Back
Home » ಇತ್ತೀಚಿನ
ಶಾಕಿಂಗ್ ನ್ಯೂಸ್!..ಗೂಗಲ್‌ಗೆ 11,560 ಸಾವಿರ ಕೋಟಿ ದಂಡ!
Gizbot | 21st Mar, 2019 10:02 AM

ಆನ್​ಲೈನ್​ ಜಾಹೀರಾತು ಹುಡುಕಾಟದಲ್ಲಿ ಗೂಗಲ್ ಸಂಸ್ಥೆಯು ಅಡ್ವಾನ್ಸ್ ಹುಡುಕಾಟಕ್ಕೆ ಜನರನ್ನು ಪ್ರತ್ಯೇಕವಾಗಿ ಗುರಿಪಡಿಸುವ ಮೂಲಕ ಜಾಹೀರಾತು ದಲ್ಲಾಳಿಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಿಂದ ನಿರ್ದಿಷ್ಟ ಕಂಪೆನಿಗಳನ್ನು ಗೂಗಲ್ ಪ್ರೋತ್ಸಾಹಿಸಿದಂತಾಗುತ್ತಿದೆ ಎಂದು ಜನಪ್ರಿಯ ಸರ್ಚ್​ ಇಂಜಿನ್ ಸಂಸ್ಥೆ ಗೂಗಲ್​ಗೆ 1.49 ಬಿಲಿಯನ್ ಯುರೋ ( ಸುಮಾರು 11,560 ಕೋಟಿ ರೂ.) ದಂಡ ವಿಧಿಸಲಾಗಿದೆ. ಇದು ಗೂಗಲ್ ಕಂಪೆನಿಯ 2018ನೇ ವರ್ಷದ ವಹಿವಾಟಿನ ಶೇ. 1.29 ರಷ್ಟು ಎಂದು ತಿಳಿದುಬಂದಿದೆ.

ಹೌದು, ಆನ್​ಲೈನ್​ ಹುಡುಕಾಟದಲ್ಲಿ ಜಾಹೀರಾತುಗಳ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿರುವ ಗೂಗಲ್, ಸ್ಪರ್ಧಾತ್ಮಕ ಒತ್ತಡದಿಂದ ಥರ್ಡ್​ ಪಾರ್ಟಿ ವೆಬ್​ಸೈಟ್​ಗಳ ಸ್ಪರ್ಧಾತ್ಮಕ ಒಪ್ಪಂದದ ನಿಯಮಗಳನ್ನು ಮೀರಿದೆ. ಹಾಗಾಗಿ, ಇದೊಂದು ಅಸಂವಿಧಾನಿಕ ವ್ಯವಹಾರ ಕ್ರಮ ಎಂದು ಯುರೋಪಿಯನ್​ ಒಕ್ಕೂಟ ತೀರ್ಮಾನಿದ್ದು, ಯುರೋಪಿಯನ್​ ಒಕ್ಕೂಟದ​ ವ್ಯವಹಾರದಲ್ಲಿ ಗೂಗಲ್ ಸಂಸ್ಥೆಯು ಅವಿಶ್ವಾಸದಿಂದ ವ್ಯವಹರಿಸಿರುವುದರಿಂದ ಭಾರೀ ದಂಡವನ್ನು ವಿಧಿಸಲಾಗಿದೆ ಎಂದು ಒಕ್ಕೂಟ ತಿಳಿಸಿದೆ.

