Back
Home » ಆರೋಗ್ಯ
ಅತೀಯಾಗಿ ಬೆಲ್ಲ ಸೇವಿಸುವುದು, ಆರೋಗ್ಯಕ್ಕೆ ಒಳ್ಳೆಯದಲ್ಲ, ಇದರಿಂದ ಅಡ್ಡಪರಿಣಾಮಗಳೇ ಜಾಸ್ತಿ
Boldsky | 13th Dec, 2018 05:31 PM
 • ತೂಕ ಏರಿಕೆಗೆ ಕಾರಣವಾಗಬಹುದು!

  ಪ್ರತಿ ಹತ್ತು ಗ್ರಾಂ ಬೆಲ್ಲದಲ್ಲಿ 38.3ರಷ್ಟು ಕ್ಯಾಲೋರಿಗಳಿವೆ. ಹಾಗಾಗಿ ಇದು ತೂಕ ಇಳಿಸಲು ಯೋಗ್ಯವಾದ ಆಹಾರವೇ ಅಲ್ಲ! ಒಂದು ವೇಳೆ ನಿಮ್ಮ ನೆಚ್ಚಿನ ಪೇಯ ಮತ್ತು ಆಹಾರಗಳ ರುಚಿಯನ್ನು ಹೆಚ್ಚಿಸಲು ಅಥವಾ ಊಟದೊಂದಿಗೆ ಬೆಲ್ಲವನ್ನು ಬಳಸುತ್ತಿದ್ದರೆ ಕ್ಯಾಲೋರಿಗಳ ಜೊತೆಗೇ ಸಕ್ಕರೆಯನ್ನೂ ದೇಹಕ್ಕೆ ಸೇರಿಸುತ್ತಿದ್ದು ಇದು ತೂಕದಲ್ಲಿ ಹೆಚ್ಚಳಕ್ಕೆ ನೇರವಾಗಿ ಕಾರಣವಾಗುತ್ತದೆ. ಬೆಲ್ಲದಲ್ಲಿ ಹೆಚ್ಚಿನ ಕಾರ್ಬೋಹೈಡ್ರೇಟುಗಳು ಮತ್ತು ಸಕ್ಕರೆ ಇದೆ. ಹಾಗಾಗಿ ಬೆಲ್ಲದಲ್ಲಿ ಅಲ್ಪ ಪ್ರಮಾಣದ ಅಗತ್ಯ ಪೋಷಕಾಂಶಗಳಿದ್ದರೂ ಈ ಆಗಾಧ ಪ್ರಮಾಣದ ಸಕ್ಕರೆ ಬೆಲ್ಲವನ್ನು ಅನಾರೋಗ್ಯಕರ ಆಹಾರವಾಗಿಸಿದೆ. ಹಾಗಾಗಿ ತೂಕ ಇಳಿಸಲು ಯತ್ನಿಸುವವರಿಗೆ ತಮ್ಮ ಆಹಾರದಲ್ಲಿ ತಾಜಾ ತರಕಾರಿ, ಹಣ್ಣು ಮತ್ತು ಇಡಿಯ ಧಾನ್ಯಗಳನ್ನು ಅಳವಡಿಸಿಕೊಳ್ಳುವುದೇ ಹೆಚ್ಚು ಪರಿಣಾಮಕಾರಿ ವಿಧಾನವಾಗಿದೆ.


 • ಒಂದು ವೇಳೆ ಊತ ಮತ್ತು ಉರಿಯೂತದ ಸಂಭವ ವಿದ್ದರೆ ಬೆಲ್ಲದ ಸೇವನೆ ಬೇಡ

  ಆಯುರ್ವೇದದ ಪ್ರಕಾರ, ಒಂದು ವೇಳೆ ನಿಮಗೆ ಶೋಥ ಎಂಬ ಸ್ಥಿತಿ ಎದುರಾದರೆ - ಅಂದರೆ ದೇಹದ ಕೆಲವು ಭಾಗಗಳಲ್ಲಿ ಉರಿಯೂತ ಉಂಟಾಗಿದ್ದರೆ ಬೆಲ್ಲವನ್ನು ಸೇವಿಸಬಾರದು. ಬೆಲ್ಲದಲ್ಲಿರುವ ಸಕ್ಕರೆ ಈ ಊತವನ್ನು ಇನ್ನಷ್ಟು ಹೆಚ್ಚಿಸುತ್ತದೆ ಹಾಗೂ ವಿಶೇಷವಾಗಿ ಊದಿಕೊಂಡಿದ್ದ ಮುಖದಿಂದ ನೀರನ್ನು ಇಳಿಯಲು ಇನ್ನಷ್ಟು ತಡವಾಗುತ್ತದೆ. ಮೂಳೆಗಳ ಸಂಧುಗಳಲ್ಲಿ ಎದುರಾಗುವ ಬಾವು ಅಥವಾ ಆಮಾವತ ಎಂಬ ಸ್ಥಿತಿಯಲ್ಲಿಯೂ ಬೆಲ್ಲವನ್ನು ಸೇವಿಸಬಾರದು.

