Back
Home » ಆರೋಗ್ಯ
ಅಜೀರ್ಣತೆ ಮತ್ತು ಮಲಬದ್ಧತೆ ಸಮಸ್ಯೆ ಇದೆಯೇ? ಒಂದು ಗ್ಲಾಸ್ 'ಕೊತ್ತಂಬರಿ' ನೆನೆಸಿಟ್ಟ ನೀರು ಕುಡಿಯಿರಿ
Boldsky | 16th Mar, 2019 12:20 PM
 • ಕೊತ್ತಂಬರಿ ಬೀಜ ಮಾನವರಿಗೆ ಗೊತ್ತಿದ್ದ ಅತಿ ಪುರಾತನವಾದ ಸಾಂಬಾರ ಪದಾರ್ಥ

  ಮಾನವರಿಗೆ ಸಾವಿರಾರು ವರ್ಷಗಳಿಂದ ಪರಿಚಿತವಾಗಿರುವ ಸಾಂಬಾರ ವಸ್ತುಗಳಲ್ಲಿ ಧನಿಯ ಅಥವಾ ಕೊತ್ತಂಬರಿ ಸಹಾ ಒಂದು. ಪವಿತ್ರ ಬೈಬಲ್ ನಲ್ಲಿ ಸಹಾ ಕೊತ್ತಂಬರಿಯ ಉಲ್ಲೇಖವಿದೆ ಹಾಗೂ ಕೇವಲ ಭಾರತವಲ್ಲ, ವಿಶ್ವದ ಬಹುತೇಕ ಎಲ್ಲಾ ದೇಶಗಳಲ್ಲಿ ಕೊತ್ತಂಬರಿಯನ್ನು ಪ್ರಮುಖ ಸಾಮಾಗ್ರಿಯಾಗಿ ಅಡುಗೆಯಲ್ಲಿ ಬಳಲಾಗುತ್ತಿದೆ. ಇದರ ಗುಣವನ್ನು ಕಂಡುಕೊಂಡಿರುವ ಆಯುರ್ವೇದ ಹಲವಾರು ಔಷಧಿಗಳ ರೂಪದಲ್ಲಿ ಕೊತ್ತಂಬರಿ ನೆನೆಸಿಟ್ಟ ನೀರನ್ನು ಸೇವಿಸಲು ಸಲಹೆ ಮಾಡುತ್ತದೆ. ಕೊತ್ತಂಬರಿಯ ಔಷಧೀಯ ಗುಣಗಳ ಜೊತೆಗೇ ಇದರ ರುಚಿಯಿಂದಾಗಿ ನಮ್ಮ ಅಡುಗೆಗಳಿಗೆ ಧನಿಯ ಅನಿವಾರ್ಯ ಎಂಬಂತಾಗಿಬಿಟ್ಟಿದೆ. ಕೊತ್ತಂಬರಿಯ ಸೇವನೆಯಿಂದ ಅಧಿಕ ರಕ್ತದೊತ್ತಡ ನಿಯಂತ್ರಣದಲ್ಲಿರಿಸುವುದರ ಜೊತೆಗೇ ರಕ್ತದಲ್ಲಿ ಸಕ್ಕರೆಯ ಮಟ್ಟವನ್ನೂ ಆರೋಗ್ಯಕರ ಮಟ್ಟದಲ್ಲಿರಿಸಲು ನೆರವಾಗುತ್ತದೆ. ಅಷ್ಟೇ ಅಲ್ಲ, ಕಣ್ಣಿನ ದೃಷ್ಟಿಯನ್ನು ಉತ್ತಮಗೊಳಿಸಲು, ತ್ವಚೆಯ ಆರೋಗ್ಯವನ್ನು ನೈಸರ್ಗಿಕವಾಗಿ ಉತ್ತಮಗೊಳಿಸಲು ನೆರವಾಗುತ್ತದೆ. ಈ ಗುಣಗಳನ್ನು ಕೊತ್ತಂಬರಿಯ ಬೀಜಗಳ ಸಹಿತ ಕೊತ್ತಂಬರಿಯ ಎಲೆಗಳಲ್ಲೂ ಕಾಣಬಹುದು. ವಿಶೇಷವಾಗಿ ಕೊತ್ತಂಬರಿಯ ಬೀಜಗಳು ಮತ್ತು ತಾಜಾ ಎಲೆಗಳು ಅಜೀರ್ಣತೆ ಮತ್ತು ಹೊಟ್ಟೆಯುರಿಯನ್ನು ಶಮನಗೊಳಿಸುವ ಗುಣ ಹೊಂದಿವೆ. ಈ ಎಲೆ ಮತ್ತು ಬೀಜಗಳಲ್ಲಿರುವ ಪೋಷಕಾಂಶಗಳು ಜಠರದಲ್ಲಿ ಜೀರ್ಣರಸಗಳು ಮತ್ತು ಕಿಣ್ವಗಳನ್ನು ಸ್ರವಿಸಲು ಉತ್ತೇಜಿಸುತ್ತವೆ ಹಾಗೂ ಇವು ಜೀರ್ಣಕ್ರಿಯೆಯನ್ನು ಆರೋಗ್ಯಕರವಾಗಿಸುತ್ತವೆ. ತನ್ಮೂಲಕ ವಾಯುಪ್ರಕೋಪ, ಹೊಟ್ಟೆಯುರಿ, ಹೊಟ್ಟೆಯುಬ್ಬರಿಕೆ, ಹುಳಿತೇಗು, ವಾಕರಿಕೆ ಮೊದಲಾದವುಗಳಿಂದ ರಕ್ಷಿಸುತ್ತವೆ.

