರ್ ಫುಲ್ ಮನೆಮದ್ದುಗಳು
Boldsky | 21st Sep, 2018 10:20 AM
 • ಅರಿಶಿನ

  ಕುದಿಯುತ್ತಿರುವ ನೀರಿಗೆ ಒಂದು ಚಮಚ ಅರಶಿನ ಹುಡಿ ಮತ್ತು ಕರಿಮೆಣಸಿನ ಹುಡಿ ಹಾಕಿ. ದಾಲ್ಚಿನಿ ಹುಡಿ ಮತ್ತು ಜೇನುತುಪ್ಪ ಸೇರಿಸುವುದನ್ನು ಪರಿಗಣಿಸಿ. ಕೆಮ್ಮು ಸುಧಾರಣೆಯಾಗುವ ತನಕ ನೀವು ಇದನ್ನು ದಿನನಿತ್ಯವೂ ಸೇವನೆ ಮಾಡಿ. ನಿಮ್ಮ ಆಹಾರಕ್ರಮದಲ್ಲಿ ಅರಿಶಿನವನ್ನು ಸೇರಿಸಿಕೊಳ್ಳಬೇಕಾದರೆ ಆಗ ನೀವು ಗಿಡಮೂಲಿಕೆ ಚಹಾಗೆ ಕೇರಮ್ ಬೀಜ ಮತ್ತು ಅರಶಿನ ಹಾಕಿ. ಇದಕ್ಕೆ ಜೇನುತುಪ್ಪ ಹಾಕಿಕೊಂಡು ಪ್ರತೀದಿನ ಎರಡರಿಂದ ಮೂರು ಸಲ ಕುಡಿಯಿರಿ. ಅರಶಿನದ ಬೇರನ್ನು ಹುರಿದುಕೊಂಡು ಅದನ್ನು ನುಣ್ಣಗಿನ ಹುಡಿ ಮಾಡಿ. ಇದಕ್ಕೆ ನೀರು ಮತ್ತು ಜೇನುತುಪ್ಪ ಬೆರೆಸಿಕೊಂಡು ದಿನದಲ್ಲಿ ಎರಡು ಸಲ ಕುಡಿಯಿರಿ.


 • ಶುಂಠಿ

  ಕುದಿಯುತ್ತಿರುವ ನೀರಿಗೆ ಸಣ್ಣ ಶುಂಠಿ ತುಂಡುಗಳನ್ನು ಹಾಕಿ. ಗಂಟಲಿನ ಊತ, ಕೆಮ್ಮು ಅಥವಾ ಎದೆಕಟ್ಟಿದ್ದರೆ ದಿನದಲ್ಲಿ ಮೂರರಿಂದ ನಾಲ್ಕು ಸಲ ಈ ನೀರನ್ನು ಕುಡಿಯಿರಿ. ನೀವು ಇದಕ್ಕೆ ಲಿಂಬೆರಸ ಮತ್ತು ಜೇನುತುಪ್ಪ ಹಾಕಿಕೊಳ್ಳಬಹುದು. ಹಸಿ ಶುಂಠಿಯನ್ನು ಜಗಿದರೂ ಕೆಮ್ಮಿನಿಂದ ಪರಿಹಾರ ಪಡೆಯಬಹುದು.


 • ಲಿಂಬೆ

  ಎರಡು ಚಮಚ ಲಿಂಬೆರಸ ಮತ್ತು ಒಂದು ಚಮಚ ಜೇನುತುಪ್ಪ ಮಿಶ್ರಣ ಮಾಡಿಕೊಳ್ಳಿ. ಇದು ನೀವು ಮನೆಯಲ್ಲೇ ತಯಾರಿಸಿರುವ ಕೆಮ್ಮಿನ ಸಿರಪ್. ಇದನ್ನು ದಿನದಲ್ಲಿ ಹಲವು ಸಲ ಕುಡಿಯಿರಿ. ಇದಕ್ಕೆ ನೀವು ಕರಿಮೆಣಸಿನ ಹುಡಿ ಕೂಡ ಬೆರೆಸಿಕೊಳ್ಳಬಹುದು.

