Back
Home » ಆರೋಗ್ಯ
ಇಂತಹ ಅಪಾಯಕಾರಿ ಸೆಕ್ಸ್ ಲಕ್ಷಣಗಳನ್ನು, ಅಪ್ಪಿತಪ್ಪಿಯೂ ನಿರ್ಲಕ್ಷಿಸಬೇಡಿ
Boldsky | 7th Jan, 2019 01:30 PM
 • ಯೋನಿ ಸ್ರವಿಸುವಿಕೆ

  ಋತುಚಕ್ರದ ಮಧ್ಯದಲ್ಲಿ ನೀವು ಅಂಡೋತ್ಪತ್ತಿ ಮಾಡುವಂತಹ ಸಮಯದಲ್ಲಿ ನಿಮ್ಮ ದೇಹವು ಹೆಚ್ಚು ಫಲವತ್ತತೆಯಿಂದ ಕೂಡಿರುವುದು ಮತ್ತು ಈ ವೇಳೆ ನಿಮ್ಮ ಯೋನಿಯು ಮೋಡದಂತೆ ಇರುವಂತಹ ದ್ರವವನ್ನು ಲಘುವಾಗಿ ಸ್ರವಿಸುವುದು. ಇದು ತಿಂಗಳ ಬೇರೆ ಸಮಯಕ್ಕಿಂತ ಸ್ವಲ್ ಹೆಚ್ಚಾಗಿರುವುದು ಎಂದು ಥಾಮಸ್ ವಿಲ್ಲೆಯ ಅಮೆರಿಕನ್ ಕಾಂಗ್ರೆಸ್ ಆಫ್ ಅಬ್ಸಸ್ಟ್ರೀಶಿಯನ್ಸ್ ಮತ್ತು ಗೈನಕಾಲಜಿಸ್ಟ್ಸ್ ನ ವಕ್ತಾರೆಯಾಗಿರುವ ಸ್ಯಾಂಡ್ರ ರೀಡ್ ಹೇಳುತ್ತಾರೆ. ಈ ರೀತಿಯ ಸ್ರವಿಸುವಿಕೆಯು ಆರೋಗ್ಯಕಾರಿ. ಆದರೆ ಬೇರೆ ರೀತಿಯ ಸ್ರವಿಸುವಿಕೆಯು ತುಂಬಾ ಚಿಂತೆಯ ವಿಚಾರ. ಉದಾಹರಣೆಗೆ, ದ್ರವವು ಗಡ್ಡೆಯಾಗಿ, ಅಂಟು ಮತ್ತು ಬಿಳಿಯಾಗಿ ಕಾಟೇಜ್ ಚೀಸ್ ನಂತೆ ಇ್ದರೆ ಇದು ಶಿಲೀಂಧ್ರ ಸೋಂಕಿನ ಸಮಸ್ಯೆಯೆಂದು ಅರ್ಥೈಸಿಕೊಳ್ಳಬೇಕು. ಯೋನಿಯಲ್ಲಿ ಇರುವಂತಹ ಕ್ಯಾಂಡಿಡ ಎನ್ನುವ ಶಿಲೀಂಧ್ರವು ಅತಿಯಾಗಿ ಬೆಳವಣಿಗೆಯಾಗಿದೆ ಎನ್ನುವುದರ ಸೂಚನೆ ಇದಾಗಿದೆ. ಒತ್ತಡ, ಅನಾರೋಗ್ಯ, ಆ್ಯಂಟಿಬಯೋಟಿಕ್ ಮತ್ತು ಸ್ಟಿರಾಯ್ಡ್ ನಂತಹ ಮಾತ್ರೆಗಳ ಸೇವನೆಯಿಂದಾಗಿ ಅಥವಾ ಆರೋಗ್ಯ ಸಮಸ್ಯೆಗಳಾಗಿರುವ ಮಧುಮೇಹದಿಂದಲೂ ಶಿಲೀಂಧ್ರವು ಅತಿಯಾಗಿ ಬೆಳವಣಿಗೆ ಆಗಬಹುದು. ಶಿಲೀಂಧ್ರ ಸೋಂಕು ನಾಲ್ಕರಲ್ಲಿ ಮೂವರು ಮಹಿಳೆಯರಿಗೆ ಜೀವನದಲ್ಲಿ ಒಮ್ಮೆಯಾದರೂ ಕಾಡುವುದು. ಇದಕ್ಕೆ ತಕ್ಷಣವೇ ಚಿಕಿತ್ಸೆ ನೀಡದೆ ಇದ್ದರೆ ಆಗ ಇದು ಸಂಗಾತಿಯು ಹರಡಬಹುದು. ಯೋನಿ ಸ್ರಾವವು ಕೆಲವೊಂದು ಲೈಂಗಿಕ ರೋಗ(ಎಸ್ ಐಟಿ)ಗಳ ಲಕ್ಷಣಗಳಾಗಿರ ಬಹುದು. ಇದು ಗೊನೊರಿಯಾ(ಹಸಿರು-ಹಳದಿ ರೀತಿಯ ಸ್ರಾವ), ಟ್ರೈಕೊಮೋನಿಯಾಸಿಸ್(ಈ ವೇಳೆ ಸ್ರಾವವು ತುಂಬಾ ನಯವಾಗಿರುವುದು) ಅಥವಾ ಕ್ಲಾಮಿಡಿಯಾ(ಇದು ಅತಿಯಾಗಿ ಮತ್ತು ಸ್ಪಷ್ಟವಾಗಿರುವಂತಹ ಬಿಳಿ ಸ್ರಾವವಾಗಿರುವುದು)


