Back
Home » ಗಾಸಿಪ್
ದರ್ಶನ್-ಯಶ್ ಪ್ರಚಾರಕ್ಕೆ ಮಾಸ್ಟರ್ ಪ್ಲಾನ್ ಮಾಡಿರುವ ಸುಮಲತಾ
Oneindia | 30th Mar, 2019 10:18 AM
 • 2ರಿಂದ 16ರ ವರೆಗೂ ಪ್ರಚಾರ

  ಸದ್ಯದ ಮಾಹಿತಿಯ ಪ್ರಕಾರ ದರ್ಶನ್ ಮತ್ತು ಯಶ್ ಏಪ್ರಿಲ್ 2 ರಿಂದ ಪ್ರಚಾರ ಆರಂಭಿಸುತ್ತಿದ್ದು 16ನೇ ತಾರೀಖಿನವರೆಗೂ ಸುಮಲತಾ ಪರ ಮತಯಾಚನೆ ಮಾಡಲಿದ್ದಾರಂತೆ. 16ರಂದು ಬೃಹತ್ ಜಾಥ ಹಮ್ಮಿಕೊಳ್ಳಲಾಗಿದ್ದು, ಅಂದು ಬಹಿರಂಗ ಸಭೆ ನಡೆಸುವ ಯೋಜನೆ ಹಾಕಲಾಗಿದೆಯಂತೆ.

  ನಮ್ಮ ಜೋಡೆತ್ತುಗಳ ಎದುರು ಯಾವ ಎತ್ತುಗಳು ಗೆಲ್ಲುತ್ತೆ ನೋಡೋಣ: ಸುಮಲತಾ


 • ನಾಲ್ಕು ಜನ ನಾಲ್ಕು ದಿಕ್ಕಿನಲ್ಲಿ ಪ್ರಚಾರ

  ಬಹುಶಃ ದರ್ಶನ್, ಯಶ್, ಸುಮಲತಾ ಮತ್ತು ಅಭಿಷೇಕ್ ಅಂಬರೀಶ್ ಎಲ್ಲರೂ ಒಟ್ಟಾಗಿ ಪ್ರಚಾರ ಮಾಡ್ತಾರೆ ಎನ್ನಲಾಗಿದೆ. ಆದ್ರೆ, ನಾಲ್ಕು ಜನರು ನಾಲ್ಕು ದಿಕ್ಕಿನಲ್ಲಿ ಪ್ರತ್ಯೇಕವಾಗಿ ಪ್ರಚಾರ ಮಾಡುವ ಸಾಧ್ಯತೆ ಇದೆಯಂತೆ. ಎಲ್ಲರೂ ಒಂದೆ ಕಡೆ ಪ್ರಚಾರ ಮಾಡಿದ್ರೆ, ಎಲ್ಲ ಊರುಗಳನ್ನ ತಲುಪಲು ಕಷ್ಟವಾಗುವ ಕಾರಣ, ಬಾಕಿ ಉಳಿದಿರುವ ದಿನದಲ್ಲಿ ಮಂಡ್ಯದ ಎಲ್ಲಾ ಕಡೆಯೂ ಜನರನ್ನ ಸೆಳೆಯುವುದು ಉದ್ದೇಶವಾಗಿದೆ.


 • ನಾನ್ ಸ್ಟಾಪ್ ಪ್ರಚಾರ

  ಸಾಮಾನ್ಯವಾಗಿ ಸಿನಿಮಾ ನಟರು ಪ್ರಚಾರಕ್ಕೆಂದು ಬಂದ್ರೆ, ಒಂದು ದಿನ ಅಥವಾ ಎರಡು ದಿನ ಇರ್ತಾರೆ ಅಷ್ಟೇ. ಆದ್ರೆ, ಸುಮಲತಾ ಪರ ನಿಂತಿರುವ ದರ್ಶನ್ ಮತ್ತು ಯಶ್ ಪೂರ್ತಿ ಸಿನಿಮಾ ಮಾಡ್ತೀವಿ ಎಂದಿದ್ದರು. ಅದರಂತೆ 2ನೇ ತಾರೀಖಿನಿಂದ ನಾನ್ ಸ್ಟಾಪ್ ಪ್ರಚಾರ ಮಾಡಲು ಸಜ್ಜಾಗಿದ್ದಾರಂತೆ.