ಈ ಪ್ರಕರಣರವು ವೆಬ್​ಸೈಟ್, ನ್ಯೂಸ್​ಪೇಪರ್ ಅಥವಾ ಟ್ರಾವೆಲ್ ಸೈಟ್​ಗಳಲ್ಲಿ ಗೂಗಲ್ ಜಾಹೀರಾತಿಗೆ ಸಂಬಂಧಿಸಿದಾಗಿದ್ದು, ಇಂತಹ ಸೈಟ್​ಗಳಿಗೆ ಗೂಗಲ್ ಅಡ್ವಾನ್ಸ್ ಫರ್ ಸರ್ಚ್​ ಮೂಲಕ ಜಾಹೀರಾತುಗಳನ್ನು ಒದಗಿಸುತ್ತಿದೆ. ಇದರಲ್ಲಿ ವಿಶ್ವದ ಪ್ರಸಿದ್ಧ ತನ್ನ ಪ್ರತಿಸ್ಫರ್ಧಿ ಜಾಹೀರಾತುಗಳನ್ನು ​ಬ್ಲಾಕ್ ಮಾಡಿದಂತೆ ಕಂಡುಬಂದಿದೆ. ಹಾಗಾಗಿ, ಇದೊಂದು ಅಸಂವಿಧಾನಿಕ ವ್ಯವಹಾರ ಕ್ರಮ ಎಂದು ಯುರೋಪಿಯನ್ ಕಾಂಪಿಟೇಶನ್ ಕಮಿಷನರ್ ಮಾರ್ಗರೇಡಟ್ ವೆಸ್ಟೆಗರ್ ಅವರು ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಸ್ಪರ್ಧಾತ್ಮಕ ವಹಿವಾಟಿನಿಂದ ಹಿಂದೆ ಸರಿದು ವ್ಯವಹಾರ ನಡೆಸುತ್ತಿರುವ ಗೂಗಲ್ ಸಂಸ್ಥೆಯನ್ನು ತನಿಖೆಗೊಳಪಡಿಸಿ ಈ ತೀರ್ಪು ನೀಡಲಾಗಿದೆ. ಜಾಹೀರಾತುಗಳ ಪ್ರಾಬಲ್ಯವನ್ನು ದುರುಪಯೋಗಪಡಿಸಿಕೊಂಡಿರುವ ಗೂಗಲ್, ಸ್ಪರ್ಧಾತ್ಮಕ ಮಾರುಕಟ್ಟೆಯನ್ನು ಮಾತ್ರವಲ್ಲದೆ ತನ್ನ ಗ್ರಾಹಕರನ್ನು ನಿಯಂತ್ರಿಸಿದಂತಾಗುತ್ತದೆ ಎಂದು ಯುರೋಪಿಯನ್ ಒಕ್ಕೂಟ ಕಮಿಷನ್ ಅಧಿಕಾರಿ ತಿಳಿಸಿದ್ದಾರೆ. ಇದು ಒಂದು ರೀತಿಯಲ್ಲಿ ಏಕಸ್ವಾಮ್ಯದ ಆಲೋಚನೆಗಳಂತಿದೆ ಎಂದು ಯುರೋಪಿಯನ್ ಕಮಿಷನ್​ ತಿಳಿಸಿದೆ.

ಗೂಗಲ್‌ಗೆ ಇದುವರೆಗೂ ವಿಧಿಸಲಾಗಿದ್ದ ದಂಡಗಳಲ್ಲಿ ಇದು ಎರಡನೇ ಭಾರೀ ಪ್ರಮಾಣದ ದಂಡವಾಗಿದ್ದು, ಈ ಹಿಂದೆ ಕೂಡ ಗೂಗಲ್ ಸಂಸ್ಥೆಗೆ ನಂಬಿಕಾ ದ್ರೋಹ ಮಾಡಿದ ಪ್ರಕರಣವೊಂದರಲ್ಲಿ ಯೂರೋಪಿಯನ್ ಒಕ್ಕೂಟ ಸರಿಸುಮಾರು 16 ಸಾವಿರ ಕೋಟಿ ರೂ. (2.7 ಬಿಲಿಯನ್ ಡಾಲರ್) ದಂಡ ವಿಧಿಸಿತ್ತು. ಇದು ಕಂಪೆನಿಯೊಂದಕ್ಕೆ ವಿಧಿಸಲಾಗುತ್ತಿರುವ ಮೂರನೇ ಅತೀ ದೊಡ್ಡ ದಂಡ ಎಂದು ಮಾಧ್ಯಮ ವರದಿಗಳು ತಿಳಿಸಿವೆ.

ಓದಿರಿ: ಪ್ರತಿದಿನ 'ನೋಟ್ 7' ಸೇಲ್ ಆಗುತ್ತಿರುವ ಸಂಖ್ಯೆ ಕೇಳಿ ನೀವು ಮೂರ್ಚೆಹೋಗಬಹುದು!

   
 
ಹೆಲ್ತ್