  Most Read: ಸಂಧಿವಾತ ಗುಣಪಡಿಸಲು ಇಲ್ಲಿದೆ ನೋಡಿ ಪವರ್‌ಫುಲ್ ಮನೆಮದ್ದುಗಳು


 • ಈರುಳ್ಳಿ ಮತ್ತು ಬೆಳ್ಳುಳ್ಳಿ

  ಕೆಮ್ಮಿಗೆ ಸರಳ ಮೆನಮದ್ದು ಎಂದರೆ ಈರುಳ್ಳಿ ಕತ್ತರಿಸಿಕೊಳ್ಳಿ ಮತ್ತು ಅದರ ಘಾಟನ್ನು ನೀವು ಉಸಿರೆಳೆದುಕೊಳ್ಳಿ. ಇದರಿಂದ ಕೆಮ್ಮಿನ ಚಿಕಿತ್ಸೆಗೆ ನೆರವಾಗುವುದು ಮತ್ತು ಶ್ವಾಸನಾಳಗಳು ತೆರವಾಗುವುದು. ಸುಟ್ಟ ಈರುಳ್ಳಿ ರಸದೊಂದಿದೆ ಕಾಂಫ್ರೇ ಚಹಾ ಮತ್ತು ಜೇನುತುಪ್ಪವನ್ನು ಬೆರೆಸಿಕೊಂಡರೆ ಕೆಮ್ಮಿನ ಸಿರಪ್ ತಯಾರಾಗುವುದು. ಇದನ್ನು ನೀವು ದಿನನಿತ್ಯ ಸೇವಿಸಿ. ಇದಕ್ಕೆ ನೀವು ಶುದ್ಧ ಜೇನುತುಪ್ಪ ಬೆರೆಸಿ. ಬೆಳ್ಳುಳ್ಳಿಯಲ್ಲಿ ಇರುವಂತಹ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಾಣು ವಿರೋಧಿ ಗುಣಗಳಿಂದ ಅದನ್ನು ಅದ್ಭುತವಾಗಿ ಆಹಾರವೆಂದು ಪರಿಗಣಿಸಲಾಗಿದೆ. ಇದು ಕೆಮ್ಮು ನಿವಾರಣೆಗೆ ತುಂಬಾ ಪರಿಣಾಮಕಾರಿ. ಎರಡು ಅಥವಾ ಮೂರು ಬೆಳ್ಳುಳ್ಳಿ ಎಸಲು ಹಾಕಿ ನೀರು ಕುದಿಸಿ. ಇದಕ್ಕೆ ಒರೆಗಾನೊ ಬೆರೆಸಿ. ತಣ್ಣಗಾದ ಬಳಿಕ ಸ್ವಲ್ಪ ಜೇನುತುಪ್ಪ ಹಾಕಿ ಕುಡಿಯಿರಿ. ಇದು ತಡೆ ನಿವಾರಣೆ ಮಾಡಿ, ಉಸಿರಾಟ ಸರಾಗವಾಗಿಸುವುದು ಮತ್ತು ಕೆಮ್ಮಿನಿಂದ ಪರಿಹಾರ ನೀಡುವುದು. ಜಜ್ಜಿದ ಬೆಳ್ಳುಳ್ಳಿ ಜತೆಗೆ ಕೆಲವು ಹನಿ ಲವಂಗದ ಎಣ್ಣೆ ಮತ್ತು ಜೇನುತುಪ್ಪ ಬೆರೆಸಿಕೊಂಡರೆ ಗಂಟಲಿನ ಊತ ನಿವಾರಿಸಬಹುದು. ನಿಮ್ಮ ಆಹಾರದಲ್ಲೂ ಬೆಳ್ಳುಳ್ಳಿ ಸೇರಿಸಿಕೊಳ್ಳಿ.