  Most Read: ಮಲಗುವಾಗ ರಾತ್ರಿಯಿಡೀ ಕಾಲು ನೋವು ಬರುತ್ತಿದೆಯೇ? ಹಾಗಾದರೆ ಇದೇ ಕಾರಣವಿರಬಹುದು!


 • ಉರಿಯೂತದ ಸಂಭವವಿದ್ದರೆ ಬೆಲ್ಲದ ಸೇವನೆ ಬೇಡ

  ದೇಹದಲ್ಲಿ ಎದುರಾಗುವ ಹಲವು ಉರಿಯೂತಗಳಿಗೆ ಸಂಸ್ಕರಿತ ಸಕ್ಕರೆ ಬೆರೆಸಿದ ಆಹಾರಗಳು ನೇರವಾದ ಸಂಬಂಧವನ್ನು ಹೊಂದಿವೆ. ಬೆಲ್ಲ ಸಂಸ್ಕರಿಸದ ಸಕ್ಕರೆಯೇ ಆದರೂ ಇದರಲ್ಲಿ ಹೆಚ್ಚಿನ ಪ್ರಮಾಣದ ಸುಕ್ರೋಸ್ ಇರುತ್ತದೆ. ಹಾಗಾಗಿ ನಿಮಗೆ ಸಂಧಿವಾತ ಅಥವಾ ಮೂಳೆಸಂದುಗಳಲ್ಲಿ ಬಾವು, ರ್‍ಹೂಮಟೈಡ್ ಸಂಧಿವಾತ ಮೊದಲಾದ ತೊಂದರೆಗಳಿದ್ದರೆ ನೀವು ಬೆಲ್ಲ ಅಥವಾ ಯಾವುದೇ ಸಿಹಿಪದಾರ್ಥಗಳನ್ನು ಸೇವಿಸಬಾರದು. ಪ್ರಾಣಿಗಳ ಮೇಲೆ ನಡೆಸಿದ ಸಂಶೋಧನೆಯಲ್ಲಿ ಆಹಾರದ ಮೂಲಕ ಪಡೆಯುವ ಒಮೆಗಾ ೩ ಕೊಬ್ಬಿನಾಮ್ಲಗಳು ಉರಿಯೂತ ನಿವಾರಕವಾಗಿ ಕಾರ್ಯನಿರ್ವಹಿಸುವುದನ್ನು ಸುಕ್ರೋಸ್ ತಡೆಯುತ್ತದೆ. ಈ ಮೂಲಕ ಸಂಧಿವಾತ ಇನ್ನಷ್ಟು ಉಲ್ಬಣಗೊಳ್ಳಲು ಪರೋಕ್ಷವಾಗಿ ಕಾರಣವಾಗುತ್ತದೆ.


 • ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುತ್ತದೆ

  ಬೆಲ್ಲವೂ ಒಂದು ಬಗೆಯಲ್ಲಿ ಸಕ್ಕರೆಯೇ ಆಗಿದ್ದು ಮಧುಮೇಹಿಗಳಿಗೆ ವರ್ಜ್ಯವಾಗಿದೆ. ಒಂದು ವೇಳೆ ಮಧುಮೇಹಿಗಳಾಗಿದ್ದರೆ ಬೆಲ್ಲದ ಸೇವನೆಯಿಂದ ರಕ್ತದಲ್ಲಿ ಥಟ್ಟನೇ ಸಕ್ಕರೆಯ ಮಟ್ಟ ಏರುವುದು (ಹೈಪರ್ ಗ್ಲೈಸೀಮಿಯಾ) ಎಂಬ ಸ್ಥಿತಿ ಎದುರಾಗಬಹುದು. ಅಲ್ಲದೇ ಬೆಲ್ಲದ ಸೇವನೆಯಿಂದ ಉಳಿದವರಲ್ಲಿಯೂ ರಕ್ತದಲ್ಲಿ ಸಕ್ಕರೆಯ ಮಟ್ಟ ಏಅಬಹುದು. ಬೆಲ್ಲದ ಪ್ರಮಾಣ ಹೆಚ್ಚಾದಷ್ಟೂ ಹೈಪರ್ ಗ್ಲೈಸೀಮಿಯಾ ಸ್ಥಿತಿಗೆ ಒಳಗಾಗುವ ಸಾಧ್ಯತೆ ಹೆಚ್ಚುತ್ತದೆ. ಹತ್ತು ಗ್ರಾಂ ಬೆಲ್ಲದಲ್ಲಿರುವ ಒಟ್ಟು ಸಕ್ಕರೆಯ ಪ್ರಮಾಣ 9.7 ಗ್ರಾಂ. ಅಂದರೆ ಸಂಸ್ಕರಿತ ಸಕ್ಕರೆಗಿಂತಲೂ ಬೆಲ್ಲದಲ್ಲಿ ಕೇವಲ 0.3 ಗ್ರಾಂ ಇತರ ಅಂಶಗಳಿವೆ.