 • ತುರಿಕೆಯ ದದ್ದು

  ನಿಮ್ಮ ಜನನೇಂದ್ರಿಯದ ಭಾಗವು ಉರಿಯೂತ ಮತ್ತು ತುರಿಕೆಯಿಂದ ಕೂಡಿದ್ದರೆ ವಲ್ವಾಲ್ ಡರ್ಮಟೈಟಿಸ್ ನಂತೆ ಇದ್ದರೆ ಆಗ ಇದು ಅಲರ್ಜಿಯಿಂದ ಉಂಟಾಗಿರುವಂತಹ ಪ್ರತಿಕ್ರಿಯೆ ಎಂದು ಹೇಳಬಹುದು. ಇದು ಶಾವರ್ ಜೆಲ್ ಅಥವಾ ನೀವು ಧರಿಸುವಂತಹ ಸಿಂಥೆಟಿಕ್ ಒಳ ಉಡುಪಿನಿಂದಲೂ ಬರಬಹುದು. ಕೆಲವೊಂದು ಸಲ ಮಹಿಳೆಯರಿಗೆ ಸೆಕ್ಸ್ ಬಳಿಕ ದದ್ದು ಕಾಣಿಸಿಕೊಳ್ಳುವುದು. ಯಾಕೆಂದರೆ ಮಹಿಳೆಯರು ಲಾಟೆಕ್ಸ್ ಕಾಂಡೋಮ್ ನ ಅಲರ್ಜಿ, ಲ್ಯೂಬ್ರಿಕೆಂಟ್ ಅಥವಾ ಕ್ರೀಮ್ ಗಳಿಂದ ಇರಬಹುದು ಎಂದು ಡಾ. ಕರ್ಟಿಸ್ ಹೇಳುತ್ತಾರೆ. ಇವರಿಗೆ ತಮ್ಮ ಸಂಗಾತಿಯ ಮೂತ್ರ, ಬೆವರು ಅಥವಾ ವೀರ್ಯದಿಂದಲೂ ಅಲರ್ಜಿ ಆಗಬಹುದು. ಈ ದದ್ದು ಹರ್ಪಿಸ್ ನ ಲಕ್ಷಣವು ಆಗಿರಬಹುದು. ಇದು ಒಂದು ರೀತಿಯ ಎಸ್ ಐಟಿ ಆಗಿರಬಹುದು. ಇದು ಆರಂಭದಲ್ಲಿ ಕಡಿಮೆ ಸ್ಪರ್ಶ ಮತ್ತು ಸಣ್ಣ ಕೆಂಪು ಬೊಕ್ಕೆಗಳು ಅಥವಾ ಬಿಳಿ ಮೊಡವೆಗಳಂತೆ ಬರಬಹುದು.