 • ಬಿಸಿ ಹಾಲಿನೊಂದಿಗೆ ಜೇನುತುಪ್ಪ

  ಬಿಸಿಹಾಲಿಗೆ ಜೇನುತುಪ್ಪ ಹಾಕಿಕೊಂಡರೆ ಅದು ಒಣ ಕೆಮ್ಮು ಮತ್ತು ನಿರಂತರ ಕೆಮ್ಮಿನಿಂದ ಉಂಟಾಗುವ ಎದೆನೋವನ್ನು ಕಡಿಮೆ ಮಾಡುವುದು. ಅತೀ ಹೆಚ್ಚಿನ ಫಲಿತಾಂಶ ಪಡೆಯಬೇಕಾದರೆ ರಾತ್ರಿ ಮಲಗುವ ಮೊದಲು ಸೇವಿಸಿ. ಕಫ ಮತ್ತು ಗಂಟಲಿಗೆ ಶಮನ ನೀಡುವ ಒಂದು ಚಮಚ ಜೇನುತುಪ್ಪವನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿ.


 • ಕ್ಯಾರೆಟ್ ಜ್ಯೂಸ್

  ಕ್ಯಾರೆಟ್ ಜ್ಯೂಸ್ ನಲ್ಲಿ ವಿಟಮಿನ್ ಸಿ ಮತ್ತು ಎ ಸಮೃದ್ಧವಾಗಿದೆ. ವಿಟಮಿನ್ ಸಿಯು ಒಣ ಕೆಮ್ಮನ್ನು ನಿವಾರಿಸಲು ತುಂಬಾ ಪರಿಣಾಮಕಾರಿ. ಕ್ಯಾರೆಟ್ ಜ್ಯೂಸ್ ನ್ನು ದಿನಪೂರ್ತಿ ಆಗಾಗ ಕುಡಿಯುತ್ತಲಿದ್ದರೆ ಕೆಮ್ಮು ನಿವಾರಣೆಯಾಗುವುದು. ಪರಿಣಾಮಕಾರಿ ಫಲಿತಾಂಶಕ್ಕಾಗಿ ಸ್ವಲ್ಪ ಜೇನುತುಪ್ಪ ಬೆರೆಸಿ.

  Most Read: ಕೈಗಳಲ್ಲಿ ಇಂತಹ ಲಕ್ಷಣಗಳು ಕಂಡುಬಂದರೆ-ಥೈರಾಯ್ಡ್ ಸಮಸ್ಯೆವಿದೆ ಎಂದರ್ಥ!


 • ಬಾದಾಮಿ

  ಬಾದಾಮಿಯಲ್ಲಿ ಕೆಲವೊಂದು ಪರಿಣಾಮಕಾರಿ ಪೋಷಕಾಂಶಗಳು ಇವೆ. ಇದು ಕೆಮ್ಮು ಮತ್ತು ಇದಕ್ಕೆ ಸಂಬಂಧಿಸಿದ ಸೋಂಕಿನಿಂದ ಪರಿಹಾರ ನೀಡುವುದು. ಬಾದಾಮಿಯನ್ನು ಹತ್ತು ಗಂಟೆಗಳ ಕಾಲ ನೀರಿನಲ್ಲಿ ನೆನೆಸಿಡಿ ಮತ್ತು ಅದರ ಪೇಸ್ಟ್ ತಯಾರಿಸಿಕೊಳ್ಳಿ. ಈ ಪೇಸ್ಟ್ ಗೆ ಸ್ವಲ್ಪ ಬೆಣ್ಣೆ ಹಾಕಿ ಮತ್ತು ದಿನದಲ್ಲಿ ಮೂರು ಸಲ ಸೇವಿಸಿದರೆ ಪರಿಹಾರ ಸಿಗುವುದು.


 • ವೀಳ್ಯದೆಲೆ

  ಕೆಲವು ವೀಳ್ಯದೆಲೆಗಳನ್ನು ನುಣ್ಣಗೆ ಅರೆದು ಎದೆಯ ಮೇಲೆ ಹಚ್ಚಿ. ಇದರಿಂದ ನಿಧಾನವಾಗಿ ಕೆಮ್ಮು ಕಡಿಮೆಯಾಗುತ್ತದೆ. ಕೆಮ್ಮು ಎದುರಾದರೆ ರೋಗಿ ಧೂಮಪಾನ, ಮಾಂಸಾಹಾರ, ಸಕ್ಕರೆ, ಟೀ, ಕಾಫಿ ಸಂಸ್ಕರಿತ ಆಹಾರಗಳಿಂದ ದೂರವಿದ್ದಷ್ಟೂ ಒಳ್ಳೆಯದು.


