Back
Home » ಇತ್ತೀಚಿನ
ತಂತ್ರಜ್ಞಾನ ಮತ್ತು ವಿಜ್ಞಾನದ ಈ 7 ವಿಸ್ಮಯ ವಿಷಯಗಳು ನಿಮ್ಮ ತಲೆತಿರುಗಿಸುತ್ತವೆ!
Gizbot | 22nd Sep, 2018 02:31 PM
 • 98% ರಷ್ಟು ಸಮಯ ವಾಟ್ಸ್ಆಪ್‌ನಲ್ಲಿ

  ಅಮೇರಿಕನ್ ಅನಾಲಿಟಿಕ್ಸ್ ಕಂಪನಿ ಕಾಮ್ಸ್ಕೋರ್ನ ವರದಿಯ ಪ್ರಕಾರ ಭಾರತದಲ್ಲಿ ಬಳಕೆದಾರರು ಮೆಸೇಜಿಂಗ್ ಅಪ್ಲಿಕೇಶನ್ಗಳ ಮೇಲೆ ಖರ್ಚು ಮಾಡಿದ ಒಟ್ಟು ಸಮಯದ 98% ರಷ್ಟು ಸಮಯವನ್ನು ವಾಟ್ಸ್ಆಪ್‌ನಲ್ಲಿ ಕಳೆಯುತ್ತಿದ್ದಾರೆ. ಇನ್ನು ಉಳಿದ 2% ರಷ್ಟು ಸಮಯ ಫೇಸ್‌ಬುಕ್ ಮೆಸೆಂಜರ್ನಲ್ಲಿ ಖರ್ಚು ಮಾಡತ್ತಾರೆ ಎಂದು ವರದಿ ಹೇಳಿದೆ. ಕುತೂಹಲಕಾರಿಯಾಗಿ, ವಾಟ್ಸ್ಆಪ್ಪ್ ಮತ್ತು ಮೆಸ್ಸೆಂಜರ್ ಎರಡೂ ಸಾಮಾಜಿಕ ಮಾಧ್ಯಮ ಫೇಸ್‌ಬುಕ್ ಒಡೆತನದ್ದೆ ಆಗಿದೆ.


 • ಭಾರತದ ಮೊದಲ ಉಪಗ್ರಹ ವೆಚ್ಚ?

  ಐದನೇ ಶತಮಾನದ ಭಾರತೀಯ ಖಗೋಳಶಾಸ್ತ್ರಜ್ಞ ಮತ್ತು ಗಣಿತಶಾಸ್ತ್ರಜ್ಞ ಆರ್ಯಭಟನ ಹೆಸರನ್ನು ಈ ಉಪಗ್ರಹಕ್ಕೆ ಇಡಲಾಗಿತ್ತು. ಈ ಭಾರತದ ಮೊದಲ ಉಪಗ್ರಹವನ್ನು ಏಪ್ರಿಲ್ 19, 1975 ರಂದು ಉಡಾವಣೆ ಮಾಡಲಾಯಿತು. ಈ ಉಡಾವಣೆಗೆ 3 ಕೋಟಿಗಿಂತ ಕಡಿಮೆ ವೆಚ್ಚ ತಗುಲಿತ್ತು. 360 ಕೆ.ಜಿ ತೂಕದ ಈ ಉಪಗ್ರಹ ವಿದ್ಯುತ್-ವೈಫಲ್ಯದ ಕಾರಣ ಉಡಾವಣೆಯಾದ ಐದು ದಿನಗಳ ನಂತರ ಕಾರ್ಯ ನಿರ್ವಯಿಸುವುದನ್ನು ನಿಲ್ಲಿಸಿತು, ನಂತರ ಭೂಮಿಯ ಕಕ್ಷೆಯಲ್ಲಿ ನಿಷ್ಕ್ರಿಯವಾಗಿ 17 ವರ್ಷಗಳ ಕಾಲ ಸುತ್ತಿದ್ದು.ಖಗೋಳಶಾಸ್ತ್ರ ಮತ್ತು ಸೌರ ಭೌತಶಾಸ್ತ್ರದಲ್ಲಿ ಪ್ರಯೋಗಗಳನ್ನು ನಡೆಸಲು 'ಆರ್ಯಭಟ'ವನ್ನು ISRO ನಿರ್ಮಿಸಿತ್ತು.


 • ಗೂಗಲ್ ಎಂದರೆ ಏನು?