 • ರಕ್ತದಲ್ಲಿ ಸಕ್ಕರೆಯ ಮಟ್ಟವನ್ನು ಏರಿಸುತ್ತದೆ

  ಒಂದು ಅಧ್ಯಯನದಲ್ಲಿ ಇನ್ಸುಲಿನ್ ಅವಲಂಬಿಸದ ಮಧುಮೇಹಿಗಳು ಬೆಲ್ಲವನ್ನು ಸೇವಿಸಿದಾಗ ಸಕ್ಕರೆ ಅಥವಾ ಸಾದಾ ಸುಕ್ರೋಸ್ ಮತ್ತು ಜೇನನ್ನು ಸೇವಿಸಿದ ಎರಡು ಘಂಟೆಗಳ ಬಳಿಕ ಎದುರಾಗುವಷ್ಟೇ ಗ್ಲುಕೋಸ್ ರಕ್ತದಲ್ಲಿ ಕಂಡುಬಂದಿದೆ. ಹಾಗಾಗಿ ಮಧುಮೇಹಿಗಳಿಗೆ ಸಕ್ಕರೆಯ ಬದಲಿಗೆ ಬೆಲ್ಲ ಎನ್ನುವ ಯಾವುದೇ ವಾದದಲ್ಲಿ ಹುರುಳಿಲ್ಲ. ಅದರಲ್ಲೂ ಆಯುರ್ವೇದದಲ್ಲಿ ಮಧುಮೇಹಿಗಳು ಸಕ್ಕರೆ ಅಥವಾ ಬೆಲ್ಲ ಸಹಿತ ಯಾವುದೇ ಸಿಹಿಪದಾರ್ಥಗಳಿಂದ ದೂರವಿರಬೇಕೆಂದು ಸಲಹೆ ಮಾಡುತ್ತದೆ.


 • ಪರಾವಲಂಬಿ ಜೀವಿಗಳಿಂದ ಉಂಟಾಗುವ ಸೋಂಕಿನ ಸಾಧ್ಯತೆ ಹೆಚ್ಚಿಸುತ್ತದೆ

  ಬೆಲ್ಲ ಎಂದರೆ ಸಂಸ್ಕರಿಸದ ಸಕ್ಕರೆಯಾಗಿದೆ ಹಾಗೂ ಈ ಮೂಲಕ ಇದರಲ್ಲಿ ಕೆಲವು ಪರಾವಲಂಬಿ ಜೀವಿಗಳಿರುವ ಸಾಧ್ಯತೆಗಳನ್ನು ಅಲ್ಲಗಳೆಯಲು ಸಾಧ್ಯವಿಲ್ಲ. ವಿಶೇಷವಾಗಿ ಈ ಪರಾವಲಂಬಿ ಜೀವಿಗಳು ಕರುಳನ್ನು ಬಾಧಿಸುತ್ತವೆ. ಒಂದು ಅಧ್ಯಯನದಲ್ಲಿ ಕಂಡುಕೊಂಡಂತೆ ಬೆಲ್ಲವನ್ನು ಸಾಂಪ್ರಾದಾಯಿಕ ವಿಧಾನದಲ್ಲಿ ತಯಾರಿಸುವ ಸಮಯದಲ್ಲಿ ಪೂರ್ಣವಾದ ನೈರ್ಮಲ್ಯ ಸಾಧಿಸಲು ಅಸಾಧ್ಯವಾದ ಕಾರಣ ಅನಿವಾರ್ಯವಾಗಿ ಕೆಲವು ಸೂಕ್ಷ್ಮಜೀವಿಗಳು ಬೆಲ್ಲದಲ್ಲಿ ಸೇರಿಕೊಳ್ಳುತ್ತವೆ. ಇವುಗಳಲ್ಲಿ ಕೆಲವು ಪ್ರತಿಜೀವಕ ಔಷಧಿಗಳಿಗೂ ಜಗ್ಗದಷ್ಟು ಹಠಮಾರಿಯಾಗಿದ್ದು ಇವುಗಳು ಬೆಲ್ಲದೊಂದಿಗೆ ಹೊಟ್ಟೆ ಸೇರಿದರೆ ಆರೋಗ್ಯವನ್ನು ಬಾಧಿಸಬಹುದು. ಆದರೆ ವ್ಯಂಗ್ಯವೋ ಎಂಬಂತೆ ಆಯುರ್ವೇದ ಇದೇ ಬೆಲ್ಲವನ್ನು "ಮಣಿಭದ್ರ ಗುಡ" ಎಂಬ ಔಷಧಿಯಲ್ಲಿ ಕರುಳುಗಳಿಂದ ಕ್ರಿಮಿಗಳನ್ನು ನಿವಾರಿಸಲು ಬಳಸುತ್ತದೆ.

  Most Read: ಕಣ್ಣೀರು ತರಿಸುವ ಸ್ಟೋರಿ: ಈಕೆ ಮಗುವಿಗೆ ಜನ್ಮ ನೀಡಿ ಸಾವನ್ನಪ್ಪಿದರೂ 50 ಜನರ ಪ್ರಾಣ ಉಳಿಸಿದಳು!