  Most Read: ಒಂದೆರಡು ದಿನಗಳಲ್ಲಿ ಮಲಬದ್ಧತೆ ಸಮಸ್ಯೆ ನಿಯಂತ್ರಿಸುವ ಅಡುಗೆಮನೆಯ ಸಾಮಾಗ್ರಿಗಳು


 • ಆರೋಗ್ಯ ತಜ್ಞರ ಪ್ರಕಾರ

  ಆರೋಗ್ಯ ತಜ್ಞರ ವಿವರಿಸುವ ಪ್ರಕಾರ ಧನಿಯದ ಬೀಜಗಳಲ್ಲಿ ಆಂಟಿ ಆಕ್ಸಿಡೆಂಟುಗಳು ಹಾಗೂ ಕರಗದ ನಾರು ಉತ್ತಮ ಪ್ರಮಾಣದಲ್ಲಿವೆ. ಇವು ಜೀರ್ಣಾಂಗಗಳಲ್ಲಿ ಆಹಾರ ಸುಲಭವಾಗಿ ಚಲಿಸಲು ಹಾಗೂ ಯಕೃತ್ ನ ಕಾರ್ಯಕ್ಷಮತೆಯನ್ನು ಉತ್ತಮಗೊಳಿಸಲು ನೆರವಾಗುತ್ತವೆ. ವಿಶೇಷವಾಗಿ ಕರಗದ ನಾರು ಕರುಳುಗಳಲ್ಲಿ ತ್ಯಾಜ್ಯ ಮೆದುವಾಗಿರಲು ಹಾಗೂ ಸುಲಭ ವಿಸರ್ಜನೆಗೆ ನೆರವಾಗುತ್ತದೆ.

  Most Read: ಸೌಂದರ್ಯ ವೃದ್ಧಿಗೆ ಕೊತ್ತಂಬರಿ ಸೊಪ್ಪಿನ ಚಿಕಿತ್ಸೆ


 • ಮಲಬದ್ಧತೆ ಸಮಸ್ಯೆ ಇದ್ದರೆ

  ಮಲಬದ್ಧತೆಯನ್ನು ನಿಯಂತ್ರಿಸಲು ಧನಿಯ ಅತಿ ಉತ್ತಮ ಆಯ್ಕೆಯಾಗಿದೆ. ಈ ವಿಷಯಕ್ಕೆ ಪುಷ್ಟಿ ನೀಡಲು ಅವರು ಪೆನ್ಸಿಲ್ವೇನಿಯಾದಲ್ಲಿರುವ ತಮ್ಮ ದವಾಖಾನೆಯಲ್ಲಿ ನಡೆಸಿದ ಒಂದು ಅಧ್ಯಯನದಲ್ಲಿ ಎಂಭತ್ತಾರು ಜನರಿಗೆ ಧನಿಯ ನೆನೆಸಿಟ್ಟ ನೀರಿನಿಂದ ತಯಾರಿಸಿದ ಟೀ ಅಥವಾ ಪ್ಲಾಸೆಬೋ ಟೀ ಯನ್ನು ಸತತವಾಗಿ ಒಂದು ತಿಂಗಳು ಕುಡಿಯುವಂತೆ ಸೂಚಿಸಿದ್ದರು. ಒಂದು ತಿಂಗಳ ಬಳಿಕ ಇವರಲ್ಲಿ ಕೊತ್ತಂಬರಿ ನೀರಿನ ಟೀ ಕುಡಿದವರು ತಮಗೆ ಈಗ ಮಲವಿಸರ್ಜನೆ ಅತಿ ಸುಲಭವಾಗಿ ಆಗುತ್ತಿದೆ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದರು. ಬನ್ನಿ, ಧನಿಯ ಬೀಜಗಳ ಈ ಗುಣವನ್ನು ಪಡೆದುಕೊಳ್ಳುವ ಸುಲಭ ಮನೆಮದ್ದನ್ನು ತಯಾರಿಸುವ ವಿಧಾನವನ್ನು ಅರಿಯೋಣ.


