Back
Home » ಆರೋಗ್ಯ
ಆವಕಾಡೊ ಎಣ್ಣೆಯಲ್ಲಿರುವ ಆರೋಗ್ಯಕಾರಿ ಪ್ರಯೋಜನಗಳು
Boldsky | 12th Jun, 2019 01:14 PM

ವಿಶ್ವದ ಮೆಡಿಟೇರಿಯನ್ ಪ್ರದೇಶಗಳಲ್ಲಿ ಬೆಳೆಯುವಂತಹ ಆವಕಾಡೊ (ಬೆಣ್ಣೆ ಹಣ್ಣು)ದಲ್ಲಿ ಇರುವಂತಹ ಹಲವಾರು ರೀತಿಯ ಲಾಭಗಳ ಬಗ್ಗೆ ತಿಳಿದೇ ಇದೆ. ಇದರ ಹಸಿರು ಬಣ್ಣದ ಸಿಪ್ಪೆ ಮತ್ತು ಅದರೊಳಗೆ ಇರುವಂತಹ ಬೆಣ್ಣೆಯಂತಹ ತಿರುಳು ತುಂಬಾ ಲಾಭಕಾರಿಯಾಗಿದೆ. ಈ ಹಣ್ಣಿನಲ್ಲಿ ಇರುವಂತಹ ಲಾಭಗಳು ಹೆಚ್ಚಾಗಿ ನಮಗೆಲ್ಲರಿಗೂ ತಿಳಿದೇ ಇದೆ. ಆದರೆ ಇದರಿಂದ ತಯಾರಿಸುವಂತಹ ಎಣ್ಣೆಯಿಂದ ಸಿಗುವಂತಹ ಲಾಭಗಳು ತಿಳಿದಿದೆಯಾ? ಇದು ಹೃದಯದ ಆರೋಗ್ಯವನ್ನು ಕಾಪಾಡುವುದು ಮಾತ್ರವಲ್ಲದೆ, ಇತರ ಹಲವಾರು ರೀತಿಯ ಆರೋಗ್ಯ ಲಾಭಗಳು ಇದರಿಂದ ನಮಗೆ ಸಿಗುವುದು. ಇದು ಯಾವುದೆಂದು ನಾವು ಇಲ್ಲಿ ತಿಳಿದುಕೊಳ್ಳುವ...

ಆವಕಾಡೊ ಹಣ್ಣಿನಿಂದ ಮಾಡಲ್ಪಟ್ಟಿರುವಂತಹ ಆವಕಾಡೊ ತೈಲವನ್ನು ಆಹಾರ ತಯಾರಿಸಲು, ಅದೇ ರೀತಿಯಾಗಿ ಚಿಕಿತ್ಸೆ ನೀಡಲು ಕೂಡ ಬಳಸಬಹುದು. ಆವಕಾಡೊಎಣ್ಣೆಯಲ್ಲಿ ಶೇ.77ರಷ್ಟು ಅವಕಾಡೊದಲ್ಲಿ ಇರುವಂತಹ ಕ್ಯಾಲರಿ ಸಂಯೋಜನೆ ಹೊಂದಿದ್ದು, ಇದು ಹಣ್ಣಿನಲ್ಲಿ ತುಂಬಾ ಲಾಭಕಾರಿ ಅಂಶವಾಗಿರುವುದು. ಇದು 271.111 ಡಿಗ್ರಿ ಸೆಲಿಯಸ್ ನಲ್ಲಿ ಅಧಿಕ ಹೊಗೆ ಹೊಂದಿರುವುದು. ಇದರಿಂದಾಗಿ ಇದು ತುಂಬಾ ಶುದ್ಧ ಮತ್ತು ಆರೋಗ್ಯಕಾರಿ ಎಂದು ಪರಿಗಣಿಸಲಾಗಿದೆ.