 • ದೊಡ್ಡ ಕರುಳಿನಲ್ಲಿ ಸೋಂಕು ಮತ್ತು ಉರಿಯೂತ ಇದ್ದರೆ ಬೆಲ್ಲ ಒಳ್ಳೆಯದಲ್ಲ

  ಒಂದು ವೇಳೆ ನಿಮಗೆ Ulcerative Colitis ಎಂಬ ತೊಂದರೆ ಇದ್ದರೆ ನಿಮಗೆ ಬೆಲ್ಲ ಸರ್ವಥಾ ಸಲ್ಲದ ಆಹಾರವಾಗಿದೆ. ಸಾಮಾನ್ಯವಾಗಿ ಸಕ್ಕರೆಯ ಬದಲು ಬೆಲ್ಲವನ್ನು ಬಳಸಿದರೂ ಈ ರೋಗ ಇರುವ ವ್ಯಕ್ತಿಗಳಿಗೆ ಈ ಆಹಾರಗಳು ತರವಲ್ಲ. ಸಕ್ಕರೆ ಯಾವುದೇ ರೂಪದಲ್ಲಿದ್ದರೂ ದೊಡ್ಡ ಕರುಳನ್ನು ತಲುಪಿದಾಗ ಇಲ್ಲಿ ಮನೆಮಾಡಿಕೊಂಡಿದ್ದ ಸೂಕ್ಷ್ಮ ಪರಾವಲಂಬಿ ಜೀವಿಗಳಿಗೆ ಹಬ್ಬ ಆಚರಿಸಲು ಅವಕಾಶ ಸಿಕ್ಕಂತಾಗುತ್ತದೆ. ಒಂದು ಅಧ್ಯಯನದಲ್ಲಿ ಕಂಡುಕೊಂಡ ಪ್ರಕಾರ ಒಂದು ನಿರ್ದಿಷ್ಟ ಕಾರ್ಬೋಹೈಡ್ರೇಟ್ ಪ್ರಮಾಣದ ಆಹಾರವನ್ನುಸೇವಿಸಿದ ಸ್ವಲೀನತೆ (autism) ರೋಗಿಗಳಲ್ಲಿ ಜೀರ್ಣಕ್ರಿಯೆಯ ತೊಂದರೆಯನ್ನುಸರಿಪಡಿಸಲು ಮತ್ತು ಆಗಾಗ ಸ್ಥಗಿತಗೊಳ್ಳುವ ತೊಂದರೆ ಇಲ್ಲವಾಗುತ್ತದೆ. ಆದರೆ ಈ ಆಹಾರದಲ್ಲಿ ಬೆಲ್ಲ ಅಥವಾ ಯಾವುದೇ ಸಕ್ಕರೆ ಇರಬಾರದು. ಆಲ್ಲದೇ ಈ ವ್ಯಕ್ತಿಗಳು ಸಂಸ್ಕರಿಸಿದ ಆಹಾರ, ಪಿಷ್ಟಭರಿತ ತರಕಾರಿಗಳು, ಸಿದ್ದರೂಪದಲ್ಲಿ ಕ್ಯಾನ್ ನೊಳಗೆ ಪ್ಯಾಕ್ ಮಾಡಿರುವ ಆಹಾರಗಳು, ಹುಳಿಬರಿಸಿದ ಮೊಸರಿನ ಹೊರತಾಗಿ ಉಳಿದೆಲ್ಲಾ ಡೈರಿ ಉತ್ಪನ್ನಗಳು, ಮೈದಾ ಆಧಾರಿತ ಉತ್ಪನ್ನಗಳನ್ನು ಸೇವಿಸಬಾರದು.