 • ಸುಡುವ ಅನುಭವ

  ನಿಮಗೆ ತುಂಬಾ ಅಪಾಯಕಾರಿಯಾಗಿ, ಪದೇ ಪದೇ ಮೂತ್ರ ವಿಸರ್ಜನೆ ಮಾಡಬೇಕೆಂದಿದ್ದರೆ ಮತ್ತು ತುಂಬಾ ನೋವಿನಿಂದ ಕೂಡಿದ್ದರೆ ಆಗ ಮೂತ್ರನಾಳದಲ್ಲಿ ಬ್ಯಾಕ್ಟೀರಿಯಾವು ಇದೆ ಎಂದು ಹೇಳಬಹುದು. ಆಗ್ಗಿಂದಾಗೆ ಮಾಡುವಂತಹ ಲೈಂಗಿಕ ಕ್ರಿಯೆಯಿಂದಾಗಿ ಇದು ಯುಟಿಐನ ಅಪಾಯವನ್ನು ಹೆಚ್ಚಿಸುವುದು ಮತ್ತು ನಿಮಗೆ ಕಾಣಿಸಿಕೊಂಡಿರುವ ನೋವನ್ನು ಇದು ತೀವ್ರಗೊಳಿಸುವುದು ಎಂದು ಡಾ. ಕರ್ಟಿಸ್ ಹೇಳುತ್ತಾರೆ. ಸೆಕ್ಸ್ ನಿಂದಾಗಿ ಸೋಂಕು ಮೂತ್ರನಾಳದಿಂದ ಮೂತ್ರಕೋಶದ ತನಕ ತಲುಪಬಹುದು. ಇದರಿಂದ ತುಂಬಾ ಗಂಭೀರವಾದ ಸೋಂಕು ಸಿಸ್ಟಟಿಸ್ ಕಾಣಿಸಬಹುದು. ತುಂಬಾ ಅಪರೂಪದ ಪ್ರಕರಣದಲ್ಲಿ ಸುಡುವ ಅನುಭವವು ವಲ್ವೋಡೆನಿಯಾದ ಲಕ್ಷಣವಾಗಿರಬಹುದು. ಸೋಂಕಿನಿಂದಾಗಿ ಯೋನಿಯಲ್ಲಿ ದೀರ್ಘಕಾಲದ ನೋವು ಕಾಣಿಸಬಹುದು(ಇದು ಶಿಲೀಂಧ್ರ ಅಥವಾ ಕ್ಯಾಂಡಿಡಾದಿಂದ ಬಂದಿರಬಹುದು). ಆಘಾತ(ಶ್ರೋಣಿಯ ಶಸ್ತ್ರಚಿಕಿತ್ಸೆ ವೆಳೆ ನರಗಳಿಗೆ ಉಂಟಾಗಿರುವ ಹಾನಿ ಮತ್ತು ದೀರ್ಘಕಾಲದ ತನಕ ನೋವು ಉಂಟಾಗುವಂತೆ ಮಾಡಬಹುದು ಅಥವಾ ಇದು ಊಹಿಸಲು ಸಾಧ್ಯವಾಗದಷ್ಟು ಮಟ್ಟಿಗೆ ಇರಬಹುದು.