ನೂರು ಗ್ರಾಂ ಅವಕಾಡೋ ಎಣ್ಣೆಯಲ್ಲಿ 884 ಕೆಸಿಎಎಲ್ ಶಕ್ತಿ ಮತ್ತು 100 ಗ್ರಾಂ ಕೊಬ್ಬು ಇದೆ. ಅದೇ ರೀತಿಯಾಗಿ ಇದರಲ್ಲಿ ಏಕಪರ್ಯಾಪ್ತ ಮತ್ತು ಬಹುಪರ್ಯಾಪ್ತ ಕೊಬ್ಬಿನಾಂಶವಿದೆ. ಒಳ್ಳೆಯ ಕೊಲೆಸ್ಟ್ರಾಲ್ ಮತ್ತು ಕೆಲವೊಂದು ಪೋಷಕಾಂಶಗಳಾಗಿರುವಂತಹ ವಿಟಮಿನ್ ಎ, ಥೈಮಿನ್, ಫಾಲಟೆ ಮತ್ತು ರಿಬೊಫ್ಲಾವಿನ್ ಜತೆಗೆ ಕೆಲವೊಂದು ಆ್ಯಂಟಿಆಕ್ಸಿಡೆಂಟ್ ಗಳು ಕೂಡ ಇವೆ. ಆವಕಾಡೊಎಣ್ಣೆಯಲ್ಲಿ ಇರುವಂತಹ ಆರೋಗ್ಯ ಲಾಭಗಳು

ಹೃದಯದ ಆರೋಗ್ಯ ಸುಧಾರಿಸುವುದು

ಆವಕಾಡೊಎಣ್ಣೆಯಲ್ಲಿ ಉನ್ನತ ಮಟ್ಟದ ಬೀಟಾ-ಸಿಸ್ಟೊಸ್ಟರಾಲ್ ಇದೆ. ಈ ಕೊಲೆಸ್ಟ್ರಾಲ್‌ನ್ನು ನಮ್ಮ ದೇಹವು ಆರೋಗ್ಯಕಾರಿ ಕೊಬ್ಬು ಆಗಿ ಬಳಸಿಕೊಂಡು ಅಂಗಾಂಶಗಳಿಗೆ ಹಾನಿ ಆಗದಂತೆ ತಡೆಯುತ್ತದೆ. ಎಣ್ಣೆಯಲ್ಲಿ ಇರುವಂತಹ ಉರಿಯೂತ ಶಮನಕಾರಿ ಗುಣಗಳು ಅಪಧಮನಿ ಗೋಡೆಗಳಿಗೆ ಯಾವುದೇ ರೀತಿಯ ಹಾನಿ ಆಗದಂತೆ ತಡೆಯುತ್ತದೆ. ರಕ್ತನಾಳದಲ್ಲಿ ಪದರಗಳು ಜಮೆಯಾಗುವ ಕಾರಣದಿಂದಾಗಿ ಉಂಟಾಗುವ ಅಪಾಯವನ್ನು ಇದು ಕಡಿಮೆ ಮಾಡುವುದು. ಉರಿಯೂತ ಕಡಿಮೆ ಇರುವ ಕಾರಣದಿಂದಾಗಿ ಇದು ರಕ್ತದೊತ್ತಡವನ್ನು ಸರಿಯಾಗಿ ಇಡುತ್ತದೆ.

