ಮಧ್ಯಮ ವರ್ಗದ ಮೊಬೈಲ್ ಪ್ರಿಯರನ್ನು ಸೆಳೆಯಲು ಮುಂದಾಗಿರುವ ಹಾನರ್ ಕಂಪೆನಿ ಬಜೆಟ್ ಬೆಲೆಯ 'ಹಾನರ್ 10 ಲೈಟ್' ಸ್ಮಾರ್ಟ್ಫೋನ್ಗೆ ಪ್ರೀಮಿಯಮ್ ಟಚ್ ನೀಡಿದೆ. ಹಾನರ್ 10 ಲೈಟ್' ಸ್ಮಾರ್ಟ್ಫೋನ್ ಡಿಸ್ಪ್ಲೇ ಬಹುತೇಕ ಬೆಜೆಲ್ ಲೆಸ್ ಆಗಿದ್ದು, ವಾಟರ್ಡ್ರಾಪ್ ಶೈಲಿಯ ನೋಚ್ ಅನ್ನು ಹೊಂದಿರುವುದು ಸ್ಮಾರ್ಟ್ಫೋನ್ ಲುಕ್ ಅನ್ನು ಹೆಚ್ಚಿಸಿದೆ. ಇನ್ನು ಹಿಂಭಾಗದಲ್ಲಿ ಎರಡು ಕ್ಯಾಮೆರಾಗಳು ಹಾಗೂ ಫಿಂಗರ್ಪ್ರಿಂಟ್ ಫೀಚರ್ ಆಯ್ಕೆಯ ವಿನ್ಯಾಸವನ್ನು ಹೊಂದಿದೆ.
'ಹಾನರ್ 10 ಲೈಟ್' ಸ್ಮಾರ್ಟ್ಫೋನಿನಲ್ಲಿ 21-ಇಂಚಿನ ಡಿಸ್ಪ್ಲೇಯನ್ನು ಅಳವಡಿಸಲಾಗಿದ್ದು, ಡಿಸ್ಪ್ಲೇ ಬಹುತೇಕ ಬೆಜೆಲ್ಲೆಸ್ ಆಗಿದೆ. 1080x2340 ಸಾಮರ್ಥ್ಯದ ಪೂರ್ಣ ಹೆಚ್ಡಿ ಪ್ಲಸ್ ಡಿಸ್ಪ್ಲೇ ಮಲ್ಟಿಮೀಡಿಯಾ ಪ್ರಿಯರಿಗೆ ಹೇಳಿಮಾಡಿಸಿದಂತಿದೆ. 415ppi ಪಿಕ್ಸೆಲ್ ಸಾಂದ್ರತೆಯ ಈ ಡಿಸ್ಪ್ಲೇ ಬಜೆಟ್ ಸ್ಮಾರ್ಟ್ಫೋನ್ಗಳಲ್ಲಿ ಇರುವುದು ಇದಕ್ಕೆ ಕಾರಣ ಎನ್ನಬಹುದು.
'ಹಾನರ್ 10 ಲೈಟ್' ಸ್ಮಾರ್ಟ್ಫೋನಿನಲ್ಲಿ ಆಕ್ಟಕೋರ್ 'ಹಿಸಿಲಿಕಾನ್ ಕಿರಿನ್ 710' ಪ್ರೊಸೆಸರ್ ಅನ್ನು ಅಳವಡಿಸಲಾಗಿದೆ. 4GB ಮತ್ತು 6GB RAM ವೆರಿಯಂಟ್ಗಳೊಂದಿಗೆ 64GB ಮತ್ತು 128GB ಸಂಗ್ರಹಣಾ ಆಯ್ಕೆಗಳನ್ನು ಬಿಡುಗಡೆಯಾಗಿರುವ ಎರಡೂ ಮಾದರಿಯ ಸ್ಮಾರ್ಟ್ಫೋನ್ಗಳ ಮೆಮೊರಿಯನ್ನು ಎಸ್ಡಿ ಮೆಮೊರಿ ಕಾರ್ಡ್ ಮೂಲಕ 512GB ವರೆಗೆ ಮೆಮೊರಿಯನ್ನು ವಿಸ್ತರಿಸಬಹುದಾದ ಆಯ್ಕೆ ಇರುವುದು ವಿಶೇಷತೆ ಎಂದು ಹೇಳಬಹುದು.
