Back
Home » ಆರೋಗ್ಯ
ಶೀತ ಮತ್ತು ಜ್ವರಕ್ಕೆ ವಿಶ್ವದಾದ್ಯಂತ ಪ್ರಸಿದ್ಧಿ ಪಡೆದಿರುವ ವಿಚಿತ್ರ ಮನೆಮದ್ದುಗಳು!
Boldsky | 13th Mar, 2019 05:50 PM
 • ಆಗಿನ ಕಾಲದಲ್ಲಿ

  ನಮ್ಮ ಅಜ್ಜ ಅಜ್ಜಿ ಆಗಿನ ಕಾಲದಲ್ಲಿ ಈಗಿನ ತರಹ ಆಸ್ಪತ್ರೆಗಳ ವ್ಯವಸ್ಥೆಗಳು ಇಲ್ಲದೆ ಇರುವ ಸಮಯದಲ್ಲಿ ತಮ್ಮ ಅರೋಗ್ಯ ಹದಗೆಟ್ಟಾಗ ಅದರ ಸುಧಾರಣೆಗಾಗಿ ತಮಗೆ ತಾವೇ ಕಂಡು ಹಿಡಿದುಕೊಂಡಿದ್ದ ಸುಲಭ ಉಪಾಯಗಳು. ಅದಕ್ಕೆ ಹಳೆಯ ಕಾಲದ ತುಂಬಾ ಜನರು ದೀರ್ಘಾಯುಷಿಗಳು. ಅವರು ಮಾಡುತ್ತಿದ್ದಿದ್ದು ಇಷ್ಟೇ . ನೆಗಡಿ , ಶೀತ , ಕೆಮ್ಮಿಗೆ ಶುಂಠಿ ಚಹಾ , ಜ್ವರಕ್ಕೆ ಮೆಣಸು-ಬೆಳ್ಳುಳ್ಳಿ ಚಟ್ನಿ, ದೊಡ್ಡಪತ್ರೆ ಚಟ್ನಿ , ಅಜೀರ್ಣದ ಸಮಸ್ಯೆಗೆ ಸುಟ್ಟಿರುವ ಬೆಳ್ಳುಳ್ಳಿ ಇತ್ಯಾದಿ.ಹೀಗೆ ಹತ್ತು ಹಲವಾರು ಮನೆ ಔಷಧಿಗಳನ್ನು ತಮ್ಮ ಮನೆಯಲ್ಲಿಯೇ ಸಿಗುವ ವಸ್ತುಗಳಿಂದಲೇ ತಯಾರಿಸಿಕೊಳ್ಳುತ್ತಿದರು. ಆದ್ದರಿಂದಲೇ ಅವರಿಗೆ ಆರೋಗ್ಯ ಭಾಗ್ಯ ಹುಟ್ಟಿನಿಂದಲೇ ನೆರಳಿನಂತೆ ಹಿಂಬಾಲಿಸುತ್ತಿತ್ತು. ಈ ರೀತಿಯ ಪದ್ದತಿಗಳು ಕೇವಲ ನಮ್ಮ ದೇಶಕ್ಕೆ ಮಾತ್ರ ಸೀಮಿತವಾಗಿಲ್ಲ. ವಿಶ್ವದ ಪ್ರತಿಯೊಂದು ದೇಶ ತನ್ನದೇ ಆದ ಸಂಸ್ಕೃತಿಯನ್ನು ಹೊಂದಿರುವ ಹಾಗೆ ಆರೋಗ್ಯ ಸುಧಾರಣೆಗೂ ತನ್ನದೇ ಆದ ವಿಶೇಷ ಆದಿಕಾಲದ ವೈದ್ಯಕೀಯ ಪದ್ದತಿಗಳನ್ನು ಈಗಲೂ ಚಾಲ್ತಿಯಲ್ಲಿ ಉಳಿಸಿಕೊಂಡಿವೆ.ಇದರಲ್ಲಿ ಕೆಲವು ದೇಶಗಳು ಅನುಸರಿಸುತ್ತಿರುವ ಪದ್ದತಿಗಳನ್ನು ನಿಮ್ಮ ಮುಂದೆ ಇಡುವ ಪ್ರಯತ್ನ ನಮ್ಮದು.

