Back
Home » ಇತ್ತೀಚಿನ
ಪ್ರಳಯ ಆದರೂ ಭಯ ಬೇಡ..! ನಾಸಾದಿಂದ ಭೂಮಿಯಂತಹ ಎರಡು ಗ್ರಹಗಳ ಪತ್ತೆ..!
Gizbot | 22nd Sep, 2018 10:31 AM
 • ಉಡಾವಣೆಯಾಗಿ 5 ತಿಂಗಳಲ್ಲಿಯೇ ಗ್ರಹ ಶೋಧ

  5 ತಿಂಗಳ ಹಿಂದೆ ಫ್ಲೋರಿಡಾದ ಕೇಪ್‌ ಕಾರ್ನಿವಾಲ್‌ನಿಂದ ಲಾಂಚ್‌ ಮಾಡಿದ್ದ ಉಪಗ್ರಹದಲ್ಲಿ ಪ್ಲಾನೆಟ್‌ ಹಂಟಿಂಗ್‌ ಆರ್ಬಿಟಲ್‌ ಟೆಲೆಸ್ಕೋಪ್‌ ಅಳವಡಿಸಲಾಗಿದ್ದು, ಅದು ಸೌರವ್ಯೂಹದಾಚಿನ ಜಗತ್ತನ್ನು ಸಂಶೋಧಿಸುತ್ತದೆ. ಈ ವಾರದಲ್ಲಿ TESS ಭೂಮಿಯಂತಹ ಎರಡು ಗ್ರಹಗಳನ್ನು ಪತ್ತೆ ಹಚ್ಚಿದೆ ಎಂದು ನಾಸಾ ಹೇಳಿದೆ.


 • ಸೂಪರ್‌ ಅರ್ಥ್‌ ಮತ್ತು ಹಾಟ್‌ ಅರ್ಥ್‌

  ನಾಸಾದ TESS ಶೋಧಿಸಿರುವ ಗ್ರಹಗಳಿಗೆ ಸೂಪರ್ ಅರ್ಥ ಮತ್ತು ಹಾಟ್ ಅರ್ಥ ಎಂದು ಹೆಸರಿಡಲಾಗಿದೆ. ಎರಡು ಗ್ರಹಗಳು 49 ಜ್ಯೋತಿರ್ವರ್ಷಗಳಷ್ಟು ದೂರವಿದೆಯೆಂದು ಅಂದಾಜಿಸಲಾಗಿದೆ. ಇದು TESSನ ಮೊದಲ ಸಂಶೋಧನೆಯಾಗಿದೆ. ಎರಡು ವರ್ಷದ ಕಾಲಾವಧಿ ಹೊಂದಿರುವ TESS ಯೋಜನೆ 337 ಮಿಲಿಯನ್‌ ಡಾಲರ್‌ ಮೌಲ್ಯದ್ದಾಗಿದೆ.


 • ಮಾನವನ ಜೀವನಕ್ಕೆ ಯೋಗ್ಯ..?

  ಎರಡು ಗ್ರಹಗಳು ಹೆಚ್ಚು ಬಿಸಿಯಾಗಿದ್ದು, ಜೀವನ ನಡೆಸಲು ಯೋಗ್ಯವಾಗಿವೆಯಾ ಎಂಬುದನ್ನು ನೋಡಬೇಕಾಗಿದೆ. ಅದಲ್ಲದೇ TESS ಇನ್ನು ಏನು ಸಂಶೋಧಿಸುತ್ತದೆ ಎಂಬುದನ್ನು ಕಾದು ನೋಡುತ್ತಿದ್ದೇವೆ. ಗ್ರಹಗಳ ಈಗ ಬೆಳಕಿಗೆ ಬರುತ್ತಿವೆ. ಅಲ್ಲಿ ರಾತ್ರಿ ಆಕಾಶವಿದೆಯಾ ಎಂಬುದನ್ನು ಸಂಶೋಧಿಸುತ್ತಿದ್ದೇವೆ ಎಂದು TESSನ ಡೆಪ್ಯುಟಿ ವಿಜ್ಞಾನ ನಿರ್ದೇಶಕ ಸಾರಾ ಸೀಗರ್ ಹೇಳಿದ್ದಾರೆ.