'ಹಾನರ್ 10 ಲೈಟ್' ಸ್ಮಾರ್ಟ್ಫೋನ್ 13 ಮೆಗಾಪಿಕ್ಸೆಲ್ ಪ್ರಾಥಮಿಕ ಕ್ಯಾಮೆರಾ ಹಾಗೂ f/1.8 ಅಪಾರ್ಚರ್ನ 2-ಮೆಗಾಪಿಕ್ಸೆಲ್ ಸೆಕೆಂಡರಿ ಕ್ಯಾಮೆರಾದೊಂದಿಗೆ ಡ್ಯುಯಲ್ ರಿಯರ್ ಕ್ಯಾಮೆರಾ ಸೆಟಪ್ ಹೊಂದಿದೆ. ಹಾಗೆಯೇ, ಮುಂಭಾಗದಲ್ಲಿ f/2.0 ಅಪಾರ್ಚರ್ನೊಂದಿಗೆ 24 ಮೆಗಾಪಿಕ್ಸೆಲ್ ಸೆಲ್ಫಿ ಕ್ಯಾಮೆರಾವನ್ನು ಹೊಂದಿದೆ. ಸ್ಮಾರ್ಟ್ಫೋನ್ ಕ್ಯಾಮೆರಾ ತಂತ್ರಜ್ಞಾನ ಕೃತಕ ಬುದ್ದಿಮತ್ತೆ ತಂತ್ರಜ್ಞಾನವನ್ನು ಹೊಂದಿದೆ ಎಂದು ಕಂಪೆನಿ ಸ್ಪಷ್ಟಪಡಿಸಿದೆ.
3,400 mAh ಬ್ಯಾಟರಿ ಸಾಮರ್ಥ್ಯವನ್ನು ಹೊಂದಿರುವ 'ಹಾನರ್ 10 ಲೈಟ್' ಸ್ಮಾರ್ಟ್ಫೋನಿನಲ್ಲಿ 4ಜಿ ವೋಲ್ಟ್, ವೈ-ಫೈ 802.11 802.11, ಬ್ಲೂಟೂತ್ 4.2 ಎಲ್ಇ, 3.5 ಎಂಎಂ ಆಡಿಯೋ ಜಾಕ್, ಜಿಪಿಎಸ್ / ಎಜಿಪಿಎಸ್ನಂತರ ಸಾಮಾನ್ಯ ಫೀಚರ್ಸ್ಗಳನ್ನು ನೋಡಬಹುದು. ಬೆಳಕಿನ ಸಂವೇದಕ, ದಿಕ್ಸೂಚಿ, ಗುರುತ್ವ ಸಂವೇದಕ, ಗೈರೋಸ್ಕೋಪ್ ಮತ್ತು ಸಾಮೀಪ್ಯ ಸಂವೇದಕಗಳನ್ನು ಹೊಂದಿರುವ ಈ ಸ್ಮಾರ್ಟ್ಫೋನ್ 162 ಗ್ರಾಂ ತೂಕವನ್ನು ಹೊಂದಿರುವುದಾಗಿ ಕಂಪೆನಿ ತಿಳಿಸಿದೆ.
ಭಾರತದಲ್ಲಿ 'ಹಾನರ್ 10 ಲೈಟ್' ಸ್ಮಾರ್ಟ್ಫೋನಿನ ೩ ಜಿಬಿ RAM ಹಾಗೂ 32 ಜಿಬಿ ಆಂತರಿಕ ಸ್ಟೋರೇಜ್ ಇರುವ ಆವೃತ್ತಿಯ ಫೋನ್ ಬೆಲೆ 10,999 ರೂ.ಗಳಾಗಿದ್ದರೆ, 4 ಜಿಬಿ RAM ಹಾಗೂ 64 ಜಿಬಿ ಆಂತರಿಕ ಸ್ಟೋರೇಜ್ ಆವೃತ್ತಿಯ ಬೆಲೆ 12,999 ರೂ.ಗಳಾಗಿವೆ. ಅಮೆಜಾನ್, ಫ್ಲಿಪ್ಕಾರ್ಟ್ ಹಾಗೂ ಹಾನರ್ ವೆಬ್ ತಾಣಗಳ ಮೂಲಕ ಸ್ಮಾರ್ಟ್ಫೋನ್ ಖರೀದಿಗೆ ಲಭ್ಯವಿದೆ.
