Back
Home » ಆರೋಗ್ಯ
ದಿನಾ ಬೆಳಗ್ಗೆ 1 ಲೀ. ನೀರು ಕುಡಿದು ಆರೋಗ್ಯ ಭಾಗ್ಯ ನಿಮ್ಮದಾಗಿಸಿಕೊಳ್ಳಿ
Boldsky | 30th Nov, 2018 04:28 PM
 • ಆರೋಗ್ಯದ ಬಗ್ಗೆ ನನ್ನ ನಿಷ್ಕಾಳಜಿ

  ನಾನೋರ್ವ ಬೆಳಗ್ಗೆ 9 ರಿಂದ ಸಂಜೆ 5 ರವರೆಗೆ ಬಿಡುವಿಲ್ಲದೆ ಕೆಲಸ ಮಾಡುವ ಆಫೀಸ್ ಜೀವಿ. ಬಹುತೇಕ ಸಮಯದಲ್ಲಿ ವೀಕೆಂಡ್ ಕಳೆಯಲೂ ಆಗದಷ್ಟು ಕೆಲಸದ ಒತ್ತಡ ಇರುತ್ತದೆ. ಹೀಗಾಗಿ ಆನ್ಲೈನ್‌ನಲ್ಲಿ ಸಿಗುವ ಆರೋಗ್ಯ ಟಿಪ್ಸ್‌ಗಳನ್ನು ನನ್ನ ಮೇಲೆ ಹಲವಾರು ಬಾರಿ ಪ್ರಯೋಗಿಸಿ ಅದರ ಬಲಿಪಶುವಾಗಿದ್ದೆ. ಇನ್ನು ಕೆಲಸದ ನಿಮಿತ್ತ ಸದಾ ಸುತ್ತಾಟದಲ್ಲಿರುವ ನನ್ನ ಬೆಳಗಿನ ತಿಂಡಿ ಕಾರು ಓಡಿಸುತ್ತಲೇ ಹೊಟ್ಟೆಗೆ ಸೇರುತ್ತಿತ್ತು. ಇನ್ನು ಮಧ್ಯಾಹ್ನದ ಊಟ ಇನ್ನಾರೋ ಕ್ಲೈಂಟ್ ಜೊತೆಯಲ್ಲಿ ಅಥವಾ ಫೋನ್‌ನಲ್ಲಿ ಮಾತನಾಡುತ್ತ ಮುಗಿದು ಹೋಗುತ್ತಿತ್ತು. ರಾತ್ರಿ ಊಟ ಮಾಡಿದರೆ ಆಯ್ತು ಇಲ್ಲದಿದ್ದರೆ ಇಲ್ಲ ಎನ್ನುವ ಸ್ಥಿತಿ. ಹೆಚ್ಚುತ್ತಿರುವ ತೂಕ ಕಡಿಮೆ ಮಾಡಲು ಕೂಡ ರಾತ್ರಿ ಊಟವನ್ನು ಬಿಟ್ಟು ಬಿಡುತ್ತಿದ್ದೆ. ಆದರೆ ಹೀಗೆ ಸಮಯ ಉಳಿಸುವ ಧಾವಂತದಲ್ಲಿ ನಾನು ನನ್ನ ಆರೋಗ್ಯದ ಬಗ್ಗೆ ಗಮನ ಕೊಡಲು ಸಾಧ್ಯವಾಗಲೇ ಇಲ್ಲ.