 • ಅಜೀರ್ಣತೆ ಮತ್ತು ಮಲಬದ್ಧತೆಯುಂಟುಮಾಡಬಹುದು

  ಈಗ ತಾನೇ ತಯಾರಿಸಿದ ಬೆಲ್ಲದ ಸೇವನೆ ಅಜೀರ್ಣತೆ ಮತ್ತು ಮಲಬದ್ದತೆಯುಂಟುಮಾಡಬಹುದು
  ಬೆಲ್ಲ ತಯಾರಿಸಿದ ತಕ್ಷಣವೇ ಸೇವಿಸುವ ಮೂಲಕ ದೇಹದಲ್ಲಿ ಕಫದ ಪ್ರಮಾಣ ಹೆಚ್ಚುತ್ತದೆ ಎಂದು ಆಯುರ್ವೇದದಲ್ಲಿ ಹೇಳಲಾಗಿದೆ. ಪರಿಣಾಮವಾಗಿ ಇದು ಅಜೀರ್ಣತೆಯುಂಟು ಮಾಡುತ್ತದೆ. ಕೆಲವು ವ್ಯಕ್ತಿಗಳಿಗೆ ಮಲಬದ್ದತೆಯ ತೊಂದರೆಯೂ ಎದುರಾಗಬಹುದು. ಹಾಗಾಗಿ ಬೆಲ್ಲವನ್ನು ಸೇವಿಸಲು ಯೋಗ್ಯವಾಗಿಸಲು ಸುಮಾರು ಒಂದು ವರ್ಷವಾದರೂ ಸಂಗ್ರಹಿಸಿಡಬೇಕು. ಮೂರು ವರ್ಷ ಸಂಗ್ರಹಿಸಿಟ್ಟ ಬೆಲ್ಲವನ್ನು ಆಯುರ್ವೇದದಲ್ಲಿ ಪ್ರಾಪುರಂಗುಡ ಎಂದು ವಿವರಿಸಲಾಗುತ್ತದೆ ಹಾಗೂ ಆಯುರ್ವೇದೀಯ ಔಷಧಿಗಳಲ್ಲಿ ಇದೇ ಬೆಲ್ಲವನ್ನು ಬಳಸಲಾಗುತ್ತದೆ.


 • ನಾಲ್ಕು ವರ್ಷಕ್ಕೂ ಹಳೆಯ ಬೆಲ್ಲ ಅನಾರೋಗ್ಯಕರ

  ಬೆಲ್ಲದ ಬಗ್ಗೆ ಆಯುರ್ವೇದ ವಿವರಿಸುವ ಅಂಶಗಳು ಕೊಂಚ ಗೊಂದಲ ಮೂಡಿಸಬಹುದು. ತಾಜಾ ಬೆಲ್ಲವೂ ಆರೋಗ್ಯಕರವಲ್ಲ ಹಾಗೂ ಇದರಿಂದ ಜೀರ್ಣಕ್ರಿಯೆಗೆ ತೊಂದರೆಯುಂಟಾಗಬಹುದು. ಅಂತೆಯೇ ಇದು ಅತಿ ಹಳೆಯದಾಗಿದ್ದರೂ ಇದು ಆರೋಗ್ಯಕರ ಆಹಾರವಲ್ಲ. ನಾಲ್ಕು ವರ್ಷಕ್ಕೂ ಮೀರಿ ಸಂಗ್ರಹಿಸಿಟ್ಟ ಬೆಲ್ಲ ತನ್ನ ಸ್ವಾದ ಮತ್ತು ಪರಿಮಳವನ್ನು ಕಳೆದುಕೊಂಡಿರುವುದು ಮಾತ್ರವಲ್ಲ ಇದರ ಸೇವನೆಯಿಂದ ಅನಾರೋಗ್ಯವೂ ಉಂಟಾಗಬಹುದು. ವಿಶೇಷವಾಗಿ ಇದರಲ್ಲಿ ಮನೆ ಮಾಡಿಕೊಂಡಿರುವ ಕ್ರಿಮಿಗಳು ಶ್ವಾಸಸಂಬಂಧಿ ಅಥವಾ ಕಫ ಸಂಬಂಧಿ (ಕೆಮ್ಮು) ತೊಂದರೆಗಳನ್ನು ತಂದೊಡ್ಡಬಹುದು. ಹಾಗಾಗಿ ಬೆಲ್ಲ ತಯಾರಿಸಿದ ದಿನಾಂಕವನ್ನು ತಪ್ಪದೇ ಗಮನಿಸಿ ಇದರ ಗಡುವು ಮೀರುವ ಮುನ್ನವೇ ಸೇವಿಸಬೇಕು.

  Most Read: ವೈದ್ಯರ ಪ್ರಕಾರ ದೇಹದ ಈ 7 ಅಂಗಗಳನ್ನು ಮುಟ್ಟಲೇಬಾರದಂತೆ! ಯಾಕೆ ಗೊತ್ತೇ?


 • ಕೆಲವು ವ್ಯಕ್ತಿಗಳಲ್ಲಿ ಅಲರ್ಜಿಯುಂಟು ಮಾಡಬಹುದು!

