Back
Home » ಇತ್ತೀಚಿನ
ಮೈಕ್ರೋಮ್ಯಾಕ್ಸ್‌ನ 'ಆಂಡ್ರಾಯ್ಡ್‌ ಟಿವಿ' ಮತ್ತು 'ವಾಶಿಂಗ್ ಮಿಶಿನ್' ಲಾಂಚ್!.ಬೆಲೆ?
Gizbot | 11th Jul, 2019 11:33 AM
 • ಆಂಡ್ರಾಯ್ಡ್‌ ಟಿವಿ

  ಮೈಕ್ರೋಮ್ಯಾಕ್ಸ್ ಕಂಪನಿಯು ಹೊಸದಾಗಿ ಆಂಡ್ರಾಯ್ಡ್‌ ಟಿವಿಯ ಸರಣಿಯನ್ನು ಲಾಂಚ್ ಮಾಡಿದ್ದು, ಅವುಗಳು ಕ್ರಮವಾಗಿ 32(80 cms)ಇಂಚು, 40 (102 cms)ಇಂಚು ಮತ್ತು 43(109 cms)ಇಂಚಿನ ಮೂರು ವೇರಿಯಂಟ್ ಆಯ್ಕೆಗಳನ್ನು ಹೊಂದಿದೆ. ಈ ಮೂರು ಆಂಡ್ರಾಯ್ಡ್‌ ಟಿವಿಗಳು ಗೂಗಲ್ ವಾಯಿಸ್‌ ಅಸಿಸ್ಟಂಟ್ ಸೌಲಭ್ಯವನ್ನು ಪಡೆದುಕೊಂಡಿದ್ದು, ವಾಯಿಸ್‌ ಮೂಲಕ ನಿಯಂತ್ರಿಸಬಹುದು.


 • ವಾಶಿಂಗ್ ಮಿಶಿನ್

  ಮೈಕ್ರೋಮ್ಯಾಕ್ಸ್‌ ಹೊಸದಾಗಿ ಮೊದಲ ಬಾರಿಗೆ ವಾಶಿಂಗ್ ಮಿಶಿನ್ ಉತ್ಪನ್ನವನ್ನು ಪರಿಚಯಿಸಿದ್ದು, ಒಟ್ಟು ನಾಲ್ಕು ವೇರಿಯಂಟ್‌ ಆಯ್ಕೆಗಳನ್ನು ಹೊಂದಿದೆ. ಅವುಗಳು ಕ್ರಮವಾಗಿ 6kg, 6.5kg, 7kg ಮತ್ತು 8kg ಯ ಸಾಮರ್ಥ್ಯದಲ್ಲಿದ್ದು, ಎಲ್ಲ ವೇರಿಯಂಟ್‌ಗಳು ಪೂರ್ಣ ಆಟೋಮ್ಯಾಟಿಕ್ ಮಾದರಿಯ ಟಾಪ್‌ ಲೋಡಿಂಗ್ ವಾಶಿಂಗ್ ಮಶಿನ್‌ಗಳಾಗಿವೆ.


 • ಗೂಗಲ್ ಮಾನ್ಯತೆ

  ಮೈಕ್ರೋಮ್ಯಾಕ್ಸ್‌ ಆಂಡ್ರಾಯ್ಡ್‌ ಟಿವಿ ಸರಣಿಯು ಗೂಗಲ್ ಸಂಸ್ಥೆಯ ಮಾನ್ಯತೆಯನ್ನು ಪಡೆದುಕೊಂಡಿದೆ. ಇದರೊಂದಿಗೆ ಆಂಡ್ರಾಯ್ಡ್‌ ಟಿವಿಗಳು ಗೂಗಲ್‌ ಅಸಿಸ್ಟಂಟ್ ಸೌಲಭ್ಯವನ್ನು ಸಹ ಪಡೆದಿರುವ ಜೊತೆಗೆ ಗೂಗಲ್ ಕ್ರೋಮ್‌ಕಾಸ್ಟ್‌ ಸೌಲಭ್ಯವನ್ನು ಸಹ ಹೊಂದಿದೆ. ಇತ್ತೀಚಿನ ಆಯ್ಕೆಗಳು ಸೇರಿದಂತೆ ಪ್ರಮುಖ ಮನರಂಜನೆಯ ಆಪ್ಸ್‌ಗಳನ್ನು ಸಹ ಕಾಣಬಹುದಾಗಿದೆ.