  Most Read: ಬಾರ್ಲಿ ನೀರು ಕುಡಿದರೆ, ದೇಹದ ಕ್ಯಾಲೋರಿ ಇಳಿಯುತ್ತೆ ಹಾಗೂ ಸಪಾಟಾದ ಹೊಟ್ಟೆ ಪಡೆಯಿರಿ!


 • ಹಾಂಗ್-ಕಾಂಗ್ : ಹಲ್ಲಿಯ ಸೂಪ್!!

  ಕೇಳುವುದಕ್ಕೆ ವಿಚಿತ್ರವೆನಿಸಿದರೂ ಇದು ಶೀತ ಮತ್ತು ಜ್ವರವನ್ನು ತಡೆಗಟ್ಟಲು ಹಾಂಗ್-ಕಾಂಗ್ ನ ಜನರು ಬಳಸುತ್ತಿರುವ ತಮ್ಮದೇ ಶ್ಯಲಿಯ ಆರೋಗ್ಯ ಸುಧಾರಣಾ ಪದ್ಧತಿ.ಇಲ್ಲಿನ ಜನರು ಒಣಗಿಸಿರುವ ಹಲ್ಲಿಗಳನ್ನು, ಯಾಮ್ ಗಳನ್ನು ಮತ್ತು ಚೈನೀಸ್ ಖರ್ಜೂರಗಳನ್ನು ಒಟ್ಟಿಗೆ ಸೇರಿಸಿ ಸೂಪ್ ತಯಾರು ಮಾಡುತ್ತಾರೆ ಮತ್ತು ಇದು ಸವಿಯಲು ಚಿಕನ್ ಸೂಪ್ ಇರುವ ಹಾಗೆ ಇದೆ ಎಂದು ಹೇಳುತ್ತಾರೆ .


 • ಚೀನಾ : ಜಿಂಕೆಯ ಚರ್ಮದ ಖಾದ್ಯ

  ಖಾಯಿಲೆಗಳನ್ನು ಗುಣಪಡಿಸುವ ತಂತ್ರಗಳಿಗೆ ಚೀನಾ ಮೊದಲಿನಿಂದಲೂ ಹೆಸರುವಾಸಿ. ತನ್ನದೇ ಆದ ವಿಭಿನ್ನ ಶೈಲಿಯಿಂದ ತಯಾರು ಮಾಡಿ ಮನೆ ಮಾತಾಗಿದೆ. ತಾವು ತಯಾರು ಮಾಡುವ ಜಿಂಕೆಯ ಮೈ ಮೇಲಿನ ರೇಷ್ಮೆಯ ನುಣುಪಿನ ಚರ್ಮದ ಅಡುಗೆ ಬರೀ ಶೀತ ಮತ್ತು ಜ್ವರಕ್ಕಷ್ಟೇ ಪರಿಣಾಮಕಾರಿಯಾಗಿರದೆ ರಕ್ತಹೀನತೆ ಮತ್ತು ಬಂಜೆತನವನ್ನು ನಿವಾರಣೆ ಮಾಡುವಲ್ಲಿ ಯಶಸ್ವಿ ಪಡೆದಿದೆ.


