Back
Home » ಆರೋಗ್ಯ
ಪ್ರಾಸ್ಟೇಟ್ ಕ್ಯಾನ್ಸರ್‌‌ನ್ನು ನಿಯಂತ್ರಿಸುವ ಪವರ್ 'ದಾಳಿಂಬೆ ಜ್ಯೂಸ್‌' ನಲ್ಲಿದೆ!
Boldsky | 14th Mar, 2019 01:19 PM
 • ಸಂಶೋಧನೆಯ ಪ್ರಕಾರ

  ಜೀವಕೋಶ ಜೀವವಿಜ್ಞಾನ ಪ್ರಾಧ್ಯಾಪಕಿ ಮ್ಯಾನುಯೆಲಾ ಮಾರ್ಟಿನ್ಸ್ ಗ್ರೀನ್ ಅವರು ನಡೆಸಿರುವಂತಹ ಸಂಶೋಧನೆಯ ನಡೆಸಿದರು. ಅವರಿ ಲೀ ವಾಂಗ್ ಆಂಡ್ರೆ ಅಲ್ಕೊನ್ ಮತ್ತು ಜೆಫ್ರಿ ಹೊ ಅವರು ಜತೆ ನೀಡಿದರು. ಮ್ಯಾನುಯೆಲಾ ಅವರು ಪ್ರಯೋಗಾಲಯದಲ್ಲಿ ನಡೆಸಿರುವಂತಹ ಸಂಶೋಧನೆ ಪ್ರಕಾರ ದಾಳಿಂಬೆ ಜ್ಯೂಸ್ ನ್ನು ಟೆಸ್ಟೊಸ್ಟೆರಾನ್ ಪ್ರತಿರೋಧ ಒಡ್ಡುವಂತಹ ಪ್ರಾಸ್ಟೇಟ್ ಕ್ಯಾನ್ಸರ್ ನ ಕೋಶಗಳ ಮೇಲೆ ಪ್ರಯೋಗ ಮಾಡಿದರು. ಈ ವೇಳೆ ಅವರು ಕಂಡುಕೊಂಡಿರುವ ವಿಚಾರವೇನೆಂದರೆ ಚಿಕಿತ್ಸೆ ನೀಡಿರುವಂತಹ ಕ್ಯಾನ್ಸರ್ ಕೋಶಗಳು ಸತ್ತಿರಲಿಲ್ಲ ಮತ್ತು ಇದು ಜೀವಕೋಶವು ಹೆಚ್ಚು ಅಂಟಿಕೊಳ್ಳುವ ಲಕ್ಷಣ ತೋರಿಸಿತು ಮತ್ತು ಕೋಶಗಳು ಸ್ಥಳಾಂತರವಾಗುವುದು ಕಡಿಮೆ ಆಗಿತ್ತು. ಇದರಿಂದಾಗಿ ಪ್ರಾಸ್ಟೇಟ್ ಕ್ಯಾನ್ಸರ್ ವಿರುದ್ಧ ಹೋರಾಡಲು ನೆರವಾಯಿತು. ದಾಳಿಂಬೆ ಹಣ್ಣಿನ ಜ್ಯೂಸ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳು ಕ್ಯಾನ್ಸರ್ ಗಡ್ಡೆಗಳು ಹರಡದಂತೆ ತಡೆಯುವುದು ಮತ್ತು ಪ್ರಾಸ್ಟೇಟ್ ಕ್ಯಾನ್ಸರ್ ನ್ನು ಮೂಳೆಗೆ ಹರಡುವಂತಹ ಕ್ರಿಯೆ ಉತ್ತೇಜನ ನೀಡುವಂತಹ ರಾಸಾಯನಿಕದತ್ತ ಆಕರ್ಷಣೆ ಆಗುವುದನ್ನು ಇದು ದುರ್ಬಲಗೊಳಿಸುವುದು.

  Most Read: ಪ್ರಾಸ್ಟೇಟ್ ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವ ಆಹಾರಗಳು