  Most Read: ವಿವಿಧ ಕೆಲಸ ಕಾರ್ಯಗಳಿಗೆ ಮಂಗಳಕರವಾದ ವಾರದ ದಿನಗಳು


 • ಕಾಡಿದ ಹಲವಾರು ಆರೋಗ್ಯ ಸಮಸ್ಯೆಗಳು

  ಒಂದು ದಿನ ಬ್ಯೂಟಿ ಪಾರ್ಲರಗೆ ಹೋಗಿದ್ದ ಸಂದರ್ಭದಲ್ಲಿ ನನ್ನ ಚರ್ಮ ತೀರಾ ಡ್ರೈ ಆಗಿದೆ ಎಂದು ನನ್ನ ಬ್ಯೂಟಿಶಿಯನ್ ಹೇಳಿದರು. ಆಕೆ ಹತ್ತಿಯಿಂದ ನನ್ನ ಚರ್ಮ ಒರೆಸಿದಾಗ ಹತ್ತಿಯ ಎಳೆಗಳು ನನ್ನ ಚರ್ಮಕ್ಕೆ ಅಂಟಿಕೊಳ್ಳುವಷ್ಟು ನನ್ನ ಚರ್ಮ ಒಣಗಿತ್ತು. ನಿಜವಾಗಿಯೂ ಇದು ನನಗೆ ಅತ್ಯಂತ ಮುಜುಗರದ ಸಂದರ್ಭವಾಗಿತ್ತು ಎಂದು ಬೇರೆ ಹೇಳಬೇಕಿಲ್ಲ. ಮನೆಗೆ ಹೋದ ಮೇಲೆ ನೂರಾರು ಬಾರಿ ನನ್ನ ಚರ್ಮವನ್ನು ನಾನೇ ನೋಡಿಕೊಂಡು ನನಗೆ ಚರ್ಮ ರೋಗವೇನಾದರೂ ಇದೆಯಾ ಎಂದು ಚಿಂತೆಗೊಳಗಾಗಿದ್ದೆ. ಕಣ್ಣ ಕೆಳಗಿನ ಕುಳಿ, ದಪ್ಪ ಹೊಟ್ಟೆ, ದಪ್ಪ ತೋಳುಗಳು, ಒಣಗಿದ ಚರ್ಮ ನನ್ನನ್ನು ಅಣಕಿಸಿದವು. ಕೆಲಸದ ಒತ್ತಡವೇ ಇದಕ್ಕೆಲ್ಲ ಕಾರಣ ಎಂದು ನನ್ನ ವಿವೇಚನೆ ಹೇಳಿತು.


 • ಹೊಸ ಪ್ರಯೋಗ

  ಅದೊಂದು ದಿನ ಸೋಶಿಯಲ್ ಮೀಡಿಯಾ ನೋಡುತ್ತಿರುವಾಗ ನೀರಿನಿಂದಾಗುವ ಆರೋಗ್ಯ ಪ್ರಯೋಜನಗಳ ಬಗೆಗಿನ ಲೇಖನವೊಂದು ನನ್ನ ಗಮನ ಸೆಳೆಯಿತು. ಇದನ್ನು ಓದಿದ ಮೇಲೆ ಮತ್ತೆ ನನ್ನಲ್ಲಿ ಆರೋಗ್ಯದ ಬಗ್ಗೆ ಜಾಗೃತಿ ಹೆಚ್ಚಾಯಿತು. 9 ರಿಂದ 5 ರ ಅವಧಿಯಲ್ಲಿ ಕೆಲಸ ಮಾಡುವ ನನ್ನಂಥ ಬಹುತೇಕ ಜನ ಆರೋಗ್ಯದ ಬಗ್ಗೆ ಏನೆಲ್ಲ ಮಾಡಬೇಕೆಂದುಕೊಂಡರೂ ಸಾಧ್ಯವಾಗುವುದೇ ಇಲ್ಲ. ಹೀಗಾಗಿಯೇ ಜಿಮ್‌ಗೆ ಹಲವಾರು ಬಾರಿ ಹೆಸರು ರಜಿಸ್ಟರ್ ಮಾಡಿಕೊಂಡರೂ ನಿಯಮಿತವಾಗಿ ಹೋಗದೆ ಅರ್ಧಕ್ಕೆ ಬಿಡುವುದೇ ಜಾಸ್ತಿ. ಕೆಲಸವನ್ನೂ ನಿಭಾಯಿಸಿ ಮತ್ತಿನೇನೋ ನಿಯಮಿತವಾಗಿ ಮಾಡುವುದು ನಮ್ಮಿಂದ ಸಾಧ್ಯವಾಗುವುದೇ ಇಲ್ಲ. ಕೊನೆಗೆ ನನ್ನ ಗಮನ ಸೆಳೆದಿದ್ದು ನೀರು. ಇಡೀ ದಿನ ಕೆಲಸದ ಒತ್ತಡದಲ್ಲಿ ಸಾಕಷ್ಟು ನೀರು ಸೇವಿಸಲು ಮರೆತು ಹೋಗುವ ನಾನು ಕೊನೆಗೆ ಬೆಳಗ್ಗೆಯಾದರೂ ಒಂದು ಲೀಟರ್ ನೀರು ಸೇವಿಸುವ ಬಗ್ಗೆ ನಿರ್ಧಾರ ಮಾಡಿದೆ. ಹೀಗಾದರೂ ಕಾಫಿ, ಟೀಗಳ ಪರಿಣಾಮವನ್ನು ಕಡಿಮೆ ಮಾಡಿಕೊಳ್ಳಬಹುದು ಎಂದುಕೊಂಡೆ.

