Back
Home » ಇತ್ತೀಚಿನ
ಫೇಸ್‌ಬುಕ್‌ಗೆ ಆಧಾರ್ ಲಿಂಕ್?..ಶಾಕಿಂಗ್ ಸುದ್ದಿಯ ಕಥೆ ಇಲ್ಲಿದೆ!
Gizbot | 22nd Aug, 2019 10:42 AM
 • ಆಧಾರ್ ಲಿಂಕ್‌ ಸುದ್ದಿ ಹುಟ್ಟಿಕೊಂಡಿದ್ದು ಹೇಗೆ?

  ಇತ್ತೀಚಿಗೆ ಮದ್ರಾಸ್‌ ಹೈಕೋರ್ಟಿನಲ್ಲಿ ದಾಖಲಾಗಿರುವ ಫೇಸ್‌ಬುಕ್‌ಗೆ ಆಧಾರ್ ಸಂಯೋಜಿಸಬೇಕೆಂಬ ದೂರು ಇಂತಹದೊಂದು ಸುದ್ದಿ ಹುಟ್ಟಲು ಕಾರಣವಾಗಿದೆ. ತಮಿಳುನಾಡು ಸರಕಾರ ಕೂಡ ಫೇಸ್‌ಬುಕ್‌ ಖಾತೆಗಳನ್ನು ಆಧಾರ್‌ಗೆ ಲಿಂಕ್‌ ಮಾಡಬೇಕೆಂದು ಅಧಿಕೃತವಾಗಿಯೇ ಆದೇಶ ಹೊರಡಿಸಿದ ನಂತರ, ಇದರ ವಿರುದ್ಧವಾಗಿ ಫೇಸ್‌ಬುಕ್‌ ಸಂಸ್ಥೆ ನ್ಯಾಯಾಲಯದ ಮೆಟ್ಟಿಲೇರಿದೆ. ಹಾಗಾಗಿ, ಈ ಸುದ್ದಿ ದೇಶದಾದ್ಯಂತ ಸುದ್ದಿ ವೈರಲ್ ಆಗಿದೆ ಎಂದು ಹೇಳಬಹುದು.


 • ಆಧಾರ್ ಲಿಂಕ್ ಮಾಡಿಸುವ ಉದ್ದೇಶವೇನು?

  ಆನ್‌ಲೈನ್‌ನಲ್ಲಿ ಪೋಸ್ಟ್ ಮಾಡಲಾದ ಕೆಲವು ವಿಷಯಗಳ ಮೂಲವನ್ನು ಕಂಡುಹಿಡಿಯಲು ಅವಶ್ಯಕವಾಗಿದೆ ಮತ್ತು ಪ್ರೊಫೈಲ್‌ಗಳ ಮಾಲೀಕರನ್ನು ಪತ್ತೆಹಚ್ಚಲು ಇದು ಅಗತ್ಯವಾಗಿರುತ್ತದೆ ಎಂದು ತಮಿಳುನಾಡು ಸರ್ಕಾರ ಒತ್ತಾಯಿಸಿದೆ. ಅಂದಿನಿಂದ ಭಾರತದ ಸರ್ವೋಚ್ಚ ನ್ಯಾಯಾಲಯವು ಭಾರತ ಸರ್ಕಾರ, ಪೊಲೀಸ್ ಆಯುಕ್ತರು, ತಮಿಳುನಾಡು ರಾಜ್ಯ ಮತ್ತು ಟ್ವಿಟರ್ ಮತ್ತು ಗೂಗಲ್ ಸೇರಿದಂತೆ ಸಾಮಾಜಿಕ ಜಾಲತಾಣಗಳಿಗೆ ಅಲ್ಲಿನ ನೋಟಿಸ್ ನೀಡಿದೆ.


 • ತಮಿಳುನಾಡು ಸರ್ಕಾರ ಮಂಡಿಸಿದ ವಾದ ಏನು?