  'ಡಿ ಬಾಸ್' ಒಬ್ಬರೇ ಯಾಕೆ ಸಿಎಂಗೆ ಟಾರ್ಗೆಟ್, ಅದರ ಹಿಂದಿರುವ ಕಾರಣಗಳೇ ಬೇರೆ.!


 • ಮಂಡ್ಯದಲ್ಲಿ 18ಕ್ಕೆ ಮತದಾನ

  ಕರ್ನಾಟಕದಲ್ಲಿ ಎರಡು ಹಂತದ ಚುನಾವಣೆ ನಡೆಯುತ್ತಿದ್ದು, ಏಪ್ರಿಲ್ 18ಕ್ಕೆ ಮಂಡ್ಯ ಲೋಕಸಭೆ ಚುನಾವಣೆ ನಡೆಯಲಿದೆ. ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರ್ ಮತ್ತು ಪಕ್ಷೇತರ ಅಭ್ಯರ್ಥಿ ಸುಮಲತಾ ನಡುವೆ ನೇರವಾದ ಹಣಾಹಣಿ ನಡೆಯುತ್ತಿದೆ. ಗೆಲುವು ಇಬ್ಬರಿಗೂ ಸುಲಭವಲ್ಲ ಎಂಬ ಮಾತು ಕೇಳಿಬರ್ತಿದೆ.
ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಸುಮಲತಾ ಅಂಬರೀಶ್ ಗೆ ಸಂಪೂರ್ಣ ಬೆಂಬಲ ನೀಡಿರುವ ದರ್ಶನ್ ಮತ್ತು ಯಶ್ ಎಲ್ಲಿ ಎಂದು ಕೇಳುತ್ತಿದ್ದವರಿಗೆ ಈಗ ಉತ್ತರ ಸಿಕ್ಕಿದೆ.

ಎಲ್ಲವೂ ಪಕ್ಕಾ ಪ್ಲಾನ್ ಮಾಡಿ ಅಖಾಡಕ್ಕೆ ಧುಮುಕುತ್ತಿರುವ ಜೋಡೆತ್ತುಗಳು ಮಂಡ್ಯದಲ್ಲಿ ಹೇಗೆ ಪ್ರಚಾರ ಮಾಡ್ಬೇಕು ಎಂಬುದರ ಬಗ್ಗೆ ಪೂರ್ವ ಸಿದ್ಧತೆ ನಡೆಸಿದೆ. ಈಗಾಗಲೇ ಸುಮಲತಾ ಅವರು ಹೇಳಿರುವಂತೆ ಏಪ್ರಿಲ್ 2ನೇ ರಿಂದ ಜೋಡೆತ್ತುಗಳು ಪ್ರಚಾರ ಆರಂಭಿಸಲಿವೆ.

ಜೋಡೆತ್ತುಗಳು ಕಾಣೆಯಾಗಿದೆ ಎಂದು ಕೂಗುತ್ತಿರುವವರಿಗೆ ಸುಮಲತಾ ಸ್ಪಷ್ಟನೆ

ಸುಮಲತಾ ಪರ ಸ್ಟಾರ್ ಕ್ಯಾಂಪೈನರ್ ಆಗಿರುವ ಡಿ ಬಾಸ್, ಯಶ್, ಅಭಿಷೇಕ್ ಮೂವರಿಂದಲೂ ಪ್ರಚಾರ ನಡೆಯಲಿದ್ದು, ವೇಳಾಪಟ್ಟಿ ಸಜ್ಜಾಗಿದೆಯಂತೆ. ಹಾಗಿದ್ರೆ, ಜೋಡೆತ್ತುಗಳ ಅಬ್ಬರದ ಪ್ರಚಾರ ಎಲ್ಲಿ ಮತ್ತು ಯಾವಾಗ ಇರುತ್ತೆ? ಮುಂದೆ ಓದಿ.....

   
 
ಹೆಲ್ತ್