Back
Home » ಆರೋಗ್ಯ
ನೆಲ್ಲಿಕಾಯಿ ಅತಿಯಾಗಿ ಸೇವಿಸಿದರೆ ಇಂತಹ 8 ಸಮಸ್ಯೆಗಳು ಕಾಡಬಹುದು!!
Boldsky | 24th Sep, 2018 11:09 AM
 • ರಕ್ತಸ್ರಾವ ಹೆಚ್ಚಾಗಬಹುದು

  ನೆಲ್ಲಿಕಾಯಿಯಲ್ಲಿರುವ ವಿಟಮಿನ್ ಸಿಯು ರಕ್ತನಾಳಗಳ ಸ್ಥಿತಿಸ್ಥಾಪಕತ್ವವನ್ನು ಹೆಚ್ಚಿಸಬಹುದು. ಇದರಿಂದ ರಕ್ತಸಂಚಾರವು ಸರಾಗವಾಗಿ ಆಗಲು ನೆರವಾಗುವುದು ಮತ್ತು ಇದರಿಂದ ರಕ್ತದೊತ್ತಡವು ತಗ್ಗುವುದು. ನಿಮಗೆ ರಕ್ತಸ್ರಾವವಾಗುವ ಸಮಸ್ಯೆಯಿದ್ದರೆ ಅಥವಾ ರಕ್ತಹೆಪ್ಪುಗಟ್ಟುವ ಮಾತ್ರೆ ಸೇವನೆ ಮಾಡುತ್ತಲಿದ್ದರೆ ಆಗ ನೀವು ನೆಲ್ಲಿಕಾಯಿ ಸೇವಿಸುವಾಗ ನೀವು ಎಚ್ಚರಿಕೆ ವಹಿಸಬೇಕು ಮತ್ತು ಅತಿಯಾಗಿ ಸೇವಿಸಬಾರದು.

  Most Read: ಅಂಗೈಯಲ್ಲಿ ತ್ರಿಕೋನವಿದ್ದರೆ ಅವರ ಅದೃಷ್ಟವೇ ಬದಲಾಗಲಿದೆ!


 • ಯಕೃತ್ ಗೆ ಹಾನಿ

  ನೆಲ್ಲಿಕಾಯಿಯಲ್ಲಿ ಉತ್ತಮ ಮಟ್ಟದ ಆ್ಯಂಟಿಆಕ್ಸಿಡೆಂಟ್ ಮತ್ತು ಹೆಪ್ಟೊಪ್ರೊಟೆಕ್ಟಿವ್ ಚಟುವಟಿಕೆಯು ಯಕೃತ್ ನ ಸಮಸ್ಯೆ ನಿವಾರಣೆ ಮಾಡಲು ತುಂಬಾ ಪರಿಣಾಮಕಾರಿ. ನೆಲ್ಲಿಕಾಯಿ ಬೆರೆಸಿರುವಂತಹ ಯಾವುದೇ ರೀತಿಯ ಆಯುರ್ವೇದ ಔಷಧಿ ಸೇವನೆ ಮಾಡುತ್ತಲಿದ್ದರೆ ಆಗ ಯಕೃತನ ಸಮಸ್ಯೆಯು ಸೀರಮ್ ಗ್ಲುಟಮಿಕ್ ಪಿರುವಿಕ್ ಟ್ರಾನ್ಸ್ಮಿಮೇಸ್ (ಎಸ್ ಜಿಪಿಟಿ) ಎನ್ನುವ ಯಕೃತ್ ನ ಕಿಣ್ವವು ಹೆಚ್ಚಾದಾಗ ಸಮಸ್ಯೆ ಬರುವುದು. ಕೇವಲ ನೆಲ್ಲಿಕಾಯಿ ಮಾತ್ರ ಯಕೃತ್ ಗೆ ಹಾನಿಯುಂಟು ಮಾಡುವುದಿಲ್ಲ. ಆದರೆ ನೆಲ್ಲಿಕಾಯಿಯೊಂದಿಗೆ ಶುಂಠಿ, ಟಿನೊಸ್ಪರಾ ಕಾರ್ಡಿಫೋಲಿಯಾ ಮತ್ತು ಭಾರತೀಯ ಸಾಂಬ್ರಾಣಿಯನ್ನು ಜತೆಗೆ ಇದನ್ನು ಸೇವನೆ ಮಾಡಿದರೆ ಆಗ ಯಕೃತ್ ಸಮಸ್ಯೆ ಇರುವವರಲ್ಲಿ ಈ ಸಮಸ್ಯೆಯು ಮತ್ತಷ್ಟು ಹದಗೆಡುವುದು.

