Back
Home » ಗಾಸಿಪ್
ಪ್ರಿಯಾಂಕಾ-ನಿಕ್ ಜೋನಸ್ ಡೈವೋರ್ಸ್? ಅಂತಾರಾಷ್ಟ್ರೀಯ ಮ್ಯಾಗಜಿನ್ ವರದಿ
Oneindia | 30th Mar, 2019 05:23 PM
 • ಪದೇ ಪದೇ ಕಿತ್ತಾಟವಂತೆ

  ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ನಡುವೆ ಎಲ್ಲ ವಿವಾರಕ್ಕೂ ವಾದ ನಡೆಯುತ್ತಂತೆ. ಪ್ರತಿಯೊಂದು ವಿಷ್ಯದಲ್ಲೂ ಇಬ್ಬರು ಕಿತ್ತಾಡ್ತಾರಂತೆ. ಪ್ರಿಯಾಂಕಾ ಸದಾ ಪಾರ್ಟಿ ಮೂಡ್ ನಲ್ಲೇ ಇರ್ತಾರಂತೆ. ಇದು ನಿಕ್ ಜೋನಸ್ ಕೋಪಕ್ಕೆ ಕಾರಣವಾಗಿದೆ. ಹಾಗಾಗಿ, ಡೈವೋರ್ಸ್ ಕೊಡಲು ಮುಂದಾಗಿದ್ದಾರೆ ಎಂದು ಓಕೆ ಮ್ಯಾಗಜಿನ್ ವರದಿ ಮಾಡಿದೆ.

  ಬೀಚ್ ನಲ್ಲಿ ಬಿಕಿನಿ ಧರಿಸಿ ಓಡಾಡುತ್ತಿರುವ ಪ್ರಿಯಾಂಕಾ ಚೋಪ್ರಾ


 • ವಯಸ್ಸಿನಲ್ಲಿ ಅಂತರ ಹೆಚ್ಚಿದೆ

  ಅಂದ್ಹಾಗೆ, ಪ್ರಿಯಾಂಕಾ ಚೋಪ್ರಾ ವಯಸ್ಸು 36, ನಿಕ್ ಜೋನಸ್ ವಯಸ್ಸು 26. ಇಬ್ಬರ ನಡುವೆ 10 ವರ್ಷಗಳ ಅಂತರವಿದೆ. ಅದರಲ್ಲೂ ನಿಕ್ ಜೋನಸ್ ಗಿಂತ ಪ್ರಿಯಾಂಕಾ ದೊಡ್ಡವರು. ಹಾಗಾಗಿ, ಇವರಿಬ್ಬರ ನಡುವೆ ಹೊಂದಾಣಿಕೆ ಕಷ್ಟ ಎಂಬ ಮಾತುಗಳ ಆರಂಭದಿಂದಲೂ ಸದ್ದು ಮಾಡ್ತಿದೆ. ಅದಕ್ಕೆ ಪುಷ್ಠಿ ಕೊಡುವಂತೆ ಈಗ ಆ ಮ್ಯಾಗಜಿನ್ ಸುದ್ದಿ ಮಾಡಿದೆ.


 • ಇದು ಸುಳ್ಳು ಸುದ್ದಿ ಎಂದ ಪಿಗ್ಗಿ ಆಪ್ತರು

  ಇನ್ನು ಸುದ್ದಿ ಬಗ್ಗೆ ಪ್ರಿಯಾಂಕಾ ಚೋಪ್ರಾ ಆಪ್ತರನ್ನ ಸಂಪರ್ಕಿಸಿದಾಗ, ಇದು ಸುಳ್ಳು ಸುದ್ದಿ, ಆ ಮ್ಯಾಗಜಿನ್ ವರದಿಯಲ್ಲಿ ಸತ್ಯವಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ. ಅಲ್ಲಿಗೆ ಪಿಗ್ಗಿ ಮತ್ತು ಪ್ರಿಯಾಂಕಾ ಅಭಿಮಾನಿಗಳು ಸ್ವಲ್ಪ ಮಟ್ಟಿಗೆ ಸಮಾಧಾನವಾಗಿದ್ದಾರೆ.