ಇತ್ತೀಚೆಗೆ ಹುವಾವೇ ಮೇಟ್ 20 ಮತ್ತು ಪಿ 20 ಸರಣಿ ಸಾಧನಗಳಿಗೆ ತರಲಾಗಿದ್ದ ಇಎಂಯುಐ 9.1 ಅಪ್ಡೇಟ್ ಇದೀಗ ಹಾನರ್ 10 ಲೈಟ್ ಬಳಕೆದಾರಿಗೂ ಬಂದಿದೆ. ಹಾನರ್ ಕಂಪನಿಯು ಭಾರತೀಯ ಮಾರುಕಟ್ಟೆಯಲ್ಲಿ ಹಾನರ್ 10 ಲೈಟ್ ಘಟಕಗಳಿಗೆ ಆಂಡ್ರಾಯ್ಡ್ ಪೈ ಆಧಾರಿತ ನವೀಕರಣವನ್ನು ಹೊರತರಲು ಪ್ರಾರಂಭಿಸಿದ್ದು, ಬಳಕೆದಾರರು ಈಗ ತಮ್ಮ ಹ್ಯಾಂಡ್ಸೆಟ್ ಅನ್ನು ಇತ್ತೀಚಿನ ಇಎಂಯುಐ 9.1 ಸಾಫ್ಟ್ವೇರ್ಗೆ ಅಪ್ಗ್ರೇಡ್ ಮಾಡಬಹುದು ಎಂದು ಕಂಪೆನಿ ತಿಳಿಸಿದೆ.
2019ಜುಲೈ ಸೆಕ್ಯುರಿಟಿ ಪ್ಯಾಚ್ ಮತ್ತು ಹೊಸ ಫೈಲ್ ಸಿಸ್ಟಮ್, ಜಿಪಿಯು ಟರ್ಬೊ 3.0, ಹುವಾವೇ ವ್ಲಾಗ್ ವಿಡಿಯೋ ಎಡಿಟಿಂಗ್ ಸಾಫ್ಟ್ವೇರ್ ಸೇರಿದಂತೆ ಹೊಸ ವೈಶಿಷ್ಟ್ಯಗಳನ್ನು ಇಎಂಯುಐ 9.1 ಅಪ್ಡೇಟ್ ತರುತ್ತದೆ. PUBG ಮೊಬೈಲ್, ASPHALT 9, NBA 2K19, ಮೊಬೈಲ್ ಲೆಜೆಂಡ್ಸ್, ಫೋರ್ಟ್ನೈಟ್, ಫಿಫಾ ಮೊಬೈಲ್ ಮುಂತಾದ ಜನಪ್ರಿಯ ಗೇಮ್ಗಳನ್ನು ಆಡುವಾಗ ಕೆಲವು ಮಟ್ಟದ ಆಟದ ಸುಧಾರಣೆಗಳನ್ನು ಅನುಭವಿಸಬಹುದು ಎಂದು ಪ್ರಕಟಣೆಯಲ್ಲಿ ಹೇಳಲಾಗಿದೆ. .
ಹಾಗಾಗಿ, ನೀವು ಕೂಡ ಹಾನರ್ 10 ಲೈಟ್ ಹ್ಯಾಂಡ್ಸೆಟ್ ಹೊಂದಿದ್ದರೆ, ನಿಮ್ಮ ಹ್ಯಾಂಡ್ಸೆಟ್ ಹೊಸ ನವೀಕರಣವನ್ನು ಸ್ವೀಕರಿಸಿದೆಯೇ ಎಂದು ನೋಡಲು ಸೆಟ್ಟಿಂಗ್ಗಳು> ಸಿಸ್ಟಮ್> ಸಾಫ್ಟ್ವೇರ್ ನವೀಕರಣ> ನವೀಕರಣಗಳಿಗಾಗಿ ಪರಿಶೀಲಿಸಿ. ನಿಮ್ಮ ಸ್ಮಾರ್ಟ್ಫೋನನ್ನು ಅಪ್ಡೇಟ್ ಮಾಡಿಕೊಳ್ಳಿ. ಇನ್ನು ಇಎಂಯುಐ 9.1 ಅಪ್ಡೇಟ್ ಪಡೆದ ಹಾನರ್ 10 ಲೈಟ್ ಸ್ಮಾರ್ಟ್ಫೋನ್ ಹೇಗಿದೆ? ಫೀಚರ್ಸ್ ಯಾವುವು? ಸ್ಮಾರ್ಟ್ಫೋನ್ ಬೆಲೆಗಳು ಎಷ್ಟು? ಎಂಬುದನ್ನು ಮುಂದಿನ ಸ್ಲೈಡರ್ಗಳಲ್ಲಿ ಓದಿ ತಿಳಿಯಿರಿ.