  Most Read: ಮೊಟ್ಟೆ ತಿನ್ನುವುದರಿಂದ ಹೊಟ್ಟೆಯಲ್ಲಿ ಗ್ಯಾಸ್ ಉಂಟಾಗುತ್ತದೆಯೇ?


 • ಪ್ರತಿದಿನ ಬೆಳಗ್ಗೆ ನೀರು ಸೇವನೆ

  ಪ್ರತಿದಿನ ಬೆಳಗ್ಗೆ ಎದ್ದ ತಕ್ಷಣ ಒಂದು ಲೀಟರ್ ನೀರು ಕುಡಿಯಲಾರಂಭಿಸಿದೆ. ಇದನ್ನು ಒಂದು ತಿಂಗಳ ಕಾಲ ನಿಯಮಿತವಾಗಿ ಪಾಲಿಸಿದೆ. ಬೆಳಗಿನ ಟೀ, ಕಾಫಿ, ಗ್ರೀನ್ ಟೀ ಹೀಗೆ ಎಲ್ಲವನ್ನೂ ದೂರವಿಟ್ಟೆ. ಬರೀ ಶುದ್ಧ ನೀರನ್ನು ಮಾತ್ರ ಸೇವಿಸಲಾರಂಭಿಸಿದೆ. ಆರಂಭದಲ್ಲಿ ಬೆಳಗ್ಗೆ ಬೇಗ ಏಳುವುದು, ನೀರು ಕುಡಿಯುವುದು ತುಸು ಕಷ್ಟದ ವಿಚಾರವೇ ಆಗಿತ್ತು. ಆದರೂ ಏಳನೇ ದಿನ ಬಾಯಾರಿಕೆ ಆದಂತಾಗಿ ಎದ್ದು ನೀರು ಕುಡಿದೆ. ಈ ಮಧ್ಯೆ ಒಂದು ಬಾರಿ ಮನಸ್ಸು ತಡೆಯದೆ ಟೀ ಸೇವಿಸಿದ್ದೂ ಉಂಟು. ಆದರೂ ನೀರು ಸೇವನೆಯ ಕ್ರಮವನ್ನು ಮಾತ್ರ ಬಿಟ್ಟು ಕೊಡಲಿಲ್ಲ.