  ಕೆಲವು ವ್ಯಕ್ತಿಗಳಿಗೆ ಬೆಲ್ಲದ ಸೇವನೆಯಿಂದ ಅಲರ್ಜಿಯುಂಟಾಗಬಹುದು. ಒಂದು ವೇಳೆ ಇದು ನಿಮಗೆ ಅನ್ವಯಿಸಿದರೆ ನಿಮಗೆ ಬೆಲ್ಲದ ಬದಲು ಕಬ್ಬಿನ ಸಕ್ಕರೆಯೇ ಸೂಕ್ತವಾಗಿದೆ. ಒಂದು ವೇಳೆ ನಿಮಗೆ ಬೆಲ್ಲದ ಅಲರ್ಜಿಯಿದ್ದರೆ ಈ ಕೆಳಗಿನ ಅಡ್ಡಪರಿಣಾಮಗಳು ನಿಮಗೀಗಾಗಲೇ ಅನುಭವಕ್ಕೆ ಬಂದಿರಬಹುದು:
  * ಕಟ್ಟಿಕೊಂಡ ಅಥವಾ ಸೋರುವ ಮೂಗು
  * ಉಸಿರಾಡುವಾಗ ಸೀಟಿ ಹೊಡೆದಂತೆ ಸದ್ದಾಗುವುದು
  * ಕಿಮ್ಮು
  * ಕೆಂಪಗಾಗುವ ಚರ್ಮ
  * ತಲೆನೋವು
  * ವಾಕರಿಕೆ
  * ಜ್ವರ
  * ಸುಸ್ತ
  ಅಚ್ಚರಿ ಎಂದರೆ, ಒಂದು ವೇಳೆ ನಿಮಗೆ ಅಲರ್ಜಿ ಇಲ್ಲದೇ ಇದ್ದರೆ ಬೆಲ್ಲ ಒಂದು ಉತ್ತಮವಾದ ಅಲರ್ಜಿ ನಿವಾರಕವಾಗಿದೆ. ಆಯುರ್ವೇದದಲ್ಲಿ ಸುಮಾರು ನಾಲ್ಕೈದು ಚಮಚ ಅರಿಶಿನದೊಂದಿಗೆ ಬೆಲ್ಲವನ್ನು ಬೆರೆಸಿ ಕುದಿಸಿ ಅಸ್ತಮಾಘಾತ ರೋಗಿಗಳಿಗೆ ಔಷಧಿಯನ್ನು ನೀಡಲಾಗುತ್ತದೆ.


 • ಬೆಲ್ಲದಲ್ಲಿ ಕಲಬೆರಕೆ ಇರಬಹುದು

  ಒಂದು ವೇಳೆ ನಿಮಗೆ ಬೆಲ್ಲದ ಅಲರ್ಜಿ ಇಲ್ಲದೇಹೋದರೂ ಅಥವಾ ಬೆಲ್ಲದ ಸೇವನೆಯಿಂದ ನಿಮಗೆ ಯಾವುದೇ ತೊಂದರೆ ಇಲ್ಲದೇ ಹೋದರೂ ಬೆಲ್ಲದ ಸೇವನೆಯಿಂದ ಯಾರಿಗೂ ಎದುರಾಗಬಹುದಾದ ಅಪಾಯವನ್ನು ಪರಿಗಣಿಸುವುದು ಅಗತ್ಯ. ಬೆಲ್ಲದ ಬಳಕೆದಾರರು ಇದರ ಸ್ಥಿರತೆ ಮತ್ತು +ಗುಮಟ್ಟವನ್ನು ಪರಿಗಣಿಸಬೇಕಾಗುತ್ತದೆ. ಸಕ್ಕರೆಯನ್ನು ತಯಾರಿಸುವಾಗ ಗುಣಮಟ್ಟವನ್ನು ಕಾಪಾಡಲು ಉನ್ನದ ದರ್ಜೆಯ ಭಾರೀ ಯಂತ್ರಗಳನ್ನು ಕಾರ್ಖಾನೆಗಳಲ್ಲಿ ಬಳಸಲಾಗುತ್ತದೆ. ಆದರೆ ಬೆಲ್ಲವನ್ನು ತಯಾರಿಸುವಾಗ ಗುಣಮಟ್ಟ ಕಾಪಾಡುವ ಮಾತೇ ಇರುವುದಿಲ್ಲ ಹಾಗೂ ಒಂದೆಡೆ ಮಾಡಿದ ಬೆಲ್ಲದಂತೆ ಇನ್ನೊಂದು ಕಡೆ ಇರುವುದಿಲ್ಲ ಹಾಗೂ ಇದರ ಬಣ್ಣವನ್ನು ಆಕರ್ಷಕವಾಗಿಸಲು ಸುಣ್ಣ ಮತ್ತಿತರ ವಸ್ತುಗಳನ್ನು ಬೆರೆಸಲಾಗುತ್ತದೆ. ಹಾಗಾಗಿ ಅಪ್ಪಟ ಬೆಲ್ಲವನ್ನು ತಯಾರಿಸುವ ಕೆಲವೇ ಅಲೆಮನೆಗಳಲ್ಲಿ ಗುಣಮಟ್ಟವನ್ನು ಕಾಪಾಡಲಾಗುತ್ತದೆ ಹಾಗೂ ಉಳಿದೆಡೆ ಲಾಭವೇ ಮುಖ್ಯವಾಗಿದ್ದು ಬೆಲ್ಲದ ಗುಣಮಟ್ಟ ಕನಿಷ್ಟವಾಗಿರುತ್ತದೆ.


