Back
Home » ಆರೋಗ್ಯ
ಮುಟ್ಟಿನ ವೇಳೆ ಹೀಗೆಲ್ಲಾ ಆಗುವುದು ಸಾಮಾನ್ಯ! ಇದಕ್ಕೆಲ್ಲಾ ಟೆನ್ಷನ್ ಮಾಡಿಕೊಳ್ಳಬೇಡಿ!
Boldsky | 8th Mar, 2019 05:33 PM
 • ಮಲವಿಸರ್ಜನೆ ಅಭ್ಯಾಸವು ಬದಲಾಗಬಹುದು

  ಋತುಚಕ್ರಕ್ಕೆ ಕೆಲವು ದಿನಕ್ಕೆ ಮೊದಲು ನಿಮಗೆ ಮಲಬದ್ಧತೆಯು ಕಾಣಿಸಿಕೊಳ್ಳುವುದು ಸಾಮಾನ್ಯ ಮತ್ತು ಋತುಚಕ್ರ ಆರಂಭವಾದ ಬಳಿಕ ಮಲವಿಸರ್ಜನೆಯು ಸರಿಯಾಗಿ ಆಗಬಹುದು. ಈ ಭಾಗದಲ್ಲಿ ಕಾಣಿಸಿಕೊಳ್ಳುವ ಸಾಮಾನ್ಯವಾದ ಉರಿಯೂತದಿಂದಾಗಿ ಹೀಗೆ ಆಗುವುದು. ಅದಾಗ್ಯೂ, ಕೆಲವು ದಿನಗಳ ಕಾಲ ಹೀಗೆ ಮಲಬದ್ಧತೆ ಮುಂದುವರಿದರೆ ಅಥವಾ ಅತಿಸಾರವು ಇದ್ದರೆ ಆಗ ನೀವು ವೈದ್ಯರನ್ನು ಭೇಟಿಯಾಗಿ ಸರಿಯಾದ ಪರೀಕ್ಷೆ ಮಾಡಿಸಿಕೊಳ್ಳುವುದು ಅತೀ ಅಗತ್ಯ ಎಂದು ತಜ್ಷರು ತಿಳಿಸುತ್ತಾರೆ.


 • ನಿಮಗೆ ಯಾವಾಗಲೂ ಬಳಲಿಕೆಯ ಅನುಭವ ಆಗುವುದು

  ಋತುಚಕ್ರದ ಮೊದಲ ಎರಡು ದಿನಗಳಲ್ಲಿ ನಿಮ್ಮ ದೇಹದಲ್ಲಿ ನಿಶ್ಯಕ್ತಿ ಕಾಡುವುದು ಒಂದು ರೀತಿಯಲ್ಲಿ ಸಾಮಾನ್ಯವಾದ ಕ್ರಮವಾಗಿದೆ. ಆದರೆ ನಿಮ್ಮ ಶಕ್ತಿಯ ಮಟ್ಟವು ಇಲ್ಲಿ ಕುಸಿಯಬಾರದು ಮತ್ತು ವಿಶ್ರಾಂತಿ ಪಡೆಯಬೇಕು ಎನ್ನುವ ಆಕಾಂಕ್ಷೆಯು ನಿಮ್ಮಲ್ಲಿ ಬರುವುದು ಸಾಮಾನ್ಯ ಎಂದು ಗೋಲ್ಡನ್ ಸಲಹೆ ನೀಡಿದ್ದಾರೆ. ಹಾರ್ಮೋನು ಮಟ್ಟದಲ್ಲಿ ಏರುಪೇರಿನಿಂದಾಗಿ ಹೀಗೆ ಆಗುವುದು. ಮೆದುಳು ಮತ್ತು ಕೇಂದ್ರ ನರವ್ಯವಸ್ಥೆ ಸಹಿತ ಎಲ್ಲವೂ ವಿಶ್ರಾಂತಿ ಬೇಕೆಂದು ಈ ಸಮಯದಲ್ಲಿ ಬಯಸುವುದು. ಸ್ವಲ್ಪ ಹೆಚ್ಚಿನ ನಿದ್ರೆ, ಸೌಮ್ಯ ಚಟುವಟಿಕೆಗಳಾಗಿರುವ(ನಡೆಯುವುದು, ಯೋಗ ಇತ್ಯಾದಿ) ಈ ಸಮಯದಲ್ಲಿ ನೀವು ಮಾಡಬಹುದಾದ ಕೆಲವು ಒಳ್ಳೆಯ ಕೆಲಸಗಳು.

