Back
Home » ಇತ್ತೀಚಿನ
ಶಿಯೋಮಿ ಸುನಾಮಿ: 7,999 ರೂ.ಗೆ 'ರೆಡ್‌ಮಿ 7'!..9,999 ರೂ.ಗೆ 'ರೆಡ್‌ಮಿ ವೈ3' ಲಾಂಚ್!
Gizbot | 24th Apr, 2019 03:40 PM
 • 'ರೆಡ್ಮಿ Y3' ಸ್ಮಾರ್ಟ್‌ಫೋನ್

  ಭಾರತದಲ್ಲಿ ಇಂದು 'ರೆಡ್ಮಿ Y3' ಸ್ಮಾರ್ಟ್‌ಫೋನ್ ಎರಡು ಮಾದರಿಗಳಲ್ಲಿ ಬಿಡುಗಡೆಯಾಗಿದ್ದು, 3 ಜಿಬಿ RAM + 32 ಜಿಬಿಮೆಮೊರಿ ಮತ್ತು 4 ಜಿಬಿ RAM + 64 ಜಿಬಿ ಮೆಮೊರಿ ಮಾದರಿಗಳಲ್ಲಿ ಸ್ಮಾರ್ಟ್‌ಫೋನ್ ಖರೀದಿಗೆ ಲಭ್ಯವಿದೆ. ಇನ್ನು ಎರಡೂ ಮಾದರಿ ಸ್ಮಾರ್ಟ್‌ಫೋನ್‌ಗಳ ಬೆಲೆ ಕ್ರಮವಾಗಿ 9,999 ಮತ್ತು 11,999 ರೂ.ಗಳಿಗೆ ಬಿಡುಗಡೆಯಾಗುವ ಮೂಲಕ ಗಮನಸೆಳೆದಿದೆ.


 • ಡಿಸ್‌ಪ್ಲೇ ಹೇಗಿದೆ?

  ಗೊರಿಲ್ಲಾ ಗಾಸ್ 5 ರಕ್ಷಣೆಯೊಂದಿಗೆ 6.26 ಇಂಚಿನ ಸ್ಕ್ರೀನ್ ಎಚ್‌ಡಿ ಡಿಸ್‌ಪ್ಲೇಯನ್ನು 'ರೆಡ್ಮಿ Y3' ಸ್ಮಾರ್ಟ್‌ಫೋನ್ ಹೊಂದಿದೆ. ಅಂಚುರಹಿತ ಡಿಸ್‌ಪ್ಲೇ ಇದಾಗಿದ್ದು, ವಾಟರ್‌ಡ್ರಾಪ್‌ ನೋಚ್ ಸಹ ಇರಲಿದೆ. ಇನ್ನು ಡಿಸ್‌ಪ್ಲೇ ಮತ್ತು ಬಾಹ್ಯ ಬಾಡಿಯ ನಡುವಿನ ಅನುಪಾತವು 19:9 ಆಗಿದೆ. ಪ್ರತಿ ಇಂಚಿನ ಪಿಕ್ಸಲ್ ಸಾಂದ್ರತೆ 280 ppi ಆಗಿದೆ ಎಂದು ಶಿಯೋಮಿ ಕಂಪೆನಿ ತಿಳಿಸಿದೆ.


 • ಪ್ರೊಸೆಸರ್ ಯಾವುದು?

  'ರೆಡ್ಮಿ Y3' ಸ್ಮಾರ್ಟ್‌ಫೋನ್ ಕ್ವಾಲ್ಕಂ ಚಿಪ್‌ ಸೆಟ್ಟಿನೊಂದಿಗೆ, ಆಕ್ಟಾಕೋರ್ ಸ್ನ್ಯಾಪ್‌ಡ್ರಾಗನ್ 660 ಪ್ರೊಸೆಸರ್ ಸಾಮರ್ಥ್ಯವನ್ನು ಹೊಂದಿದ್ದು, ಅಂಡ್ರಿನೊ 512 ಗ್ರಾಫಿಕ್ಸ್ ಇರಲಿರುವ ಈ ಸ್ಮಾರ್ಟ್‌ಪೋನ್ 3 GB RAM ಮತ್ತು 32GB ಆಂತರಿಕ ಸಂಗ್ರಹ ಸಾಮರ್ಥ್ಯವನ್ನು ಒಳಗೊಂಡಿರುವ ಮಾದರಿಯಾಗಿದ್ದು, ಎಸ್‌ಡಿ ಕಾರ್ಡ್‌ ಮೂಲಕ ಬಾಹ್ಯ ಮೆಮೊರಿಯನ್ನು ವಿಸ್ತರಿಸಬಹುದು.