ಜೀರ್ಣಕ್ರಿಯೆಗೆ ನೆರವಾಗುವುದು

ಆಹಾರದಲ್ಲಿ ಆವಕಾಡೊ ತೈಲವನ್ನು ಬಳಸುವುದರಿಂದ ಹೊಟ್ಟೆಯ ಉಬ್ಬರ, ಎದೆ ಉರಿ, ಗ್ಯಾಸ್ ತುಂಬುವುದು, ಅಜೀರ್ಣ ಇತ್ಯಾದಿ ಸಮಸ್ಯೆಗಳನ್ನು ನಿವಾರಿಸುವುದು. ಆವಕಾಡೊತೈಲದಲ್ಲಿ ಇರುವಂತಹ ಬಹುಪರ್ಯಾಪ್ತ ಕೊಬ್ಬಿನಾಮ್ಲವು ಆಹಾರವನ್ನು ತುಂಬಾ ಸುಲಭವಾಗಿ ಜೀರ್ಣಿಸಲು ನೆರವಾಗುವುದು. ಈ ತೈಲವನ್ನು ಸೇವಿಸಿದರೆ ಅದರಿಂದ ಜೀರ್ಣಕ್ರಿಯೆ ವ್ಯವಸ್ಥೆಯು ತುಂಬಾ ಸುಧಾರಣೆ ಆಗುವುದು.

ತೂಕ ಕಳೆದುಕೊಳ್ಳಲು ಸಹಕಾರಿ

ಆವಕಾಡೊಎಣ್ಣೆಯು ದೇಹದಲ್ಲಿ ಜಮೆ ಆಗಿರುವ ಕೊಬ್ಬನ್ನು ಕರಗಿಸುವುದು ಎಂದು ಸಾಬೀತು ಆಗಿದೆ. ಒಲೆರಿಕ್ ಆಮ್ಲವು ಆವಕಾಡೊಎಣ್ಣೆಯಲ್ಲಿ ಅಧಿಕ ಮಟ್ಟದಲ್ಲಿ ಇರುವ ಕಾರಣದಿಂದಾಗಿ ಇದನ್ನು ಸೇವನೆ ಮಾಡಿದರೆ ಆಗ ಕೊಬ್ಬು ಕರಗಿಸುವುದು. ಇದರೊಂದಿಗೆ ಸರಿಯಾದ ಆಹಾರ ಕ್ರಮ ಮತ್ತು ವ್ಯಾಯಾಮ ಮಾಡಬೇಕು. ಎಣ್ಣೆಯು ತುಂಬಾ ದಪ್ಪವಾಗಿರುವ ಕಾರಣದಿಂದಾಗಿ ಇದು ದೀರ್ಘಕಾಲದ ತನಕ ಹೊಟ್ಟೆ ತುಂಬಿರುವಂತೆ ಮಾಡುತ್ತದೆ. ಇದರಿಂದ ದೈಹಿಕ ಚಟುವಟಿಕೆ ಮಾಡುವ ವೇಳೆ ದೇಹಕ್ಕೆ ಹೆಚ್ಚಿನ ಶಕ್ತಿ ಸಿಗುವುದು. ಇದನ್ನು ಆಹಾರಕ್ಕೆ ಅಥವಾ ಸಲಾಡ್ ಗೆ ವಿನೇಗರ್ ಮತ್ತು ತರಕಾರಿಗಳ ಜತೆಗೆ ಬಳಸಬಹುದು.

