Back
Home » ಇತ್ತೀಚಿನ
ಇದೇ ಸೆಪ್ಟೆಂಬರ್ 17ರಂದು ಭಾರತಕ್ಕೆ ಬರಲಿದೆ ಶಿಯೋಮಿ 'ಮಿ ಬ್ಯಾಂಡ್ 4'!
Gizbot | 9th Sep, 2019 05:27 PM
 • ಮಿ ಬ್ಯಾಂಡ್‌ 4

  ಹೌದು, ಶಿಯೋಮಿ ಕಂಪನಿಯು ಇದೇ ಸೆಪ್ಟಂಬರ್‌ನಲ್ಲಿ 17ರಂದು ಬೆಂಗಳೂರಿನಲ್ಲಿ ನಡೆಯುವ 'ಸ್ಮಾರ್ಟ್‌ರ್ ಲಿವಿಂಗ್-2020' ಕಾರ್ಯಕ್ರಮದಲ್ಲಿ ದೇಶಿಯ ಮಾರುಕಟ್ಟೆಗೆ 'ಮಿ ಬ್ಯಾಂಡ್‌ 4' ಡಿವೈಸ್‌ ಅನ್ನು ಬಿಡುಗಡೆ ಮಾಡಲು ರೆಡಿಯಾಗಿದೆ. ಈ ಸ್ಮಾರ್ಟ್‌ ಬ್ಯಾಂಡ್ ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದ್ದು, ಜೊತೆಗೆ ಅತ್ಯುತ್ತಮ ಫಿಟ್ನೆಸ್‌ ಟ್ರಾಕಿಂಗ್ ಸೌಲಭ್ಯಗಳನ್ನು ಹೊಂದಿದೆ. ಬೆಲೆಯು 1,700ರೂ. ಎನ್ನಲಾಗಿದೆ. ಹಾಗಾದರೇ ಶಿಯೋಮಿ ಮಿ ಬ್ಯಾಂಡ್ 4 ಇತರೆ ಯಾವೆಲ್ಲಾ ಫೀಚರ್ಸ್‌ಗಳನ್ನು ಹೊಂದಿದೆ ಎಂದು ತಿಳಿಯಲು ಮುಂದೆ ಓದಿರಿ.


 • ಫಿಟ್‌ನೆಸ್‌ ಡಿವೈಸ್

  ಶಿಯೋಮಿಯ ಮಿ ಬ್ಯಾಂಡ್ 4, ಅತ್ಯುತ್ತಮ ಫಿಟ್ನೆಸ್‌ ಡಿವೈಸ್‌ ಆಗಿದ್ದು, 'ಹಾರ್ಟ್‌ರೇಟ್‌ ಮಾನಿಟರಿಂಗ್‌' ಆಯ್ಕೆಯನ್ನು ಒಳಗೊಂಡಿದೆ. ನಿರಂತರ ಹೃದಯ ಬಡಿತದ ಕುರಿತು ಮಾಹಿತಿ ಒದಗಿಸುತ್ತದೆ. ಹಾಗೆಯೇ ಫೋಟೊಥೆಸ್ಮೊಗ್ರಾಫಿ (PPG) ಎಂಬ ಹೊಸ ಆಯ್ಕೆಯನ್ನು ಹೊಂದಿದ್ದು, ಇದು ರಕ್ತದ ಕುರಿತು ಕೇಲವು ಸೂಕ್ಷ್ಮ ಅಂಶಗಳನ್ನು ಗ್ರಹಿಸಿ ಮಾಹಿತಿಯನ್ನು ನೀಡಲಿದೆ.


