Back
Home » ಸಮ್ಮಿಲನ
ಬುಧವಾರದ ದಿನ ಭವಿಷ್ಯ (9-10-2019)
Boldsky | 9th Oct, 2019 09:41 AM
 • ಮೇಷ: 21 ಮಾರ್ಚ್ 19 ಏಪ್ರಿಲ್

  ಇಂದು ನಿಮಗೆ ಅನುಕೂಲಕರವಾದ ದಿನ ಎಂದು ನಿರೀಕ್ಷಿಸಲಾಗುವುದು. ಆದರೆ ಎಂದಿನಂತೆ ನೀವು ನಿಮ್ಮ ಕೆಲಸದ ಮೇಲೆ ಸಾಕಷ್ಟು ಶ್ರಮವನ್ನು ತೋರಬೇಕಾಗುವುದು. ಆರೋಗ್ಯದ ಬಗ್ಗೆ ಯಾವುದೇ ಬಗೆಯ ಅಸಡ್ಡೆಯನ್ನು ತೋರದಿರಿ. ಆದಷ್ಟು ಜಾಗರೂಕತೆಯಿಂದ ಇರಬೇಕು. ಅಧಿಕ ರಕ್ತದೊತ್ತಡದಿಂದ ನಿಮ್ಮ ಆರೋಗ್ಯವು ಹದಗೆಡಬಹುದು. ಕೆಲಸದ ಕ್ಷೇತ್ರದಲ್ಲಿ ನಡೆಯುವ ವಿವಾದಗಳಿಂದ ದೂರವಿರಿ. ಇಲ್ಲವಾದರೆ ನೀವು ಬಲಿಪಶು ಆಗುವ ಸಾಧ್ಯತೆಗಳಿವೆ. ಸಾರ್ವಜನಿಕ ಕ್ಷೇತ್ರದಲ್ಲಿ ಇಂದು ನಿಮಗೆ ಸಾಮಾನ್ಯವಾದ ದಿನ. ಏಕೆಂದರೆ ಏಕತಾನತೆಯು ನಿಮಗೆ ಬೇಸರವನ್ನುಂಟುಮಾಡಬಹುದು. ಎರಡು ಮೂರು ಕೆಲಸಗಳಿಗೆ ಒಮ್ಮೆಯೇ ದುಮುಕದಿರಿ. ಏಕೆಂದರೆ ಈ ದಿನ ಎಲ್ಲವೂ ನಿಮ್ಮ ಪರವಾಗಿಯೇ ಇರುತ್ತದೆ ಎಂದು ಹೇಳಲಾಗುವುದಿಲ್ಲ. ಕುಟುಂಬಕ್ಕೆ ಸಂಬಂಧಿಸಿದಂತೆ ಆಶ್ಚರ್ಯಕರ ಪ್ರವಾಸವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಕುಟುಂಬದಲ್ಲಿ ಎದುರಾಗುವ ತೊಂದರೆಗಳನ್ನು ನಿವಾರಿಸಿಕೊಳ್ಳಲು ನೀವು ಹೊಸ ಮಾರ್ಗವನ್ನು ಕಂಡುಕೊಳ್ಳಬೇಕಾಗುವುದು. ಹಣಕಾಸಿಗೆ ಸಂಬಂಧಿಸಿದಂತೆ ದೊಡ್ಡ ಸುಧಾರಣೆ ಉಂಟಾಗಬಹುದು. ಅತಿಯಾದ ಖರ್ಚಿನ ಸ್ವಭಾವದಿಂದ ಇನ್ನೊಂದು ದೊಡ್ಡ ಸಮಸ್ಯೆ ಎದುರಾಗಬಹುದು. ಇಂದು ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಕಠಿಣವಾದ ದಿನ ಎನ್ನಲಾಗುವುದು.
  ಅದೃಷ್ಟ ಬಣ್ಣ: ಗುಲಾಬಿ
  ಅದೃಷ್ಟ ಸಂಖ್ಯೆ: 27
  ಅದೃಷ್ಟ ಸಮಯ: ಮಧ್ಯಾಹ್ನ 12:05 ರಿಂದ 10:30 ರವರೆಗೆ