  ಸೋಶಿಯಲ್ ಮೀಡಿಯಾ ಖಾತೆಗಳನ್ನು ಆಧಾರ್ ಸಂಖ್ಯೆಗಳೊಂದಿಗೆ ಲಿಂಕ್ ಮಾಡುವುದರಿಂದ ನಕಲಿ ಸುದ್ದಿ, ದುರುದ್ದೇಶಪೂರಿತ ಪೋಸ್ಟ್‌ಗಳು, ಹಿಂಸಾಚಾರವನ್ನು ಉಂಟುಮಾಡುವ ಅಪಾಯವನ್ನುಂಟುಮಾಡುವ ವಿಷಯ, ಬ್ಲೂ ವೇಲ್ ನಂತಹ ಅಪಾಯಕಾರಿ ಆಟಗಳು ಮತ್ತು ಯಾವುದೇ ರಾಷ್ಟ್ರ ವಿರೋಧಿ ಪೋಸ್ಟ್‌ಗಳನ್ನು ಎದುರಿಸಲು ಮತ್ತು ಟ್ರ್ಯಾಕ್ ಮಾಡಲು ಸಹಾಯ ಮಾಡುತ್ತದೆ ಎಂದು ತಮಿಳುನಾಡು ಸರ್ಕಾರ ವಾದಿಸುತ್ತಿದೆ.


 • ಸರ್ಕಾರದ ವಾದದಲ್ಲಿ ವಾಸ್ತವಾಂಶ ಇದೆಯೇ?

  ಖಂಡಿತವಾಗಿಯೂ ಸರ್ಕಾರದ ವಾದದಲ್ಲಿ ವಾಸ್ತವಾಂಶ ಇದೆ. ಡಿಜಿಟಲ್‌ ಮಾಧ್ಯಮಗಳ ಕ್ರಾಂತಿಯ ಬಳಿಕ ಇದಕ್ಕೆ ಸಂಬಂಧಿಸಿದ ಅಪರಾಧ ಕೃತ್ಯಗಳು ಭಾರೀ ಪ್ರಮಾಣದಲ್ಲಿ ಹೆಚ್ಚಾಗಿವೆ. ಗೋ ಕಳ್ಳರು ಮತ್ತು ಮಕ್ಕಳ ಕಳ್ಳರೆಂದು ಭಾವಿಸಿ ಅಮಾಯಕ ಜನ ರನ್ನು ಉದ್ರಿಕ್ತ ಗುಂಪುಗಳು ಥಳಿಸಿ ಕೊಂದ ಹಲವು ಪ್ರಕರಣಗಳು ನಡೆದಿವೆ. ಫೇಸ್‌ಬುಕ್‌, ವಾಟ್ಸ್‌ಆಪ್‌ನಂಥ ಮಾಧ್ಯಮಗಳು ಉಗ್ರ ರಿಗೆ ಸಂದೇಶ ರವಾನಿಸಲು ಸುಲಭ ದಾರಿಯಾಗಿವೆ. ತೇಜೋವಧೆ ಗಳಂಥ ಕೃತ್ಯ ನಡೆಸಲು ಸಾಮಾಜಿಕ ಮಾಧ್ಯಮ ಹೆಚ್ಚು ಬಳಕೆಯಾಗುತ್ತಿರುವುದನ್ನು ನಾವು ನೋಡಬಹುದು.


 • ಇದಕ್ಕೆ ಫೇಸ್‌ಬುಕ್‌ ಹೇಳುತ್ತಿರುವುದು ಏನು?

  ಯಾವುದೇ ದೇಶದಲ್ಲಿ ಬಳಕೆದಾರರು ಆನ್‌ಲೈನ್ ಪ್ರೊಫೈಲ್‌ಗಳೊಂದಿಗೆ ಗುರುತಿನ ಪುರಾವೆಗಳನ್ನು ಲಿಂಕ್ ಮಾಡುವ ಅಗತ್ಯವಿಲ್ಲ. ಸೈಬರ್ ಬೆದರಿಸುವಿಕೆ, ನಕಲಿ ಸುದ್ದಿಗಳು ಮತ್ತು ಅಂತರ್ಜಾಲದಲ್ಲಿ ಆಗಾಗ್ಗೆ ಅನಾಮಧೇಯ ಉಪಸ್ಥಿತಿಯೊಂದಿಗೆ ಬರುವ ಎಲ್ಲಾ ಇತರ ನ್ಯೂನತೆಗಳು ಜಾಗತಿಕವಾಗಿ ಪ್ರಚಲಿತದಲ್ಲಿವೆ.ಆಧಾರ್ ಅಥವಾ ಸರ್ಕಾರ ಹೊರಡಿಸಿದ ಯಾವುದೇ ಗುರುತಿನ ದಾಖಲೆಯ ಕಡ್ಡಾಯ ಲಿಂಕ್ ಅಗತ್ಯವು ಆಧಾರ್ ಪ್ರಕರಣದಲ್ಲಿ ಸಂವಿಧಾನ ಪೀಠದ ಮಾರ್ಗಸೂಚಿಗಳಿಗೆ ವಿರುದ್ಧವಾಗಿದೆ ಎಂದು ಫೇಸ್‌ಬುಕ್ ನ್ಯಾಯಾಲಯದಲ್ಲಿ ವಾದಿಸಿದೆ.


