Back
Home » ಆರೋಗ್ಯ
ಸೋನು ಸೂದ್‌ರವರ ವ್ಯಾಯಾಮದ ದಿನಚರಿ ಮತ್ತು ಆಹಾರಕ್ರಮಗಳು
Boldsky | 30th Jul, 2019 10:50 AM

ಪಂಜಾಬ್‌ನಲ್ಲಿ ಜುಲೈ 30,1973ರಂದು ಜನಿಸಿದ ಸೋನು ಸೂದ್ ಇಂದು ಬಾಲಿವುಡ್‌ನ ಜನಪ್ರಿಯ ನಟರಲ್ಲೊಬ್ಬರು. ಹಲವಾರು ಯಶಸ್ವಿ ಚಲನಚಿತ್ರಗಳನ್ನು ನೀಡಿದ ಬಳಿಕ ಇವರ ಜನಪ್ರಿಯತೆ ಹೆಚ್ಚುತ್ತಿದ್ದು ಈ ಮೂಲಕ ಅವರು ಅಪಾರವಾದ ಅಭಿಮಾನಿಗಳನ್ನು ಪಡೆದಿದ್ದಾರೆ. ವಿಶೇಷವಾಗಿ 'ದಬಂಗ್' ಚಿತ್ರದಲ್ಲಿ ಇವರು ನಿರ್ವಹಿಸಿದ ಖಳನ ಪಾತ್ರ ಅಪಾರವಾದ ವಿಮರ್ಶೆಗೂ ಒಳಗಾಗಿ ಪ್ರಶಂಸೆಯನ್ನು ಪಡೆದಿದ್ದಾರೆ. ವಿಶೇಷವಾಗಿ ಇವರ ದೇಹದಾರ್ಢ್ಯ ಹೆಚ್ಚಿನ ಚರ್ಚೆಗೆ ಗ್ರಾಸವಾಗಿದೆ.

ದಬಂಗ್ ಚಿತ್ರದ ಛೇಡಿ ಸಿಂಗ್ ಪಾತ್ರಕ್ಕಾಗಿ ಇವರು ತಮ್ಮ ದೇಹವನ್ನು ಅತಿಯಾಗಿ ದಂಡಿಸಿ ಮಾರ್ಪಾಡಿಸಿದ್ದು ಪಾತ್ರಕ್ಕೆ ಅಗತ್ಯಕ್ಕೂ ಹೆಚ್ಚಿನ ನ್ಯಾಯ ಒದಗಿಸಿದ್ದಾರೆ. ಈ ವ್ಯಾಯಾಮದ ದಿನಚರಿ ಅನುಸರಿಸಲು ಅತ್ಯುತ್ತಮ ಆಯ್ಕೆಯಾಗಿದ್ದು ಇವರು ಈ ದೇಹವನ್ನು ಪಡೆಯುವಂತಾಗಲು ಖ್ಯಾತ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಸಹಾ ನೆರವಾಗಿದ್ದಾರೆ. ಇವರ ದಿನಚರಿ ಬಹಳ ಕಟ್ಟುನಿಟ್ಟಿನ ನಿಯಮಗಳನ್ನು ಹೊಂದಿದ್ದು ಒಂದು ದಿನವೂ ತಪ್ಪಿಸದೇ ತಮ್ಮ ನಿತ್ಯದ ವ್ಯಾಯಾಮದ ಅಭ್ಯಾಸಗಳನ್ನು ಮುಂದುವರೆಸಿಕೊಂಡು ಬರುತ್ತಿದ್ದಾರೆ. ಅಲ್ಲದೇ ಇವರು ಸೇವಿಸುವ ಆಹಾರಕ್ರಮವೂ ಕಟ್ಟುನಿಟ್ಟಿನದ್ದಾಗಿದ್ದು ದೇಹದಾರ್ಢ್ಯತೆಯನ್ನು ಉಳಿಸಿಕೊಳ್ಳಲು ನೆರವಾಗಿದೆ. ಬನ್ನಿ, ಇವರ ಈ ಆರೋಗ್ಯಕರ ದೇಹಸಂಪತ್ತನ್ನು ಒದಗಿಸಿರುವ ವ್ಯಾಯಮ ದಿನಚರಿ ಮತ್ತು ಆಹಾರಕ್ರಮಗಳು ಹೇಗಿವೆ ಎಂಬುದನ್ನು ನೋಡೋಣ...