 • ಮನೆಮದ್ದು

  1. ಸುಮಾರು ಹತ್ತು ಗ್ರಾಂ ನಷ್ಟು ಧನಿಯ ಬೀಜಗಳನ್ನು ಕುಟ್ಟಿ ಪುಡಿಮಾಡಿ.
  2. ಒಂದು ಲೀಟರ್ ನೀರಿನಲ್ಲಿ ಈ ಪುಡಿಯನ್ನು ಬೆರೆಸಿ
  3. ಈ ನೀರನ್ನು ರಾತ್ರಿಯಿಡೀ ಹಾಗೇ ನೆನೆಯಲು ಬಿಡಿ.
  4. ಮರುದಿನ ಬೆಳಿಗ್ಗೆ ಈ ನೀರನ್ನು ಸೋಸಿ ಅಷ್ಟೂ ನೀರನ್ನು ಪ್ರಥಮ ಆಹಾರವಾಗಿ ಕುಡಿದರೆ ಅತ್ಯುತ್ತಮ ಪರಿಣಾಮ ಪಡೆಯಬಹುದು.
  5. ಬೆಳಿಗ್ಗೆ ಸಾಧ್ಯವಾಗದೇ ಹೋದರೆ ಮರುದಿನದ ಅವಧಿಯಲ್ಲಿ ಈ ನೀರನ್ನು ಕೊಂಚ ಕೊಂಚವಾಗಿ ಇಡಿ ದಿನ ಸೇವಿಸಲೂಬಹುದು.




ಕೆಲವು ಅನಾರೋಗ್ಯಗಳ ಬಗ್ಗೆ ನಾವು ಸಾರ್ವಜನಿಕವಾಗಲೀ, ಆತ್ಮೀಯರೊಡನೆಯಾಗಲೀ ಹೇಳಿಕೊಳ್ಳಲಾಗದಷ್ಟು ಮುಜುಗರ ತರಿಸುವಂತಹದ್ದಿರುತ್ತವೆ. ವಾಯುಪ್ರಕೋಪ ಇದರಲ್ಲಿ ಪ್ರಮುಖವಾದರೆ ಅಜೀರ್ಣತೆ ಮತ್ತು ಮಲಬದ್ದತೆ ಇನ್ನೆರಡು ವಿಷಯಗಳಾಗಿವೆ. ಆದರೆ ಇದು ಸಾಮಾನ್ಯವಾಗಿ ಕಾಡುವ ತೊಂದರೆಯಾಗಿದ್ದು ಈ ಬಗ್ಗೆ ಚರ್ಚಿಸುವುದು ಅಗತ್ಯವಾಗಿದೆ. ಒಂದು ಸಮೀಕ್ಷೆಯಯ ಪ್ರಕಾರ 22ಶೇಖಡಾ ಭಾರತೀಯ ವ್ಯಕ್ತಿಗಳಿಗೆ ಈ ತೊಂದರೆ ಇದೆ. ಯಾರೊಂದಿಗೂ ಹೇಳಿಕೊಳ್ಳದೇ, ಮಾಡಿರುವ ಕೆಲವು ಚಿಕಿತ್ಸೆಗಳೂ ಫಲಕಾರಿಯಾಗದೇ ಈ ತೊಂದರೆಯನ್ನು ಮೌನವಾಗಿಯೇ ವರ್ಷಗಟ್ಟಲೇ ಸಹಿಸಿಕೊಂಡು ಬರುತ್ತಿದ್ದಾರೆ. ಆದರೆ ಈ ಸ್ಥಿತಿಯನ್ನು ಕೆಲವು ಸುಲಭ ಮನೆಮದ್ದುಗಳಿಂದಲೇ ಗುಣಪಡಿಸಬಹುದು. ಆದರೆ, ಯಾವುದಕ್ಕೂ ಈ ಸ್ಥಿತಿಯನ್ನು ವೈದ್ಯರಿಗೆ ತಿಳಿಸಿ ಸೂಕ್ತ ಚಿಕಿತ್ಸೆಯನ್ನು ಪಡೆಯಬೇಕು ಹಾಗೂ ಆದಷ್ಟೂ ನೈಸರ್ಗಿಕ ಸಮಾಗ್ರಿಗಳಿರುವ ಔಷಧಿಗಳನ್ನೇ ಪಡೆಯಬೇಕು.

   
 
ಹೆಲ್ತ್