  Most Read: ಬಾಳೆ ಎಲೆಯಲ್ಲಿ ಆಹಾರವನ್ನಿಟ್ಟು ಕಾಗೆಗೆ ಉಣಬಡಿಸುವ 'ಪಿತೃ ಪಕ್ಷದ' ಮಹತ್ವ


 • ಅಧಿಕ ಅಸಿಡಿಟಿ

  ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿ ಯು ಹಣ್ಣಿಗೆ ಆಮ್ಲೀಯ ಗುಣ ನೀಡಿದೆ. ಈ ಹಣ್ಣನ್ನು ಖಾಲಿ ಹೊಟ್ಟೆಯಲ್ಲಿ ಸೇವಿಸಿದರೆ ದೇಹವನ್ನು ನಿರ್ವಿಷಗೊಳಿಸಬಹುದು. ಆದರೆ ಇದು ಅಸಿಡಿಟಿ ಉಂಟು ಮಾಡಬಹುದು ಮತ್ತು ಹೊಟ್ಟೆಗೆ ಕಿರಿಕಿರಿಯಾಗಬಹುದು. ಇದು ನೆಲ್ಲಿಕಾಯಿಯ ಮತ್ತೊಂದು ಅಡ್ಡಪರಿಣಾಮ. ಒಂದು ವೇಳೆ ನಿಮಗೆ ಅಸಿಡಿಟಿ ಸಮಸ್ಯೆ ಕಾಡುತ್ತಿದ್ದರೆ, ಈ ಸರಳ ಮನೆಮದ್ದುಗಳನ್ನು ಪ್ರಯತ್ನಿಸಿ ನೋಡಿ- ಎರಡು ಏಲಕ್ಕಿಯನ್ನು(ಸಿಪ್ಪೆ ಸಹಿತ ಅಥವಾ ರಹಿತ) ಹುಡಿ ಮಾಡಿ ನೀರಿಗೆ ಹಾಕಿ ಕುದಿಸಿ. ತಣ್ಣಗಾದ ಬಳಿಕ ನೀರನ್ನು ಕುಡಿದರೆ ಅಸಿಡಿಟಿ ನಿವಾರಣೆಯಾಗುವುದು. ಇನ್ನೊಂದು ವಿಧಾನ ಅಸಿಡಿಟಿಯಾದಾಗ ಒಂದು ತುಂಡು ಶುಂಠಿಯನ್ನು ಜಗಿಯಿರಿ ಅಥವಾ ಸ್ವಲ್ಪ ನೀರಿಗೆ ಜಜ್ಜಿದ ಶುಂಠಿಯನ್ನು ಹಾಕಿ ಕುದಿಸಿ ಅದರ ನೀರನ್ನು ಕುಡಿಯಿರಿ. ಅಸಿಡಿಟಿ ಹೋಗಲಾಡಿಸಲು ಮತ್ತೊಂದು ವಿಧಾನವೆಂದರೆ ಶುಂಠಿಯನ್ನು ಜಜ್ಜಿಕೊಂಡು ಬೆಲ್ಲದ ತುಂಡಿನೊಂದಿಗೆ ಅದನ್ನು ಬಾಯಿಯೊಳಗೆ ಇಟ್ಟರೆ ಅದರ ರಸವು ನಿಧಾನವಾಗಿ ಹೊಟ್ಟೆಯೊಳಗೆ ಹೋಗುತ್ತಾ ಇರುತ್ತದೆ.