ಸೋನು ಸೂದ್ ರವರ ಆಹಾರಕ್ರಮ

* ಇವರು ಅಪ್ಪಟ ಸಸ್ಯಾಹಾರಿಯಾಗಿದ್ದರೂ ಮೊಟ್ಟೆಯನ್ನು ಮಾತ್ರವೇ ಹೆಚ್ಚುವರಿಯಾಗಿ ಸೇವಿಸುತ್ತಾರೆ ಹಾಗೂ ಇವರ ಅಹಾರದಲ್ಲಿ ಏಕದಳ ಮತ್ತು ದ್ವಿದಳ ಧಾನ್ಯಗಳು ಹೆಚ್ಚಿನ ಪ್ರಮಾಣದಲ್ಲಿದ್ದು ಪ್ರೋಟೀನ್ ಯುಕ್ತವಾಗಿವೆ. ಇವರು ಮದ್ಯಪಾನವನ್ನಾಗಲೀ ಧೂಮಪಾನವನ್ನಾಗಲೀ ಮಾಡುವುದಿಲ್ಲ.

* ಇವರ ಪ್ರತಿದಿನದ ಮುಂಜಾನೆಯ ಆಹಾರದಲ್ಲಿ ಸಾಕಷ್ಟು ಹಣ್ಣುಗಳು ಮತ್ತು ಗೋಧಿಯ ಅರಳು (ಫ಼್ಲೇಕ್ಸ್) ಅಥವಾ ಮುವೇಸ್ಲಿ ಮತ್ತು ತಾಜಾ ಹಣ್ಣಿನ ರಸ ಒಳಗೊಂಡಿರುತ್ತವೆ.

* ಉಪಾಹಾರದಲ್ಲಿ ಇವರು ಎಂಟು ಮೊಟ್ಟೆಗಳಿಂದ ತಯಾರಿಸಿದ ಆಮ್ಲೆಟ್ ಒಂದನ್ನು ಸೇವಿಸುತ್ತಾರೆ.

* ಮದ್ಯಾಹ್ನದ ಊಟದಲ್ಲಿ ದಾಲ್, ರೋಟಿ, ಸಬ್ಜಿ ಮತ್ತು ಒಂದು ಕಪ್ ಮೊಸರು ಇಷ್ಟನ್ನೇ ಸೇವಿಸುತ್ತಾರೆ.

* ಸಂಜೆಯ ತಿಂಡಿಯ ರೂಪದಲ್ಲಿ ಕಂದು ಬ್ರೆಡ್ ಸ್ಯಾಂಡ್ವಿಚ್ ಒಂದನ್ನು ಸೇವಿಸುತ್ತಾರೆ.

* ರಾತ್ರಿಯ ಊಟದಲ್ಲಿ ಸಾಮಾನ್ಯವಾಗಿ ಸೂಪ್, ಸಾಲಾಡ್ ಗಳು, ಹಸಿ ತರಕಾರಿ ಮತ್ತು ಚಪಾತಿ ಇರುತ್ತವೆ.

* ಅಲ್ಲದೇ ಪ್ರತಿಬಾರಿಯ ವ್ಯಾಯಾಮದ ಬಳಿಕ ಪ್ರೋಟೀನ್ ಶೇಕ್ ಪೇಯವನ್ನು ಹಾಗೂ ಮೊಳಕೆಬರಿಸಿದ ಧಾನ್ಯಗಳು ಮತ್ತು ಸಾಲಾಡ್ ನೊಂದಿಗೆ ಸೇವಿಸುತ್ತಾರೆ.

ಸೋನು ಸೂದ್ ರವರ ವ್ಯಾಯಾಮ ದಿನಚರಿ

ಇವರು ತಮ್ಮನ್ನು ತಾವೇ ವ್ಯಾಯಾಮದ ಪಟು ಎಂದು ಬಿಂಬಿಸಿಕೊಳ್ಳುತ್ತಾರೆ. ನಿತ್ಯವೂ ಸುಮಾರು ಎರಡು ಘಂಟೆಗಳ ಕಾಲ ಇವರು ವ್ಯಾಯಮಶಾಲೆಯಲ್ಲಿ ವ್ಯಾಯಾಮ ಮಾಡುತ್ತಾರೆ. ಪ್ರತಿವಾರವೂ ಇವರು ತಮ್ಮ ವ್ಯಾಯಾಮದ ಅಭ್ಯಾಸಗಳನ್ನು ಬದಲಿಸುತ್ತಾ ಇರುತ್ತಾರೆ. ಇವರ ವ್ಯಾಯಾಮದ ದಿನಚರಿಯಲ್ಲಿ ಒಳಗೊಂಡಿರುವ ಅಂಶಗಳೆಂದರೆ:

* ಇಪ್ಪತ್ತು ನಿಮಿಷ ಹೃದಯಬಡಿತ ಹೆಚ್ಚಿಸುವ ವ್ಯಾಯಾಮಗಳು

* ಬಳಿಕ ಬಿಸಿಯಾಗಿರುವ ದೇಹವನ್ನು ತಣಿಸಲು ಸರಳ ಸೆಳೆತದ ವ್ಯಾಯಾಮಗಳು

* ನಂತರ ಹೊಟ್ಟೆಯ ಸ್ನಾಯುಗಳನ್ನು ಹುರಿಗಟ್ಟಿಸುವ ವ್ಯಾಯಾಮವನ್ನು ಇಪ್ಪತ್ತು ನಿಮಿಷ ಮಾಡುತ್ತಾರೆ

* ನಂತರ ಕಡಿಮೆ ತೂಕದ ಉಪಕರಣಗಳನ್ನು ಬಳಸಿ ಹೆಚ್ಚಿನ ಪ್ರಮಾಣದ ವ್ಯಾಯಾಮಗಳನ್ನು ಕ್ರಮೇಣವಾಗಿ ಹೆಚ್ಚಿಸುತ್ತಾ ಹೋಗುತ್ತಾರೆ.

* ನಂತರ ಸುಮಾರು ನಲವತ್ತು ನಿಮಿಷದ ಜಾಗಿಂಗ್ ಮಾಡುತ್ತಾರೆ

* ಇವುಗಳ ಹೊರತಾಗಿ, ಒಂದು ವೇಳೆ ಚಿತ್ರೀಕರಣದ ಸಂದರ್ಭಗಳಲ್ಲಿ ಹತ್ತಿರದಲ್ಲಿ ವ್ಯಾಯಾಮಶಾಲೆ ಲಭ್ಯವಿಲ್ಲದಿದ್ದರೆ ಇವರು ಆದಷ್ಟೂ ದೂರ ನಡೆದೇ ಹೋಗುತ್ತಾರೆ. ಇದರ ಜೊತೆಗೇ ಪ್ರತಿ ಎರಡು ತಿಂಗಳಿಗೊಂದು ಬಾರಿ ಹದಿನೈದರಿಂದ ಇಪ್ಪತ್ತು ದಿನಗಳ ಕಾಲ ಕಿಕ್ ಬಾಕ್ಸಿಂ ಅಭ್ಯಾಸವನ್ನೂ ನಡೆಸುತ್ತಾರೆ.

ವ್ಯಾಯಮದ ಕುರಿತು ಸೋನು ಸೂದ್ ನೀಡುವ ಸಲಹೆಗಳು:

* ಅತ್ಯುತ್ತಮ ದೇಹದಾರ್ಢ್ಯತೆ ಪಡೆಯಲು ಯಾವುದೇ ಅಡ್ಡದಾರಿ ಇಲ್ಲ. ಹಾಗಾಗಿ ಉತ್ತಮ ದೇಹದಾರ್ಢ್ಯ ಪಡೆಯಬೇಕೆಂದರೆ ಕಟ್ಟುನಿಟ್ಟು ಪಾಲಿಸಲೇಬೇಕು.

* ಯಾವುದೇ ಸಂಗತಿಯಲ್ಲಿ ಹೆಚ್ಚಿನ ಒತ್ತಡ ಬೇಡ. ಜೀವನದಲ್ಲಿ ಸಾಕಷ್ಟು ನಗುವಿರಲಿ, ಇದು ನಿಮ್ಮ ದೇಹವನ್ನು ಮತ್ತು ಮನಸ್ಸನ್ನು ಪ್ರಫುಲ್ಲಗೊಳಿಸುವ ಮೂಲಕ ನಿಮ್ಮನ್ನು ಹೆಚ್ಚು ಸಂತೋಷವಾಗಿರಿಸಲು ನೆರವಾಗುತ್ತದೆ.

* ಸಾಕಷ್ಟು ಪ್ರಮಾಣದ ನಿದ್ದೆಯನ್ನು ಪಡೆಯುವುದು ಅವಶ್ಯಕ.

   
 
ಹೆಲ್ತ್