 • ಉಪ್ಪು-ಬೆಳ್ಳುಳ್ಳಿ ಬೇಯಿಸಿದ ನೀರು ಕುಡಿಯಿರಿ

  ಒಂದು ಲೋಟ ನೀರಿಗೆ ಕೆಲವು ಹರಳು ಉಪ್ಪು ಹಾಗೂ ಕೆಲವು ಎಸಳು ಬೆಳ್ಳುಳ್ಳಿಗಳನ್ನು ಜಜ್ಜಿ ಕುದಿಸಬೇಕು. ಸುಮಾರು ಐದು ನಿಮಿಷ ಕುದಿಸಿದ ಬಳಿಕ ಒಂದು ಚಮಚ ಅರಿಶಿನದ ಪುಡಿ ಸೇರಿಸಿ ಸೋಸಿದ ನೀರನ್ನು ಸಾಧ್ಯವಾದಷ್ಟು ಬಿಸಿಯಿರುವಾಗಲೇ ಸೇವಿಸುವ ಮೂಲಕ ಕೆಮ್ಮು ಕಡಿಮೆಯಾಗುತ್ತದೆ.


 • ಶುಂಠಿ ಟೀ

  ಕೆಮ್ಮು ಮತ್ತು ಶೀತ ಪ್ರಾರಂಭವಾದರೆ ಶುಂಠಿಯ ಟೀ ನೀಡುವ ಆರೈಕೆಗಿಂತ ಇನ್ನೊಂದಿಲ್ಲ. ಹಸಿಶುಂಠಿಯನ್ನು ನೇರವಾಗಿ ಸೇವಿಸುವುದು ಉತ್ತಮವಾದರೂ ಇದು ಸಾಧ್ಯವಾಗದ ಕಾರಣ ಟೀ ತಯಾರಿಸಿ ಕುಡಿಯುವುದೇ ಉತ್ತಮ. ಒಂದು ಕಪ್ ನೀರಿಗೆ ಕೊಂಚ ಶುಂಠಿಯ ತುರಿಯನ್ನು ಹಾಕಿ ಕುದಿಸಿ ತಣಿಸಿ ಕುಡಿಯುವ ಮೂಕ ಶೀತದಿಂದ ಕಟ್ಟಿಕೊಂಡಿದ್ದ ಮೂಗು ತಕ್ಷಣವೇ ತೆರೆದು ಶೀಘ್ರವೇ ಚೇತರಿಸಿಕೊಳ್ಳಲು ಸಾಧ್ಯವಾಗುತ್ತದೆ.


 • ಅರಿಶಿನ ಬೆರೆಸಿದ ಹಾಲು

  ಇದು ನೂರಾರು ವರ್ಷಗಳಿಂದ ಅನುಸರಿಸಿಕೊಂಡು ಬರುತ್ತಿರುವ ಭಾರತದ ನೆಚ್ಚಿನ ಮನೆಮದ್ದಾಗಿದ್ದು ಶೀತ ಮತ್ತು ನೆಗಡಿ ಎಂದಾಕ್ಷಣ ಮೊದಲಾಗಿ ಮಾಡಿ ಕೊಡಲಾಗುತ್ತದೆ. ಅರಿಶಿನದಲ್ಲಿರುವ ಬ್ಯಾಕ್ಟೀರಿಯಾ ನಿವಾರಕ ಗುಣಗಳು ಮತ್ತು ಇದರಲ್ಲಿರುವ ಹಲವು ಆಂಟಿ ಆಕ್ಸಿಡೆಂಟುಗಳು ಬಿಸಿಹಾಲಿನೊಂದಿಗೆ ಕುಡಿಯುವ ಮೂಲಕ ಶೀತದ ವಿರುದ್ಧ ರಕ್ಷಣೆ ಒದಗಿಸಿ ಶೀಘ್ರ ಚೇತರಿಕೆಗೆ ನೆರವಾಗುತ್ತದೆ.