 • ರಕ್ತದೊತ್ತಡ ಮಟ್ಟದ ಮೇಲೆ ಪರಿಣಾಮ

  ಅಧಿಕ ರಕ್ತದೊತ್ತಡ ಮತ್ತು ಮೂತ್ರಪಿಂಡ ಸಮಸ್ಯೆಯಿಂದ ಬಳಲುತ್ತಿರುವಂತಹ ಜನರು ನೆಲ್ಲಿಕಾಯಿಯ ಉಪ್ಪಿನಕಾಯ ಸೇವನೆ ಮಾಡುವುದನ್ನು ಬೇಕು. ಯಾಕೆಂದರೆ ಉಪ್ಪಿನಕಾಯಿಯಲ್ಲಿ ಅತ್ಯಧಿಕ ಉಪ್ಪಿನಾಂಶವಿದೆ. ಉಪ್ಪನ್ನು ಅತಿಯಾಗಿ ಸೇವನೆ ಮಾಡುವ ಕಾರಣದಿಂದಾಗಿ ರಕ್ತನಾಳಗಳಿಗೆ ಹೆಚ್ಚಿನ ಸೋಡಿಯಂ ಸೇರಿಕೊಳ್ಳುವುದು. ಇದು ನೀರನ್ನು ಹೊರಹಾಕುವ ಕಿಡ್ನಿಯ ಸಾಮರ್ಥ್ಯ ತಗ್ಗಿಸುವುದು. ಇದರಿಂದ ರಕ್ತದೊತ್ತಡವು ಅಧಿಕವಾಗಿ, ಕಿಡ್ನಿ ಮೇಲೆ ಒತ್ತಡ ಬೀಳುವುದು.


 • ಶೀತ ಹೆಚ್ಚಿಸಬಹುದು

  ನೆಲ್ಲಿಕಾಯಿಯು ನೈಸರ್ಗಿಕವಾಗಿ ಶೀತಕಾರಿ ಗುಣ ಹೊಂದಿದೆ. ನೆಲ್ಲಿಕಾಯಿ ಸೇವನೆ ಅಥವಾ ಅದರ ಹುಡಿ ಸೇವನೆ ಮಾಡುವುದರಿಂದ ಶೀತ ಇರುವವರ ಪರಿಸ್ಥಿತಿಯು ಮತ್ತಷ್ಟು ಹದಗೆಡಬಹುದು. ಶೀತವಿರುವವರು ನೆಲ್ಲಿಕಾಯಿಯನ್ನು ತ್ರಿಫಲ ಅಥವಾ ನೆಲ್ಲಿಕಾಯಿ ಹುಡಿಯನ್ನು ಜೇನುತುಪ್ಪದೊಂದಿಗೆ ಬೆರೆಸಿ ತಿನ್ನಬೇಕು. ಇದು ಶೀತ ಮತ್ತು ಕೆಮ್ಮು ನಿವಾರಿಸುವುದು. ಒಂದು ವೇಳೆ ನಿಮಗೆ ಶೀತದ ಸಮಸ್ಯೆ ಜೋರಾಗಿ ಕಾಡುತ್ತಿದರೆ ಒಂದು ಸಣ್ಣ ಶುಂಠಿ ತೆಗೆದುಕೊಂಡು ಅದರ ಸಿಪ್ಪೆ ತೆಗೆದು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ. ನಂತರ ಬೆಳ್ಳುಳ್ಳಿಯ ಕೆಲವು ಎಸಲುಗಳನ್ನು ತೆಗೆದುಕೊಂಡು ಅದನ್ನು ಸಣ್ಣಸಣ್ಣ ತುಂಡುಗಳನ್ನಾಗಿ ಮಾಡಿ. ಇನ್ನು ಒಂದೆರಡು ತುಂಡು ಅನಾನಸನ್ನು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿಕೊಳ್ಳಿ, ನಂತರ ಒಂದು ಅಥವಾ ಎರಡು ಕ್ಯಾರೆಟ್ ನ್ನು ತುಂಡು ಮಾಡಿಟ್ಟುಕೊಳ್ಳಿ. ಇನ್ನು ಎಲ್ಲವನ್ನು ಒಂದು ಜ್ಯೂಸರ್ ಗೆ ಹಾಕಿಕೊಂಡು ಜ್ಯೂಸ್ ಮಾಡಿ. ದಿನದಲ್ಲಿ ಒಂದು ಲೋಟ ಈ ಜ್ಯೂಸ್ ಕುಡಿಯಿರಿ.


