Back
Home » ಇತ್ತೀಚಿನ
ನಿಮ್ಮ ಸ್ಮಾರ್ಟ್‌ಫೋನಿನ್ ರಕ್ಷಣೆಗೆ 'ಆಯಂಟಿ ವೈರಸ್‌' ಅಗತ್ಯವಿದೆ.!!
Gizbot | 18th Feb, 2019 09:05 AM
 • 1. ಕ್ಯಾಸ್ಪರ್ಸ್ಕಿ ಮೊಬೈಲ್ ಆಯಂಟಿವೈರಸ್

  ಕ್ಯಾಸ್ಪರ್ಸ್ಕಿ ಮೊಬೈಲ್ ಆಯಂಟಿ ವೈರಸ್ ಉತ್ತಮವಾಗಿದ್ದು, ಇದು ಎರಡು ಮಾದರಿಗಳಲ್ಲಿ ದೊರೆಯುತ್ತದೆ. ಫ್ರೀ ವರ್ಷನ್ ಮತ್ತು ಪ್ರೀಮಿಯಮ್ ವರ್ಷನ್. ಫ್ರೀ ವರ್ಷನ್ ಉಚಿತವಾಗಿ ಇನ್‌ಸ್ಟಾನ್ ಮಾಡಿಕೊಳ್ಳಬಹುದಾಗಿದ್ದು, ಇದು ವೈರಸ್‌ ಮತ್ತು ಆಪ್‌ಗಳನ್ನು ಸ್ಕ್ಯಾನ್ ಮಾಡುತ್ತದೆ. ಪ್ರೀಮಿಯಮ್ ಆಂಟಿವೈರಸ್ ಪೇಯ್ಡ್ ವರ್ಷನ್ ಆಗಿದ್ದು, ಇದು ರಿಯಲ್ ಟೈಮ್ ಪ್ರೋಟೆಕ್ಷನ್, ಕಳ್ಳತನದಿಂದ ರಕ್ಷಣೆ ಮತ್ತು ಆಪ್ ಲಾಕರ್ ಒದಗಿಸುತ್ತದೆ.


 • 2. ಅವಾಸ್ಟ್ ಮೊಬೈಲ್ ಸೆಕ್ಯುರಿಟಿ

  ಅವಾಸ್ಟ್ ಸ್ಮಾರ್ಟ್‌ಫೋನ್ ಸೆಕ್ಯುರಿಟಿ ವೈರಸ್ ಒಂದೇ ಟ್ಯಾಪ್ ಮಾಡಿದರೇ ಕಾರ್ಯಪ್ರವೃತ್ತವಾಗಲಿದ್ದು, ಸ್ಮಾರ್ಟ್‌ಫೋನಿನ್ ಇರುವ ಎಲ್ಲ ಆಪ್‌ಗಳನ್ನು ಸ್ಕ್ಯಾನ್ ಮಾಡಿಬಿಡುತ್ತದೆ. ಸ್ಪೈವೇರ್ ಮತ್ತು ವೈರಸ್‌ಗಳಿಂದ ಸ್ಮಾರ್ಟ್‌ಫೋನ್‌ಗೆ ಸಂಪೂರ್ಣ ಸುರಕ್ಷೆ ನೀಡುತ್ತದೆ. ಇದರಲ್ಲಿ ಪೇಯ್ಡ್ ವರ್ಷನ್ ಸಾಫ್ಟವೇರ್ ಇದ್ದು, ಇದು ಜಾಹಿರಾತು ಮುಕ್ತವಾಗಿರುವ ಜೊತೆಗೆ ಸಿಮ್‌ಗೆ ಸೆಕ್ಯುರಿಟಿ ನೀಡುವುದು ಮತ್ತು ಕ್ಯಾಮೆರಾ ಟ್ರಾಪ್‌ನಂತಹ ರಕ್ಷಣೆ ಹೊಂದಿದೆ. ಫ್ರೀ ವರ್ಷನ್‌ನಲ್ಲಿಯೂ ದೊರೆಯಲಿದೆ.