 • ಬೆಲ್ಲಕ್ಕೆ ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ

  ಕೆಲವು ಕಡೆಗಳಲ್ಲಿ ಬೆಲ್ಲವನ್ನು ತಯಾರಿಸುವಾಗ ಅಪಾಯಕಾರಿ ರಾಸಾಯನಿಕಗಳನ್ನು ಬೆರೆಸಲಾಗುತ್ತದೆ ಹಾಗೂ ಇವು ಆರೋಗ್ಯದ ಮೇಲೆ ಪ್ರತಿಕೂಲ ಪರಿಣಾಮವನ್ನುಂಟುಮಾಡಬಹುದು. ಇಂದು ಮಾರುಕಟ್ಟೆಯಲ್ಲಿ ಸುಂದರವಾಗಿ ಕಾಣುವ ಬೆಲ್ಲದಲ್ಲಿ ಈ ಕೆಳಗಿನ ರಾಸಾಯನಿಕಗಳು ಬೆರೆತಿರಬಹುದು:
  *Zinc formaldehyde sulphoxylate: ಈ ರಾಸಾಯನಿಕವನ್ನು ಬೆಲ್ಲದ ಬಣ್ಣ ಬಿಳಿಚಿಸಲು ಬಳಸಲಾಗುತ್ತದೆ. ಆದರೆ ಈ ರಾಸಾಯನಿಕ ಬಟ್ಟೆಗಳನ್ನು ಬಿಳಿಚಿಸಲು ಬಳಕೆಯಾಗುತ್ತದೆ ಹಾಗೂ ಇದು ಮಾನವರ ಸೇವನೆಗೆ ಸರ್ವಥಾ ತಕ್ಕುದಲ್ಲ ಹಾಗೂ ಇದು ವಿಷಕಾರಿಯೂ ಆಗಿದೆ.
  * Sodium bicarbonate: ಇದೊಂದು ಬಗೆಯ ಉಪ್ಪು ಆಗಿದ್ದು ತಾನಾಗಿ ವಿಷಕಾರಿಯಲ್ಲದಿದ್ದರೂ ಇದು ಬೆರೆತ ಆಹಾರ ವಿಷಕಾರಿಯಾಗಿದೆ.
  * ಪಾಲ್ಮೈರಾ ಬೆಲ್ಲ: ಇದೊಂದು ದುಬಾರಿ ಬೆಲ್ಲವಾಗಿದೆ ಹಾಗೂ ಇದರಲ್ಲಿ ಅಗ್ಗವಾದ ಸಂಸ್ಕರಿತ ಸಕ್ಕರೆಯನ್ನು ಬೆರೆಸಿರಲಾಗಿರುತ್ತದೆ. ಹಾಗಾಗಿ ಇದರಲ್ಲಿ ನೈಸರ್ಗಿಕವಾಗಿರುವ ಪೋಷಕಾಂಶಗಳ ಸ್ಥಳದಲ್ಲಿ ಸಂಸ್ಕರಿತ ಆಹಾರದ ಅಪಾಯಕಾರಿ ಕಣಗಳು ಬೆರೆತಿರುತ್ತವೆ. ಅಲ್ಲದೇ ಸುಂದರವಾಗಿಸಲು ಹಳದಿ ಬಣ್ಣದ ರಾಸಾಯನಿಕವನ್ನೂ ಬೆರೆಸಿರಬಹುದು. ಹಾಗಾಗಿ ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳುವ ತಯಾರಕರಿಂದ ತಯಾರಿಸಲ್ಪಟ್ಟ ಬೆಲ್ಲವನ್ನು ಕೊಳ್ಳುವುದು ಲೇಸು.