 • ಡಿಸ್‌ಪ್ಲೇ ಹೇಗಿದೆ

  ಈ ಮಿ ಬ್ಯಾಂಡ್‌ 4, ಡಿವೈಸ್‌ 240 x 120 ಪಿಕ್ಸಲ್ ರೆಸಲ್ಯೂಶನ್ ಸಾಮರ್ಥ್ಯದೊಂದಿಗೆ 0.95 ಇಂಚಿನ AMOLED ಕಲರ್‌ ಡಿಸ್‌ಪ್ಲೇಯನ್ನು ಒಳಗೊಂಡಿದೆ. ಶೇ. 39.9%ರಷ್ಟು ದೊಡ್ಡ ಡಿಸ್‌ಪ್ಲೇ ಆಗಿದ್ದು, ಸಂಪೂರ್ಣ ಕಲರ್‌ ಡಿಸ್‌ಪ್ಲೇ ಮಾದರಿಯನ್ನು ಪಡೆದಿದೆ. 2.5D ಟೆಂಪರ್ಡ್‌ ಗ್ಲಾಸ್‌ ರಚನೆಯನ್ನು ಸಹ ಹೊಂದಿದ್ದು, ಸ್ಕ್ರಾಚ್‌ ಮುಕ್ತವಾಗಿದೆ. ಬೆಳಕಿನಲ್ಲಿಯೂ ಡಿಸ್‌ಪ್ಲೇ ಸ್ಪಷ್ಟವಾಗಿ ಕಾಣಿಸಲಿದೆ.


 • ಸೆನ್ಸಾರ್‌ ಶಕ್ತಿ

  ಮಿ ಬ್ಯಾಂಡ್ 4 ಸೆನ್ಸಾರ್‌ ಸಾಮರ್ಥ್ಯದ ಗ್ರಹಿಕೆಯಲ್ಲಿ ಕಾರ್ಯನಿರ್ವಹಿಸುತ್ತದೆ. ಈ ಡಿವೈಸ್‌ ವಿವಿಧ ಬಗೆಯ ಸ್ವಿಮ್ಮಿಂಗ್ ಸ್ಟ್ರೋಕ್‌ಗಳನ್ನು ಗ್ರಹಿಸುತ್ತದೆ. ಅವುಗಳಲ್ಲಿ ಫ್ರಿ-ಸ್ಟೈಲ್‌, ಬ್ಯಾಕ್‌ಸ್ಟ್ರೋಕ್, ಬಟರ್‌ಪ್ಲೈ ಸ್ಟ್ರೋಕ್ ಮತ್ತು ಮೆಡ್ಲಿ (Medley) ಸ್ವಿಮ್ಮಿಂಗ್ ಸ್ಟೈಲ್‌ಗಳು ಸೇರಿವೆ. ಹಾಗೆಯೇ ರನ್ನಿಂಗ್, ಔಟ್‌ಡೋರ್‌ ರನ್ನಿಂಗ್, ಎಕ್ಸಸೈಜ್, ಸೈಕ್ಲಿಂಗ್, ವಾಕಿಂಗ್ ಚಟುವಟಿಕೆಗಳನ್ನು ಟ್ರಾಕ್‌ ಮಾಡಲಿದೆ.


 • ವೇರಿಯಂಟ್‌ಗಳು

  ಶಿಯೋಮಿ ಬಿಡುಗಡೆ ಮಾಡಿರುವ 'ಮಿ ಬ್ಯಾಂಡ್ 4' 'ಎನ್‌ಎಫ್‌ಸಿ' ಮತ್ತು 'ನಾನ್‌-ಎನ್‌ಎಫ್‌ಸಿ' ಎಂಬ ಎರಡು ವರ್ಷನ್‌ಗಳ ಆಯ್ಕೆಗಳನ್ನು ಹೊಂದಿದೆ. ಎನ್‌ಎಫ್‌ಸಿ ವರ್ಷನ್‌ ಮಾದರಿಯ ಸ್ಮಾರ್ಟ್‌ಬ್ಯಾಂಡ್‌ ಮಾಡೆಲ್‌ ನಂಬರ್‌ XMSH08HM ಆಗಿದೆ ಮತ್ತು ನಾನ್‌-ಎನ್‌ಎಫ್‌ಸಿ ಡಿವೈಸ್‌ ಮಾಡೆಲ್‌ ನಂಬರ್ XMSH07HM ಆಗಿದೆ.


