Back
Home » ಇತ್ತೀಚಿನ
LED ಲೈಟ್ ನಿಂದ ಏನೇನು ಸಮಸ್ಯೆ ಆಗುತ್ತೆ ಗೊತ್ತಾ?
Gizbot | 25th May, 2019 11:06 AM
 • ರೆಟಿನಾಕ್ಕೆ ಹಾನಿ ಮಾಡುವ ಲೈಟು:

  LED ಲೈಟ್ ಗಳು ಶಾಶ್ವತವಾಗಿ ನಿಮ್ಮ ರೆಟಿನಾವನ್ನು ಹಾಳು ಮಾಡಬಹುದು ಮತ್ತು ನಿಮ್ಮ ನಿದ್ದೆಗೂ ತೊಂದರೆಯನ್ನುಂಟು ಮಾಡುತ್ತದೆ ಎಂದು ಫ್ರಾನ್ಸ್ ಸರ್ಕಾರದ ರನ್ ಹೆಲ್ತ್ ವಾಚ್ಡಾಗ್ ತಿಳಿಸಿದೆ.

  ಆಹಾರ, ಪರಿಸರ ಮತ್ತು ವ್ಯವಹಾರಿಕ ಆರೋಗ್ಯ ಮತ್ತು ಸುರಕ್ಷತೆಯ(ANSES) ಫ್ರೆಂಚ್ ಏಜನ್ಸಿಗಳು ಪ್ರಬಲವಾದ ಎಲ್ ಇಡಿ ದೀಪಗಳನ್ನು "ಫೋಟೋ-ವಿಷಕಾರಿ" ಎಂದು ಎಚ್ಚರಿಕೆ ನೀಡಿವೆ.


 • 400 ಪುಟಗಳ ವರದಿ:

  400 ಪುಟಗಳಿರುವ ಈ ವರದಿಯಲ್ಲಿ ರೆಟಿನಲ್ ಕೋಶಗಳನ್ನು ಬದಲಾಯಿಸಲಾಗದಂತಹ ಪರಿಸ್ಥಿತಿಗೆ ನಿಮ್ಮನ್ನ ಈ ದೀಪಗಳು ದೂಡಬಹುದು ಮತ್ತು ಕುರುಡುತನದಂತಹ ಸಮಸ್ಯೆಗಳಿಗೆ ಈ ದೀಪಗಳು ಕಾರಣವಾಗಬಹುದು ಎಂದು ತಿಳಿಸಿದೆ.

  LED ದೀಪಗಳಿಗೆ ಮಾನ್ಯತೆ ನೀಡುವ ಗರಿಷ್ಟ ಮಿತಿಯನ್ನು ಮರುಪರಿಶೀಲಿಸಬೇಕು ಎಂದು ಈ ಅಧಿಕಾರಿಗಳು ಒತ್ತಾಯಿಸಿದ್ದಾರೆ.ಇದು ಹೆಚ್ಚಿನ ಪ್ರಮಾಣದಲ್ಲಿ ನೀಲಿ ಬೆಳಕನ್ನು ಹೊರಹೊಮ್ಮಿಸುತ್ತವೆ.


 • ಸ್ಕ್ರೀನ್

  LED ಫೋನ್, ಟ್ಯಾಬ್ಲೆಟ್ ಮತ್ತು ಲ್ಯಾಪ್ ಟಾಪ್ ಸ್ಕ್ರೀನ್ ಗಳು ಗಳು ಈ ಮಟ್ಟದಲ್ಲಿ ಕಣ್ಣಿಗೆ ಹಾನಿಗೊಳಿಸುವುದಿಲ್ಲ ಆದರೆ ಕಾರಿನ ಹೆಡ್ ಲೈಟ್ ಗಳಲ್ಲಿ ಬಳಸಲಾಗುವ ಬಲ್ಬ್ ಗಳು ಕಣ್ಣಿಗೆ ಒಳ್ಳೆಯದಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ.