 • ಆಧಾರ್ ಲಿಂಕ್ ಮಾಡುವುದು ಒಳ್ಳೆಯದೇ?

  ಸರ್ಕಾರದ ಚಿಂತನೆಯಂತೆ ಸಾಮಾಜಿಕ ಜಾಲತಾಣಗಳಿಗೆ ಆಧಾರ್ ಸೇರಿಸುವುದು ಮೇಲ್ನೋಟಕ್ಕೆ ಉತ್ತಮವಾಗಿ ಕಾಣಿಸುತ್ತದೆ. ಆದರೆ, ಸಾಮಾಜಿಕ ಮಾಧ್ಯಮವನ್ನು ಆಧಾರ್‌ಗೆ ಬೆಸೆದರೆ ಕಳೆದ ವರ್ಷ ಸುಪ್ರೀಂ ಕೋರ್ಟ್ಎತ್ತಿ ಹಿಡಿದಿರುವ ಅಭಿವ್ಯಕ್ತಿ ಸ್ವಾತಂತ್ರ್ಯದ ಉಲ್ಲಂಘನೆ ಆಗುತ್ತದೆ. ಅಲ್ಲದೆ ಕೋಟ್ಯಂತರ ಜನರ ಗೌಪ್ಯ ಮಾಹಿತಿಗಳನ್ನೆಲ್ಲ ಖಾಸಗಿ ಕಂಪೆನಿಗಳ ಕೈಯಲ್ಲಿಟ್ಟಂತಾಗುತ್ತದೆ. ಈ ಡೇಟಾ ಬೇರೆ ಉದ್ದೇಶಗಳಿಗೆ ಬಳಕೆಯಾಗುವುದಿಲ್ಲ ಎನ್ನುವುದಕ್ಕೆ ಯಾವ ಖಾತರಿಯಿದೆ ಎಂಬ ವಾದದಲ್ಲೂ ಅರ್ಥವಿದೆ.


 • ಇದು ಬಹಳ ಸಂಕೀರ್ಣ, ಸೂಕ್ಷ್ಮ ವಿಚಾರ.

  ಸಾಮಾಜಿಕ ಮಾಧ್ಯಮವನ್ನು ಆಧಾರ್‌ಗೆ ಬೆಸೆಯುವ ವಿಷಯ ಬಹಳ ಸಂಕೀರ್ಣ, ಸೂಕ್ಷ್ಮ ವಿಚಾರವಾಗಿದೆ. ಖಾಸಗಿತನದ ಹಕ್ಕು ಮತ್ತು ಶಾಸನಾತ್ಮಕ ಹಕ್ಕಿನ ನಡುವೆ ಸಮತೋಲನ ಕಾಪಾಡುವ ಗುರುತರ ಹೊಣೆ ನ್ಯಾಯಾಲಯದ ಮೇಲಿದೆ.ಜನರ ದಾಖಲೆಗಳನ್ನು ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಸಂಯೋಜನೆ ಮಾಡುವ ಬದಲು ಈ ಮಾದರಿಯ ಮಾಧ್ಯಮಗಳನ್ನು ವಿವೇಚನೆಯಿಂದಲೂ ಎಚ್ಚರಿಕೆಯಿಂದಲೂ ಬಳಸುವ ಅರಿವು ಮೂಡಿಸಲು ಯತ್ನಿಸುವುದು ಹೆಚ್ಚು ಸರಿಯಾದ ವಿಧಾನ ಎಂದು ಹೇಳಲಾಗುತ್ತಿದೆ.


 • ಆಧಾರ್ ಲಿಂಕ್‌ ಸುದ್ದಿಯ ಮುಂದಿನ ಕಥೆ ಏನು?

