Back
Home » ಇತ್ತೀಚಿನ
ಗೂಗಲ್ VS ಹುವಾವೇ ಪೈಟ್!..ಚೀನಾದಲ್ಲಿ ಆಪಲ್‌ ಬಾಯ್ಕಾಟ್!
Gizbot | 22nd May, 2019 12:35 PM

ಚೀನಾ ಮೂಲದ ಹುವಾವೇ ಕಂಪೆನಿ ಮೇಲೆ ಗೂಗಲ್ ಮುಗಿಬಿದ್ದ ಬೆನ್ನಲ್ಲೇ ಚೀನಾದಲ್ಲಿ ಅಮೆರಿಕದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನ ಆರಂಭಿವಾಗಿದೆ. ಅದರಲ್ಲೂ ಚೀನಾದಲ್ಲಿ ಹೆಚ್ಚು ಜನಪ್ರಿಯವಾಗಿರುವ ಆಪಲ್ ಕಂಪೆನಿಯ ಗ್ಯಾಜೆಟ್‌ಗಳನ್ನು ಖರಿದಿಸಲೇಬೇಡಿ ಎಂಬ 'ಬಾಯ್ಕಾಟ್ ಆಪಲ್' ಎಂಬ ಅಭಿಯಾನವನ್ನು ಸಾಮಾಜಿಕ ತಾಣಗಳಲ್ಲಿ ಉತ್ತೇಜಿಸಲಾಗುತ್ತಿದೆ.

ಹೌದು, ಗೂಗಲ್ ಸಂಸ್ಥೆ ಚೀನೀ ಕಂಪನಿ ಹುವಾವೆಗೆ ಪ್ರಮುಖ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆಯನ್ನು ಅಮಾನತುಗೊಳಿಸಿದ ನಂತರ ಚೀನಾದಲ್ಲಿ ಅಮೆರಿಕದ ಉತ್ಪನ್ನಗಳನ್ನು ಬಹಿಷ್ಕರಿಸಿ ಎಂಬ ಅಭಿಯಾನ ಆರಂಭಿವಾಗಿದ್ದು, ಅದರಲೂ ಆಪಲ್ ಬಹಿಷ್ಕರಿಸಿಅಭಿಯಾನಕ್ಕೆ ಸಕಾರಾತ್ಮಕ ಸ್ಪಂದನೆ ವ್ಯಕ್ತವಾಗಿದೆ ಎಂದು ಅಲ್ಲಿನ ಮಾಧ್ಯಮ ವರದಿಗಳಿಂದ ತಿಳಿದುಬಂದಿದೆ.

ಅಮೆರಿಕ ಉತ್ಪನ್ನಗಳನ್ನು ತ್ಯಜಿಸಿ, ಚೀನಾದಲ್ಲಿ ಚೀನಾದ ಉತ್ಪನ್ನಗಳನ್ನೇ ಖರೀದಿಸಿ ಎಂದು ವ್ಯಾಪಕ ಪ್ರಚಾರ ಮಾಡಲಾಗುತ್ತಿದ್ದು, ಬಹಳಷ್ಟು ಚೀನೀಯರು ಆಪಲ್ ತೊರೆದು ಚೀನಾ ಸ್ಮಾರ್ಟ್‌ಫೋನ್ ಮತ್ತು ಗ್ಯಾಜೆಟ್‌ಗಳನ್ನೇ ಬಳಸುತ್ತೇವೆ ಎಂದು ಹೇಳಿಕೊಂಡಿದ್ದಾರೆ. ಇದಕ್ಕೆ ಸರ್ಕಾರ ಕೂಡ ಹಿನ್ನಲೆಯಲ್ಲಿ ಪ್ರೋತ್ಸಾಹ ನೀಡುತ್ತಿದೆ ಎಂದು ವರದಿಗಳಲ್ಲಿ ಹೇಳಲಾಗಿದೆ.

ಅಮೆರಿಕಾದ ರಾಷ್ಟ್ರೀಯ ಭದ್ರತೆಗೆ "ಮಹತ್ವದ ಅಪಾಯ" ಉಂಟುಮಾಡುವ ಕಾರಣ ಯುಎಸ್ ರಫ್ತು ನಿಯಂತ್ರಣಗಳಿಗೆ ಒಳಪಟ್ಟಿರುವ 44 ಚೀನೀ ಘಟಕಗಳ ಪಟ್ಟಿಯಲ್ಲಿ ಹುವಾವೇಯನ್ನು ಸೇರಿಸಲಾಗಿದೆ. ಹಾಗಾಗಿ, ಗೂಗಲ್ ಹುವಾವೆ ಕಂಪನಿಗೆ ಪ್ರಮುಖ ಸಾಫ್ಟ್ವೇರ್ ಮತ್ತು ತಾಂತ್ರಿಕ ಸೇವೆಗಳ ವಿತರಣೆಯನ್ನು ಅಮಾನತುಗೊಳಿಸಿತ್ತು. ಇದು ಚೀನೀಯರನ್ನು ಸಾಕಷ್ಟು ಕೆರಳಿಸಿದೆ.

ಇನ್ಮುಂದೆ ಹುವಾವೇ ಕಂಪೆನಿಯ ಯಾವುದೇ ಸ್ಮಾರ್ಟ್‌ಫೋನಿನಲ್ಲಿ ಗೂಗಲ್​ ಪ್ಲೇ, ಗೂಗಲ್​ ಪ್ಲೇ ಸ್ಟೋರ್​, ಜಿ-ಮೇಲ್, ಗೂಗಲ್​ ಮ್ಯಾಪ್​​ ಹಾಗೂ ಯೂಟ್ಯೂಬ್​ ಆಪ್​ಗಳು ಲಭ್ಯವಿರುವುದಿಲ್ಲ ಎಂದು ಗೂಗಲ್ ಕಂಪೆನಿ ತಿಳಿಸಿದ್ದು, ಪ್ರಸ್ತುತ ಹುವಾವೆ ಸ್ಮಾರ್ಟ್‌ಫೋನ್ ಬಳಕೆದಾರರಿಗೆ ಮಾತ್ರ ಸ್ವಲ್ಪ ರಿಲೀಫ್ ಸಿಕ್ಕಿದ್ದು, 90 ದಿನಗಳ ಕಾಲ ಈ ನಿಷೇಧ ಅನ್ವಯವಾಗುವುದಿಲ್ಲ ಎನ್ನಲಾಗಿದೆ.

ಓದಿರಿ: ಶಾಕಿಂಗ್ ನ್ಯೂಸ್!..ಯಾವುದೇ ಕಾರಣಕ್ಕೂ 'ಹುವಾವೇ' ಫೋನ್ ಖರೀದಿಸಲೇಬೇಡಿ!!

 
ಹೆಲ್ತ್