 • 3. Bitdefender ಆಯಂಟಿ ವೈರಸ್

  ಈ ಆಯಂಟಿ ವೈರಸ್‌ ಸಂಪೂರ್ಣ ಉಚಿತವಾಗಿ ದೊರೆಯಲಿದ್ದು, ಆಂಡ್ರಾಯ್ಡ್ ಸ್ಮಾರ್ಟ್‌ಫೋನಿಗೆ ಎಲ್ಲ ರೀತಿ ಭದ್ರತೆ ನೀಡುವ ಉಪಯುಕ್ತ ಸಾಫ್ಟವೇರ್ ಆಗಿದೆ. ಅತ್ಯಂತ ವೇಗವಾಗಿ ಸ್ಕ್ಯಾನ್‌ ಮಾಡುವ ಈ ಸಾಫ್ಟ್‌ವೇರ್ ಸ್ಮಾರ್ಟ್‌ಫೋನಿನ್ ಬ್ಯಾಟರಿಯನ್ನು ಕಬಳಿಕೆ ಮಾಡುವುದಿಲ್ಲ. ರಿಯಲ್‌ ಟೈಮ್‌ ರಕ್ಷಣೆಯೊಂದಿಗೆ ಪ್ರತಿ ಆಪ್‌ ಇನ್‌ಸ್ಟಾಲ್ ಮಾಡಿದಾಗಲೂ ಸ್ಕ್ಯಾನ್‌ ಮಾಡಿಕೊಳ್ಳುತ್ತದೆ. ಪೇಯ್ಡ್ ವರ್ಷನ್‌ ಆಯ್ಕೆ ಸಹ ಇದ್ದು, ಇದರಲ್ಲಿ ವೆಬ್‌ ರಕ್ಷಣೆ, ಆಪ್‌ ಲಾಕರ್‌ ಸೇರಿದಂತೆ ಇನ್ನೂ ಹೆಚ್ಚಿನ್ ಸೌಲಭ್ಯಗಳು ಗ್ರಾಹಕರಿಗೆ ದೊರೆಯಲಿವೆ.


 • 4. ನಾರ್ಟನ್ ಸೆಕ್ಯುರಿಟಿ & ಆಂಟಿವೈರಸ್

  ಉಚಿತ ಮತ್ತು ಪೇಯ್ಡ್ ವರ್ಷನ್ ಎರಡು ಆಯ್ಕೆಗಳಲ್ಲಿ ದೊರೆಯಲಿರುವ ಈ ಆಯಂಟಿ ಸಾಫ್ಟವೇರ್, ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಅತ್ಯುತ್ತಮ ಆಯಂಟಿ ವೈರಸ್‌ ಆಗಿದೆ. ಸ್ಮಾರ್ಟ್‌ಪೋನ್‌ ಕಾರ್ಯವನ್ನು ಸ್ಲೋ ಮಾಡುವ ಸ್ಪೈವೇರ್ ಮತ್ತು ವೈರಸ್‌ಗಳನ್ನು ಸ್ಕ್ಯಾನ್‌ ಮಾಡಿ ಕ್ಲಿಯರ್ ಮಾಡುತ್ತದೆ. ಡಿವೈಸ್ ಕಳ್ಳತನ ಆದಾಗ ಎಚ್ಚರಿಸುತ್ತದೆ. ಆಪ್‌ ಲಾಕರ್, ಬೇಡವಾದ ಕರೆಗಳು ಮತ್ತು ಮೆಸೆಜ್ ಅನ್ನು ಬ್ಲಾಕ್ ಮಾಡುವ ಆಯ್ಕೆಗಳು ಸಹ ಇರಲಿವೆ.


 • 5. ಸೋಫೋಸ್ ಮೊಬೈಲ್ ಸೆಕ್ಯುರಿಟಿ

  ಈ ಸೋಪೊಸ್ ಮೊಬೈಲ್ ಸೆಕ್ಯುರಿಟಿ ಸಾಫ್ಟವೇರ್ 2016ರ AV-TEST ಪ್ರಶಸ್ತಿಯನ್ನು ಪಡೆದಿದ್ದು, ಪ್ರಸ್ತುತ ಒಂದು ಮಿಲಿಯನ್‌ಗಿಂತ್ ಅಧಿಕ ಬಳಕೆದಾರರನ್ನು ಹೊಂದಿರುವ ಅತ್ಯುತ್ತಮ ಆಯಂಟಿ ವೈರಸ್ ಸಾಪ್ಟ್ವೇರ್ ಆಗಿದೆ. ಸ್ಮಾರ್ಟ್‌ಫೋನಿನ ಎಲ್ಲ ಆಪ್‌ಗಳಿಗೆ ರಕ್ಷಣೆ ಒದಗಿಸುವುದರೊಂದಿಗೆ, ಬೇಡವಾದ ಕರೆ ಮತ್ತು ಮೆಸೆಜ್‌ಗಳನ್ನು ಬರದಂತೆ ತಡೆಯುತ್ತದೆ. ಸ್ಮಾರ್ಟ್‌ಫೋನ್‌ ಕಾರ್ಯದಕ್ಷತೆ ಕುಗ್ಗಲು ಕಾರಣವಾಗುವ ವೈರಸ್‌ಗಳನ್ನು ಸ್ಕ್ಯಾನ್ ಮಾಡಿ ಕ್ಲಿಯರ್ ಮಾಡುತ್ತದೆ.