 • ಕೆಪ್ಲರ್‌ ಟೆಲಿಸ್ಕೋಪ್‌ಗೆ ಪರ್ಯಾಯ TESS

  ಕಳೆದ 20 ವರ್ಷಗಳಲ್ಲಿ 3,700ಕ್ಕೂ ಹೆಚ್ಚು ಎಕ್ಸೋಪ್ಲಾನೆಟ್‌ಗಳನ್ನು ಪತ್ತೆಹಚ್ಚಿದ ಕೆಪ್ಲರ್ ಸ್ಪೇಸ್ ಟೆಲೆಸ್ಕೋಪ್‌ಗೆ ಪರ್ಯಾಯವಾಗಿ ಕಾರ್ಯನಿರ್ವಹಿಸಲು TESS ಅನ್ನು ವಿನ್ಯಾಸಗೊಳಿಸಲಾಗಿದೆ. ನಾಸಾ ತಿಳಿದಿಲ್ಲದ ಸಾವಿರಾರು ಪ್ರಪಂಚಗಳನ್ನು ಗುರುತಿಸಲು ನಿರೀಕ್ಷಿಸುತ್ತಿದೆ. ಭೂಮಿಯ-ಗಾತ್ರದ ನೂರಾರು ಗ್ರಹಗಳ ಇವೆ ಅಥವಾ "ಸೂಪರ್-ಅರ್ಥ್" ಎಂದು ಕರೆಯುವ ಗ್ರಹ ಭೂಮಿಗಿಂತ ಎರಡು ಪಟ್ಟು ದೊಡ್ಡದಾಗಿಲ್ಲ ಎಂಬುದು ನಾಸಾದ ಯೋಚನೆ.


 • ಕಲ್ಲು ಮತ್ತು ಸಾಗರ ಹೊಂದಿರುವ ಸಾಧ್ಯತೆ

  ಎರಡು ಹೊಸ ಗ್ರಹಗಳಲ್ಲಿ ಕಲ್ಲಿನ ಮೇಲ್ಮೈ ಅಥವಾ ಸಾಗರ ಇರುವ ಸಾಧ್ಯತೆಯಿದೆ. ಆದ್ದರಿಂದ ಇವುಗಳನ್ನು ಅತ್ಯುತ್ತಮ ಎಂದು ಪರಿಗಣಿಸಲಾಗಿದೆ. ಅಂತಿಮವಾಗಿ TESS ಕನಿಷ್ಟ ನೂರಕ್ಕಿಂತ ಹೆಚ್ಚು ಎಕ್ಸೋಪ್ಲಾನೆಟ್‌ಗಳನ್ನು ಸಂಶೋಧಿಸುವ ಬಗ್ಗೆ ವಿಜ್ಞಾನಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಹೆಚ್ಚಿನ ಅಧ್ಯಯನಕ್ಕಾಗಿ ಖಗೋಳಶಾಸ್ತ್ರದ ಹೊಸ ಜಾಗ ಸಿಕ್ಕಿದೆ ಎಂದು TESS ವಿಜ್ಞಾನಿಗಳು ಹೇಳಿದ್ದಾರೆ.


 • ಸೂರ್ಯನ ಸುತ್ತ ಸುತ್ತಲೂ ಬೇಕು 6.3 ದಿನ

  ಹೊಸದಾಗಿ ಸಂಶೋಧಿಸಿರುವ Pi Mensae c, 60 ಜ್ಯೋತಿರ್ವರ್ಷಗಳಷ್ಟು ದೂರದಲ್ಲಿದ್ದು, "ಸೂಪರ್‌ ಅರ್ಥ್" ಎಂದು ಕರೆಸಿಕೊಂಡಿದೆ. ಇದು ಪ್ರತಿ 6.3 ದಿನಗಳ ಅವಧಿಯಲ್ಲಿ ಸೂರ್ಯನ ಸುತ್ತ ಸುತ್ತುತ್ತದೆ. LHS 3844 b ಗ್ರಹ "ಹಾಟ್‌ ಅರ್ಥ್‌" ಎಂದು ಕರೆಸಿಕೊಂಡಿದ್ದು, 49 ಜ್ಯೋತಿರ್ವರ್ಷಗಳಷ್ಟು ದೂರವಿದೆ. ಈ ಗ್ರಹ ಸೂರ್ಯನ ಸುತ್ತಲೂ ಸುತ್ತುವುದಕ್ಕೆ ಕೇವಲ 11 ಗಂಟೆ ಸಮಯವನ್ನು ತೆಗೆದುಕೊಳ್ಳುತ್ತದೆ.