 • ಉತ್ತಮ ಫಲಿತಾಂಶ ಕಾಣಲಾರಂಭಿಸಿದವು

  ಬೆಳಗ್ಗೆ ಎದ್ದ ತಕ್ಷಣ ನೀರು ಸೇವನೆಯಿಂದ ಹಲವಾರು ಉತ್ತಮ ಪ್ರಯೋಜನಗಳು ಕಾಣಲಾರಂಭಿಸಿದವು. ಮೊಟ್ಟ ಮೊದಲನೆಯದಾಗಿ ಬೆಳಗ್ಗಿನ ಆಲಸ್ಯ ಮಾಯವಾಗಿ ನನ್ನಲ್ಲಿ ಹೊಸ ಚೈತನ್ಯ ಕಾಣತೊಡಗಿತು. ಅಷ್ಟೆ ಅಲ್ಲದೆ ದಿನವಿಡೀ ನಾನೂ ಲವಲವಿಕೆಯಿಂದ ಇರಲಾರಂಭಿಸಿದೆ. ಎರಡನೆಯದಾಗಿ ದಿನದಲ್ಲಿ ಆಗಾಗ ಕುಡಿಯುತ್ತಿದ್ದ ಬ್ಲ್ಯಾಕ್ ಕಾಫಿ ನಿಧಾನವಾಗಿ ದೂರವಾಯಿತು. ಇದರ ಬದಲು ನೀರು ಕುಡಿಯುವುದೇ ಅಭ್ಯಾಸವಾಗತೊಡಗಿತು. ಬೆಳಗ್ಗೆ ಒಂದು ಲೀಟರ್ ನೀರು ಸೇವನೆಯ ನಂತರವೇ ಒಂದು ಬಾರಿ ಮಾತ್ರ ಟೀ ಕುಡಿಯಲಾರಂಭಿಸಿದೆ. ಕ್ರಮೇಣ ದಿನದಲ್ಲಿ ಆಗಾಗ ಟೀ, ಕಾಫಿಯ ಚಟ ಕಡಿಮೆಯಾಯಿತು.


 • ಹಗುರಾಗಿರುವ ಅನುಭವ

  ಇತ್ತೀಚೆಗೆ ನನಗೆ ನಾನು ಹಗುರಾಗಿರುವಂತೆ ಫೀಲ್ ಮಾಡುತ್ತಿದ್ದೇನೆ. ಮೊದಲಿಗಿಂತಲೂ ಹೆಚ್ಚು ಬಾರಿ ಮೂತ್ರ ವಿಸರ್ಜನೆಗೆ ಹೋಗುತ್ತಿದ್ದರೂ ಪರವಾಗಿಲ್ಲ, ದೇಹದಲ್ಲಿನ ಆಲಸ್ಯ ಹೊರಟು ಹೋಗಿದೆ. ಆಗಾಗ ಕಾಣಿಸಿಕೊಳ್ಳುತ್ತಿದ್ದ ಮಲಬದ್ಧತೆಯ ಸಮಸ್ಯೆ ಸಹ ಪರಿಹಾರವಾಗಿದ್ದು ಒಟ್ಟಾರೆ ಉತ್ಸಾಹ ಸಹಜವಾಗಿಯೇ ಇಮ್ಮಡಿಸಿದೆ. ನನ್ನ ಚರ್ಮದ ಕಾಂತಿ ಸಹ ಹೆಚ್ಚಾಗಿದ್ದು ಖುಷಿ ತಂದಿದೆ.


