Back
Home » ಇತ್ತೀಚಿನ
ಮುಂದಿನ ಪಿಎಂ ಯಾರಾಗಲಿದ್ದಾರೆ ಎಂದು ಊಹಿಸಿ ಭರ್ಜರಿ ಭೋಜನ ಮಾಡಿ
Gizbot | 22nd May, 2019 06:01 PM
 • ಪ್ರಧಾನಿಯನ್ನು ಊಹಿಸಿ:

  ಆನ್ ಲೈನ್ ನಲ್ಲಿ ಆಹಾರ ಪದಾರ್ಥಗಳನ್ನು ಆರ್ಡರ್ ಮಾಡಿದರೆ ಡೆಲಿವರಿ ಮಾಡುವ ಫ್ಲ್ಯಾಟ್ ಫಾರ್ಮ್ ಆಗಿರುವ ಝೋಮ್ಯಾಟೋ ಹೊಸ ಆಫರ್ ನ್ನು ಬಿಡುಗಡೆಗೊಳಿಸಿದೆ. ಈ ಆಫರ್ ನ ಅನ್ವಯ ಗ್ರಾಹಕರು ದೇಶದ ಮುಂದಿನ ಪ್ರಧಾನಿ ಯಾರಾಗಲಿದ್ದಾರೆ ಎಂದು ಊಹಿಸಬೇಕು. ನಾಳೆ ಮತಎಣಿಕೆ ಕಾರ್ಯ ಇರುವುದರಿಂದಾಗಿ ಈ ವಿನೂತನ ಆಫರ್ ನ್ನು ನೀಡಲಾಗಿದೆ. ಇದರಲ್ಲಿ ಆಹಾರ ಆರ್ಡರ್ ಮಾಡಿ ಪ್ರಧಾನಿ ಯಾರಾಗಲಿದ್ದಾರೆ ಎಂದು ಸರಿಯಾಗಿ ಊಹೆ ಮಾಡಿದವರಿಗೆ ಕ್ಯಾಷ್ ಬ್ಯಾಕ್ ಆಫರ್ ನೀಡಲಾಗುತ್ತದೆ.


 • ಝೋಮ್ಯಾಟೋ ಎಲೆಕ್ಷನ್ ಲೀಗ್:

  ಝೋಮ್ಯಾಟೋ ಎಲೆಕ್ಷನ್ ಲೀಗ್ ಎಂದು ಇದನ್ನು ಕರೆಯಲಾಗಿದೆ. ಯಾರು ಸರಿಯಾಗಿ ಮುಂದಿನ ಸಿಎಂನ್ನು ಊಹಿಸುತ್ತಾರೋ ಅವರಿಗೆ ಕಂಪೆನಿಯು ಈ ಆಫರ್ ನ್ನು ನೀಡುತ್ತದೆ.


 • ಝೋಮ್ಯಾಟೋ ಪ್ರೀಮಿಯರ್ ಲೀಗ್:

  ಈ ಹಿಂದೆ ಝೋಮ್ಯಾಟೋ ಪ್ರೀಮಿಯರ್ ಲೀಗ್ ಎಂಬ ಇದೇ ರೀತಿಯ ಆಫರ್ ನ್ನು ನೀಡಿತ್ತು. ಯಾರು ಸರಿಯಾಗಿ ಐಪಿಎಲ್ ಮ್ಯಾಚ್ ನ್ನು ಊಹಿಸುತ್ತಾರೋ ಅವರಿಗೆ ಈ ಆಫರ್ ಲಭ್ಯವಾಗುತ್ತಿತ್ತು.


 • ರಿಯಾಯಿತಿ ಎಷ್ಟು?

  ಬಳಕೆದಾರರಿಗೆ ಅವರು ಆರ್ಡರ್ ಮಾಡಿದಾಗ 40 ಶೇಕಡಾ ರಿಯಾಯಿತಿ ಮತ್ತು 30 ಶೇಕಡಾ ಕ್ಯಾಷ್ ಬ್ಯಾಕ್ ನ್ನು ಅವರ ಊಹೆ ಸರಿಯಾಗಿದ್ದರೆ ನೀಡಲಾಗುತ್ತದೆ ಎಂದು ಝೋಮ್ಯಾಟೋ ಸಂಸ್ಥೆ ತಿಳಿಸಿದೆ.


 • ಇವತ್ತೇ ಕೊನೆಯ ದಿನ:

  ಯಾರು ಬೇಕಿದ್ದರೂ ಆರ್ಡರ್ ಮಾಡಬಹುದು ಮತ್ತು ಮೇ 22 ರ ವರಗೆ ಊಹಿಸಬಹುದಾಗಿದೆ. ಅವರ ಊಹೆ ಎಷ್ಟು ಬಾರಿ ಸರಿಯಾಗಿರುತ್ತದೆಯೋ ಅಷ್ಟು ಬಾರಿ ಅವರಿಗೆ ಕ್ಯಾಷ್ ಬ್ಯಾಕ್ ಲಭ್ಯವಾಗುತ್ತದೆ.


 • ಪಿಎಂ ಆಯ್ಕೆಯ ನಂತರ ಕ್ರೆಡಿಟ್:

  ಈ ಕ್ರೆಡಿಟ್ ನಿಮ್ಮ ವ್ಯಾಲೆಟ್ ಗೆ ಸೇರುತ್ತಾ ಸಾಗುತ್ತದೆ. ಅದು ಪಿಎಂ ಪ್ರಕಟವಾದ ನಂತರ ಲಭ್ಯವಾಗುವ ಮೊತ್ತವಾಗಿರುತ್ತದೆ ಎಂದು ಕಂಪೆನಿ ಹೇಳಿದೆ. ಭಾರತದಲ್ಲಿ ಈಗಾಗಲೇ 250 ಸಿಟಿಗಳಲ್ಲಿ ಸುಮಾರು 320,000 ಮಂದಿ ಪಿಎಂ ಯಾರಾಗಲಿದ್ದಾರೆ ಎಂದು ಝೋಮ್ಯಾಟೋದಲ್ಲಿ ಊಹೆ ಮಾಡಿದ್ದಾರಂತೆ!
ಝೋಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡುವ ಅಭ್ಯಾಸ ನಿಮಗಿದ್ಯಾ? ಆಗಾಗ ಆಫರ್ ಗಳಿಗಾಗಿ ಹುಡುಕಾಡುತ್ತಿರುತ್ತೀರಾ? ಹಾಗಿದ್ರೆ ಒಂದು ಬೊಂಬಾಟ್ ಆಫರ್ ನ್ನು ಝೋಮ್ಯಾಟೋ ನಿಮಗಾಗಿ ನೀಡುತ್ತಿದೆ. ನೀವು ಮಾಡಬೇಕಾಗಿರೋದು ಇಷ್ಟೇ? ಮುಂದಿನ ಭಾರತದ ಪ್ರಧಾನಿ ಯಾರಾಗಲಿದ್ದಾರೆ ಎಂದು ಊಹಿಸಬೇಕು!

 
ಹೆಲ್ತ್