 • ರಶಿಯಾ :ಗೋಗಾಲ್ ಮೊಗೋಲ್

  ಇದನ್ನು ಮೊಟ್ಟೆಯ ಹಳದಿ ಭಾಗದಲ್ಲಿ ತಯಾರು ಮಾಡುತ್ತಾರೆ. ಮೊಟ್ಟೆಯ ಹಳದಿ ಭಾಗವನ್ನು ಬೇರ್ಪಡಿಸಿ ಅದಕ್ಕೆ ಜೇನು ತುಪ್ಪ ಅಥವಾ ಸಕ್ಕರೆಯನ್ನು ಸೇರಿಸಿ ಅರ್ಧ ಲೋಟ ಹಸುವಿನ ಹಾಲಿಗೆ ಬೆರಸಿ ಇದನ್ನು ಚೆನ್ನಾಗಿ ಕುದಿಸುತ್ತಾರೆ. ಹೀಗೆ ಕುದಿಸಿದ ಮಿಶ್ರಣ ಶೀತ ಮತ್ತು ಜ್ವರಕ್ಕೆ ಒಳ್ಳೆಯ ಮನೆಮದ್ದು ಮಾತ್ರವಲ್ಲದೆ ದೇಹಕ್ಕೆ ಹೆಚ್ಚು ಶಕ್ತಿ ಕೊಡುವಲ್ಲಿ ಸಹಾಯಕವಾಗಲಿದೆ.ಈ ಪದ್ಧತಿ ಉಕ್ರೇನ್ ದೇಶದಲ್ಲೂ ಪ್ರಸಿದ್ದಿ ಪಡೆದಿದೆ.


 • ಸ್ಪೇನ್ : ಬೆಳ್ಳುಳ್ಳಿ ಚಹಾ

  ಬೆಳ್ಳುಳ್ಳಿ ಚಹದೊಂದಿಗಿನ ಜೇನು ತುಪ್ಪದ ಮಿಶ್ರಣ ಶೀತ ಮತ್ತು ಜ್ವರ ಬಹುಬೇಗನೆ ಕಡಿಮೆ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿಯಾಗಿದೆ. ಅಷ್ಟೇ ಅಲ್ಲದೆ ಮೂಗು ಕಟ್ಟಿಕೊಳ್ಳುವುದು ,ಕೆಮ್ಮು, ಕಫದಿಂದ ಶ್ವಾಸಕೋಶ ಕಟ್ಟಿಕೊಳ್ಳುವುದು ಎಲ್ಲವೂ ಇದರಿಂದ ಕಡಿಮೆ ಆಗುತ್ತದೆ. ಇದು ಸ್ಪೇನ್ ದೇಶದ ಬಹಳ ನಂಬಿಕೆಯುಳ್ಳ ಹಾಗು ಖ್ಯಾತಿಯುಳ್ಳ ಮನೆ ಔಷಧಿಯಾಗಿದೆ.


 • ಜಪಾನ್: ಈರುಳ್ಳಿ ಹೆಚ್ಚುವುದು

  ನಾವು ಸಾಮಾನ್ಯವಾಗಿ ಈರುಳ್ಳಿ ಹೆಚ್ಚಿದರೆ ಕಣ್ಣಿನಲ್ಲಿ ಉರಿ ಶುರುವಾಗಿ ಗಳಗಳನೆ ನೀರು ಹರಿಯುತ್ತದೆ. ಆದರೆ ಜಪಾನ್ ದೇಶದಲ್ಲಿ ಇದೆ ಶೀತ ಮತ್ತು ಜ್ವರಕ್ಕೆ ಮನೆ ಮದ್ದಾಗಿದೆ. ಅಲ್ಲಿನ ಜನರು ಈ ರೀತಿಯ ಖಾಯಿಲೆ ಬಂದರೆ ಈರುಳ್ಳಿ ಹೆಚ್ಚುತ್ತಾರೆ ಮತ್ತು ಶೀತ ಮತ್ತು ಜ್ವರವನ್ನು ಕೂತಲ್ಲಿಯೇ ಕಡಿಮೆ ಮಾಡಿಕೊಳ್ಳುತ್ತಾರೆ.