  Most Read: ಋತುಚಕ್ರ ಸರಿಯಾದ ಸಮಯಕ್ಕೆ ಆಗಿಲ್ಲವೆಂದರೆ ಇದೂ ಕಾರಣವಿರಬಹುದು!


 • ರಕ್ತದ ಕಲೆಗಳು

  ಕೆಲವೊಂದು ಸಂದರ್ಭದಲ್ಲಿ ನಿಮ್ಮ ಪ್ಯಾಡ್ ನಲ್ಲಿ ಅಥವಾ ನೀವು ಮೂತ್ರವಿಸರ್ಜನೆ ಮಾಡುವ ವೇಳೆ ರಕ್ತದ ಕಲೆಗಳು ಕಾಣಿಸಬಹುದು. ಇದರ ಬಗ್ಗೆ ನೀವು ಚಿಂತೆ ಮಾಡಬೇಕಿಲ್ಲ. ಈ ರಕ್ತದ ಕಲೆಗಳು ಸಾಮಾನ್ಯ. ಗರ್ಭಕೋಶದ ಪದರಗಳು ಹಿಗ್ಗುವಂತೆ ಹೆಪ್ಪುಗಟ್ಟಿದ ರಕ್ತ, ಲೋಳೆ ಮತ್ತು ಅಂಗಾಂಶವು ಬೆಳೆದು, ಋತುಚಕ್ರದ ಸಮಯದಲ್ಲಿ ಇದು ದೇಹದಿಂದ ಹೊರಗೆ ಬರುವುದು. ಸಣ್ಣ ರಕ್ತದ ತುಂಡುಗಳು ಸಾಮಾನ್ಯ. ಆದರೆ ಇದು ಮೊದಲ ಎರಡು ದಿನಕ್ಕಿಂತ ಹೆಚ್ಚು ಸಮಯ ಇರಬಾರದು ಎಂದು ವೈದ್ಯರು ಸಲಹೆ ಮಾಡುತ್ತಾರೆ. ಅದಾಗ್ಯೂ, ನಿರಂತರವಾಗಿ ರಕ್ತದ ದೊಡ್ಡ ಗಡ್ಡೆಗಳು ಕಂಡುಬರುತ್ತಲಿದ್ದರೆ ಆಗ ನೀವು ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ.