 • ಸ್ನಾಯುಗಳ ಸೆಳೆತ

  ನೀವು ಸ್ಪರ್ಶಿಸಿದಾಗ ಅಥವಾ ಸೆಕ್ಸ್ ಮಾಡಲು ಪ್ರಯತ್ನಿಸಿದಾಗ ನಿಮ್ಮ ಜನನೇಂದ್ರಿಯವು ನಿರಂತರವಾಗಿ ಬಿಗಿಹಿಡಿದಂತೆ ಅಥವಾ ಸೆಳೆದಂತೆ ಆಗುತ್ತಿದೆಯಾ? ಹೀಗಿದ್ದರೆ ಆಗ ಯೋನಿ ಸಂಕೋಚನವು ಇದಕ್ಕೆ ಕಾರಣವೆಂದು ಡಾ. ರೀಡ್ ಅವರು ಹೇಳುತ್ತಾರೆ. ಯೋನಿ ಸಂಕೋಚನವು ಶೇ.6ರಷ್ಟು ಮಹಿಳೆಯರನ್ನು ಬಾಧಿಸುವುದು ಮತ್ತು ಯೋನಿಯ ಗೋಡೆಯ ಸ್ನಾಯುಗಳಲ್ಲಿ ಇದು ಸೆಳೆತ ಉಂಟು ಮಾಡುವುದು. ಇದರಿಂದಾಗಿ ಲೈಂಗಿಕ ಕ್ರಿಯೆ ವೇಳೆ ಒಳನುಗ್ಗುವಿಕೆ ತುಂಬಾ ನೋವುಂಟು ಮಾಡುವುದು ಎಂದು ಡಾ. ರೀಡ್ ತಿಳಿಸುತ್ತಾರೆ. ಈ ನೋವು ಮತ್ತು ಸೆಳೆತವು ಪರಿಚಿತವಾಗಿರುವುದು ಮತ್ತು ಇದಕ್ಕೆ ಯಾವುದೇ ಪತ್ತೆ ಮಾಡದೆ ಇರುವಂತಹ ಕಾರಣಗಳು ಇರುವುದಿಲ್ಲ. ಹೆಚ್ಚಾಗಿ ಇದಕ್ಕೆ ಮೂಲಕ ಕಾರಣವೇ ಭಾವನಾತ್ಮಕವಾದ ಪರಿಸ್ಥಿತಿ. ಹಿಂದಿನ ಲೈಂಗಿಕ ಆಘಾತ ಅಥವಾ ಲೈಂಗಿಕ ಕ್ರಿಯೆ ವೇಳೆ ಆತಂಕ. ಕೌನ್ಸಿಲಿಂಗ್ ನಿಂದ ಇದಕ್ಕೆ ಚಿಕಿತ್ಸೆ ಪಡೆದುಕೊಳ್ಳಬಹುದು. ದೈಹಿಕ ಥೆರಪಿಯಿಂದ ಸ್ನಾಯುಗಳು ಆರಾಮವಾಗುವುದು ಮತ್ತು ಸೆಕ್ಸ್ ವೇಳೆ ಇದು ಸೆಳೆತವಾಗದಂತೆ ತಡೆಯುವುದು.


 • ದುರ್ವಾಸನೆ

  ನಿಮ್ಮ ಯೋನಿಯು ಸಾಮಾನ್ಯಕ್ಕಿಂತ ತುಂಬಾ ಭಿನ್ನವಾಗಿ ಅಂದರೆ ಮೀನಿನ ವಾಸನೆ ಅಥವಾ ಹುಳಿ ವಾಸನೆ ಬರುತ್ತಲಿದ್ದರೆ ಆಗ ಇದು ಬ್ಯಾಕ್ಟೀರಿಯಾದ ಪರಿಣಾಮ ಎಂದು ತಿಳಿಯಬೇಕು. ಈ ಉರಿಯೂತವು ಯೋನಿಯಲ್ಲಿ ಕಂಡುಬರುವಂತಹ ಬ್ಯಾಕ್ಟೀರಿಯಾದ ಅತಿಯಾದ ಬೆಳವಣಿಗೆಯಿಂದ ಉಂಟಾಗುವುದು. ಧೂಮಪಾನ, ಪದೇ ಪದೇ ಡೌಚಿಂಗ್ ಮತ್ತು ನಿರಂತರವಾಗಿ ಲೈಂಗಿಕ ಚಟುವಟಿಕೆಯಲ್ಲಿ ತೊಡಗಿಕೊಂಡರೆ ಆಗ ಹೀಗೆ ಆಗುವುದು ಎಂದು ಡಾ. ಕರ್ಟಿಸ್ ವಿವರಿಸುತ್ತಾರೆ. ಲೈಂಗಿಕ ಕ್ರಿಯೆ ಬಳಿಕ ಅಥವಾ ಋತುಚಕ್ರದ ಬಳಿಕ ಮಹಿಳೆಯರಿಗೆ ಈ ರೀತಿಯ ದುರ್ವಾಸನೆಯು ಕಾಣಿಸಿಕೊಳ್ಳುವುದು. ಆ್ಯಂಟಿಬಯೋಟಿಕ್ ಔಷಧಿಯಿಂದ ಇದಕ್ಕೆ ಚಿಕಿತ್ಸೆ ನೀಡಬಹುದು. ಬ್ಯಾಕ್ಟೀರಿಯಾ ಸೊಂಕು ಅಥವಾ ಟಾಕ್ಸಿನ್ ಶಾಕ್ ಸಿಂಡ್ರೊಮ್ ನ್ನು ತಡೆಯಲು ಯೋನಿಯೊಳಗೆ ಇಡುವಂತಹ ಟ್ಯಾಂಪನ್ ನ್ನು ಎಂಟು ಗಂಟೆಗೂ ಅಧಿಕ ಕಾಲ ಇಡುವುದರಿಂದ ಈ ರೀತಿಯ ದುರ್ವಾಸನೆಯು ಬರಬಹುದು.


