Back
Home » ಆರೋಗ್ಯ
ಅಧ್ಯಯನ ವರದಿ: ಹಲ್ಲು ಬಿಳಿಗೊಳಿಸುವ ಉತ್ಪನ್ನಗಳು ಅಪಾಯಕಾರಿಯಂತೆ
Boldsky | 6th Jun, 2019 06:30 PM

ನಗುವಾಗ ಹಲ್ಲುಗಳು ಮುತ್ತಿನ ಹಾರದಂತೆ ಫಲಫಲನೆ ಹೊಳೆಯುತ್ತಲಿದ್ದರೆ ಅದು ನೋಡುಗರನ್ನು ಆಕರ್ಷಿಸುವುದು. ಹಲ್ಲುಗಳು ಸುಂದರವಾಗಿದ್ದರೆ ನಿಮ್ಮ ಸೌಂದರ್ಯಕ್ಕೂ ಇದು ಮೆರಗು ನೀಡುವುದು. ಹಲ್ಲುಗಳನ್ನು ಬಿಳಿಗೊಳಿಸುವ ಕೆಲವೊಂದು ಉತ್ಪನ್ನಗಳು ಇಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಇದು ಹಲ್ಲುಗಳನ್ನು ಬಿಳಿಗೊಳಿಸುವ ಜತೆಗೆ ಹಲ್ಲುಗಳಿಗೆ ಹಾನಿ ಉಂಟು ಮಾಡುವುದು ಎಂದು ಅಧ್ಯಯನಗಳು ಹೇಳಿವೆ. ಹಲ್ಲುಗಳು ಮತ್ತು ಒಸಡನ್ನು ಜತೆಯಾಗಿ ಬಂಧಿಸುವಂತಹ ಪ್ರೋಟೀನ್ ನ್ನು ಹೈಡ್ರೋಜನ್ ಪೆರಾಕ್ಸೈಡ್ ನಾಶ ಮಾಡುತ್ತದೆ ಎಂದು ಸ್ಟಾಕ್ಟನ್ ಯೂನಿವರ್ಸಿಟಿ ತನ್ನ ಅಧ್ಯಯನ ವರದಿಯಲ್ಲಿ ಹೇಳಿದೆ.

ಹೈಡ್ರೋಜನ್ ಪೆರಾಕ್ಸೈಡ್ ನ್ನು ನಿರಂತರವಾಗಿ ಬಳಕೆ ಮಾಡಿದರೆ ಅದರಿಂದ ದಂತಕವಚ, ದಂತದ್ರವ್ಯ ಮತ್ತು ಸಂಯೋಜಕ ಅಂಗಾಂಶಗಳ ಮೇಲೆ ಹಾನಿಯಾಗುವುದು ಎಂದು ಹೇಳಲಾಗಿದೆ. ಹಲ್ಲುಗಳನ್ನು ಬಿಳಿಗೊಳಿಸುವುದು ತುಂಬಾ ದೀರ್ಘ ಪ್ರಕ್ರಿಯೆ ಮತ್ತು ಇದನ್ನು ಕೇವಲ ದಂತವೈದ್ಯರು ಮಾತ್ರ ಮಾಡಬೇಕು ಎಂದು ಹೇಳಲಾಗುತ್ತದೆ. ಹಲ್ಲು ಬಿಳಿಗೊಳಿಸುವಂತಹ ಹೆಚ್ಚಿನ ಉತ್ಪನ್ನಗಳು ದಂತಕವಚದ ಮೇಲೆ ಪರಿಣಾಮ ಬೀರುವುದು. ಇದರಲ್ಲಿ ತುಂಬಾ ಕಡಿಮೆ ಪ್ರೋಟೀನ್ ಅಂಶವಿರುವುದು. ಈ ಉತ್ಪನ್ನಗಳು ತಾತ್ಕಾಲಿಕವಾಗಿ ಹಲ್ಲುಗಳನ್ನು ಬಿಳಿ ಮಾಡುವುದು. ಇದರಿಂದ ನಾವು ಅದನ್ನು ಮತ್ತೆ ಮತ್ತೆ ಬಳಸಬೇಕಾಗುತ್ತದೆ.