 • ಬೆಳ್ಳುಳ್ಳಿ

  ಇದರಲ್ಲಿರುವ ಆಲಿಸಿನ್ ಎಂಬ ಪೋಷಕಾಂಶ ಅತ್ಯುತ್ತಮ ಬ್ಯಾಕ್ಟೀರಿಯಾ ನಿವಾರಕವಾಗಿದ್ದು ಶೀತ ಮತ್ತು ಕೆಮ್ಮಿನ ಸಮಯದಲ್ಲಿ ಸೇವಿಸಲು ಯೋಗ್ಯವಾದ ಆಹಾರವಾಗಿದೆ. ಬೆಳ್ಳುಳ್ಳಿಯನ್ನು ಸಾಧ್ಯವಾದಷ್ಟೂ ಹಸಿಯಾಗಿಯೇ ಸೇವಿಸುವ ಮೂಲಕ ರೋಗ ನಿರೋಧಕ ಶಕ್ತಿ ಉತ್ತಮಗೊಳ್ಳುತ್ತದೆ ಹಾಗೂ ರಕ್ತಪರಿಚಲನೆಯೂ ಉತ್ತಮಗೊಳ್ಳುತ್ತದೆ. ಹಸಿಯಾಗಿ ಸೇವಿಸಲು ಇಷ್ಟವಾಗದೇ ಇದ್ದರೆ ಒಂದೆರಡು ಎಸಳುಗಳನ್ನು ತುಪ್ಪದಲ್ಲಿ ಕೊಂಚವೇ ಹುರಿದು ಊಟದ ಜೊತೆಗೆ ಸೇವಿಸಬಹುದು.

  Most Read: ಈ 5 ರಾಶಿಯವರು ಕಷ್ಟಪಡದೇ- ಜೀವನದಲ್ಲಿ ಸುಖ ಭೋಗಗಳನ್ನು ಹೊಂದಲು ಇಷ್ಟಪಡುತ್ತಾರೆ!


 • ತುಳಸಿ ಚಹಾ

  *ಒಂದು ಪಾತ್ರೆಯಲ್ಲಿ ಒಂದು ಕಪ್ ನೀರು ಮತ್ತು 5-7 ತುಳಸಿ ಎಲೆಯನ್ನು ಸೇರಿಸಿ. *ಪಾತ್ರೆಗೆ ಮುಚ್ಚಳವನ್ನು ಮುಚ್ಚಿ ಸಣ್ಣ ಉರಿಯಲ್ಲಿ 10 ನಿಮಿಷಗಳ ಕಾಲ ಕುದಿಸಿ. *ನಂತರ ಉರಿಯನ್ನು ಆರಿಸಿ, ಚಹಾವನ್ನು ತಣಿಯಲು ಬಿಡಿ.
  *ಉಗುರು ಬೆಚ್ಚಗಿರುವಾಗಲೇ ಸೇವಿಸಬಹುದು.
  *ಬೇಕಿದ್ದರೆ ಆರೋಗ್ಯ ಉತ್ಪನ್ನಗಳಾದ ಶುಂಠಿ, ಏಲಕ್ಕಿ, ಕರಿಮೆಣಸು, ಲವಂಗ ಹಾಗೂ ಕೆಲವು ಮಸಾಲೆ ಗಿಡಮೂಲಿಕೆಗಳನ್ನು ಸೇರಿಸಬಹುದು.
  *ಇದನ್ನು ನಿತ್ಯವೂ ಸೇವಿಸಬಹುದು. ಇಲ್ಲವೇ ಅಗತ್ಯವಿದ್ದಾಗ ಸೇವಿಸಬಹುದು.