 • ಜರ್ಮನಿ : ಸ್ನಯ್ಲ್ ಸಿರಪ್

  ಸ್ನಯ್ಲ್ ಅಥವಾ ನಮ್ಮಲ್ಲಿ ಬಸವನ ಹುಳು ಎಂದೆಲ್ಲಾ ಏನು ಕರೆಯುತ್ತೇವೆ ಅದು ಅನೇಕ ದೇಶಗಳಲ್ಲಿ ವಿವಿಧ ಖಾದ್ಯಗಳಿಗೆ ಪ್ರಸಿದ್ದಿ ಪಡೆದಿದೆ. ಈ ಹುಳುವಿನಿಂದ ತಯಾರಾದ ಸಿರಪ್ ಜ್ವರ ಮತ್ತು ಶೀತವನ್ನು ನಿಯಂತ್ರಿಸುವಲ್ಲಿ ತನ್ನ ಹಿಡಿತ ಸಾಧಿಸಿದೆ. ಮೊದಲೆಲ್ಲಾ ಜನರೇ ಈ ಹುಳುಗಳನ್ನು ತಾವೇ ಹುಡುಕಿ ತಂದು ಅದರಿಂದ ಸಿರಪ್ ತಯಾರಿಸಿ ಕೊಳ್ಳುತ್ತಿದ್ದರು . ಆದರೆ ಈಗ ಹಾಗೇನಿಲ್ಲ . ಮೆಡಿಕಲ್ ಶಾಪ್ಗಳಲ್ಲಿ ಇದು ಲಭ್ಯವಿದೆ .

  Most Read: ಬಾಡಿ ಹೀಟ್ ಕಡಿಮೆ ಮಾಡಲು ಸೇವಿಸಬಹುದಾದ ಬೇಸಿಗೆಯ ಆಹಾರಗಳು ಮತ್ತು ಪಾನೀಯಗಳು


 • ಇರಾನ್: ಟರ್ನಿಪ್

  ಇರಾನ್ ದೇಶದ ಜನರಿಗೆ ಟರ್ನಿಪ್ ಶೀತಕ್ಕೆ ಒಳ್ಳೆಯ ಔಷಧಿಯಾಗಿದೆ.ಟೂರ್ನಿಪ್ಗಲ್ಲಿ ಜೀವಸತ್ವ 'ಸಿ' ಹೆಚ್ಚಾಗಿದೆ ಮತ್ತು ಆರೋಗ್ಯಕ್ಕೆ ತುಂಬಾ ಪ್ರಶಸ್ತವಾದ ತರಕಾರಿಯಾಗಿದೆ. ಆದರೆ ಇದು ಕೆಮ್ಮು ಕಡಿಮೆ ಮಾಡುವಲ್ಲಿ ಯಶಸ್ವಿ ಹೌದೋ ಅಲ್ಲವೋ ಎನ್ನುವ ಬಗ್ಗೆ ಸಂಶೋಧನೆ ಇನ್ನೂ ನಡೆಯುತ್ತಿದೆ.


 • ಸ್ಕಾಟ್ಲೆಂಡ್: ರಮ್ ಮತ್ತು ಪುದೀನಾ ಕಷಾಯ

  ಸ್ಕಾಟ್ಲೆಂಡ್ ನ ಜನರು ತಮಗೆ ಶೀತ ಮತ್ತು ಜ್ವರ ಬಂದರೆ ರಮ್ ಮತ್ತು ಬಿಸಿಬಿಸಿಯಾದ ಪುದಿನ ಕಷಾಯ ಒಟ್ಟುಗೂಡಿ ಸೇವಿಸುತ್ತಾರೆ. ಇದು ಶ್ವಾಸಕೋಶ ಕಫದಿಂದ ಕಟ್ಟುವುದನ್ನು ತಡೆದು ಉಸಿರಾಡಲು ಸರಾಗ ಮಾಡಿಕೊಡುತ್ತದೆ.