 • ಮೂತ್ರವಿಸರ್ಜನೆ ವೇಳೆ ಉರಿ ಉಂಟು ಮಾಡಬಹುದು

  ನೆಲ್ಲಿಕಾಯಿಯಲ್ಲಿ ಇರುವಂತಹ ವಿಟಮಿನ್ ಸಿಯು ತುಂಬಾ ಆರೋಗ್ಯಕಾರಿ ಎಂದು ತಿಳಿದಿದೆ. ಆದರೆ ಅತಿಯಾಗಿ ಸೇವನೆ ಮಾಡಿದರೆ ಅದರಿಂದ ಅಡ್ಡಪರಿಣಾಮಗಳು ಕೂಡ ಉಂಟಾಗುವುದು. ಮೂತ್ರವಿಸರ್ಜನೆ ವೇಳೆ ಉರಿ, ಮೋಡದಂತಹ ಮೂತ್ರ ಮತ್ತು ಮೂತ್ರ ಕೆಟ್ಟ ವಾಸನೆ ಬೀಡಬಹುದು.

  Most Read: ಈ ಮೂರು ರಾಶಿಯವರು ಮನಸ್ಸು ಮಾಡಿದರೆ ವಿಶ್ವವನ್ನೇ ಬದಲಿಸಬಲ್ಲರು!


 • ಅಲರ್ಜಿ ಪರಿಣಾಮ ಉಂಟು ಮಾಡಬಹುದು

  ನೆಲ್ಲಿಕಾಯಿಯಿಂದ ನಿಮಗೆ ಅಲರ್ಜಿ ಉಂಟಾಗುತ್ತಲಿದ್ದರೆ ಆಗ ನಿಮಗೆ ಹೊಟ್ಟೆಯಲ್ಲಿ ಸೆಳೆತ ಅಥವಾ ನೋವು, ವಾಂತಿ, ವಾಕರಿಕೆ, ಮುಖದ ಸುತ್ತಲು ಕೆಂಪಾಗುವುದು ಮತ್ತು ಊತ, ಚರ್ಮದಲ್ಲಿ ತುರಿಕೆ, ತಲೆನೋವು, ನಿಶ್ಯಕ್ತಿ, ಲಘು ತಲೆನೋವು ಕಾಣಿಸಬಹುದು.


 • ಚರ್ಮವು ತೇವಾಂಶ ಕಳೆದುಕೊಳ್ಳಬಹುದು

  ನೆಲ್ಲಿಕಾಯಿಯಲ್ಲಿ ಇರುವಂತಹ ಮೂತ್ರವರ್ಧಕ ಗುಣವು ನಿಮ್ಮ ಚರ್ಮದ ತೇವಾಂಶವನ್ನು ಹೀರಿಕೊಳ್ಳಬಹುದು. ನೆಲ್ಲಿಕಾಯಿ ಸೇವಿಸಿದ ಬಳಿಕ ನೀರು ಕುಡಿದರೆ ಆಗ ದೇಹವು ತೇವಾಂಶದಿಂದ ಕೂಡಿರುವುದು. ನೆಲ್ಲಿಕಾಯಿ ಸೇವಿಸಿದ ಬಳಿಕ ಗಂಟಲು ಒಣಗಲು ಆರಂಭವಾಗಬಹುದು ಮತ್ತು ಇದು ನೀವು ಹೆಚ್ಚು ನೀರು ಕುಡಿಯಬೇಕೆನ್ನುವ ಸೂಚನೆಯಾಗಿದೆ.