  ದೀರ್ಘಾವಧಿ ಬಾಳಿಕೆ ಬರುವ,ಶಕ್ತಿಯ ಸಮರ್ಥ ಬಳಕೆಯ ಮತ್ತು ಅಗ್ಗದ ಎಲ್ಇಡಿ ತಂತ್ರಜ್ಞಾನವು ಒಂದೇ ಒಂದು ದಶಕದಲ್ಲಿ ಅತೀ ಹೆಚ್ಚು ಪ್ರಸಿದ್ಧತೆಯನ್ನು ಪಡೆಯಿತು ಮತ್ತು ಬೆಳಕಿನ ಮಾರುಕಟ್ಟೆಯ ಅರ್ಧದಷ್ಟನ್ನು ಅಪ್ಪಳಿಸಿದೆ. ಈ ಮೊತ್ತವು ದಿನದಿಂದ ದಿನಕ್ಕೆ ಇನ್ನಷ್ಟು ಹೆಚ್ಚಾಗುತ್ತದೆ ಎಂದು ಇಂಡಸ್ಟ್ರಿ ತಜ್ಞರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಮುಂದಿನ ವರ್ಷದ ಸುಮಾರಿಗೆ 60%ದಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.

  LED ಗಳು ಇತರೆ ಬಲ್ಬ್ ಗಳು ಬಳಸುವುದಕ್ಕಿಂತ ಕೇವಲ 5 ರಲ್ಲಿ ಒಂದರಷ್ಟು ವಿದ್ಯುಚ್ಛಕ್ತಿಯನ್ನು ಬಳಸಿ ಬೆಳಕನ್ನು ನೀಡುತ್ತವೆ. ಬಿಳಿ ಬೆಳಕಿನ ಉತ್ಪಾದನೆಯು ಹಳದಿ ಪಾಸ್ಫರ್ ಮತ್ತು ನೀಲಿ ಅಥವಾ ನೇರಳಾತೀತ ದಂತಹ ಸಣ್ಣ ತರಂಗಾಂತರದ ಮೂಲಕ ಸಾಧ್ಯವಾಗುವುತ್ತದೆ. ಸ್ಪೆಕ್ಟ್ರಮ್ ನಲ್ಲಿ ಬಿಳಿಯ ಬೆಳಕನ್ನು ಅಥವಾ ತಂಪಾಗಿರುವ ಬೆಳಕು ನೀಲಿ ಬಣ್ಣವನ್ನು ಹೆಚ್ಚಿಸುತ್ತದೆ.

  LEDಗಳು ಇತ್ತೀಚೆಗೆ ಮನೆ ಮತ್ತು ಸ್ಟ್ರೀಟ್ ಗಳಲ್ಲೂ ಕೂಡ ಬಳಸಲಾಗುತ್ತಿದೆ ಅಷ್ಟೇ ಯಾಕೆ ಆಫೀಸ್, ಇಂಡಸ್ಟ್ರಿ ಎಲ್ಲಾ ಕಡೆಗಳಲ್ಲೂ ಬಳಕೆ ಮಾಡಲಾಗುತ್ತಿದೆ. ಆಟೋ ಹೆಡ್ ಲೈಟ್ ಗಳು, ಟಾರ್ಚ್ ಗಳು, ಆಟದ ಸಾಮಾಗ್ರಿಗಳಲ್ಲೂ ಕೂಡ ಇದನ್ನು ಬಳಕೆ ಮಾಡಲಾಗುತ್ತಿದೆ.


 • ಮಕ್ಕಳಿಗೆ ಹೆಚ್ಚು ಸಮಸ್ಯೆ:

  LED ಲೈಟ್ ಗಳನ್ನು ರಾತ್ರಿಯ ವೇಳೆಯಲ್ಲಿ ಬಳಕೆ ಮಾಡಿದಾಗ ಕೆಲವು ಜೀವಶಾಸ್ತ್ರದ ಅಂಶಗಳಿಗೆ ತೊಂದರೆ ಮಾಡುತ್ತದೆ ಮತ್ತು ನಿದ್ದೆಯನ್ನೂ ಕೂಡ ಹಾಳು ಮಾಡುತ್ತದೆ. ಕಣ್ಣಿನ ಆರೋಗ್ಯಕ್ಕೂ ತೊಂದರೆಯಾಗುತ್ತದೆ ಎಂದು ನೇತ್ರತಜ್ಞರಾಗಿರುವಫ್ರಾನ್ಸಿನ್ ಬೆಹರ್ ಕೊಹಿನ್ ಹೇಳಿದ್ದಾರೆ. ಮಕ್ಕಳು ಇಂತಹ ಲೈಟಿನಿಂದ ಹೆಚ್ಚು ತೊಂದರೆಗೆ ಸಿಲುಕುತ್ತಾರೆ ಎಂದಿದ್ದಾರೆ ಅವರು.