 • 6. ಸೆಕ್ಯುರಿಟಿ ಮಾಸ್ಟರ್

  2019 ರಲ್ಲಿ ಅತೀ ಹೆಚ್ಚು ಬಳಕೆದಾರರು ಗೂಗಲ್ ಪ್ಲೇ ಸ್ಟೋರ್‌ನಿಂದ ಡೌನ್‌ಲೋಡ ಮಾಡಿಕೊಂಡಿದ್ದು, ಇದೊಂದು ಆಲ್‌ ಇನ್‌ ಒನ್ ಆಯಂಟಿ ವೈರಸ್‌ ಎನಿಸಿಕೊಂಡಿದೆ. ಆಪ್‌ ಲಾಕರ್, ಸ್ಕ್ಯಾನರ್, ಮೆಸೆಜ್ ಸೆಕ್ಯುರಿಟಿ, ವೈ ಫೈ ಸೆಕ್ಯುರಿಟಿ, ಫೋನ್ ಬೂಸ್ಟರ್, ಸಿಪಿಯು ಕೂಲರ್, ಬ್ಯಾಟರಿ ಸೇವರ್ ಸೇರಿದಂತೆ ಬೇಡವಾದ ಕರೆಗಳನ್ನು ಬ್ಲಾಕ್‌ ಮಾಡುವ ಆಯ್ಕೆಗಳನ್ನು, ಸೆಕ್ಯುರಿಟಿ ಮಾಸ್ಟರ್ ಸಾಫ್ಟವೇರ್‌ನ ಉಚಿತ ವರ್ಷನ್‌ನ ಒಳಗೊಂಡಿದೆ.


 • 7. 360 ಸೆಕ್ಯುರಿಟಿ

  ಆಂಡ್ರಾಯ್ಡ್ ಸ್ಮಾರ್ಟ್‌ಫೋನ್‌ಗಳಿಗೆ ಒಂದು ಉತ್ತಮ ಆಯಂಟಿ ವೈರಸ್‌ ಸಾಫ್ಟವೇರ್ ಆಗಿದ್ದು, ಆಯಂಟಿ ವೈರಸ್‌ ರಕ್ಷಣೆ, ಜಂಕ್ ಕ್ಲಿನರ್, ಸ್ಪೀಡ್‌ ಬೂಸ್ಟರ್, ಲಾಕ್ ಸ್ಕ್ರೀನ್, ಸಿಪಿಯು ಕೂಲರ್, ಕಳ್ಳತನದಿಂದ ರಕ್ಷಣೆಯ ಎಚ್ಚರಿಕೆ ಫೀಚರ್ಸ್‌ಗಳನ್ನು ಒಳಗೊಂಡಂತೆ ಇನ್ನೂ ಉತ್ತಮ ಫೀಚರ್ಸ್‌ಗಳನ್ನು ಇದು ಹೊಂದಿದೆ. ಪೇಯ್ಡ್ ವರ್ಷನ್‌ ಮತ್ತು ಫ್ರೀ ವರ್ಷನ್‌ಆಯ್ಕೆಗಳಲ್ಲಿ ಈ ಸಾಫ್ಟವೇರ್ ಗ್ರಾಹಕರಿಗೆ ಲಭ್ಯವಿದೆ.
ಸ್ಮಾರ್ಟ್‌ಫೋನ್ ಟೆಕ್ನಾಲಜಿ ಮಿಂಚಿನ ವೇಗದಲ್ಲಿ ಬದಲಾವಣೆಗಳಾಗುತ್ತಿದ್ದು, ಅದಕ್ಕೆ ತಕ್ಕನಾಗಿ ತಾಂತ್ರಿಕ ಭದ್ರತೆಯ ಸಾಫ್ಟವೇರ್‌ಗಳ ಅಭಿವೃಧ್ಧಿಯು ಸಹ ವೇಗದ ಗತಿಯಲ್ಲಿಯೇ ಸಾಗುತ್ತಿದ್ದು, ಕಂಪ್ಯೂಟರ್ ಮತ್ತು ಲ್ಯಾಪ್‌ಟಾಪ್‌ಗಳಿಗೆ ವೈರಸ್‌ಗಳ ಬರದಂತೆ 'ಆಯಂಟಿ ವೈರಸ್' ಹಾಕಿಸಿಕೊಳ್ಳುತ್ತಾರೆ. ಲ್ಯಾಪ್‌ಟಾಪ್‌ಗಳಿಗೆಷ್ಟೇ ಅಲ್ಲದೇ ಸ್ಮಾರ್ಟ್‌ಫೋನ್‌ಗಳಿಗೂ ಭದ್ರತೆಯ ಅವಶ್ಯಕತೆ ಇದ್ದು, ಅದಕ್ಕಾಗಿ ಸೂಕ್ತ ಆಯಂಟಿ ವೈರಸ್ ಇನ್‌ಸ್ಟಾನ್ ಮಾಡಿಕೊಳ್ಳುವುದು ಉತ್ತಮ.