 • ಉತ್ತರ ಕೆನಡಾ: ಬೀಟ್ರೂಟ್

  ಇದು ಬೀಟ್ರೂಟ್ ಎಂದು ಗೊಂದಲಗೊಳಗಾಗಬೇಡಿ. ಇದು ಉತ್ತರ ಕೆನಡಾದಲ್ಲಿ ಸಿಗುವ ಒಂದು ಬಗೆಯ ಔಷಧೀಯ ಗುಣವುಳ್ಳ ಸಸ್ಯ.ಇದು ಕೆಮ್ಮಿನ ಸಮಸ್ಯೆಯನ್ನು ಚಿಟಿಕೆ ಹೊಡೆಯುವುದರಲ್ಲಿ ಕಡಿಮೆ ಮಾಡುತ್ತದೆ ಎಂಬ ನಂಬಿಕೆ ಇಲ್ಲಿನ ಜನರಲ್ಲಿದೆ. ಈ ಸಸ್ಯದ ಬೇರನ್ನು ಸ್ವಲ್ಪ ಕಾಲ ಹಲ್ಲಿನಲ್ಲಿ ಜಿಗಿದು ಅದರ ರಸ ಕುಡಿಯುತ್ತಿದ್ದರೆ ಗಂಟಲು ನೋವು ಮತ್ತು ಗಂಟಲು ಕೆರೆತಕ್ಕೆ ಒಳ್ಳೆಯ ರಾಮಬಾಣ ಎಂದು ನಂಬಿದ್ದಾರೆ.
ಮನುಷ್ಯನಿಗೆ ಎಲ್ಲಾ ಭಾಗ್ಯಗಳಿಗಿಂತಲೂ ಸೌಭಾಗ್ಯವೆಂದರೆ ಅದು ಆರೋಗ್ಯ ಭಾಗ್ಯ. ಅವನು ಎಷ್ಟೇ ಸಂಪಾದಿಸಿದರೂ ಆಸ್ತಿ ಮಾಡಿದರೂ ಅರೋಗ್ಯ ಸರಿಯಿಲ್ಲದ ಮೇಲೆ ಎಲವೂ ನಶ್ವರವೇ. ಅರೋಗ್ಯ ಇಲ್ಲದ ಜೀವನ ಪ್ರತಿಕ್ಷಣ ನರಕ ಸದೃಶ. ಹಾಗಾಗಿ ತನ್ನ ಆರೋಗ್ಯ ಕಾಪಾಡಿಕೊಳ್ಳಲು ವ್ಯಾಯಾಮದ ನೆಪ ಮಾಡಿ ದೇಹವನ್ನು ದಂಡಿಸಬೇಕಾಗುತ್ತದೆ. ಹಲವಾರು ಕಟ್ಟುನಿಟ್ಟಿನ ಆರೋಗ್ಯ ಪದ್ದತಿಗಳನ್ನು ಅನುಸರಿಸಬೇಕಾಗುತ್ತದೆ. ಒಳ್ಳೆಯ ಆಹಾರವನ್ನು ಸೇವಿಸಬೇಕಾಗುತ್ತದೆ. ಮಳೆಗಾಲ , ಚಳಿಗಾಲ ಎನ್ನದೆ ಮನುಷ್ಯನಿಗೆ ಹುಷಾರು ತಪ್ಪಿ ಸ್ವಲ್ಪ ಆರೋಗ್ಯದಲ್ಲಿ ಏರುಪೇರಾದರೂ ಮೊದಲು ಕಾಣಿಸಿಕೊಳ್ಳುವ ಒಂದು ಲಕ್ಷಣವೆಂದರೆ ಅದು ಶೀತ ಮತ್ತು ಜ್ವರ. ಅದರಲ್ಲೂ ಚಳಿಗಾಲ ಶೀತ ಮತ್ತು ಜ್ವರಕ್ಕೆ ಹೇಳಿ ಮಾಡಿಸಿದ ಸಮಯ. ಮೂಗಿಗಂತೂ ಸ್ವಲ್ಪವೂ ಬಿಡುವೇ ಇರುವುದಿಲ್ಲ .ಯಾವಾಗಲೂ ಸೀನು ಜೊತೆಗೆ ನೆಗಡಿ ಸುರಿಯುತ್ತಲೇ ಇರುತ್ತದೆ. ಇದು ಹಾಗೇ ಮುಂದುವರಿದು ತಲೆನೋವು , ವಾಂತಿ , ಭೇದಿ ಹೀಗೆ ಹಲವಾರು ದೊಡ್ಡ ಕಾಯಿಲೆಗಳಿಗೆ ದಾರಿ ಮಾಡಿ ಕೊಟ್ಟು ಕೊನೆಗೊಂದು ದಿನ ಸರಿಯಾದ ಸಮಯಕ್ಕೆ ಅಗತ್ಯವಾದ ಚಿಕಿತ್ಸೆ ಸಿಗದೇ ಹೋದರೆ ಮನುಷ್ಯ ಇಹಲೋಕದ ಪ್ರಯಾಣ ಮುಗಿಸಿ ಪರಲೋಕಕ್ಕೆ ತೆರಳುವುದು ಗ್ಯಾರಂಟಿ.