 • ಯಾವೆಲ್ಲ ಕಾಯಿಲೆಗಳು ಬರುತ್ತವೆ ಗೊತ್ತಾ?

  ದೇಹದಲ್ಲಿ ಚಯಾಪಚಯ ಅಸ್ತವ್ಯಸ್ತಗಳು,ಮಧುಮೇಹ,ಹೃದಯ ರಕ್ತನಾಳದ ಕೆಲವು ಸಮಸ್ಯೆಗಳು,ಕೆಲವು ಕ್ಯಾನ್ಸರ್ ಪ್ರಕಾರಗಳಿಗೂ ಕೂಡ ಇದು ಕಾರಣವಾಗುವ ಸಾಧ್ಯತೆ ಇರುತ್ತದೆ ಎಂದು ANSES ನ ಸಂಶೋಧಕ ಮತ್ತು ಯೋಜನಾ ವ್ಯವಸ್ಥಾಪಕರಾದ ದಿನಾ ಅಟೈಯಾ ತಿಳಿಸಿದ್ದಾರೆ. ಕೆಲವು LED ಬಲ್ಬ್ ಗಳು ಸ್ಟ್ರೋಬೋಸ್ಕೋಪಿಕ್ ಪರಿಣಾಮಗಳನ್ನು ಉಂಟು ಮಾಡುತ್ತದೆ.ತಲೆನೋವು, ದೃಶ್ಯ ಆಯಾಸ,ಅಪಘಾತಗಳ ಹೆಚ್ಚಿನ ಅಪಾಯವನ್ನು ಇದು ಉಂಟು ಮಾಡುವ ಸಾಧ್ಯತೆ ಇರುತ್ತದೆ.


 • ನೈಟ್ ಶಿಫ್ಟ್ ಮಾಡುವವರಿಗೆ ಸಮಸ್ಯೆ ಹೆಚ್ಚು!

  ರಾತ್ರಿ ಶಿಫ್ಟ್ ನಲ್ಲಿ ಈ ಬೆಳಕಿನಲ್ಲಿ ಕೆಲಸ ಮಾಡುವುವರಿಗೆ ಇದು ಹೆಚ್ಚಿನ ರಿಸ್ಕ್ ನ್ನು ಉಂಟು ಮಾಡುತ್ತದೆ ಎಂದು ಅಧ್ಯಯನ ಹೇಳಿದೆ. ಮೆಲಟಾನಿನ್ ನ ಉತ್ಪಾದನೆಯಲ್ಲಿ ಕುಸಿತ, ಹೀಗೆ ಹಾರ್ಮೋನಿಗೆ ಸಂಬಂಧಿಸಿದ ಕೆಲವು ಸಮಸ್ಯೆಗಳು ಉಂಟಾಗುವ ಸಾಧ್ಯತೆ ಇದೆ. ಬ್ರೆಸ್ಟ್ ಕ್ಯಾನ್ಸರ್ ಬರುವ ಸಾಧ್ಯತೆಯನ್ನು ಅಲ್ಲಗೆಳೆಯುವಂತಿಲ್ಲ ಎಂದು ಅಧ್ಯಯನ ತಿಳಿಸಿದೆ. ಚರ್ಮ ಸಂಬಂಧಿ ಕಾಯಿಲೆಗಳಿಗೂ ಕೂಡ ಇದು ಕಾರಣವಾಗುತ್ತದೆ ಎಂದು ಹೇಳಲಾಗಿದೆ.
ನಿಮ್ಮ ಮನೆಯಲ್ಲಿ LED ಲೈಟ್ ಗಳನ್ನು ಅಳವಡಿಸಿದ್ದೀರಾ? ಹಾಗಾದ್ರೆ ಈ ಸ್ಟೋರಿಯನ್ನು ನೀವು ಓದಲೇಬೇಕು. ಹೌದು ಇದೊಂದು ಆತಂಕ ಹುಟ್ಟಿಸೋ ಅಧ್ಯಯನದ ಬಗ್ಗೆ ಇರುವ ಸ್ಟೋರಿ.

 
ಹೆಲ್ತ್