 • ಘನ, ಜಲ ಮಿಶ್ರಣ ಸೂಪರ್ ಅರ್ಥ್‌

  ಸೂಪರ್‌ ಅರ್ಥ್‌ ಘನ ಮೇಲ್ಮೈ ಹೊಂದಿದೆ ಹಾಗೂ ಜಲ ಮೂಲವು ಕಂಡಿದ್ದು, ಮಿಶ್ರಣವಾದ ಗ್ರಹವನ್ನು ಹೊಂದಿದೆ ಎಂದು ನಾಸಾದ ಪ್ರೋಗ್ರಾಂ ವಿಜ್ಞಾನಿ ಮಾರ್ಟಿನ್ ಸ್ಪಿಲ್ ಹೇಳಿದ್ದಾರೆ. ಎರಡು ಹೊಸ ಗ್ರಹಗಳನ್ನು ಇನ್ನೂ ಇತರ ಸಂಶೋಧಕರು ಪರಿಶೀಲಿಸಬೇಕಾಗಿದ್ದು,ಹೆಚ್ಚಿನ ಅಧ್ಯಯನದ ಅವಶ್ಯಕತೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಜಗತ್ತಿನಲ್ಲಿ ಭೂಮಿಯ ನಂತರ ಮಾನವನ ಜೀವನಕ್ಕೆ ಯೋಗ್ಯವಾದ ಗ್ರಹಗಳ ಶೋಧನೆ ನಡೆಯುತ್ತಲೆ ಇದೆ. ಹೀಗಾಗಲೇ ಜಗತ್ತಿನ ಅವನತಿಯನ್ನು ತಮ್ಮದೇ ವಾಕ್ಯದಲ್ಲಿ ವ್ಯಾಖ್ಯಾನಿಸುತ್ತಿರುವ ವಿಜ್ಞಾನಿಗಳು ಹೊಸ ಗ್ರಹಗಳ ಶೋಧದ ಹಿಂದೆ ಬಿದ್ದಿರುವುದು ಸುಳ್ಳಲ್ಲ. ಅದರಂತೆ ಜಗತ್ತಿನ ಪ್ರಮುಖ ಸಂಶೋಧನಾ ಸಂಸ್ಥೆಗಳು ಹೊಸ ಗ್ರಹಗಳ ಪತ್ತೆಗೆ ಶ್ರಮಿಸುತ್ತಿವೆ. ಹೊಸ ಸುದ್ದಿ ಏನಪ್ಪ ಎಂದರೆ ಅಮೇರಿಕಾದ ನಾಸಾ ಎರಡು ಹೊಸ ಗ್ರಹಗಳನ್ನು ಪತ್ತೆ ಹಚ್ಚಿದ್ದು, ಅವು ಭೂಮಿಯನ್ನು ಹೋಲುತ್ತಿವೆಯಂತೆ.

ಹೌದು, ನಾಸಾದ Transiting Exoplanet Survey Satellite (TESS) ಎರಡು ಹೊಸ ಗ್ರಹಗಳನ್ನು ಪತ್ತೆ ಹಚ್ಚಿದೆ. ನಾಸಾ ಎರಡಕ್ಕೂ ಹೆಸರನ್ನು ಸೂಚಿಸಿದ್ದು, ಒಂದಕ್ಕೆ "ಸೂಪರ್‌ ಅರ್ಥ್‌" ಮತ್ತೊಂದಕ್ಕೆ "ಹಾಟ್‌ ಅರ್ಥ್‌" ಎಂದು ಹೆಸರಿಟ್ಟಿದೆ. ಸೌರವ್ಯೂಹದಲ್ಲಿರುವ ಇವು ಕನಿಷ್ಟ 49 ಜ್ಯೋತಿರ್ವರ್ಷಗಳಷ್ಟು ದೂರವಿವೆ. ಆಗಿದ್ದರೆ, ಹೊಸ ಗ್ರಹಗಳು ಬಗ್ಗೆ ಒಂದಿಷ್ಟು ಮಾಹಿತಿ ನೋಡಿಕೊಂಡು ಬನ್ನಿ.

   
 
ಹೆಲ್ತ್