  ಮದ್ರಾಸ್ ಹೈಕೋರ್ಟ್ ಈವರೆಗೆ ಈ ಕಾನೂನು ಹೋರಾಟಕ್ಕೆ ಸೈಬರ್ ಅಪರಾಧ ಮತ್ತು ಮಧ್ಯಂತರ ಹೊಣೆಗಾರಿಕೆ ಅಂಶಗಳನ್ನು ಸೇರಿಸಿದೆ. ಸರ್ಕಾರದ ಸ್ವಂತ ಕಾನೂನು ಸಲ್ಲಿಕೆಗಳು ರಾಷ್ಟ್ರ ವಿರೋಧಿ ಹುದ್ದೆಗಳ ಬಗ್ಗೆ ಮತ್ತು ಹೆಚ್ಚಿನವುಗಳ ಬಗ್ಗೆ ಮಾತನಾಡಿದ್ದಾರೆ. ಎಲ್ಲಾ ಸಾಮಾಜಿಕ ಮಾಧ್ಯಮ ಖಾತೆಗಳಿಗೆ ಜವಾಬ್ದಾರಿಯ ಎಳೆಯನ್ನು ಸರಳವಾಗಿ ಸೇರಿಸುವುದು ಇಲ್ಲಿ ಸರ್ಕಾರದ ಪ್ರಾಥಮಿಕ ಉದ್ದೇಶವಾಗಿದೆ ಎಂದು ಫೇಸ್‌ಬುಕ್ ಸಂಸ್ಥೆ ಹೇಳಿದೆ . ಅಂತಿಮವಾಗಿ ಇದು ಸುಪ್ರೀ ಕೋರ್ಟ್ ಅಂಗಳಕ್ಕೆ ತಲುಪಿ ಕುತೂಹಲ ಮೂಡಿಸಿದೆ.
ಫೇಸ್‌ಬುಕ್‌ ಸೇರಿದಂತೆ ವಿವಿಧ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್ ಲಿಂಕ್‌ ಮಾಡಬೇಕೆಂಬ ಶಾಕಿಂಗ್ ಸುದ್ದಿಯೊಂದು ಇತ್ತೀಚಿಗೆ ವೈರಲ್ ಆಗುತ್ತಿದೆ. ಫೇಸ್‌ಬುಕ್‌, ಇನ್‌ಸ್ಟಾಗ್ರಾಂ, ಟ್ವಿಟ್ಟರ್‌, ವಾಟ್ಸ್ಆಪ್ ಸೇರಿದಂತೆ ಎಲ್ಲಾ ಖಾತೆಗಳಿಗೂ ಆಧಾರ್ ಅಥವಾ ಯಾವುದಾದರೊಂದು ಸರಕಾರಿ ದಾಖಲೆ ಜೊತೆಗೆ ಬೆಸೆದು ಈ ಖಾತೆಗಳಿಗೆ ಒಂದು ಉತ್ತರದಾಯಿತ್ವವನ್ನು ಕೊಡಬೇಕೆಂಬ ಪ್ರಯತ್ನ ನಡೆಯುತ್ತಿದೆ. ಆದರೆ, ಇದು ನಿಜವಾಗಲೂ ಸಾಧ್ಯವೇ? ಮತ್ತು ಇಂತಹದೊಂದು ಸುದ್ದಿ ನಿಜವೇ ಎಂಬುದು ಬಹುತೇಕರಿಗೆ ಗೊಂದಲವಾಗಿಯೇ ಉಳಿಸಿದೆ.

ಎರಡು ವರ್ಷಗಳ ಹಿಂದೆ ಕೇಂದ್ರ ಸರಕಾರವೇ ಕಪ್ಪುಹಣ ಬಯಲಿಗೆಳೆಯುವ ಸಲುವಾಗಿ ಜನರ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಸರಕಾರಿ ದಾಖಲೆಗೆ ಸಂಯೋಜಿಸಬೇಕೆಂಬ ಪ್ರಸ್ತಾವ ಇಟ್ಟತ್ತು. ಆ ನಂತರ ಇದೀಗ ಮತ್ತೆ ಇಂತಹದೊಂದು ಸುದ್ದಿ ಹೊರಬಿದ್ದಿರುವುದು ದೇಶದ ಜನರಲ್ಲಿ ಕುತೋಹಲಕ್ಕೆ ಕಾರಣವಾಗಿದೆ . ಹಾಗಾಗಿ, ಇಂದಿನ ಲೇಖನದಲ್ಲಿ ಸಾಮಾಜಿಕ ಮಾಧ್ಯಮ ಖಾತೆಗಳನ್ನು ಆಧಾರ್ ಲಿಂಕ್‌ ಮಾಡಬೇಕೆಂಬ ಶಾಕಿಂಗ್ ಸುದ್ದಿಯ ಮೂಲವನ್ನು ನಾವು ಹುಡುಕಿದ್ದೇವೆ. ಮತ್ತು ಆ ಬಗೆಗಿನ ಮಾಹಿತಿಯನ್ನು ನಾವು ನಿಮಗೆ ಎಳೆಎಳೆಯಾಗಿ ನೀಡುತ್ತಿದ್ದೇವೆ.

 
ಹೆಲ್ತ್