Most Read: ತ್ವಚೆಯ ಆರೋಗ್ಯಕ್ಕಾಗಿ ಅವೊಕ್ಯಾಡೊ ಬಳಸಿ

ದೇಹವನ್ನು ನಿರ್ವಿಷಗೊಳಿಸುವುದು

ಆವಕಾಡೊದೇಹದಲ್ಲಿ ಇರುವ ಹಾನಿಕಾರಕ ವಿಷವನ್ನು ತೆಗೆದು ಶುದ್ಧೀಕರಿಸುವುದು. ಇದರಲ್ಲಿ ನೈಸರ್ಗಿಕದತ್ತವಾಗಿ ಸಿಗುವಂತಹ ಅದ್ಭುತವಾದ ಮೆಗ್ನಿಶಿಯಂ ಅಂಶವಾದ ಕ್ಲೋರೊಫಿಲ್ ಇದೆ. ಈ ಅಂಶವು ದೇಹದಲ್ಲಿ ಇರುವಂತಹ ಭಾರೀ ಲೋಹ ಮತ್ತು ವಿಷಕಾರಿ ಅಂಶಗಳಾಗಿರುವ ಲೆಡ್ ಮತ್ತು ಪಾದರಸವನ್ನು ಮೆದುಳು, ಯಕೃತ್, ಕಿಡ್ನಿ ಮತ್ತು ಇತರ ಅಂಗಗಳಿಂದ ತೆಗೆಯುವುದು. ಕ್ಲೋರೊಫಿಲ್ ಅಣುವು ಮಾನವ ದೇಹದ ಸಂಪರ್ಕಕ್ಕೆ ಬಂದ ವೇಳೆ ಆಮ್ಲೀಯ ವಾತಾವರಣದಿಂದಾಗಿ ಇದು ಮೆಗ್ನಿಶಿಯಂ ಬಿಡುಗಡೆ ಮಾಡುವುದು. ಕ್ಲೋರೊಫಿಲ್ ಅಣುವು ಬಂಧಿಸಲ್ಪಟ್ಟ ವೇಳೆ ಅದು ಅಂಗಾಂಗಳಲ್ಲಿ ವಿಷಕಾರಿ ಅಂಶವು ನಿಲ್ಲದಂತೆ ಮಾಡುತ್ತದೆ ಮತ್ತು ಹೊಟ್ಟೆಯಿಂದಲೂ ಇದನ್ನು ಹೊರಗೆ ಹಾಕುವುದು.

ಉರಿಯೂತ ತಗ್ಗಿಸುವುದು

ಆವಕಾಡೊಎಣ್ಣೆಯಲ್ಲಿ ಇರುವಂತಹ ಕೆಲವೊಂದು ಗುಣಗಳು ಬಿಸಿಲಿನಿಂದ ಸುಟ್ಟ, ಕೀಟಗಳ ಕಡಿತ, ತಲೆಹೊಟ್ಟು, ಕಿಣ್ವಗಳು, ಸೋರಿಯಾಸಿಸ್, ಒಡೆದ ಪಾದಗಳು ಮತ್ತು ಇತರ ಕೆಲವೊಂದು ಸಮಸ್ಯೆಯಲ್ಲಿ ತುರಿಕೆ ಮತ್ತು ಉರಿಯೂತವನ್ನು ಕಡಿಮೆ ಮಾಡುವುದು. ಇದರಲ್ಲಿ ಇರುವಂತಹ ಏಕಪರ್ಯಾಪ್ತ ಒಲೆಕ್ ಆಮ್ಲವನ್ನು ಬಾಧಿತ ಜಾಗಕ್ಕೆ ಹಚ್ಚಿಕೊಂಡ ವೇಳೆ ಇದು ತುಂಬಾ ಶಮನ ನೀಡುವುದು. ಸೋರಿಯಾಸಿಸ್ ನಿಂದ ಬಳಲುತ್ತಿರುವಂತಹ ಜನರು ಆವಕಾಡೊತೈಲ ಮತ್ತು ವಿಟಮಿನ್ ಬಿ12 ಸೆರಮ್ ಬಳಸಿಕೊಂಡು ಅದರ ನಿವಾರಣೆ ಮಾಡಬಹುದು.

ಬೇಗನೆ ಗುಣಮುಖಗೊಳಿಸುವುದು

ಆವಕಾಡೊಎಣ್ಣೆಯಲ್ಲಿ ಇರುವಂತಹ ಚಿಕಿತ್ಸಕ ಗುಣವು ಗಾಯವನ್ನು ಬೇಗನೆ ಒಣಗುವಂತೆ ಮಾಡುವುದು. ಇದರಲ್ಲಿ ಅದ್ಭುತವಾದ ಶಮನಕಾರಿ ಗುಣಗಳು ಇವೆ. ಇದನ್ನು ಬೇಗನೆ ಗಾಯ ಒಣಗುವಂತೆ ಮಾಡಲು ಮತ್ತು ಗಾಯದ ಗುರುತು ಉಳಿದಂತೆ ಬಳಸಬಹುದು.