 • ಅಂತಿಮ ತೀರ್ಮಾನ

  ಒಂದು ವೇಳೆ ನಿಮಗೆ ಗಮನಾರ್ಹವಾದ ತೊಂದರೆ ಇಲ್ಲದಿದ್ದು ಇದರಿಂದ ಸಕ್ಕರೆ ಅಥವಾ ಬೆಲ್ಲದ ಸೇವನೆಯನ್ನು ಮಾಡದಿರುವ ಯಾವುದೇ ಕಟ್ಟು ಪಾಡು ಇಲ್ಲದಿದ್ದರೆ ನಿಮ್ಮ ನಿತ್ಯದ ಆಹಾರದಲ್ಲಿ ಬೆಲ್ಲವನ್ನು ಸೂಕ್ತ ಪ್ರಮಾಣದಲ್ಲಿ ಅಳವಡಿಸಿಕೊಳ್ಳುವುದು ಉತ್ತಮ ಹಾಗೂ ಆಯುರ್ವೇದ ಅಥವಾ ನೈಸರ್ಗಿಕ ಔಷಧಿಗಳನ್ನು ಸೇವಿಸುವ ಮೂಲಕ ಇತರ ಆರೋಗ್ಯ ಸಂಬಂಧಿ ತೊಂದರೆಗಳನ್ನು ಯಾವುದೇ ಅಡ್ಡಪರಿಣಾಮವಿಲ್ಲದೇ ಗುಣಪಡಿಸಲು ಸಾಧ್ಯವಾಗುತ್ತದೆ. ಆದರೆ ಬೆಲ್ಲ ಅಪ್ಪಟವಾಗಿದ್ದು ವಿಶ್ವಾಸಾರ್ಹ ಸಂಸ್ಥೆಯಿಂದ ತಯಾರಿಸಲ್ಪಟ್ಟಿದೆ ಎಂದು ಖಚಿತಪಡಿಸಿಯೇ ಕೊಳ್ಳುವುದು ಉತ್ತಮ.
ಸಂಸ್ಕರಿತ ಸಕ್ಕರೆಗಿಂತಲೂ ಬೆಲ್ಲ ಹೆಚ್ಚು ಸ್ವಾದಿಷ್ಟ ಹಾಗೂ ಹಲವಾರು ಸಿಹಿ ಪದಾರ್ಥಗಳಲ್ಲಿ ಬಳಸಲಾಗುವ ಪೌಷ್ಟಿಕಾಂಶಭರಿತ ಆಹಾರವಾಗಿದೆ. ಆದರೆ ಬೆಲ್ಲದ ಸೇವನೆಯಿಂದ ಇರದಲ್ಲಿರುವ ಪರಾವಲಂಬಿ ಜೀವಿಗಳು, ಬೆರೆತಿರುವ ಕೊಳೆ ಹಾಗೂ ಎಷ್ಟು ಕಾಲದಿಂದ ಬೆಲ್ಲ ಸಂಗ್ರಹಿಸಿಡಲಾಗಿತ್ತು ಎಂಬ ಅಂಶಗಳು ಇದು ಎಷ್ಟು ಆರೋಗ್ಯಕರ ಎಂಬುದನ್ನು ನಿರ್ಧರಿಸುತ್ತದೆ. ತೂಕದಲ್ಲಿ ಹೆಚ್ಚಳ, ಹೆಚ್ಚು ಬೆಲ್ಲದ ಸೇವನೆಯಿಂದ ರಕ್ತದಲ್ಲಿ ಸಕ್ಕರೆಯ ಮಟ್ಟ ಏರುವುದು, ಅಜೀರ್ಣತೆ ಮೊದಲಾದವು ಇದುವರೆಗೆ ಗಮನಿಸಲಾದ ಅಡ್ಡ ಪರಿಣಾಮಗಳಾಗಿವೆ.

ಸಿಹಿಕಾಕರ ವಸ್ತುಗಳಲ್ಲಿ ಅತಿ ಕಡಿಮೆ ಅಪಾಯಕಾರಿ ಎಂಬ ಹೆಗ್ಗಳಿಕೆಯನ್ನು ಬೆಲ್ಲ ಪಡೆದಿದೆ. ಇದರಲ್ಲಿರುವ ಪೋಷಕಾಂಶಗಳು ಆರೋಗ್ಯವನ್ನು ಹಲವು ರೀತಿಯಲ್ಲಿ ವೃದ್ಧಿಸುತ್ತವೆ.

ಅಲ್ಲದೇ ಸಕ್ಕರೆಗಿಂತಲೂ ಬೆಲ್ಲದಲ್ಲಿ ಹೆಚ್ಚಿನ ಶಕ್ತಿ ಮತ್ತು ಪೋಷಕಾಂಶಗಳಿದ್ದು ಇವು ಜೀವರಾಸಾಯನಿಕ ಕ್ರಿಯೆಯನ್ನು ಉತ್ತಮಗೊಳಿಸುತ್ತದೆ ಹಾಗೂ ಕಬ್ಬಿಣದ ಪ್ರಮಾಣವನ್ನು ಹೆಚ್ಚಿಸುತ್ತದೆ. ಬೆಲ್ಲವನ್ನು ಆಯುರ್ವೇದವೂ ಕೆಲವಾರು ಔಷಧಿಗಳಲ್ಲಿ ಉಪಯೋಗಿಸುತ್ತದೆ ಹಾಗೂ ಮೈಗ್ರೇನ್, ಉದ್ವೇಗ, ಸುಸ್ತು ಮೊದಲಾದ ತೊಂದರೆಗಳನ್ನು ನಿವಾರಿಸಲು ಉಪಯೋಗಿಸುತ್ತದೆ. ಆದರೆ ಯಾವುದೇ ಬೆಲ್ಲದಲ್ಲಿ ಅಡ್ಡಪರಿಣಾಮಗಳಿಲ್ಲದೇ ಇರುವುದಿಲ್ಲ. ಇದನ್ನು ಸೇವಿಸುವವರ ಆರೋಗ್ಯ ಇತಿಹಾಸ, ಆರೋಗ್ಯ ಸ್ಥಿತಿ ಹಾಗೂ ಬೆಲ್ಲದ ಸ್ವಚ್ಛತೆಯನ್ನು ಅವಲಂಬಿಸಿ ಈ ಅಡ್ಡಪರಿಣಾಮಗಳ ಪ್ರಭಾವವೂ ಬೇರೆ ಬೇರೆಯಾಗಿರುತ್ತವೆ. ಬನ್ನಿ, ಈ ಬಗ್ಗೆ ಕೆಲವು ಅಮೂಲ್ಯ ಮಾಹಿತಿಗಳನ್ನು ನೋಡೋಣ:

   
 
ಹೆಲ್ತ್