 • ಬ್ಯಾಟರಿ ಲೈಫ್‌

  ಶಿಯೋಮಿ ಮಿ ಬ್ಯಾಂಡ್ 4' ಡಿವೈಸ್‌ 135mAh ಸಾಮರ್ಥ್ಯದ ಬಿಗ್‌ ಬ್ಯಾಟರಿ ಶಕ್ತಿಯನ್ನು ಹೊಂದಿದ್ದು, ಒಮ್ಮೆ ಚಾರ್ಜ್‌ ಮಾಡಿದರೇ ಸುಮಾರು 20 ದಿನಗಳ ವರೆಗೂ ಬಾಳಿಕೆ ಬರಲಿದೆ. ಇದರೊಂದಿಗೆ ಅತ್ಯುತ್ತಮ ಚಾರ್ಜರ್‌ ಸೌಲಭ್ಯವನ್ನು ನೀಡಲಾಗಿದೆ. ಶಿಯೋಮಿ 'ಮಿ 3' ಸ್ಮಾರ್ಟ್‌ಬ್ಯಾಂಡ್‌ 110mAh ಬ್ಯಾಟರಿ ಪವರ್‌ ಅನ್ನು ನೀಡಲಾಗಿತ್ತು. ಮಿ 4 ಸ್ಮಾರ್ಟ್‌ಬ್ಯಾಂಡ್‌ನಲ್ಲಿ ಬ್ಯಾಟರಿ ಹೆಚ್ಚಿಸಲಾಗಿದೆ.


 • ಬೆಲೆ ಮತ್ತು ಲಭ್ಯತೆ

  ಶಿಯೋಮಿಯ ಮಿ ಬ್ಯಾಂಡ್ 4, ಎನ್‌ಎಫ್‌ಸಿ ವರ್ಷನ್‌ ಮಾದರಿಯ ಸ್ಮಾರ್ಟ್‌ಬ್ಯಾಂಡ್‌ ಬೆಲೆಯು ಚೀನಾದಲ್ಲಿ 169 yuan ಆಗಿದ್ದು, ಭಾರತದಲ್ಲಿ 1,700ರೂ. ಆಗಿರಲಿದೆ. ಹಾಗೆಯೇ ನಾನ್‌-ಎನ್‌ಎಫ್‌ಸಿ' ವರ್ಷನ್‌ ಸ್ಮಾರ್ಟ್‌ಬ್ಯಾಂಡ್‌ ಬೆಲೆಯು ಚೀನಾದಲ್ಲಿ 229 yuan ಆಗಿದ್ದು, ಭಾರತದಲ್ಲಿ 2,300ರೂ ಎನ್ನಲಾಗಿದೆ. ಕಂಪನಿಯು ಈ ಡಿವೈಸ್‌ಗೆ ಏನಾದರೂ ಆಫರ್ ನೀಡಲಿದೆಯಾ ಎಂದು ತಿಳಿಯಲು ಇದೇ ಸೆಪ್ಟಂಬರ್ 17ರ ವರೆಗೂ ಕಾಯಬೇಕಿದೆ.
ಶಿಯೋಮಿ ಕಂಪನಿಯ ಸ್ಮಾರ್ಟ್‌ಫೋನ್‌ ಜೊತೆಗೆ ಸ್ಮಾರ್ಟ್‌ ಡಿವೈಸ್‌ಗಳು ಸಹ ಗ್ರಾಹಕರನ್ನು ಸೆಳೆದಿದ್ದು, ಅವುಗಳಲ್ಲಿ 'ಶಿಯೋಮಿ ಮಿ ಬ್ಯಾಂಡ್' ಡಿವೈಸ್‌ಗಳು ಮುಂಚೂಣಿಯಲ್ಲಿವೆ. ಕಂಪನಿಯು ಇತ್ತೀಚಿಗೆ ಚೀನಾ ಮಾರುಕಟ್ಟೆಗಯಲ್ಲಿ ಶಿಯೋಮಿ 'ಮಿ ಬ್ಯಾಂಡ್‌ 4' ಸ್ಮಾರ್ಟ್‌ಬ್ಯಾಂಡ್‌ ಅನ್ನು ಬಿಡುಗಡೆ ಮಾಡಿದ್ದು, ಈಗಾಗಲೇ ಈ ಡಿವೈಸ್‌ ಫಿಟ್ನೆಸ್‌ ಪ್ರಿಯರನ್ನು ಸೆಳೆದಿದೆ. ಇದೀಗ ಭಾರತೀಯ ಮಾರುಕಟ್ಟೆಗೂ ಬಿಡುಗಡೆ ಮಾಡಲು ಸಜ್ಜಾಗಿದೆ.

 
ಹೆಲ್ತ್