ರಕ್ತದೊತ್ತಡ ನಿಯಂತ್ರಿಸುವುದು

ಅಧಿಕ ರಕ್ತದೊತ್ತಡದಿಂದ ಬಳಲುತ್ತಾ ಇರುವಂತಹ ಜನರು ಆವಕಾಡೊತೈಲವನ್ನು ಬಳಸಿಕೊಳ್ಳಬಹುದು. ಅಧ್ಯಯನಗಳು ಹೇಳಿರುವ ಪ್ರಕಾರ ಅಧಿಕ ರಕ್ತದೊತ್ತಡ ತಡೆಯಲು ಅವಕಾಡೋ ತೈಲವು ತುಂಬಾ ಪರಿಣಾಮಕಾರಿ ಆಗಿದೆ. ಇದರಲ್ಲಿ ಇರುವಂತಹ ಕೊಬ್ಬಿನಾಮ್ಲವು ಕಿಡ್ನಿಯಲ್ಲಿ ಉಂಟಾಗುವಂತಹ ರಾಸಾಯನಿಕ ಪ್ರಕ್ರಿಯೆಯನ್ನು ನಿಯಂತ್ರಿಸುವುದು. ಇದರ ಪರಿಣಾಮವಾಗಿ ಹಾರ್ಮೋನು ಮಟ್ಟದಲ್ಲಿ ಬದಲಾವಣೆ ಆಗುವುದು.

ಕ್ಯಾನ್ಸರ್ ನಿಂದ ರಕ್ಷಣೆ

ಅಧ್ಯಯನಗಳು ಕಂಡುಕೊಂಡಿರುವ ವಿಚಾರವೆಂದರೆ ಆವಕಾಡೊತೈಲವು ನಿಯಮಿತವಾಗಿ ಬಳಸಿಕೊಂಡರೆ ಇದು ಯಕೃತ್ ಮತ್ತು ಬಾಯಿಯ ಕ್ಯಾನ್ಸರ್ ಹರಡುವುದನ್ನು ತಡೆಯುವುದು. ಇದು ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವಂತಹ ಮಹಿಳೆಯರಿಗೆ ತುಂಬಾ ಒಳ್ಳೆಯದು.

ಅದಾಗ್ಯೂ, ನಿಮ್ಮ ಆಹಾರ ಕ್ರಮದಲ್ಲಿ ಆವಕಾಡೊತೈಲವನ್ನು ಬಳಸಿಕೊಳ್ಳುವ ಮೊದಲು ವೈದ್ಯರನ್ನು ಸಂಪರ್ಕಿಸಿ. ಆವಕಾಡೊತೈಲದಲ್ಲಿ ಕೀಮೋಪ್ರೆವೆಂಟಿವ್ ಪರಿಣಾಮದ ಕಾರಣದಿಂದಾಗಿ ಆವಕಾಡೊಹಣ್ಣಿನಲ್ಲಿ ಪೈಥೋಕೆಮಿಕಲ್ ಇದೆ. ಈ ಆರೋಗ್ಯ ಲಾಭಗಳ ಜತೆಗೆ ಈ ಎಣ್ಣೆಯು ಕಣ್ಣಿನ ದೃಷ್ಟಿ, ಬಾಯಿಯ ಆರೋಗ್ಯ ಮತ್ತು ಜೀರ್ಣಕ್ರಿಯೆಯನ್ನು ಪರಿಣಾಮಕಾರಿ ಆಗಿ ಸುಧಾರಣೆ ಮಾಡುವುದು.

