Back
Home » ಇತ್ತೀಚಿನ
ಟೈಪಿಂಗ್‌ ಶಬ್ಧದಿಂದಲೇ ಪಾಸ್‌ವರ್ಡ್‌ ಹ್ಯಾಕ್‌..!
Gizbot | 22nd Aug, 2019 03:00 PM
  • ಮೈಕ್ರೊಫೋನ್‌

    ಮೊಬೈಲ್‌ನಲ್ಲಿರುವ ಮೈಕ್ರೊಫೋನ್‌ನಿಂದ ಸಂಶೋಧಕರು ನಿಖರವಾಗಿ ಟೈಪ್‌ ಮಾಡಲಾಗುತ್ತಿರುವುದನ್ನು ಕಂಡುಹಿಡಿದಿದ್ದಾರೆ. ಈ ವಿಧಾನವು ವ್ಯಕ್ತಿಯ ಪಾಸ್‌ವರ್ಡ್‌ ಭೇದಿಸಲು ಮಾತ್ರವಲ್ಲದೆ, ಮತ್ತೊಬ್ಬರ ವೈಯಕ್ತಿಕ ಮೇಲ್‌ಗಳು ಅಥವಾ ಸಂದೇಶಗಳನ್ನು ಸಹ ಹ್ಯಾಕ್‌ ಮಾಡಲು ಸಹ ಬಳಸಬಹುದು.


  • ಅಕೌಸ್ಟಿಕ್ ಸಿಗ್ನಲ್‌

    ಒಬ್ಬ ವ್ಯಕ್ತಿ ಟೈಪ್ ಮಾಡುತ್ತಿರುವುದನ್ನು ಅರ್ಥೈಸಿಕೊಳ್ಳಲು ಹ್ಯಾಕರ್‌ಗೆ ಅವಕಾಶ ಮಾಡಿಕೊಡುವಂತೆ ಪ್ರಕ್ರಿಯೆಗೊಳಿಸಬಹುದಾದ ಅಕೌಸ್ಟಿಕ್ ಸಿಗ್ನಲ್‌ಗಳನ್ನು ಸ್ಮಾರ್ಟ್‌ಫೋನ್ ತಡೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ, ವಾಸ್ತವವಾಗಿ ಗದ್ದಲದ ಸ್ಥಳದಲ್ಲಿಯೂ ಸಹ ಪಾಸ್‌ವರ್ಡ್‌ನ್ನು ಸುಲಭವಾಗಿ ಕಂಡುಹಿಡಿಯಬಹುದಾಗಿದೆ.


  • ಪಾಸ್‌ವರ್ಡ್‌

    ವ್ಯಕ್ತಿಯನ್ನು ಹ್ಯಾಕ್ ಮಾಡಲಾಗುತ್ತಿದೆ ಎಂಬುದರ ಬಗ್ಗೆ ಯಾವುದೇ ಸುಳಿವು ದೊರೆಯುವುದಿಲ್ಲ ಎಂದು ಸಂಶೋಧಕರು ಎಚ್ಚರಿಸಿದ್ದಾರೆ. ಈ ವಿಧಾನದಲ್ಲಿ ಕೇವಲ ಲೋಹದಲ್ಲಿ ಟೈಪ್‌ ಮಾಡಿದರೆ ಮಾತ್ರ ಹ್ಯಾಕರ್‌ಗಳಿಗೆ ಉಪಯೋಗವಾಗುತ್ತದೆ. ಪ್ಲಾಸ್ಟಿಕ್‌ ಮೇಲ್ಮೈಗಳು ವಿಭಿನ್ನ ಧ್ವನಿ ಮಾದರಿಯನ್ನು ಉತ್ಪಾದಿಸುವುದರಿಂದ ಹ್ಯಾಕರ್‌ಗಳಿಗೆ ಪಾಸ್‌ವರ್ಡ್‌ ಕಂಡುಹಿಡಿಯಲು ಸುಲಭವಾಗುತ್ತದೆ.
ಜಗತ್ತಿನಾದ್ಯಂತ ಸೈಬರ್‌ ಕ್ರೈಂಗಳು ಹೆಚ್ಚುತ್ತಿದ್ದು, ಹ್ಯಾಕರ್‌ಗಳ ವಂಚನೆಗೆ ಜನ ಮೋಸ ಹೋಗುತ್ತಿದ್ದಾರೆ. ಹ್ಯಾಕರ್‌ಗಳು ಜನರನ್ನು ವಂಚಿಸಲು ಬಳಸುವ ತಂತ್ರಗಳು ಒಂದೇರಡಲ್ಲ. ಹೌದು, ಈಗ ಕೀಬೋರ್ಡ್‌ನಲ್ಲಿ ಟೈಪ್‌ ಮಾಡುವ ಶಬ್ಧದಿಂದ ಹ್ಯಾಕರ್‌ಗಳು ಪಾಸ್‌ವರ್ಡ್‌ನ್ನು ಕದಿಯಬಹುದೆಂದು ಹೊಸ ಅಧ್ಯಯನವು ಬಹಿರಂಗಪಡಿಸಿದೆ. ಕೀಬೋರ್ಡ್‌ನಲ್ಲಿ ಟೈಪ್ ಮಾಡುವಾಗ ಧ್ವನಿ ತರಂಗಗಳು ಉತ್ಪಾದನೆಯಾಗುತ್ತವೆ ಎಂದು ಟೆಕ್ಸಾಸ್‌ನ ಸದರ್ನ್ ಮೆಥೋಡಿಸ್ಟ್ ವಿಶ್ವವಿದ್ಯಾಲಯದ ಸೈಬರ್ ಭದ್ರತಾ ತಜ್ಞರು ಕಂಡುಹಿಡಿದಿದ್ದಾರೆ, ಈ ಧ್ವನಿ ತರಂಗಗಳನ್ನು ಹ್ಯಾಕರ್‌ಗಳು ಸ್ಮಾರ್ಟ್‌ಫೋನ್‌ನಿಂದ ಯಶಸ್ವಿಯಾಗಿ ಡಿಕೋಡ್ ಮಾಡುತ್ತಾರೆ ಎಂದು ಅಧ್ಯಯನ ಹೇಳಿದೆ.

 
ಹೆಲ್ತ್