 • ಚಿಕ್ಕ ತುಂಡು ಹಸಿಶುಂಠಿಯನ್ನು ಉಪ್ಪಿನೊಂದಿಗೆ ಜಗಿಯಿರಿ

  ಕೆಮ್ಮು ಕಡಿಮೆಯಾಗಲು ಅತ್ಯುತ್ತಮ ವಿಧಾನವೆಂದರೆ ಒಂದು ಚಿಕ್ಕ ತುಂಡು ಹಸಿಶುಂಠಿಯನ್ನು ಉಪ್ಪಿನೊಂದಿಗೆ ಜಗಿಯುವುದು. ಆದರೆ ಹಸಿಶುಂಠಿ ಕೊಂಚ ಖಾರವಾದುದರಿಂದ ಇದು ಎಲ್ಲರಿಗೂ ಸಾಧ್ಯವಾಗುವುದಿಲ್ಲ. ಇವರು ಹಸಿಶುಂಠಿಯನ್ನು ಕೊಂಚ ನೀರಿನಲ್ಲಿ ಕುದಿಸಿ ತಣಿಸಿ ಶೋಧಿಸಿದ ಬಳಿಕ ಚಿಟಿಕೆಯಷ್ಟು ಉಪ್ಪು ಸೇರಿಸಿ ಕುಡಿಯಬಹುದು.
  *ಒಂದು ಚಿಕ್ಕ ತುಂಡು ಹಸಿಶುಂಠಿಯ ಸಿಪ್ಪೆ ಸುಲಿದು ಇದಕ್ಕೆ ಕೊಂಚ ಉಪ್ಪನ್ನು ಸಿಂಪಡಿಸಿ. ಈ ತುಂಡನ್ನು ಜಜ್ಜಿ ನಯವಾಗಿಸಿ ಒಂದು ಚಮಚದಲ್ಲಿ ಲೇಹ್ಯದಂತೆ ನೇರವಾಗಿ ನುಂಗಿಬಿಡುವುದು.
  *ಸಾಧ್ಯವಾದರೆ ಕೊಂಚ ಅಗಿದು ರಸವನ್ನು ನುಂಗಬೇಕು. ಇದರ ಖಾರದಿಂದ ರಕ್ಷಣೆ ಪಡೆಯಲು ಈ ತುಂಡನ್ನು ಸೇವಿಸಿದ ಬಳಿಕ ಕೊಂಚ ಜೇನನ್ನು ನೆಕ್ಕುವ ಮೂಲಕ ಉರಿಯಿಂದ ತಪ್ಪಿಸಿಕೊಳ್ಳಬಹುದು.
ವಾತಾವರಣದಲ್ಲಿ ಪದೇ ಪದೇ ಆಗುತ್ತಿರುವಂತಹ ಬದಲಾವಣೆಯಿಂದಾಗಿ ಹೆಚ್ಚಿನವರಿಗೆ ಶೀತ, ಕೆಮ್ಮು ಮತ್ತು ಜ್ವರ ಇಂದಿನ ದಿನಗಳಲ್ಲಿ ಕಾಣಿಸಿಕೊಳ್ಳುತ್ತಿದೆ. ಅದರಲ್ಲೂ ಮಳೆಗಾಲದಲ್ಲಿ ಅಂತೂ ಕೆಮ್ಮಿನೊಂದಿಗೆ ಗಂಟಲಿನ ಊತ ಕೂಡ ಇರುವುದು. ಶ್ವಾಸನಾಳದಲ್ಲಿ ಯಾವುದೇ ರೀತಿಯ ಕಿರಿಕಿರಿ ಅಥವಾ ತಡೆಯಿದ್ದರೆ ಆಗ ಇದನ್ನು ತೆಗೆಯುವಂತೆ ಮೆದುಳು ದೇಹಕ್ಕೆ ಸಂದೇಶ ಕಳುಹಿಸಿದಾಗ ಕೆಮ್ಮು ಕಾಣಿಸುವುದು.

ವೈರಲ್ ಸೋಂಕು, ಸಾಮಾನ್ಯ ಶೀತ, ಜ್ವರ, ಧೂಮಪಾನ ಅಥವಾ ಆರೋಗ್ಯ ಸಮಸ್ಯೆಯಾಗಿರುವ ಕ್ಷಯರೋಗ ಮತ್ತು ಅಸ್ತಮಾದಿಂದ ಬರಬಹುದು. ಕೆಮ್ಮು ಕಡಿಮೆ ಮಾಡಲು ಕೆಮ್ಮಿನ ಸಿರಫ್ ತೆಗೆದುಕೊಳ್ಳುವ ಬದಲು ಕೆಲವೊಂದು ನೈಸರ್ಗಿಕ ಚಿಕಿತ್ಸೆ ಪಡೆದುಕೊಂಡರೆ ಅದು ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ಕೆಮ್ಮಿನ ನಿವಾರಣೆ ಮಾಡುವುದು.

   
 
ಹೆಲ್ತ್