 • ಕ್ಯಾಮೆರಾ ಸಾಮರ್ಥ್ಯ

  'ರೆಡ್ಮಿ Y3' ಸ್ಮಾರ್ಟ್‌ಫೋನ್ ಹಿಂಬದಿಯಲ್ಲಿ ಡ್ಯುಯಲ್ ಕ್ಯಾಮೆರಾ ಇದ್ದು, ಪ್ರಾಥಮಿಕ ಕ್ಯಾಮೆರಾವು 12 ಎಂಪಿ ಮತ್ತು ಸೆಕೆಂಡರಿ ಕ್ಯಾಮೆರಾವು 5ಎಂಪಿ ಸಾಮರ್ಥ್ಯದಲ್ಲಿ ಇರಲಿವೆ ಎಂದು ತಿಳಿದುಬಂದಿದೆ. ಎಲ್‌ಇಡಿ ಫ್ಲ್ಯಾಶ್ ಸಹ ಒದಗಿಸಲಾಗಿದ್ದು, ಇಮೇಜ್ ಪಿಕ್ಸಲ್ ರೆಸಲ್ಯೂಶನ್ 4000 x 3000 ಆಗಿರಲಿದೆ. ಆದರೆ, ಇದಕ್ಕಿಂತಲೂ ಸೆಲ್ಫೀ ಕ್ಯಾಮೆರಾ ಉತ್ತಮವಾಗಿದೆ.


 • 32 ಎಂಪಿ ಸೆಲ್ಫಿ

  ಶಿಯೋಮಿ ತನ್ನ 'Y' ಸರಣಿಯಲ್ಲಿ ಹೊರತರುವ ಸ್ಮಾರ್ಟ್‌ಫೋನ್‌ಗಳಲ್ಲಿ ಸೆಲ್ಫಿಗೆ ಹೆಚ್ಚಿನ ಒತ್ತು ನೀಡುತ್ತದೆ. ಶಿಯೋಮಿ ಕಂಪನಿಯು ಇದೀಗ ಸೆಲ್ಫಿ ಕ್ಯಾಮೆರಾದತ್ತ ಹೆಚ್ಚಿನ ಒಲವು ಹರಿಸಿರುವುದರಿಂದ ಈ ಸ್ಮಾರ್ಟ್‌ಫೋನಿನ ಮುಖ್ಯ ಆಕರ್ಷಣೆ ಸೆಲ್ಫಿ ಕ್ಯಾಮೆರಾ ಆಗಿದೆ. 32 ಎಂಪಿ ಸಾಮರ್ಥ್ಯದಲ್ಲಿ ಸೆಲ್ಫಿ ಫೋಟೊಗಳು ಮೂಡಿಬರಲು ಈ ಫೋನ್ ಬೆಂಬಲಿಸಲಿದೆ.


 • ಬ್ಯಾಟರಿ ಶಕ್ತಿ

  ಶಿಯೋಮಿ Y3 ಸ್ಮಾರ್ಟ್‌ಫೋನ್ 4000mAh ಸಾಮರ್ಥ್ಯದ ಬ್ಯಾಟರಿಯನ್ನು ಒದಗಿಸಲಾಗಿದ್ದು, ಸುಮಾರು ಒಂದು ದಿನದವರೆಗೂ ಬಾಳಿಕೆ ಬರುವ ಶಕ್ತಿಯನ್ನು ಬ್ಯಾಟರಿಯು ಹೊಂದಿರಲಿದೆ. ಇನ್ನು ಫಾಸ್ಟ್ ಚಾರ್ಜರ್ ಸೌಲಭ್ಯವನ್ನು ನೀಡಿರುವ ಬಗ್ಗೆ ಮಾಹಿತಿ ಇಲ್ಲವಾದರೂ, ಶಿಯೋಮಿ Y3 ಸ್ಮಾರ್ಟ್‌ಫೋನ್ ಉತ್ತಮ ಬ್ಯಾಟರಿ ಶಕ್ತಿಯನ್ನು ಹೊಂದಿರುವುದನ್ನು ನೋಡಬಹುದು.
ಭಾರತದ ನಂ.1 ಮೊಬೈಲ್ ಮಾರಾಟಗಾರ ಕಂಪೆನಿ ಶಿಯೋಮಿ ಇಂದು ಎರಡು ಸ್ಮಾರ್ಟ್‌ಫೋನ್‌ಗಳನ್ನು ಬಿಡುಗಡೆ ಮಾಡುವ ಮೂಲಕ ಗ್ರಾಹಕರಿಗೆ ಭರ್ಜರಿ ಸಿಹಿಸುದ್ದಿಯನ್ನು ನೀಡಿದೆ. ದೇಶದ ಮೊಬೈಲ್ ಮಾರುಕಟ್ಟೆಯಲ್ಲಿ ಇಂದು ಸೆಲ್ಫೀ ಎಕ್ಸ್‌ಪರ್ಟ್ ಶಿಯೋಮಿ 'ರೆಡ್‌ಮಿ ವೈ3' ಲಾಂಚ್ ಆಗಲಿದೆ ಎಂದು ತಿಳಿದಿದ್ದವರಿಗೆ ಶಿಯೋಮಿ ಕಂಪೆನಿ ಬಿಗ್‌ಶಾಕ್ ನೀಡಿದ್ದು, ಕಳೆದ ಕೆಲ ದಿನಗಳಿಂದಲೂ ಊಹಾಪೋಹವಾಗಿ ಹರಿದಾಡುತ್ತಿದ್ದ ಶಿಯೋಮಿ 'ರೆಡ್‌ಮಿ 7' ಸ್ಮಾರ್ಟ್‌ಫೋನ್ ಕೂಡ ಇಂದೇ ಲಾಂಚ್ ಆಗಿದೆ.