 • ಸರಳ ಬದಲಾವಣೆ

  ಜೀವನಕ್ರಮದಲ್ಲಿನ ಒಂದು ಚಿಕ್ಕ ಬದಲಾವಣೆ ಸಹ ದೊಡ್ಡ ಪ್ರಯೋಜನಗಳನ್ನುಂಟು ಮಾಡುತ್ತದೆ ಎಂಬುದಕ್ಕೆ ನಾನೇ ಸಾಕ್ಷಿ. ಕೇವಲ ನೀರಿನಿಂದ ನನ್ನ ಆರೋಗ್ಯದಲ್ಲಿ ಇಷ್ಟೆಲ್ಲ ಸಕಾರಾತ್ಮಕ ಬದಲಾವಣೆಗಳಾಗಬಹುದು ಎಂಬುದನ್ನು ನಾನು ಊಹಿಸಿರಲಿಲ್ಲ. ಆದರೆ ಒಂದು ಲೀಟರ್ ನೀರು ನನಗೆ ಆರೋಗ್ಯ ಭಾಗ್ಯವನ್ನು ಮರಳಿಸಿದೆ. ನೀವೂ ಟ್ರೈ ಮಾಡಿ ನೋಡಿ.
ಮಾನವನ ಶರೀರದಲ್ಲಿ ಅತಿ ಹೆಚ್ಚು ಭಾಗ ನೀರಿನಿಂದಲೇ ಕೂಡಿದೆ. ಆಹಾರ ಸೇವಿಸದಿದ್ದರೂ ಮನುಷ್ಯ ಕೆಲ ದಿನ ಬದುಕಬಲ್ಲ. ಆದರೆ ನೀರಿಲ್ಲದೆ ಜೀವನ ಸಾಧ್ಯವೇ ಇಲ್ಲ. ಸರಿಯಾದ ಪ್ರಮಾಣದಲ್ಲಿ ನೀರು ಕುಡಿಯುವ ಮೂಲಕ ಆರೋಗ್ಯ ಭಾಗ್ಯವನ್ನು ನಮ್ಮದಾಗಿಸಿಕೊಳ್ಳಬಹುದು. ಪ್ರತಿದಿನ ಬೆಳಗ್ಗೆ 1 ಲೀಟರ್ ನೀರು ನಮ್ಮ ಆರೋಗ್ಯ ಸುಧಾರಿಸಲು ಸಹಕಾರಿಯಾಗಿದೆ. ದಿನಂಪ್ರತಿ ಬೆಳಗ್ಗೆ 1 ಲೀಟರ್ ನೀರು ಕುಡಿದು ಆರೋಗ್ಯ ಭಾಗ್ಯ ಪಡೆದವರೊಬ್ಬರು ತಮ್ಮ ಅನುಭವವನ್ನು ಹಂಚಿಕೊಂಡಿದ್ದಾರೆ. ಬನ್ನಿ, 1 ಲೀಟರ್ ನೀರು ಏನೆಲ್ಲ ಚಮತ್ಕಾರಗಳನ್ನು ಮಾಡಬಹುದು ಎಂಬುದನ್ನು ಅವರ ಮಾತುಗಳಲ್ಲೇ ತಿಳಿದುಕೊಳ್ಳೋಣ. ಪ್ರತಿದಿನ ಬೆಳಗ್ಗೆ 1 ಲೀಟರ್ ನೀರು ಕುಡಿಯುವುದರಿಂದ ಇಷ್ಟೆಲ್ಲ ಪ್ರಯೋಜನಗಳಿವೆ

ಜಗತ್ತಿನ ಎಲ್ಲ ಜ್ಞಾನವನ್ನು ನಾವು ಸ್ವತಃ ಮಾಡಿ, ನೋಡಿ ಕಲಿಯಲು ಸಾಧ್ಯವಿಲ್ಲ. ಮಾನವನ ಜೀವನ ಅಷ್ಟು ದೊಡ್ಡದಾಗಿಲ್ಲ. ಹೀಗಾಗಿ ಅನುಭವಿಕರ ಜೀವನದಿಂದ ನಾವು ಉತ್ತಮ ಪಾಠಗಳನ್ನು ಕಲಿಯಲೇಬೇಕು. ನೀರಿನಿಂದಾಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿರುವ ಒಬ್ಬರ ಅನುಭವಗಳನ್ನು ಯಥಾವತ್ತಾಗಿ ಇಲ್ಲಿ ನೀಡಿದ್ದೇವೆ. ನಮ್ಮ ಓದುರಾದ ಮಹಿಳೆಯೋರ್ವರು ನೈಸರ್ಗಿಕವಾಗಿ ನೀರಿನಿಂದಾಗುವ ಆರೋಗ್ಯ ಲಾಭಗಳ ಬಗ್ಗೆ ತಿಳಿಸಿದ್ದಾರೆ. ನೀವೂ ಓದಿ ತಿಳಿದುಕೊಳ್ಳಿ.

   
 
ಹೆಲ್ತ್