 • ಬೆಲೆ ಮತ್ತು ಲಭ್ಯತೆ

  ಮೈಕ್ರೋಮ್ಯಾಕ್ಸ್‌ ಹೊಸದಾಗಿ ಬಿಡುಗಡೆ ಮಾಡಿರುವ ಆಂಡ್ರಾಯ್ಡ್‌ ಟಿವಿ ಸರಣಿಯು ಇಂದಿನಿಂದ (ಜುಲೈ 11) ಇ ಕಾಮರ್ಸ್ ಜಾಲತಾಣ ಫ್ಲಿಪ್‌ಕಾರ್ಟ್‌ನಲ್ಲಿ ಗ್ರಾಹಕರಿಗೆ ದೊರೆಯಲಿದ್ದು, ಆರಂಭಿಕ ಬೆಲೆಯು 13,999ರೂ.ಗಳಾಗಿದೆ. ಹಾಗೆಯೇ ಇದೇ ಜುಲೈ 15ರಂದು ಇ ಕಾಮರ್ಸ್ ತಾಣ ಫ್ಲಿಪ್‌ಕಾರ್ಟ್‌ನಲ್ಲಿ 'ಪೂರ್ಣ ಆಟೋಮ್ಯಾಟಿಕ್ ವಾಶಿಂಗ್ ಮಿಶಿನ್' ಉತ್ಪನ್ನವು ಖರೀದಿಗೆ ಲಭ್ಯವಾಗಲಿದ್ದು, ಆರಂಭಿಕ ಬೆಲೆಯು 10,999ರೂ.ಗಳು ಆಗಿದೆ.
ಸ್ವದೇಶಿ ಮೂಲದ ಎಲೆಕ್ಟ್ರಾನಿಕ್ಸ್ ಕಂಪನಿಯ ಮೈಕ್ರೋಮ್ಯಾಕ್ಸ್, ಈಗಾಗಲೇ ಅಗ್ಗದ ಮೊಬೈಲ್‌ ಮತ್ತು ಟಿವಿಗಳ ಡಿವೈಸ್‌ಗಳ ಮೂಲಕ ಮಾರುಕಟ್ಟೆಯಲ್ಲಿ ಚಿತಪರಿಚಿತವಾಗಿದ್ದ ಕಂಪನಿಯು ಇತ್ತೀಚಿನ ದಿನಗಳಲ್ಲಿ ಯಾವುದೇ ಉತ್ಪನ್ನ ಪರಿಚಯಿಸಿರಲಿಲ್ಲ. ಆದರೆ ಇದೀಗ ಸದ್ದಿಲ್ಲದೇ ಸ್ಮಾರ್ಟ್‌ಟಿವಿ ಮತ್ತು ವಾಶಿಂಗ್ ಮಿಶಿನ್ ಉತ್ಪನ್ನಗಳನ್ನು ಬಿಡುಗಡೆ ಮಾಡುವ ಮೂಲಕ ಮತ್ತೊಮ್ಮೆ ಮಾರುಕಟ್ಟೆಗೆ ಗ್ರ್ಯಾಂಡ್‌ ಎಂಟ್ರಿ ಕೊಟ್ಟಿದೆ.

ಹೌದು, ಭಾರತದ ಮೈಕ್ರೋಮ್ಯಾಕ್ಸ್ ಕಂಪನಿಯು ಇದೀಗ ಹೊಸದಾಗಿ 'ಆಂಡ್ರಾಯ್ಡ್‌ ಟಿವಿ' ಮತ್ತು ಆಟೋಮ್ಯಾಟಿಕ್ ಟಾಪ್‌ ಲೋಡೆಡ್‌ 'ವಾಶಿಂಗ್‌ ಮಿಶಿನ್' ಉತ್ಪನ್ನಗಳನ್ನು ದೇಶಿಯ ಮಾರುಕಟ್ಟೆಗೆ ಲಾಂಚ್‌ ಮಾಡಿದೆ. ಕಂಪನಿಯ ಹೊಸ 'ಆಂಡ್ರಾಯ್ಡ್‌ ಟಿವಿ'ಗಳು ಗೂಗಲ್‌ ಮಾನ್ಯತೆ ಪಡೆದಿರುವ ಜೊತೆಗೆ ಬಿಲ್ಟ್‌ ಇನ್‌ 'ಗೂಗಲ್‌ ಅಸಿಸ್ಟಂಟ್' ಮತ್ತು 'ಗೂಗಲ್‌ ಕ್ರೋಮ್‌ಕಾಸ್ಟ್‌' ಆಯ್ಕೆಗಳನ್ನು ಒಳಗೊಂಡಿದೆ.

ಕಂಪನಿಯ ಹೊಸ ಆಂಡ್ರಾಯ್ಡ್‌ ಟಿವಿಯು 32ಇಂಚು, 40ಇಂಚು ಮತ್ತು 43ಇಂಚಿನ ಡಿಸ್‌ಪ್ಲೇ ಆಯ್ಕೆಯಗಳಲ್ಲಿ ಲಭ್ಯವಿದ್ದು, ಇದರೊಂದಿಗೆ ವಾಶಿಂಗ್ ಮಿಶಿನ್‌ ಕೂಡಾ 6kg, 6.5kg, 7kg ಮತ್ತು 8kg ಸಾಮರ್ಥ್ಯದ ಆಯ್ಕೆಗಳಲ್ಲಿ ಗ್ರಾಹಕರಿಗೆ ದೊರೆಯಲಿವೆ. ಹಾಗಾದರೇ ಮೈಕ್ರೋಮ್ಯಾಕ್ಸ್‌ ಕಂಪನಿಯ ಆಂಡ್ರಾಯ್ಡ್‌ ಟಿವಿ ಮತ್ತು ವಾಶಿಂಗ್ ಮಿಶಿನ್ ಉತ್ಪನ್ನಗಳ ಫೀಚರ್ಸ್‌ಗಳೆನು ಎಂಬುದನ್ನು ತಿಳಿಯಲು ಮುಂದೆ ಓದಿರಿ.

ಓದಿರಿ : ಟೆಕ್ನೋ 'ಫ್ಯಾಂಟಮ್ 9' 6GB RAM ಸ್ಮಾರ್ಟ್‌ಫೋನ್‌ ಲಾಂಚ್!.ಬೆಲೆ 14,999ರೂ!

   
 
ಹೆಲ್ತ್