  ನಮಗೆಲ್ಲ 101= 10 ಎಂದರೆ ಹತ್ತು , 102 = 100 ಎಂದರೆ ನೂರು ,103 =1000 ಎಂದರೆ ಸಾವಿರ ,104 = 10000 ಎಂದರೆ ಹತ್ತು ಸಾವಿರ, 105 =100000 ಎಂದರೆ ಒಂದು ಲಕ್ಷ ಎಂದು ಎಲ್ಲರಿಗೆ ಗೊತ್ತು ,ಇದೇ ರೀತಿ ಒಂದರ ಮುಂದೆ ನೂರು ಸೊನ್ನೆ ಇರುವ ಸಂಖ್ಯೆ ಎಂದರೆ 10100 ಕ್ಕೆ ಇಂಗ್ಲೀಷಿನಲ್ಲಿ ಗೋಗೋಲ್ ಎಂದು ಕರೆಯಲಾಗುತ್ತದೆ. ಇದೆ ಗೋಗೋಲ್ ಪದವನ್ನು ಈ ಕಂಪನಿ ಗೂಗಲ್ ಎಂದು ಬದಲಾಯಿಸಿ ನಾಮಕರಣ ಮಾಡಿಕೊಂಡಿದೆ, ಇದನ್ನು ಸೂಚಿಸುವ ಆಗೇ ಗೂಗಲ್ ವೆಬ್ ಸೈಟ್ ನ ಸರ್ಚ್ ಎಂಜಿನ್‌ನಲ್ಲಿ ಈ ಸೊನ್ನ ಗಳನ್ನೂ ನೀವು ನೋಡಿರಬಹುದು.


 • ಅತ್ಯಂತ ಹಳೆಯ ಪರಮಾಣು ಡಿಎನ್ಎ

  ಅಂತಾರಾಷ್ಟ್ರೀಯ ಸಂಶೋಧನಾ ತಂಡವು ಮೊರೊಕ್ಕೊ ಪ್ರದೇಶದಲ್ಲಿ ಸುಮಾರು 15,000 ವರ್ಷಗಳ ಹಿಂದಿನ ಪಳೆಯುಳಿಕೆಗಳಿಂದ ಡಿಎನ್ಎಯನ್ನು ಸಂಗ್ರಹಿಸಿದ್ದಾರೆ, ಇದು ಇದುವರೆಗೆ ದೊರೆತಿರುವ ಅತ್ಯಂತ ಹಳೆಯ ಪರಮಾಣು ಡಿಎನ್ಎಯಾಗಿದೆ. ಜರ್ನಲ್ ಸೈನ್ಸ್ ನಲ್ಲಿ ಪ್ರಕಟವಾದ ಈ ಅಧ್ಯಯನವು ಶೀಲಾ ಯುಗದ ಅಂತ್ಯದ ಸಮಯಕ್ಕೆ ಸೇರಿದ ವ್ಯಕ್ತಿಯದ್ದಾಗಿದ್ದು ಇದು ಉಪ-ಸಹಾರಾ ಆಫ್ರಿಕನ್ನರಿಗೆ ಸಂಬಂಧಿಸಿದ ಒಂದು ಆನುವಂಶಿಕ ಪರಂಪರೆಯನ್ನು ಹೊಂದಿದೆ ಎಂದು ತಿಳಿಸಿದರು.


 • 89% ನಷ್ಟು ಮೊಬೈಲ್‌ನಲ್ಲಿ

  2017 ರಲ್ಲಿ ಭಾರತೀಯರು ಆನ್ಲೈನಿನಲ್ಲಿ ಕಳೆಯುವ ತಮ್ಮ ಒಟ್ಟು ಸಮಯದ 89% ನಷ್ಟು ಮೊಬೈಲ್‌ನಲ್ಲಿ ಕಳೆಯುತ್ತಾರೆ ಎಂದು ಅಮೆರಿಕನ್ ಅನಾಲಿಟಿಕ್ಸ್ ಕಂಪನಿ ಕಾಮ್ಸ್ಕೋರ್ ತಿಳಿಸಿದೆಇಂಡೊನೇಶಿಯಾದ ಜನ 2017 ರಲ್ಲಿ ಮೊಬೈಲ್ ಆನ್ಲೈನ್ನಲ್ಲಿ ಒಟ್ಟು 87% ರಷ್ಟು ಸಮಯ ಖರ್ಚು ಮಾಡಿದ್ದರೆ, ಮೆಕ್ಸಿಕನ್ನರ ಸಂಖ್ಯೆ 80% ರಷ್ಟಿದೆ. ಇದಲ್ಲದೆ, 2017 ರಲ್ಲಿ ಭಾರತದಲ್ಲಿ ಡೆಸ್ಕ್ಟಾಪ್ ಬಳಕೆದಾರರಿಗಿಂತ ಮೊಬೈಲ್ ಬಳಕೆದಾರರಲ್ಲಿ ಆ ವರ್ಷ 400% ಹೆಚ್ಚಳವಾಗಿದೆ.