 • ರಕ್ತಸ್ರಾವ

  ರಕ್ತದ ಕಲೆಗಳು ಅಥವಾ ತೆಳುವಾಗಿ ರಕ್ತಸ್ರಾವ ಆಗುವುದನ್ನು ನಿಮ್ಮ ವಯಸ್ಸು ಮತ್ತು ಆರೋಗ್ಯವನ್ನು ಗಮನಿಸಿಕೊಂಡು ಕಾರಣ ಪತ್ತೆ ಹಚ್ಚಬೇಕು. ಋತುಬಂಧ ಅಥವಾ ಹಾರ್ಮೋನು ಅಸಮತೋಲನದಿಂದಾಗಿ ಗರ್ಭಕೋಶದಿಂದ ರಕ್ತವು ಅನಿರೀಕ್ಷಿತ ಸಮಯದಲ್ಲಿ ಬರಬಹುದು. ಇದರಿಂದ ರಕ್ತದ ಕಲೆಗಳು ಮೂಡಬಹುದು. ನಿಮ್ಮ ದೇಹಕ್ಕೆ ಹೊಂದಿಕೊಳ್ಳದೆ ಇರುವಂತಹ ಕೆಲವೊಂದು ಗರ್ಭನಿರೋಧಕ ಮಾತ್ರೆಗಳನ್ನು ನೀವು ತೆಗೆದುಕೊಳ್ಳುತ್ತಲಿದ್ದರೆ ಆಗ ರಕ್ತಸ್ರಾವವಾಗಬಹುದು. ಗರ್ಭಕೋಶದ ಪದರಗಳು ರಕ್ತವನ್ನು ಹೊರಹಾಕಬಹುದು. ಇದು ನೀವು ಮಾತ್ರೆ ತೆಗೆದುಕೊಳ್ಳುವ ಮಧ್ಯದ ಅವಧಿಯಲ್ಲಿ ಸಂಭವಿಸಬಹುದು. ಆದರೆ ಸೆಕ್ಸ್ ಬಳಿಕ ರಕ್ತಸ್ರಾವು ಕಾಣಿಸುತ್ತಲಿದ್ದರೆ ಆಗ ಅದು ಗರ್ಭಕಂಠದ ಸಮಸ್ಯೆಯೆಂದು ನಿಖರವಾಗಿ ಹೇಳಬಹುದಾಗಿದೆ ಎಂದು ಡಾ. ಕರ್ಟಿಸ್ ತಿಳಿಸುತ್ತಾರೆ. ಈ ಭಾಗದ ಕೋಶಗಳು ತುಂಬಾ ಸೂಕ್ಷ್ಮವಾಗಿರಬಹುದು ಅಥವಾ ಯಾವುದೋ ಕಾರಣದಿಂದಾಗಿ ಉರಿಯೂತಕ್ಕೆ ಸಿಲುಕಿರಬಹುದು ಎಂದು ಡಾ. ಕರ್ಟಿಸ್ ಹೇಳುತ್ತಾರೆ. ಇದು ಎಚ್ ಪಿವಿ ಸೋಂಕು ಅಥವಾ ಗರ್ಭಕೋಶದ ಕ್ಯಾನ್ಸರ್ ನ ಆರಂಭಿಕ ಲಕ್ಷಣವಾಗಿರಬಹುದು.