ಹೌದು, ರೆಡ್‌ಮಿ ನೋಟ್ 7 ಮತ್ತು ರೆಡ್‌ಮಿ ನೋಟ್ 7 ಪ್ರೊ ಸ್ಮಾರ್ಟ್‌ಪೋನ್‌ಗಳು ಬಿಡುಗಡೆಯಾದ ಎರಡು ತಿಂಗಳ ನಂತರ ಶಿಯೋಮಿಯ ಎರಡು ಬಜೆಟ್ ಸ್ಮಾರ್ಟ್‌ಫೋನ್‌ಗಳು ಇಂದು ಕಾಲಿಟ್ಟಿವೆ. ಶಿಯೋಮಿ 'ರೆಡ್‌ಮಿ ವೈ3' ಮತ್ತು ಶಿಯೋಮಿ 'ರೆಡ್‌ಮಿ 7' ಎರಡು ಸ್ಮಾರ್ಟ್‌ಫೋನ್‌ಗಳು ಅತ್ಯಂತ ಕಡಿಮೆ ಬೆಲೆಯಲ್ಲಿ ದೇಶದ ಮೊಬೈಲ್ ಮಾರುಕಟ್ಟೆಗೆ ಕಾಲಿಟ್ಟು ಗಮನಸೆಳೆದಿವೆ.

ರೆಡ್‌ಮಿ 7' ಸ್ಮಾರ್ಟ್‌ಫೋನಿನ ಬೆಲೆ 7,999 ರೂ.ಗಳಿಂದ ಆರಂಭವಾಗಿದ್ದರೆ, ಶಿಯೋಮಿ 'ರೆಡ್‌ಮಿ ವೈ3' ಬೆಲೆ 9,999 ರೂಪಾಯಿಗಳಾಗಿವೆ.

ಕಳೆದ ಕೆಲ ದಿನಗಳ ಹಿಂದಷ್ಟೇ ಶಿಯೋಮಿ ಕಂಪೆನಿ ಭಾರತದ ಮುಖ್ಯಸ್ಥ ಮನುಕುಮಾರ್ ಜೈನ್ ಹೇಳಿದಂತೆ ಇಂದು ಬಿಡುಗಡೆಯಾಗಿರುವ ಶಿಯೋಮಿ 'ರೆಡ್‌ಮಿ ವೈ3' ಮತ್ತು ಶಿಯೋಮಿ 'ರೆಡ್‌ಮಿ 7' ಎರಡು ಸ್ಮಾರ್ಟ್‌ಫೋನ್‌ಗಳು ಭಾರತದ ಮೊಬೈಲ್ ಮಾರುಕಟ್ಟೆಯನ್ನು ಬದಲಿಸುವಂತೆ ಕಾಣುತ್ತಿವೆ. 32ಎಂಪಿ ಸೆಲ್ಫೀ ಕ್ಯಾಮೆರಾವನ್ನು ಹೊಂದಿರುವ ಶಿಯೋಮಿ 'ರೆಡ್‌ಮಿ ವೈ3' ಬೆಲೆ 9,999 ರೂ.ಗಳಿಂದ ಆರಂಭವಾಗಿರುವುದು ದೇಶದ ಮೊಬೈಲ್ ಲೋಕದಲ್ಲಿ ತಲ್ಲಣ ಮೂಡಿಸಿದೆ.

ಲೇಖನ ಮುಂದುವರೆಯುವುದು.

 
ಹೆಲ್ತ್