ಈ ರೀತಿ ಅರೋಗ್ಯ ಕೈ ಕೊಟ್ಟಾಗ ಮೊದಲು ಮನುಷ್ಯ ಮೊರೆ ಹೋಗುವುದು ತನಗೆ ಈ ನೆಗಡಿಯ ರೋದನೆಯಿಂದ ಪಾರಾಗಲು ಏನಾದರೂ ಸಿಕ್ಕರೆ ಸಾಕು ಎಂಬ ಭಾವನೆಯೊಂದಿಗೆ ತನ್ನದೇ ಆದ ಅಡಿಗೆ ಮನೆಗೆ. ಏಕೆಂದರೆ ಆ ಸಮಯಕ್ಕೆ ಸರಿಯಾಗಿ ಶೀತಕ್ಕೆ ಮತ್ತು ಜ್ವರಕ್ಕೆ ಮಾತ್ರೆ , ಔಷಧಿಗಳಿಗಿಂತಲೂ ಹೆಚ್ಚು ಪರಿಣಾಮಕಾರಿಯಾಗಿ ಕೆಲಸ ಮಾಡುವುದು ಈ ಅಡಿಗೆ ಮನೆಯ ಉಪಯುಕ್ತ ಪದಾರ್ಥಗಳೇ. ಅವೇನೂ ಯಾವೋ ಅನ್ಯ ವಸ್ತುಗಳೇನಲ್ಲ. ನಮ್ಮ ದೈನಂದಿನ ಅಡುಗೆ ಗೆ ಬಳಸುವ ಅಡುಗೆ ಸಾಮಾನುಗಳೇ. ಶುಂಠಿ , ಬೆಳ್ಳುಳ್ಳಿ , ಜೀರಿಗೆ, ಮೆಣಸು ಹೀಗೆ. ಇವೆಲ್ಲಾ ನಾವು ಪ್ರತಿದಿನ ಉಪಯೋಗಿಸುವ ವಸ್ತುಗಳೇ. ಆದರೆ ಅನಾರೋಗ್ಯ ಸಮಯದಲ್ಲಿ ತುಂಬಾ ಒಳ್ಳೆಯ ಬಂಧು, ಅರೋಗ್ಯ ಮಿತ್ರ ಎಂದೇ ಹೇಳಬಹುದು. ಹೇಗೆ ಎಂದು ಯೋಚಿಸುತ್ತಿದ್ದೀರಾ ? ಸ್ವಲ್ಪ ಇಲ್ಲಿ ಕೇಳಿ. ಇವೆಲ್ಲಾ ತುಂಬಾ ಹಳೆಯ ಕಾಲದಿಂದಲೂ ರೂಡಿ ಮಾಡಿಕೊಂಡು ಬಂದಿರುವ ಮಾರ್ಗಗಳು.

   
 
ಹೆಲ್ತ್