  ಪ್ರಿಯಾಂಕಾ ಛೋಪ್ರಾ-ನಿಕ್ ಜೋನಸ್ ಮದುವೆಯ ಫೋಟೋ ಆಲ್ಬಂ ಇಲ್ಲಿದೆ ನೋಡಿ


 • ಮಿಯಾಮಿ ಬೀಚ್ ನಲ್ಲಿ ಪಿಗ್ಗಿ-ನಿಕ್

  ಅಂದ್ಹಾಗೆ, ನಾಲ್ಕೈದು ದಿನದ ಹಿಂದೆ ಮಿಯಾಮಿ ಬೀಚ್ ನಲ್ಲಿ ನಿಕ್ ಜೋನಸ್ ಮತ್ತು ಪ್ರಿಯಾಂಕಾ ಚೋಪ್ರಾ ದಂಪತಿ ಸಮ್ಮರ್ ಹಾಲಿ ಡೇ ಎಂಜಾಯ್ ಮಾಡ್ತಿರುವ ಫೋಟೋ ಮತ್ತು ವಿಡಿಯೋವನ್ನ ಸ್ವತಃ ನಿಕ್ ಜೋನಸ್ ಶೇರ್ ಮಾಡಿದ್ದರು. ತುಂಬಾ ಆತ್ಮೀಯವಾಗಿ ಕಾಣಿಸಿಕೊಂಡ ಪಿಗ್ಗಿ ಮತ್ತು ನಿಕ್ ಸಂಬಂಧದಲ್ಲಿ ಬಿರುಕು ಮೂಡಿದೆ ಅಂದ್ರೆ ಅದು ನಂಬಲು ಸಾಧ್ಯವಿಲ್ಲ. ಬಹುಶಃ ಇದು ವದಂತಿಗಳೇ ಇರಬಹುದು ಎಂಬ ಅಭಿಪ್ರಾಯ ಅಭಿಮಾನಿಗಳದ್ದು.
ಬಾಲಿವುಡ್ ಸ್ಟಾರ್ ನಟಿ ಪ್ರಿಯಾಂಕಾ ಚೋಪ್ರಾ ಮತ್ತು ನಿಕ್ ಜೋನಸ್ ದಂಪತಿ ಬೇಡವಾದ ವಿಚಾರಕ್ಕೆ ಸುದ್ದಿಯಾಗಿದ್ದಾರೆ. ಮದುವೆ ಆಗಿ ಇನ್ನೂ ಅರ್ಧವರ್ಷ ಕಳೆದಿಲ್ಲ, ಅಷ್ಟರಲ್ಲೇ ತಾರಾ ದಂಪತಿಯ ಸಂಸಾರದಲ್ಲಿ ಬಿರುಕು ಉಂಟಾಗಿದೆ ಎಂಬ ಮಾತುಗಳು ಈಗ ಹೆಡ್ ಲೈನ್ ಆಗಿದೆ.

ಕಳೆದ ಡಿಸೆಂಬರ್ ತಿಂಗಳಲ್ಲಿ ಅದ್ಧೂರಿಯಾಗಿ ವಿವಾಹವಾಗಿದ್ದ ಪ್ರಿಯಾಂಕಾ ಮತ್ತು ನಿಕ್ ಜೋನಸ್ ನಡುವೆ ಮನಸ್ತಾಪ ಉಂಟಾಗಿದ್ದು, ಅದು ವಿಚ್ಛೇದನ ಮಟ್ಟಕ್ಕೆ ತಲುಪಿದೆಯಂತೆ.

'ನಾನು ನಿಕ್ ಜೋನಸ್ ಗೆ ಉತ್ತಮ ಪತ್ನಿ ಅಲ್ಲ': ಪ್ರಿಯಾಂಕಾ ಚೋಪ್ರಾ

ಹೀಗಂತ ಅಂತಾರಾಷ್ಟ್ರೀಯ ಮ್ಯಾಗಜಿನ್ ಒಂದು ವರದಿ ಮಾಡಿದೆ. ಈ ವರದಿ ನೋಡಿದ ಅಭಿಮಾನಿಗಳು ನಿಜಕ್ಕೂ ಅಚ್ಚರಿಗೊಳಗಾಗಿದ್ದಾರೆ. ನಾಲ್ಕು ತಿಂಗಳಲ್ಲೇ ಇವರಿಬ್ಬರ ದಾಂಪತ್ಯಕ್ಕೆ ಅದ್ಯಾರ ಕಣ್ಣು ಬಿತ್ತೋ ಎಂದು ಶಾಪ ಹಾಕ್ತಿದ್ದಾರೆ. ಆದ್ರೆ, ಅಸಲಿ ವಿಷ್ಯನೇ ಬೇರೆ. ಮುಂದೆ ಓದಿ.....

   
 
ಹೆಲ್ತ್