ಅತಿಯಾಗಿ ಹೈಡ್ರೋಜನ್ ಪೆರಾಕ್ಸೈಡ್ ನ್ನು ಬಳಸುವ ಕಾರಣದಿಂದಾಗಿ ಅದು ಹಲ್ಲಿನ ಸವೆತ ಉಂಟು ಮಾಡಬಹುದು. ಹೈಡ್ರೋಜನ್ ಪೆರಾಕ್ಸೈಡ್ ದಂತ ಕವಚವನ್ನು ನಾಶ ಮಾಡುವುದು, ಇದರ ಬಳಿಕ ಒಸಡು ಮತ್ತು ಅದರ ಬುಡವನ್ನು. ಹಲ್ಲುಗಳನ್ನು ಪರೀಕ್ಷಿಸಿಕೊಳ್ಳಲು ದಂತವೈದ್ಯರ ಬಳಿಗೆ ಹೋಗುವುದು ಅಗತ್ಯವಾಗಿದೆ. ಇದರಿಂದ ಹಲ್ಲುಗಳನ್ನು ಶುಚಿಗೊಳಿಸಬಹುದು. ಹಲ್ಲುಗಳು ಹೊಳಪು ಕಳೆದುಕೊಳ್ಳಲು ಕೆಲವು ಕಾರಣಗಳು ಈ ರೀತಿಯಾಗಿ ಇವೆ.

Most Read: ಹಲ್ಲನ್ನು ಲಕಲಕ ಹೊಳೆಯುವಂತೆ ಮಾಡಲು ಆಯುರ್ವೇದ ಟಿಪ್ಸ್

*ಪ್ರತಿನಿತ್ಯ ಕಾಫಿ ಮತ್ತು ಚಹಾ ಸೇವನೆ

*ಧೂಮಪಾನ

*ವಯಸ್ಸಾಗುವುದು ಮತ್ತು ಚರ್ಮದ ಕವಚ ತೆಳುವಾಗುವುದು.

*ಕೆಟ್ಟ ಆಹಾರ ಕ್ರಮ ಮತ್ತು ಸಂಪೂರ್ಣ ಸಂಸ್ಕರಿಸಿದ ಆಹಾರ

*ಬಾಯಿ ಒಣಗುವ ಸಿಂಡ್ರೋಮ್

*ಬಾಯಿಯಿಂದಲೇ ನಿರಂತರ ಉಸಿರಾಟ

*ಅತಿಯಾಗಿ ಆ್ಯಂಟಿಬಯೋಟಿಕ್ ಬಳಕೆ

ಇದು ಎಷ್ಟು ಸುರಕ್ಷಿತ?