 • ಕ್ರಿಯಾತ್ಮಕ ಅಂಶಗಳು ಪತ್ತೆಯಾಯಿತು

  ಜೀವಕೋಶಗಳು ಅಂಟಿಕೊಳ್ಳುವ ಮತ್ತು ಅದು ಸ್ಥಳಾಂತರ ಆಗುವುದನ್ನು ಕಡಿಮೆ ಮಾಡುವಂತಹ ಅಂಶವು ದಾಳಿಂಬೆ ಜ್ಯೂಸ್ ನಲ್ಲಿ ಪತ್ತೆ ಮಾಡಲಾಯಿತು. ಹೈಡ್ರೊಬೆನ್ಜೋಯಿಕ್ ಆಮ್ಲಗಳು, ಫೀನೈಲ್ಪ್ರೊಪೋನಾಯ್ಡ ಗಳು, ಫ್ಲೇವನ್ಸ್ ಮತ್ತು ಕೆಲವು ಸಂಯೋಜಿತ ಕೊಬ್ಬಿನಾಮ್ಲಗಳು ದಾಳಿಂಬೆ ಜ್ಯೂಸ್ ನಲ್ಲಿ ಪತ್ತೆಯಾದರು. ದಾಳಿಂಬೆ ಜ್ಯೂಸ್ ನಲ್ಲಿ ಒಂದು ಸಲ ಈ ಕ್ರಿಯಾತ್ಮಕವಾದ ಅಂಶಗಳು ಪತ್ತೆಯಾದ ಬಳಿಕ ಮಾರ್ಟಿನ್ಸ್ ಗ್ರೀನ್ ಅವರು ಪ್ರಾಸ್ಟೇಟ್ ಕ್ಯಾನ್ಸರ್ ಹರಡುವುದು ಮತ್ತು ಅದು ತನ್ನ ಕಾರ್ಯವನ್ನು ಹೆಚ್ಚಿಸುವುದನ್ನು ತಡೆಯಲು ತುಂಬಾ ಪರಿಣಾಮಕಾರಿಯಾಗಿ ಪ್ರಯತ್ನಿಸಲು ಸಾಧ್ಯವಾಯಿತು.


 • ಸಮಾನ ಪ್ರೋಟೀನ್‌ಗಳು

  ಪ್ರಾಸ್ಟೇಟ್ ಕ್ಯಾನ್ಸರ್ ನ ಕೋಶಗಳ ಚಟುವಟಿಕೆಯಲ್ಲಿ ಕಂಡು ಬಂದಿರುವಂತಹ ಕೆಲವೊಂದು ಜಿನ್ ಹಾಗೂ ಪ್ರೋಟೀನ್ ಗಳು ಇತರ ಕೆಲವೊಂದು ವಿಧದ ಕ್ಯಾನ್ಸರ್ ನಲ್ಲೂ ಕಂಡುಬಂದಿದೆ. ದಾಳಿಂಬೆ ಜ್ಯೂಸ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಿಕೊಂಡು ಬೇರೆ ವಿಧದ ಕ್ಯಾನ್ಸರ್ ನ ಚಿಕಿತ್ಸೆ ಬಳಸಿಕೊಳ್ಳಬಹುದು ಎಂದು ಆಕೆ ಮಾಹಿತಿ ನೀಡಿದ್ದಾರೆ. ಅಸ್ಥಿಮಜ್ಜೆಯು ಉತ್ಪತ್ತಿ ಮಾಡುವಂತಹ ಕೆಲವೊಂದು ಪ್ರೋಟೀನ್ ನಿಂದಾಗಿ ಕ್ಯಾನ್ಸರ್ ಕೋಶಗಳು ನಿಜವಾದ ಮೂಳೆಗಳಿಗೆ ಸ್ಥಳಾಂತರ ಆಗುವಂತೆ ಮಾಡುವುದು. ಇಲ್ಲಿ ಅದು ಮತ್ತೆ ಹೊಸ ಗಡ್ಡೆಗಳನ್ನು ನಿರ್ಮಿಸಬೇಕು.