 • ಡಿಸಾರ್ಚ್ ಬಗ್ಗೆ ಗಮನಿಸಿ

  ದೇಹದ ಕೆಲವೊಂದು ವರ್ತನೆಗಳು ನಮಗೆ ವಿಚಿತ್ರವಾಗಿ ಕಾಣಿಸಬಹುದು. ಆದರೆ ಯಾವುದು ನಮಗೆ ಸಮಸ್ಯೆ ಎಂದು ಕಾಣಿಸುವುದೋ ಅದು ದೇಹದ ಸಾಮಾನ್ಯ ಪ್ರತಿಕ್ರಿಯೆ ಆಗಿರಬಹುದು. ಋತುಚಕ್ರದ ವೇಳೆ ಡಿಸಾರ್ಚ್ ಅನುಭವ ಕೂಡ. ಋತುಚಕ್ರದ ರಕ್ತಸ್ರಾವದ ಬಣ್ಣವು ತುಂಬಾ ಭಿನ್ನವಾಗಿರುವುದು ಎಂದು ನಿಮಗೆ ಈಗಾಗಲೇ ತಿಳಿದಿರಬಹುದು. ಅದೇ ರೀತಿಯಾಗಿ ವಿವಿಧ ಬಣ್ಣದಲ್ಲಿ ಡಿಸಾರ್ಚ್ ಕೂಡ ಆಗುವುದು. ಇದರಿಂದ ನೀವು ಡಿಸಾರ್ಚ್ ಬಗ್ಗೆ ಚಿಂತೆ ಮಾಡಬೇಕಾಗಿಲ್ಲ. ಋತುಚಕ್ರ ಕೊನೆಗೊಳ್ಳುವ ವೇಳೆ ಗರ್ಭಕೋಶವು ತನ್ನನ್ನು ತಾನು ಸ್ವಚ್ಛ ಮಾಡಿಕೊಳ್ಳುವುದು. ಡಿಸಾರ್ಚ್ ಎನ್ನುವುದು ಸಾಮಾನ್ಯ. ಆದರೆ ಅದರಿಂದ ತುಂಬಾ ಕೆಟ್ಟ ವಾಸನೆ ಅಥವಾ ಹಳದಿ, ಹಸಿರು ಬಣ್ಣದ ಡಿಸಾರ್ಚ್ ಆಗಬಾರದು ಎಂದು ಗೋಲ್ಡನ್ ತಿಳಿಸುವರು.


 • ಒಂದೇ ಆವರ್ತನದಲ್ಲಿ ಎರಡು ರೀತಿಯ ಋತುಚಕ್ರ

  ಗರ್ಭಕೋಶವು ತಿಂಗಳಿಗೆ ಅಂಡೋತ್ಪತ್ತಿ ಮಾಡುವುದರಲ್ಲಿ ನಿರತರಾಗುವುದು. ಕೆಲವೊಂದು ಸಂದರ್ಭದಲ್ಲಿ ಗರ್ಭಕೋಶದ ಈ ರೀತಿಯ ಕಾರ್ಯವು ಭಿನ್ನವಾಗಿರುವುದು. ಇದರಿಂದಾಗಿ ಋತುಚಕ್ರದ ವೇಳೆ ಕೆಲವೊಂದು ಸಾಮಾನ್ಯ ಬದಲಾವಣೆಗಳು ಆಗಬಹುದು ಎಂದು ಗೋಲ್ಡನ್ ಹೇಳುತ್ತಾರೆ.ಇನ್ನೊಂದು ಕಡೆಯಲ್ಲಿ ನೀವು ಚಿಂತೆ ಮಾಡಬೇಕಾಗಿರುವಂತಹ ಮೂರು ವಿಚಾರಗಳು ಇಲ್ಲಿವೆ


 • ಋತುಚಕ್ರ ಪೂರ್ವ ಸಿಂಡ್ರೋಮ್(ಪಿಎಂಎಸ್)

  ತಜ್ಞರ ಹೇಳುವ ಪ್ರಕಾರ ಪಿಎಂಎಸ್ ಬಗ್ಗೆ ತುಂಬಾ ಲಘುವಾಗಿ ಪರಿಗಣಿಸುತ್ತೇವೆ. ಈ ಲಕ್ಷಣಗಳು ಕೆಲವೊಂದು ಹಾರ್ಮೋನು ವೈಪರಿತ್ಯ ಮತ್ತು ಕಾರ್ಯ ನಿರ್ವಹಿಸದೆ ಇರುವುದರಿಂದ ಸಂಭವಿಸಬಹುದು.