ಆವಕಾಡೊಎಣ್ಣೆಯಿಂದ ತಯಾರಿಸಿದ ಕೆಲವು ಖಾದ್ಯಗಳು 1.ಹುರಿದ ಹೂಕೋಸಿನ ಅನ್ನ

ಬೇಕಾಗುವ ಸಾಮಗ್ರಿಗಳು

•2 ಹೂಕೋಸಿನ ತಲೆಯನ್ನು ಸುಮಾರು ½ ಇಂಚಿನಷ್ಟು ತುಂಡು ಮಾಡಿಕೊಳ್ಳಿ.

•11/2 ಚಮಚ ಆವಕಾಡೊಎಣ್ಣೆ

•¾ ಚಮಚ ಉಪ್ಪು

ವಿಧಾನ

•ಒವೆನ್ ನ್ನು 230 ಡಿಗ್ರಿ ಸಿಯಲ್ಲಿಡಿ.

•ಅಲ್ಯುಮಿನಿಯಂ ಫಾಯಿಲ್ ನ ಮೂರು ಬೇಕಿಂಗ್ ಶೀಟ್ ತಯಾರಿಸಿಕೊಳ್ಳಿ ಮತ್ತು ಇದಕ್ಕೆ ಕುಕ್ಕಿಂಗ್ ಸ್ಪ್ರೇ ಮಾಡಿ.

•ಹೂಕೋಸನ್ನು ನೀವು ರುಬ್ಬಿಕೊಂಡು ಅದು ಅಕ್ಕಿಯ ಗಾತ್ರಕ್ಕೆ ಬರುವಂತೆ ಮಾಡಿ.

•ಇದಕ್ಕೆ ಈಗ ನೀವು ಆವಕಾಡೊಎಣ್ಣೆ ಸಿಂಪಡಿಸಿಕೊಂಡು ಮಿಶ್ರಣ ಮಾಡಿ.

•21/2 ಕಪ್ ನಷ್ಟು ಹೂಕೋಸು ಅನ್ನವನ್ನು ಒಂದೊಂದು ಬೇಕಿಂಗ್ ಶೀಟ್ ನಲ್ಲಿ ಹಾಕಿ.

•ಇದು ಬಂಗಾರದ ಬಣ್ಣಕ್ಕೆ ಬರುವ ತನಕ 16 ನಿಮಿಷ ಬೇಯಿಸಿ.

•ಒವೆನ್ ನಿಂದ ತೆಗೆಯಿರಿ ಮತ್ತು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ. ಮತ್ತೆ ಇದನ್ನು ಒವೆನ್ ನಲ್ಲಿ ಇಡಿ, ಆರು ನಿಮಿಷ ಕಾಲ ಹಾಗೆ ಇರಲಿ.

•ಹೀಗೆ ನೀವು ಮುಂದುವರಿಸಬೇಕು.

•ಉಪ್ಪು ಮತ್ತು ಕರಿಮೆಣಸಿನ ಹುಡಿ ಹಾಕಿ.

Most Read: ಬೆಣ್ಣೆ ಹಣ್ಣಿನಲ್ಲಿದೆ-ಬೆಣ್ಣೆಯಂತಹ ಸೌಂದರ್ಯ! ಪ್ರಯತ್ನಿಸಿ ನೋಡಿ...

*ಜೋಳ, ಆವಕಾಡೊಮತ್ತು ಟೊಮೆಟೊ ಸಲಾಡ್

ಬೇಕಾಗುವ ಸಾಮಗ್ರಿಗಳು

•2 ಕಪ್ ಬೇಯಿಸಿದ ಜೋಳ(ತಾಜಾ ಅಥವಾ ಶೀತಲೀಕರಿಸಿದ ಆಗಿರಬಹುದು)

•2 ಅವಕಾಡೊ(1/2 ಇಂಚಿನ ತುಂಡು ಮಾಡಿ)

•1 ಪಿಂಟ್ ಚೆರ್ರಿ ಟೊಮೆಟೊ(ಭಾಗ ಮಾಡಿರುವುದು)