ಹೈಡ್ರೋಜನ್ ಪೆರಾಕ್ಸೈಡ್ ನ್ನು ಮಿತಿಯಲ್ಲಿ ಬಳಕೆ ಮಾಡಿದರೆ ಆಗ ಅದು ತುಂಬಾ ಪರಿಣಾಮಕಾರಿ. ಇದರಲ್ಲಿ ಇರುವಂತಹ ಹಲ್ಲು ಬಿಳಿಗೊಳಿಸುವ ಅಂಶವು ಟೂಥ್ ಪೇಸ್ಟ್ ನಲ್ಲಿ, ಜೆಲ್ ನಂತಹ ಹಲ್ಲು ಬಿಳಿಗೊಳಿಸುವ ಉತ್ಪನ್ನ, ಬಾಯಿ ಶುಚಿಗೊಳಿಸುವ ಉತ್ಪನ್ನ ಇತ್ಯಾದಿಗಳಲ್ಲಿ ಕಂಡುಬರುವುದು. ಅಮೆರಿಕನ್ ಡೆಂಟಲ್ ಅಸೋಸಿಯೇಶನ್ ಪ್ರಕಾರ ದಂತ ವೈದ್ಯರ ಸಲಹೆ ಪಡೆದ ಬಳಿಕ ಹಲ್ಲುಗಳನ್ನು ಸರಿಯಾದ ಕ್ರಮದಲ್ಲಿ ಇದನ್ನು ಮಾಡಬೇಕು. ಅದಾಗ್ಯೂ, ಹಲ್ಲು ಬಿಳಿಗೊಳಿಸುವುದು ಕಾಸ್ಮೆಟಿಕ್ ಚಿಕಿತ್ಸೆಗಿಂತಲೂ ಮಿಗಿಲಾಗಿದೆ ಮತ್ತು ಎಲ್ಲಾ ರೀತಿಯ ಹಲ್ಲುಗಳಿಗೆ ಇದು ಕೆಲಸ ಮಾಡದೆ ಇರಬಹುದು ಮತ್ತು ಇದು ಹಲ್ಲುಗಳ ಬಣ್ಣ ಕೆಡಿಸಬಹುದು. ನೀವು ಯಾವುದೇ ರೀತಿಯ ಹಲ್ಲು ಬಿಳಿಗೊಳಿಸುವ ಉತ್ಪನ್ನ ಬಳಸುವ ಮೊದಲು ದಂತವೈದ್ಯರಿಂದ ಸಲಹೆ ಪಡೆದರೆ ಹೆಚ್ಚು ಸುರಕ್ಷಿತವಾಗಿರುವುದು. ಹಲ್ಲು ಬಿಳಿಗೊಳಿಸುವುದನ್ನು ಮಿತವಾಗಿ ಮಾಡಬೇಕು. ಯಾಕೆಂದರೆ ಇದು ಒಸಡು ಮತ್ತು ಬುಡಕ್ಕೆ ಹಾನಿ ಉಂಟು ಮಾಡುವುದು.

ಮನೆಮದ್ದುಗಳು

ಹಲ್ಲುಗಳಿಗೆ ಯಾವುದೇ ಹಾನಿ ಉಂಟಾಗದಂತೆ ಕೆಲವೊಂದು ಮನೆಮದ್ದುಗಳನ್ನು ಬಳಸಿಕೊಂಡು ಹಲ್ಲನ್ನು ಬಿಳಿಗೊಳಿಸಬಹುದು. ಹೆಚ್ಚಿನ ಸಂದರ್ಭದಲ್ಲಿ ಜನರಿಗೆ ತಮ್ಮ ಹಲ್ಲಿನ ಬಣ್ಣದ ಬಗ್ಗೆ ತುಂಬಾ ಅತೃಪ್ತಿ ಇರುವುದು. ಬಣ್ಣ ಕಳಕೊಳ್ಳುವುದನ್ನು ನಾವು ಯಾರೂ ನಿಲ್ಲಿಸಲು ಸಾಧ್ಯವಿಲ್ಲ. ಆದರೆ ಸರಿಯಾಗಿ ಆರೈಕೆ ಮಾಡಿದರೆ ಆಗ ಹಲ್ಲುಗಳು ಬಣ್ಣ ಕುಂದುವ ಪ್ರಕ್ರಿಯೆಯು ನಿಧಾನವಾಗುವುದು. ಮಾರುಕಟ್ಟೆಯಲ್ಲಿ ಸಿಗುವಂತಹ ರಾಸಾಯನಿಕಯುಕ್ತ ಹಲ್ಲು ಬಿಳಿಗೊಳಿಸುವ ಉತ್ಪನ್ನಗಳನ್ನು ಬಳಸುವ ಬದಲು ಕೆಲವೊಂದು ನೈಸರ್ಗಿಕ ಸಾಮಗ್ರಿಗಳನ್ನು ಬಳಸಿಕೊಂಡು ಹಲ್ಲುಗಳನ್ನು ಬಿಳಿಯಾಗಿಸಬಹುದು.