  Most Read: ಪ್ರತಿದಿನ ಒಂದು ಗ್ಲಾಸ್ ದಾಳಿಂಬೆ ಜ್ಯೂಸ್ ಕುಡಿಯಿರಿ, ಆರೋಗ್ಯವಾಗಿರಿ


 • ತಜ್ಞರು ಹೇಳುವ ಪ್ರಕಾರ

  ತಜ್ಞರು ಹೇಳುವ ಪ್ರಕಾರ ದಾಳಿಂಬೆ ಜ್ಯೂಸ್ ನಲ್ಲಿ ಇರುವಂತಹ ಕೆಲವೊಂದು ಅಂಶಗಳನ್ನು ಮಾರ್ಪಾಡು ಮಾಡಿದ ಪರಿಣಾವಾಗಿ ಅದು ಈ ಪ್ರೋಟೀನ್ ನ ಕಾರ್ಯ ಚಟುವಟಿಕೆ ಮೇಲೆ ಪರಿಣಾಮ ಬೀರಿದೆ ಮತ್ತು ಹೀಗೆ ಮಾಡುವ ಕಾರಣದಿಂದಾಗಿ ಮೂಳೆಗಳಿಗೆ ಕ್ಯಾನ್ಸರ್ ಕೋಶಗಳು ಹರಡದಂತೆ ತಡೆಯುವಂತಹ ನಿಜವಾದ ಸಾಮರ್ಥ್ಯವು ಬರುವುದು. ವಿಶ್ವವಿದ್ಯಾನಿಲಯದಲ್ಲಿ ಈ ಬಗ್ಗೆ ಸಂಶೋಧನೆಗಳೂ ಮುಂದುವರಿದೆ ಮತ್ತು ಯಾವುದೇ ಸಮಸ್ಯೆಯಿಂದಾಗಿ ಉಂಟಾಗುವ ಅಡ್ಡಪರಿಣಾಮಗಳನ್ನು ತಡೆಯಲು ಇದರ ಅಂಶಗಳನ್ನು ಮಾರ್ಪಾಡು ಮಾಡುವುದರಿಂದ ಸಾಧ್ಯವೇ ಎಂದು ತಿಳಿದು ಕೊಳ್ಳಲು ಪ್ರಯತ್ನಿಸುತ್ತಿದ್ದಾರೆ. ಈ ವರದಿಯನ್ನು ಅಮೆರಿಕನ್ ಸೊಸೈಟಿ ಫಾರ್ ಸೆಲ್ ಬಯಾಲಜಿಯ 50ನೇ ವಾರ್ಷಿಕ ಸಭೆಯಲ್ಲಿ ಪ್ರಸ್ತುತಪಡಿಸಲಾಯಿತು.
ಕ್ಯಾನ್ಸರ್ ಎನ್ನುವ ಮಹಾಮಾರಿಯು ವಿಶ್ವದಲ್ಲಿ ವರ್ಷಕ್ಕೆ ಲಕ್ಷಾಂತರ ಮಂದಿಯ ಪ್ರಾಣ ಬಲಿ ಪಡೆಯುತ್ತಿದೆ. ಕ್ಯಾನ್ಸರ್ ಎನ್ನುವ ಹೆಸರು ಕೇಳಿದರೆ ಬೆಚ್ಚಿ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಯಾಕೆಂದರೆ ಯಾರಿಗೆ, ಯಾವಾಗ ಮತ್ತು ಹೇಗೆ ಕ್ಯಾನ್ಸರ್ ವಕ್ಕರಿಸಿಕೊಳ್ಳುವುದು ಎಂದು ಹೇಳಲು ಸಾಧ್ಯ ಆಗದು. ಕ್ಯಾನ್ಸರ್ ನಲ್ಲಿ ಹಲವಾರು ವಿಧಗಳಿವೆ. ದಿನಕ್ಕೊಂದು ಕ್ಯಾನ್ಸರ್ ನ್ನು ವೈದ್ಯಕೀಯ ಲೋಕವು ಪತ್ತೆ ಮಾಡಿಕೊಂಡು, ಅದಕ್ಕೆ ಚಿಕಿತ್ಸೆ ಮಾಡಲು ಪ್ರಯತ್ನಿಸುತ್ತಿದೆ. ಹೀಗಿರುವ ವೇಳೆ ಪ್ರಾಸ್ಟ್ರೇಟ್ ಕ್ಯಾನ್ಸರ್ ಎನ್ನುವುದು ಇದರಲ್ಲಿ ಒಂದಾಗಿದೆ.

ಇದು ತುಂಬಾ ಪ್ರಾಣ ಹಾನಿ ಉಂಟು ಮಾಡುವಂತಹ ಕ್ಯಾನ್ಸರ್ ಆಗಿದೆ. ಇದಕ್ಕೆ ಚಿಕಿತ್ಸೆ ತುಂಬಾ ಒತ್ತಡ ಹಾಗೂ ನೋವಿನಿಂದ ಕೂಡಿರುವುದು. ಶಸ್ತ್ರಚಿಕಿತ್ಸೆ ಅಥವಾ ವಿಕಿರಣ ಚಿಕಿತ್ಸೆ ಬಳಿಕ ಇದು ಮರಳಿ ಬಂದರೆ, ವೈದ್ಯರು ಈ ವೇಳೆ ಆ ರೋಗಿಯ ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಕಡಿಮೆ ಮಾಡುವರು. ಯಾಕೆಂದರೆ ಕ್ಯಾನ್ಸರ್ ಬೆಳೆಯಲು ಟೆಸ್ಟೊಸ್ಟೆರಾನ್ ಅಗತ್ಯವಾಗಿ ಬೇಕು. ಆದರೆ ಈ ಚಿಕಿತ್ಸೆಯನ್ನು ತಡೆಯುವಂತಹ ಶಕ್ತಿಯು ಕ್ಯಾನ್ಸರ್ ಗೆ ಇದೆ ಮತ್ತು ಇದರಿಂದ ಅದು ಮೂಳೆಮಜ್ಜೆ, ಶ್ವಾಸಕೋಶ, ದುಗ್ಡರಸ ಗ್ರಂಥಿಗಳಿಗೆ ಹರಡಿ, ಅದರಿಂದ ಪ್ರಾಣಹಾನಿ ಸಂಭವಿಸುವ ಸಾಧ್ಯತೆಯು ಇರುವುದು.

   
 
ಹೆಲ್ತ್