  Most Read: ತಿಂಗಳ ಮುಟ್ಟಿನ ತಡವಾಗುವಿಕೆಗಾಗಿ ಮನೆಮದ್ದುಗಳು


 • ಅತಿಯಾದ ಹೊಟ್ಟೆ ಉಬ್ಬರ

  ಹಾರ್ಮೋನು ವೈಪರಿತ್ಯ, ನೀರು ಶೇಖರಣೆ ಅಥವಾ ಅತಿಯಾದ ರಕ್ತ ಸಂಚಾರದಿಂದಾಗಿ ಋತುಚಕ್ರದ ಸಮಯದಲ್ಲಿ ಹೊಟ್ಟೆಯಲ್ಲಿ ಉಬ್ಬರವು ಕಾಣಿಸಬಹುದು. ಅದಾಗ್ಯೂ, ಗೋಲ್ಡನ್ ಅವರ ಪ್ರಕಾರ ನಿಮಗೆ ಹೊಟ್ಟೆ ಉಬ್ಬರವು ಅತಿಯಾಗಿದ್ದರೆ ಆಗ ಅದು ಉರಿಯೂತದಿಂದಾಗಿ ಹೊಟ್ಟೆಯು ಸರಿಯಾಗಿ ಕಾರ್ಯನಿರ್ವಹಿಸದೆ ಇರುವ ಪರಿಣಾಮವಾಗಿದೆ ಎಂದು ಗೋಲ್ಡನ್ ಹೇಳುತ್ತಾರೆ.

  Most Read: ಆಯುರ್ವೇದ ಮನೆ ಔಷಧಿಗಳು- ಅರ್ಧ ಗಂಟೆಯಲ್ಲಿಯೇ 'ಲೂಸ್ ಮೋಷನ್' ಸಮಸ್ಯೆ ನಿಯಂತ್ರಣಕ್ಕೆ


 • ಅಧಿಕ ರಕ್ತಸ್ರಾವ ಮತ್ತು ನೋವಿನ ಸೆಳೆತ

  ಋತುಚಕ್ರದ ವೇಳೆ ಮಧ್ಯಮ ಸೆಳೆತವನ್ನು ಕಾಣಸಬಹುದು. ಯಾಕೆಂದರೆ ಈ ವೇಳೆ ಗರ್ಭಕೋಶವು ಸಂಕೋಚನಗೊಳ್ಳುವುದು. ತೀವ್ರ ಸೆಳೆತ ಮತ್ತು ಅಧಿಕ ರಕ್ತಸ್ರಾವವು ಜತೆಯಾಗಿ ಕಂಡುಬರುವುದು. ಎಂಡೋಮೆಟ್ರೋಸಿಸ್ ಅಥವಾ ಫಿಬ್ರೊಯ್ಡ್ ನ್ನು ನೀವು ಬಳಲುತ್ತಾ ಇರಬಹುದು. ಋತುಚಕ್ರದ ವೇಳೆ ಅಧಿಕ ರಕ್ತಸ್ರಾವ ಮತ್ತು ತುಂಬಾ ನೋವು ಕಾಣಿಸಿಕೊಳ್ಳುತ್ತಾ ಇದ್ದರೆ ಆಗ ನೀವು ಭವಿಷ್ಯದ ದೃಷ್ಟಿಯಿಂದ ಸರಿಯಾಗಿ ಪರೀಕ್ಷೆ ಮಾಡಿಸಿಕೊಳ್ಳಬೇಕು. ಇಲ್ಲವಾದಲ್ಲಿ ಇದರಿಂದ ಫಲವತ್ತತೆ ಮೇಲೆ ಪರಿಣಾಮ ಉಂಟಾಗಬಹುದು ಎಂದು ಗೋಲ್ಡನ್ ಎಚ್ಚರಿಸಿದ್ದಾರೆ.
ಋತುಚಕ್ರ ಎನ್ನುವುದು ಸಾಮಾನ್ಯವಾದ ಪ್ರತಿಕ್ರಿಯೆ ಆಗಿದ್ದರೂ ಇದರ ಹಿಂದೆ ಕೆಲವೊಂದು ಕಳಂಕವು ಅಂಟಿಕೊಂಡಿದೆ. ಕೆಲವು ಮಹಿಳೆಯರು ಋತುಚಕ್ರದ ವೇಳೆ ಕಾಣಿಸಿಕೊಳ್ಳುವಂತಹ ಕೆಲವೊಂದು ಸಮಸ್ಯೆಗಳಾಗಿರುವ ಸ್ನಾಯುಸೆಳೆತ, ಹಾರ್ಮೋನು ಬದಲಾವಣೆ ಮತ್ತು ಹೊಟ್ಟೆ ಉಬ್ಬರದ ಬಗ್ಗೆ ಚರ್ಚೆ ಮಾಡಲು ಮುಂದೆ ಬರುವರು. ಆದರೆ ಇನ್ನು ಕೆಲವರು ತಿಂಗಳ ಸಮಯದಲ್ಲಿ ಆಗುವಂತಹ ಕೆಲವೊಂದು ಬದಲಾವಣೆ ಬಗ್ಗೆ ಮಾತನಾಡಲು ತುಂಬಾ ನಾಚಿಕೆ ಪಟ್ಟುಕೊಳ್ಳುವರು. ಆದರೆ ನಾವು ಇಲ್ಲಿ ನಿಮಗೆ ಕೆಲವೊಂದು ರಹಸ್ಯಗಳನ್ನು ಹೇಳಲಿದ್ದೇವೆ.