ಸ್ಮಾರ್ಟ್‌ಪೋನ್‌ಗಳು ಕೇವಲ ಕರೆ ಮಾಡುವುದಕ್ಕೆ ಮಾತ್ರ ಸೀಮಿತವಾಗಿಲ್ಲ. ಪ್ರಸ್ತುತ ಇಂಟರ್ನೆಟ್‌ ಬಳಸಿಕೊಂಡು ಬಹುತೇಕ ಎಲ್ಲ ಕೆಲಸಗಳನ್ನು ಸ್ಮಾರ್ಟ್‌ಫೋನ್‌ಗಳಲ್ಲಿಯೇ ನಿರ್ವಹಿಸಲಾಗುತ್ತಿದ್ದು, ಹೀಗಾಗಿ ಸ್ಮಾರ್ಟ್‌ಫೋನ್‌ಗಳಿಗೆ ರಕ್ಷಣೆ ಅಗತ್ಯ ಎನಿಸುತ್ತದೆ. ಕೆಲವೊಮ್ಮೆ ಅಸುರಕ್ಷಿತ ಆಪ್‌ಗಳ ಮೂಲಕ ವೈರಸ್‌ಗಳು ಸ್ಮಾರ್ಟ್‌ಫೋನ್‌ ಸೇರಿಕೊಂಡು ಅದರ ಕಾರ್ಯ ನಿರ್ವಹಿಸುವ ಶಕ್ತಿಯನ್ನು ಕುಗ್ಗಿಸುತ್ತದೆ. ಅಥವಾ ಕೇಲವು ದತ್ತಾಂಶಗಳನ್ನು ಕರಪ್ಟ್ ಮಾಡಬಹುದು.

ಇಂಥಹ ಸಮಸ್ಯೆ ಬರದಂತೆ ತಡೆಯಲು ಮತ್ತು ನಿಮ್ಮ ಸ್ಮಾರ್ಟ್‌ಫೋನ್‌ ಅತ್ಯುತ್ತಮವಾಗಿ ಕೆಲಸ ಮಾಡಲು ಅತ್ಯುತ್ತಮ 'ಆಯಂಟಿ ವೈರಸ್‌' ಸಾಫ್ಟ್‌ವೇರ್‌ ಅನ್ನು ಇನ್‌ಸ್ಟಾಲ್ ಮಾಡಿಕೊಂಡು ರಕ್ಷಣೆ ನೀಡಬಹುದು. ಮಾರುಕಟ್ಟೆಯಲ್ಲಿ ಅನೇಕ ಆಯಂಟಿ ವೈರಸ್‌ಗಳು ದೊರೆಯುತ್ತವೆ ಆದರೆ ಅವುಗಳಲ್ಲಿ ಯಾವುದು ಸೂಕ್ತ ಎಂಬ ಪ್ರಶ್ನೇ ನಿಮ್ಮಲ್ಲಿ ಇರುತ್ತದೆ. ಹೀಗಾಗಿ ನಾವು ಕೆಲವು ಉತ್ತಮ ಆಯಂಟಿ ವೈರಸ್‌ಗಳ ಬಗ್ಗೆ ಮಾಹಿತಿ ನೀಡಿದ್ದು, ಅವುಗಳು ಯಾವವು ಎಂಬುದನ್ನು ತಿಳಿಯಲು ಮುಂದೆ ಓದಿರಿ.

 
ಹೆಲ್ತ್