 • ಸೆಕ್ಸ್ ವೇಳೆ ನೋವು

  ಶೇಕಡಾ 22ರಷ್ಟು ಮಹಿಳೆಯರಿಗೆ ಜೀವನದಲ್ಲಿ ಯಾವುದಾದರೂ ಹಂತದಲ್ಲಿ ಸೆಕ್ಸ್ ವೇಳೆ ನೋವು ಕಾಣಿಸಿಕೊಳ್ಳುವುದು ಎಂದು ವಿಶ್ವ ಆರೋಗ್ಯ ಸಂಸ್ಥೆಯು ತನ್ನ ವರದಿಯಲ್ಲಿ ಹೇಳಿದೆ. ಇದಕ್ಕೆ ದೈಹಿಕವಾಗಿ ಕೆಲವೊಂದು ಭಂಗಿಗಳು. ನೀವು ನಿಮಗೆ ಹೊಂದಾಣಿಕೆ ಆಗುವಂತಹ ಕೆಲವೊಂದು ಭಂಗಿಗಗಳನ್ನು ಅನುಸರಿಸಿಕೊಂಡು ಹೋಗಬೇಕು. ನೋವು ನಿರಂತರವಾಗಿ ಕಾಣಿಸುತ್ತಿದ್ದರೆ ಆಗ ಇದಕ್ಕೆ ಬೇರೆಯೇ ರೀತಿಯ ಕಾರಣಗಳು ಇರಬಹುದು. ಗರ್ಭಕೋಶದಲ್ಲಿನ ಕಲ್ಲು, ಗರ್ಭಕೋಶ ಅಥವಾ ಫಾಲೊಪೈನ್ ಟ್ಯೂಬ್ ನಲ್ಲಿನ ಸೋಂಕು, ಹಿಂದಿನ ಶಸ್ತ್ರಚಿಕಿತ್ಸೆ ಅಥವಾ ಸೋಂಕಿನಿಂದಾಗಿ ಕಾಣಿಸಿಕೊಂಡಿರುವ ಅಂಗಾಂಶದ ಸಮಸ್ಯೆ, ಎಂಡೋಮೆಟ್ರೋಸಿಸ್(ಮುಟ್ಟಿನ ಅಂಗಾಂಶವು ಕಿಬ್ಬೊಟ್ಟೆಯ ಕುಳಿಯಲ್ಲಿ ಬೆಳೆಯುವುದು). ನಿಮಗೆ ಸೆಕ್ಸ್ ವೇಳೆ ಈ ರೀತಿಯ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಚಿಕಿತ್ಸೆ ಪಡೆಯುವುದು ಸೂಕ್ತ.
ದೇಹದ ಪ್ರತಿಯೊಂದು ಅಂಗದಂತೆ ನಮ್ಮ ಜನನೇಂದ್ರೀಯ ಕೂಡ. ಆದರೆ ನಾವು ಇದರ ಬಗ್ಗೆ ಗಮನಹರಿಸುವುದು ತುಂಬಾ ಕಡಿಮೆ. ಜನನೇಂದ್ರೀಯು ಕಡೆಗಣಿಸಲ್ಪಟ್ಟಿರುವ ಪಟ್ಟಿಯಲ್ಲಿಯೇ ಇರುವುದು. ಆದರೆ ನಮ್ಮ ದೇಹದ ಕೆಳಗಿನ ಭಾಗದ ಬಗ್ಗೆ ಎಚ್ಚರಿಕೆ ವಹಿಸಬೇಕು. ಕೆಲವೊಂದು ಸಲ ನೀವು ಬಯಸಿದಂತೆ ನಿಮ್ಮ ಕೆಳಗಿನ ಭಾಗದ ಅಂಗವು ಪ್ರತಿಕ್ರಿಯಿಸದೆ ಇರಬಹುದು. ಸಂಗಾತಿ ಜತೆಗೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಂಡಿರುವಾಗ ತುಂಬಾ ಕಿರಿಕಿರಿ ಅಥವಾ ಮುಜುಗರ ಉಂಟು ಮಾಡುವ ಪರಿಸ್ಥಿತಿ ನಿರ್ಮಾಣವಾಗಬಹುದು. ಹೊತ್ತಲ್ಲದ ಹೊತ್ತಿನಲ್ಲಿ ನಿಮಗೆ ಉಂಟಾಗುವ ಈ ಅನುಭವವು ನಿಮ್ಮ ದೇಹದಲ್ಲಿ ಯಾವುದೋ ಸಮಸ್ಯೆಯಿದೆ ಎನ್ನುವುದನ್ನು ತೋರಿಸುತ್ತದೆ. ಸೆಕ್ಸ್ ವೇಳೆ ಹೆಚ್ಚಿನ ಮಹಿಳೆಯರಿಗೆ ನೋವು ಕಾಣಿಸಿಕೊಳ್ಳುವುದು ಅಥವಾ ಜನನೇಂದ್ರಿಯ ಭಾಗದಲ್ಲಿ ದದ್ದುಗಳು ಅಥವಾ ರಕ್ತಸ್ರಾವು ಬರುವುದು. ಇದು ಕೆಲವೊಂದು ಆರೋಗ್ಯ ಸಮಸ್ಯೆಯ ಲಕ್ಷಣಗಳು ಆಗಿವೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ.