ಅದೇನೆಂದರೆ ನೀವು ಅನುಭವಿಸುವಂತಹ ಕೆಲವೊಂದು ಸಮಸ್ಯೆಗಳು ಬೇರೆ ಮಹಿಳೆಯರು ಕೂಡ ಅನುಭವಿಸುವರು. ಋತುಚಕ್ರದ ಬಗ್ಗೆ ಇರುವಂತಹ ಕಳಂಕ ಮತ್ತು ಆ ಸಮಯದ ಬಗ್ಗೆ ಇರುವಂತಹ ನಾಚಿಕೆಯನ್ನು ಬಿಟ್ಟು, ಋತುಚಕ್ರ ಮತ್ತು ನಿಮ್ಮ ದೇಹದ ಬಗ್ಗೆ ಮುಕ್ತವಾಗಿ ಮಾತನಾಡಬೇಕಾಗಿದೆ. ಇಲ್ಲಿ ಕೊಟ್ಟಿರುವಂತಹ ಐದು ವಿಚಾರಗಳು ಋತುಚಕ್ರದ ವೇಳೆ ನಿಷೇಧವೆಂದು ನೀವು ಭಾವಿಸಿರಬಹುದು. ಆದರೆ ಇದು ಸಾಮಾನ್ಯ ವಿಚಾರವಾಗಿದೆ. ನೀವು ನಿಜವಾಗಿಯೂ ಎಚ್ಚರಿಕೆ ವಹಿಸಿಕೊಳ್ಳಬೇಕಾಗಿರುವಂತಹ ವಿಚಾರದ ಬಗ್ಗೆ ಕೂಡ ನಾವು ಇಲ್ಲಿ ಹೇಳುತ್ತಿದ್ದೇವೆ. ಇಲ್ಲಿನ ದೊಡ್ಡ ವಿಚಾರವೆಂದರೆ ನೀವು ಋತುಚಕ್ರದ ಬಗ್ಗೆ ಮತ್ತು ಅದಕ್ಕೆ ಸಂಬಂಧಿಸಿದಂತಹ ಲಕ್ಷಣಗಳು ಹಾಗೂ ಸಮಸ್ಯೆಗಳ ಬಗ್ಗೆ ಮುಕ್ತವಾಗಿ ಮಾತನಾಡಬಹುದು. ಇದನ್ನು ನೀವು ಸಾಮಾನ್ಯ, ವಿಚಿತ್ರ ಅಥವಾ ಬೆಳವಣಿಗೆ ಆಗಿರುವುದು ಎಂದು ಭಾವಿಸಿರಬಹುದು.

   
 
ಹೆಲ್ತ್