ದಿನದಲ್ಲಿ 2-3 ಸಲ ಹಲ್ಲುಜ್ಜಿಕೊಳ್ಳಿ

ಪ್ರತೀ ಸಲ ಊಟವಾದ ಬಳಿಕ ಹಲ್ಲುಜ್ಜಿದರೆ ಆಗ ಹಲ್ಲುಗಳು ತಾಜಾವಾಗಿ, ಕೀಟಾಣುಗಳು ಮುಕ್ತವಾಗುವುದು. ನೈಸರ್ಗಿಕ ಮೌಥ್ ವಾಶ್ ನ್ನು ಸಾರ್ವಜನಿಕ ಸ್ಥಳಗಳಲ್ಲೂ ಬಳಸಿಕೊಳ್ಳಬಹುದು.

ಧೂಮಪಾನ ಮಾಡಬೇಡಿ

ಧೂಮಪಾನದಿಂದಾಗಿ ಹಲ್ಲುಗಳು ಬಣ್ಣ ಕಳಕೊಳ್ಳುವುದು ಸಾಮಾನ್ಯವಾಗಿದೆ. ಧೂಮಪಾನ ಮಾಡುವ ಮೊದಲು ಅಥವಾ ಬಳಿಕ ನೀವು ಒಂದು ಲೋಟ ನೀರು ಕುಡಿಯಿರಿ. ಇದರಿಂದ ಹಲ್ಲುಗಳಲ್ಲಿನ ಕಲೆ ನಿವಾರಣೆ ಆಗುವುದು. ಅತಿಯಾಗಿ ಧೂಮಪಾನ ಮಾಡುವವರು ಮತ್ತು ಚಾ, ಕಾಫಿ ಕುಡಿಯುವವರು ಪ್ರತೀ ಮೂರು ತಿಂಗಳಿಗೊಮ್ಮೆ ದಂತ ವೈದ್ಯರ ಬಳಿಗೆ ಹೋಗಿ ಹಲ್ಲುಗಳನ್ನು ಶುಚಿಗೊಳಿಸಬೇಕು ಮತ್ತು ಅಡುಗೆ ಸೋಡಾ ಬಳಸಿಕೊಂಡು ನೈಸರ್ಗಿಕವಾಗಿ ಹಲ್ಲುಗಳನ್ನು ಬಿಳಿಯಾಗಿಸಿಕೊಳ್ಳಿ.

Most Read: ನೆನಪಿಡಿ, ಅತಿಯಾದ ಧೂಮಪಾನ ನಿದ್ರೆಗೆ ಮಾರಕ!

ತೆಂಗಿನ ಎಣ್ಣೆ ಬಳಸಿ

ಹಲ್ಲುಗಳನ್ನು ಶುಚಿಗೊಳಿಸಲು ತೆಂಗಿನ ಎಣ್ಣೆ ಬಳಸುವುದು ತುಂಬಾ ಕಷ್ಟ. ತೆಂಗಿನ ಎಣ್ಣೆಯು ಹಲ್ಲುಗಳನ್ನು ಬಲಗೊಳಿಸುವುದು ಮತ್ತು ಬಿಳಿಯಾಗಿಸುವುದು. ಗರಿಷ್ಠ ಪರಿಣಾಮ ಬೇಕಿದ್ದರೆ ಆಗ ಒಂದು ಚಮಚ ತೆಂಗಿನ ಎಣ್ಣೆ ಬಾಯಿಗೆ ಹಾಕಿ 15-20 ನಿಮಿಷ ಕಾಲ ಬಾಯಿ ಮುಕ್ಕಳಿಸಿಕೊಳ್ಳಿ. ಇದು ಒಸಡುಗಳನ್ನು ಬಲವಾಗಿಸುವುದು.

   
 
ಹೆಲ್ತ್