 • ಸ್ಟೀಫನ್ ಹಾಕಿಂಗ್ಗೆ ಏಕೆ ನೋಬೆಲ್ ಸಿಗಲಿಲ್ಲ?

  ಅದ್ಬುತ ವಿಜ್ಞಾನಿ ಸ್ಟೀಫನ್ ಹಾಕಿಂಗ್ 1975 ರ ಹಾಕಿಂಗ್ ವಿಕಿರಣದ ಸಿದ್ಧಾಂತ ಹೆಸರುವಾಸಿಯಾಗಿದ್ದು, ಅದು ಬ್ಲಾಕ್ ಹೋಲ್ ಗಳಿಗೆ ಹೊಳಪು ಎಂದು ಹೇಳಿದೆ. ಆದಾಗ್ಯೂ, ಪ್ರಾಯೋಗಿಕವಾಗಿ ಪರಿಶೀಲಿಸಿದ ಸಂಶೋಧನೆಗೆ ಮಾತ್ರ ನೊಬೆಲ್ ಪ್ರಶಸ್ತಿಗಳನ್ನು ನೀಡಲಾಗುತ್ತದೆ, ಈ ಹಾಕಿಂಗ್ ವಿಕಿರಣದ ಸಿದ್ಧಾಂತದ ಪರಿಣಾಮವನ್ನು ನೇರವಾಗಿ ಗಮನಿಸಲಾಗಿಲ್ಲ. ಬ್ರಿಟಿಷ್ ಭೌತಶಾಸ್ತ್ರಜ್ಞ ಪೀಟರ್ ಹಿಗ್ಸ್ 1960 ರ ದಶಕದಲ್ಲೇ "ಗಾಡ್ ಕಣ"("God particle") ಅಥವಾ ಹಿಗ್ಸ್ ಬೋಸನ್ ಬಗ್ಗೆ ತಿಳಿಸಿದ್ದರು, ಆದರೆ ಅದರ ಬಗ್ಗೆ ಯಾವುದೇ ಪುರಾವೆ 1960 ರಲ್ಲಿ ಇರಲಿಲ್ಲ ನಂತರ 2013 ರಲ್ಲಿ ಸಿಇಆರ್ಎನ್ ಇದರ ಬಗ್ಗೆ ದೃಢಪಡಿಸಿದ ನಂತರ ಮಾತ್ರ ನೋಬೆಲ್ ಭೌತಶಾಸ್ತ್ರ ಪ್ರಶಸ್ತಿಯನ್ನ ಪೀಟರ್ ಹಿಗ್ಸ್ ಅವರಿಗೆ ನೀಡಲಾಯಿತು.