ಇಂತಹ ಲಕ್ಷಣಗಳು ಇರುವಂತಹ ಮಹಿಳೆಯರು ಇದರ ಬಗ್ಗೆ ಚರ್ಚೆ ಮಾಡಲು ತುಂಬಾ ಹಿಂಜರಿಯುವರು. ಆದರೆ ಇಂತಹ ಲಕ್ಷಣಗಳು ಇದ್ದರೆ ಆಗ ನೀವು ನೇರವಾಗಿ ವೈದ್ಯರನ್ನು ಭೇಟಿಯಾಗಿ ಅವರಲ್ಲಿ ಈ ಸಮಸ್ಯೆಗಳನ್ನು ಹೇಳಿಕೊಳ್ಳಬೇಕು. ಈ ಸಮಸ್ಯೆಯನ್ನು ಪತ್ತೆ ಮಾಡಿಕೊಂಡು ಇದು ಎಷ್ಟು ನಿರಂತರವಾಗಿದೆ ಎಂದು ತಿಳಿಯಬೇಕು. ಕೆಲವೊಂದು ನೋವುಗಳಿಗೆ ಚಿಕಿತ್ಸೆಯು ಇದೆ. ಸೋಂಕು, ಅಂಡೋತ್ಪತ್ತಿ ಅಥವಾ ಇತರ ಮೂಲಗಳಿಂದ ಬರುವಂತಹ ಸಮಸ್ಯೆಗಳು ತುಂಬಾ ದೀರ್ಘ ಅಥವಾ ಗಂಭೀರವಾಗಿರಬಹುದು. ಇದರಿಂದಾಗಿ ನೀವು ದೇಹದ ಬಗ್ಗೆ ಗಮನಹರಿಸಿ, ವೈದ್ಯರಿಂದ ಸಲಹೆ ಪಡೆಯುವುದು ಅತೀ ಅಗತ್ಯವಾಗಿರುವುದು. ನಿಮ್ಮ ಆರೋಗ್ಯದಲ್ಲಿ ಸಮಸ್ಯೆಯಿದೆ ಎಂದು ಹೇಳುವಂತಹ ಏಳು ಲಕ್ಷಣಗಳನ್ನು ನೀವು ಕಡೆಗಣಿಸಲೇಬಾರದು. ಅದು ಯಾವುದು ಎಂದು ನೀವು ಈ ಲೇಖನ ಮೂಲಕ ತಿಳಿಯಿರಿ.

 
ಹೆಲ್ತ್