•2 ಚಮಚ ಆಲಿವ್ ತೈಲ

•½ ಚಮಚ ಲಿಂಬೆ ತುರಿ

•1/3 ಕಪ್ ಕತ್ತರಿಸಿರುವ ಸಿಲಾಂಟ್ರೊ

•¼ ಚಮಚ ಉಪ್ಪು

•¼ ಚಮಚ ಕರಿಮೆಣಸಿನ ಹುಡಿ

ತಯಾರಿಸುವ ವಿಧಾನ

•ಜೋಳ, ಅವಕಾಡೊ, ಟೊಮೆಟೊ ಮತ್ತು ಈರುಳ್ಳಿಯನ್ನು ದೊಡ್ಡ ಪಿಂಗಾಣಿಯಲ್ಲಿ ಹಾಕಿಕೊಳ್ಳಿ.

•ಇನ್ನೊಂದು ಪಿಂಗಾಣಿಯಲ್ಲಿ ಬೇರೆ ಸಾಮಗ್ರಿಗಳನ್ನು ಮಿಶ್ರಣ ಮಾಡಿ, ಇದನ್ನು ಈಗ ಸಲಾಡ್ ಗೆ ಹಾಕಿ ಮತ್ತು ಮಿಶ್ರಣ ಮಾಡಿ.

•ಒಂದು ಅಥವಾ ಎರಡು ಗಂಟೆಗಳ ಕಾಲ ಈ ಸಲಾಡ್ ನ್ನು ಫ್ರಿಡ್ಜ್ ನಲ್ಲಿ ಇಡಿ.

ಆವಕಾಡೊತೈಲದ ಅಡ್ಡ ಪರಿಣಾಮಗಳು

•ನಿಮಗೆ ಬಾಳೆಹಣ್ಣು ಮತ್ತು ಕಿವಿ ಹಣ್ಣುಗಳಿಂದ ಅಲರ್ಜಿ ಇದ್ದರೆ ನೀವು ಆವಕಾಡೊತೈಲ ಬಳಸಬೇಡಿ. ಇದರಲ್ಲಿ ಇರುವಂತಹ ಅಲರ್ಜಿಯ ಗುಣಗಳಿಂದಾಗಿ ವಾಕರಿಕೆ, ವಾಂತಿ, ಸೆಳೆತ, ಭೇದಿ ಮತ್ತು ಇತರ ಹೊಟ್ಟೆಯ ಸಮಸ್ಯೆ ಉಂಟು ಮಾಡಬಹುದು.

•ಕೆಲವು ಜನರಲ್ಲಿ ಇದು ಚರ್ಮದ ಕಿರಿಕಿರಿ ಉಂಟು ಮಾಡುವುದು, ಇದರಿಂದಾಗಿ ಚರ್ಮದಲ್ಲಿ ದದ್ದುಗಳು, ತುರಿಕೆ ಮತ್ತು ಚರ್ಮ ಕೆಂಪಾಗುವುದು.

•ಗರ್ಭಿಣಿ ಮತ್ತು ಮಗುವಿಗೆ ಸ್ತನಪಾನ ಮಾಡಿಸುವ ಮಹಿಳೆಯರು ಆವಕಾಡೊತೈಲ ಕಡೆಗಣಿಸಬೇಕು. ಇದರಿಂದ ಕೆಲವು ಸಮಸ್ಯೆಗಳು ಉಂಟಾಗಬಹುದು.

•ಲ್ಯಾಟೆಕ್ಸ್ ಅಲರ್ಜಿ ಇರುವಂತಹವರು ಕೂಡ ಆವಕಾಡೊತೈಲ ಕಡೆಗಣಿಸಿ.

•ಅತೀ ಸೂಕ್ಷ್ಮತೆ ಇರುವಂತಹ ಜನರು ಕೂಡ ಆವಕಾಡೊತೈಲ ಬಳಸಬಾರದು.

 
ಹೆಲ್ತ್