ನೆಲ್ಲಿಕಾಯಿ ಮರದಲ್ಲಿಟ್ಟನೋ ನಮ್ಮ ಶಿವ...ಎನ್ನುವ ಡಾ. ರಾಜ್ ಕುಮಾರ್ ಅವರ ತುಂಬಾ ಜನಪ್ರಿಯ ಹಾಡಿದೆ. ಹಿಂದಿನಿಂದಲೂ ಬೆಟ್ಟದ ನೆಲ್ಲಿಕಾಯಿಯನ್ನು ಆಯುರ್ವೇದದ ಔಷಧಿಯಲ್ಲಿ ಬಳಸಿಕೊಂಡು ಬರಲಾಗುತ್ತಾ ಇದೆ. ನೆಲ್ಲಿಕಾಯಿಯಲ್ಲಿ ಹಲವಾರು ರೀತಿಯ ಆರೋಗ್ಯ ಲಾಭಗಳು ಇವೆ. ಇದು ಮಧುಮೇಹ, ಕೂದಲು ಉದುರುವಿಕೆ ಮತ್ತು ಅಜೀರ್ಣ ಸಮಸ್ಯೆಗೆ ತುಂಬಾ ಪರಿಣಾಮಕಾರಿಯಾಗಿ ಕೆಲಸ ಮಾಡುವುದು.

ಒಣಗಿಸಿದ ಮತ್ತು ಹಸಿ ನೆಲ್ಲಿಕಾಯಿಯನ್ನು ಔಷಧಿಗಳಿಗಾಗಿ ಬಳಸಿಕೊಳ್ಳಲಾಗುತ್ತದೆ. ನೆಲ್ಲಿಕಾಯಿ ಮರದ ಹಣ್ಣು, ಹೂವು, ಕಾಯಿ, ಎಲೆಗಳು, ಬೇರು ಮತ್ತು ತೊಗಟೆ ತುಂಬಾ ಔಷಧೀಯ ಗುಣ ಹೊಂದಿದೆ. ಆದರೆ ನೆಲ್ಲಿಕಾಯಿಯನ್ನು ಅತಿಯಾಗಿ ಸೇವಿಸಿದರೆ ಆಗ ಅದರಿಂದ ದುಷ್ಪರಿಣಾಮಗಳು ಉಂಟಾಗಬಹುದು.

ಕೆಲವೊಂದು ಕಾಯಿಲೆಗಳು ಇರುವಂತಹ ಜನರಿಗೆ ನೆಲ್ಲಿಕಾಯಿಯು ಒಳ್ಳೆಯದಲ್ಲ. ಇದರಲ್ಲಿ ಹಿಮೋಗ್ಲೋಬಿನ್ ಕಡಿಮೆ ಇರುವವರು ಅಥವಾ ರಕ್ತಸಂಬಂಧಿ ಕಾಯಿಲೆಗಳಿಗೆ ಔಷಧಿ ಸೇವನೆ ಮಾಡುವವರಿಗೆ ಇದು ಒಳ್ಳೆಯದಲ್ಲವೆಂದು ಆಯುರ್ವೇದ ತಜ್ಞರು ಹೇಳುತ್ತಾರೆ. ಅಧ್ಯಯನಗಳು ಯಾವುದೇ ರೀತಿಯ ವಿಷಕಾರಿ ನಕಾರಾತ್ಮಕ ಪರಿಣಾಮಗಳ ಬಗ್ಗೆ ತಿಳಿಸಿಲ್ಲ. ಮಧ್ಯಮ ಮತ್ತು ತದ್ವಿರುದ್ಧ ಪ್ರತಿಕ್ರಿಯೆಯು ನೆಲ್ಲಿಕಾಯಿಯ ಅತಿಯಾಗಿ ಸೇವನೆಯಿಂದ ಬರುವುದು.

ನೆಲ್ಲಿಕಾಯಿ ಅತಿಯಾಗಿ ಸೇವಿಸಿದರೆ ಆಗುವ ಅಡ್ಡಪರಿಣಾಮಗಳು!
   
 
ಹೆಲ್ತ್