 • ಬರಿಗಣ್ಣಿಗೆ ಕಾಣುವ ಉಪಗ್ರಹ

  ಅಮೆರಿಕಾದ ಅಂತರಿಕ್ಷಯಾನ ಆರಂಭಿಕ ಕಂಪನಿ ರಾಕೆಟ್ ಲ್ಯಾಬ್ ನ್ಯೂಜಿಲ್ಯಾಂಡ್ ನ ಮೊದಲ ಉಪಗ್ರಹ 'ಹ್ಯುಮಾನಿಟಿ ಸ್ಟಾರ್' ಅನ್ನು ಉಡಾವಣೆ ಮಾಡಿದೆ, 65 ಪ್ರತಿಫಲನ ಫಲಕಗಳನ್ನು ಹೊಂದಿರುವ ಗೋಳ ಇದಾಗಿದೆ. ಭೂಮಿಯನ್ನು ಪ್ರತಿ 90 ನಿಮಿಷಗಳಲ್ಲಿ ಈ ಉಪಗ್ರಹ ಸುತ್ತುತಿದೆ, ರಾತ್ರಿ ಹೊತ್ತಿನಲ್ಲಿ ಈ ಉಪಗ್ರಹವು ಬರಿಗಣ್ಣಿಗೆ ಕಾಣುತ್ತದೆ. ರಾಕೆಟ್ ಲ್ಯಾಬ್ ಹ್ಯುಮಾನಿಟಿ ಸ್ಟಾರ್ ಅನ್ನು ಈ ಒಂದು ಉಪಗ್ರಹ ವಿಶ್ವದಲ್ಲಿ ನಮ್ಮ ದುರ್ಬಲ ಸ್ಥಳಗಳ ನೆನಪಿಗೆ ಎಂದು ವಿವರಿಸಿದೆ.
ತಂತ್ರಜ್ಞಾನ ಮತ್ತು ವಿಜ್ಞಾನವನ್ನು ನಾವು ಬಿಡಿಸಿ ನೋಡುವುದೇ ಒಂದು ಸೂಜಿಗ ಎಂದು ಹಲವು ವಿಜ್ಞಾನಿಗಳು ಅಭಿಪ್ರಾಯಪಡುತ್ತಾರೆ. ಸಂಶೋಧನೆ ಎಂದರೆ ವಿಜ್ಞಾನವೇ ಆಗಿರುವಾಗ ತಂತ್ರಜ್ಞಾನವೆಂಬ ಹೆಸರೇಕೆ ಕರೆಯಬೇಕು ಎಂಬುದಕ್ಕೆ ವಾದ ವಿವಾದಗಳು ನಡೆಯುತ್ತಲೇ ಇವೆ.! ಇರಲಿ ಬಿಡಿ. ಈ ವಾದ ವಿವಾದಗಳ ಬಗ್ಗೆ ನಾವೇಕೆ ಹೆಚ್ಚು ತಲೆಕೆಡಿಸಿಕೊಳ್ಳಬೇಕು.!

ಏಕೆಂದರೆ, ನಾನು ಇಂದು ಹೇಳುತ್ತಿರುವ ವಿಷಯ ಇದಕ್ಕೆ ಸಂಬಂಧಿಸಿಯೇ ಇಲ್ಲ.! ಆದರೆ, ನಾನು ನಿಮಗೆ ಹೇಳಲು ಹೊರಟಿರುವ ವಿಸ್ಮಯ ವಿಷಯಗಳು ಮಾತ್ರ ತಂತ್ರಜ್ಞಾನ ಮತ್ತು ವಿಜ್ಞಾನ ಎರಡಕ್ಕೂ ಸಂಬಂದಿಸಿವೆ.! ಹಾಗಾಗಿ, ಮೇಲೆ ಹೇಳಿದಂತೆ ಸಂಶೋಧನೆ ಎಂದರೆ ವಿಜ್ಞಾನವೇ ಆಗಿರುವಾಗ ತಂತ್ರಜ್ಞಾನವೆಂಬ ಹೆಸರೇಕೆ ಕರೆಯಬೇಕು ಎಂಬ ಪ್ರಶ್ನೆ ನನಗೂ ಹುಟ್ಟಿದವು ಅಷ್ಟೆ.

ಕೆಲವೊಂದು ವರದಿಗಳು, ಕೆಲವೊಂದು ಆವಿಷ್ಕಾರಗಳು, ಕೆಲವೊಂದು ಮೊದಲುಗಳು ನಮ್ಮನ್ನು ಕುತೋಹಲಕ್ಕೀಡು ಮಾಡುತ್ತವೆ. ಅವುಗಳ ಬಗ್ಗೆ ನಾವೆಲ್ಲರೂ ತಿಳಿಯಲೇಬೇಕಿದೆ. ಹಾಗಾಗಿ, ಇಂದಿನ ಲೇಖನದಲ್ಲಿ ತಂತ್ರಜ್ಞಾನ ಮತ್ತು ವಿಜ್ಞಾನ ವಿಷಯಗಳಲ್ಲಿ ನಿಮಗೆ ವಿಸ್ಮಯ ಮುಡಿಸಬಹುದಾದ ಕೆಲ ವಿಷಯಗಳನ್ನು ನಾವಿಲ್ಲಿ ಪಟ್ಟಿ ಮಾಡಿದ್ದೇವೆ. ಮುಂದೆ ಓದಿ ತಿಳಿಯಿರಿ.

   
 
ಹೆಲ್ತ್