 • ವೃಷಭ: 20 ಏಪ್ರಿಲ್-20 ಮೇ

  ಇಂದು ನಿಮಗೆ ಶುಭಕರವಾದ ದಿನ. ನೀವು ನಿಮ್ಮ ಪ್ರೀತಿ ಪಾತ್ರರೊಂದಿಗೆ ಹೆಚ್ಚಿನ ಆನಂದವನ್ನು ಅನುಭವಿಸುವಿರಿ. ನಿಮ್ಮ ಮಕ್ಕಳ ನಡವಳಿಕೆಯು ನಿಮಗೆ ಬೇಸರ ಹಾಗೂ ಅನಾನುಕೂಲತೆಯನ್ನು ಸೃಷ್ಟಿಸುವುದು. ಮಕ್ಕಳ ಮೇಲೆ ಕಟ್ಟುನಿಟ್ಟಿನ ನಿಗಾ ವಹಿಸುವ ಅಗತ್ಯವಿದೆ. ಒಡ ಹುಟ್ಟಿದವರು ನಿಮಗೆ ಬೆಂಬಲಿಸುವರು. ಅದು ಸಂಜೆಯ ಹೊತ್ತಿಗೆ ವಿಷಯಗಳನ್ನು ಉತ್ತಮ ಗೊಳಿಸುತ್ತದೆ. ಮೇಲಾಧಿಕಾರಿಗಳ ಸಹಕಾರ ದೊರೆಯುವುದರಿಂದ ನಿಮ್ಮ ವೃತ್ತಿ ಕ್ಷೇತ್ರದಲ್ಲಿ ಅನುಕೂಲಕರ ಪರಿಸ್ಥಿತಿ ಇರುತ್ತದೆ. ಹೊಸ ಸಂಗತಿಗಳನ್ನು ಅಥವಾ ಯೋಜನೆಯನ್ನು ಕೈಗೊಳ್ಳಲು ಇದು ಉತ್ತಮವಾದ ಸಮಯ. ಪ್ರಮುಖ ವಿಷಯಗಳಿಗೆ ಸಂಬಂಧಿಸಿದಂತೆ ಹಿರಿಯರೊಂದಿಗೆ ನೀವು ಸೈದ್ಧಾಂತಿಕ ವ್ಯತ್ಯಾಸವನ್ನು ಎದುರಿಸಬಹುದು. ನಿಮ್ಮ ಸಂಗಾತಿಯು ಪರಿಸ್ಥಿತಿಗೆ ಸೂಕ್ತ ಪ್ರತಿಕ್ರಿಯೆ ನೀಡುವುದಿಲ್ಲ. ಬದಲಿಗೆ ಗೊಂದಲಕ್ಕೆ ಒಳಗಾಗಬಹುದು. ಪ್ರೀತಿ ಪಾತ್ರರು ನಿಮಗೆ ಅನುಚಿತವಾದ ವರ್ತನೆಯನ್ನು ತೋರಬಹುದು. ಅದು ನಿಮಗೆ ಮಾನಸಿಕ ಒತ್ತಡವನ್ನುಂಟು ಮಾಡುತ್ತದೆ. ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ಇಂದು ಸಾಮಾನ್ಯವಾದ ದಿನ. ದೂರದ ಪ್ರದೇಶಗಳಿವೆ ಪ್ರಯಾಣವನ್ನು ಬೆಳೆಸುವುದು ತಪ್ಪಿಸಿ. ನಿಮ್ಮ ಆರೋಗ್ಯವು ಸಾಮಾನ್ಯ ಸ್ಥಿತಿಯಲ್ಲಿ ಇರುತ್ತದೆ.
  ಅದೃಷ್ಟ ಬಣ್ಣ: ಆಕಾಶ ನೀಲಿ
  ಅದೃಷ್ಟ ಸಂಖ್ಯೆ: 15
  ಅದೃಷ್ಟ ಸಮಯ: ಬೆಳಿಗ್ಗೆ 5:00 ರಿಂದ ಮಧ್ಯಾಹ್ನ 3:30 ರವರೆಗೆ


 • ಮಿಥುನ: 21 ಮೇ-20 ಜೂನ್

  ಇಂದು ಕೆಲವು ವಿಷಯಗಳ ಬಗ್ಗೆ ನೀವು ಗೊಂದಲಕ್ಕೆ ಒಳಗಾಗಬಹುದು. ನಂಬಲು ಅರ್ಹರಲ್ಲದ ವ್ಯಕ್ತಿಗಳಿಂದ ಕೆಲವು ಅಭಿಪ್ರಾಯಗಳನ್ನು ಪಡೆದುಕೊಳ್ಳುವಿರಿ. ಸಂದರ್ಭಗಳನ್ನು ಮತ್ತು ಕೆಲವು ಪ್ರಮುಖ ಕೆಲಸವನ್ನು ನಿರ್ವಹಿಸಲು ನಿಮಗೆ ಕಷ್ಟವಾಗಬಹುದು. ಉತ್ತಮ ಸ್ನೇಹಿತನನ್ನು ಭೇಟಿಯಾಗುವುದು ಅಥವಾ ಒಂದಿಷ್ಟು ಸಮಯವನ್ನು ಅವರೊಂದಿಗೆ ಕಳೆಯುವುದು ಒಂದು ಉತ್ತಮ ಉಪಾಯವಾಗುವುದು. ಸಾರ್ವಜನಿಕ ವಲಯದಲ್ಲಿ ಇರುವವರು ದೀರ್ಘ ಸಮಯಗಳ ನಂತರ ಸಂತೋಷವನ್ನು ಪಡೆದುಕೊಳ್ಳುವರು. ಇವರು ಮೇಲಾಧಿಕಾರಿಗಳು ಹಾಗೂ ಸಹೋದ್ಯೋಗಿಗಳೊಂದಿಗೆ ಉತ್ತಮ ಸಂಬಂಧವನ್ನು ಬೆಳೆಸಿಕೊಳ್ಳುವರು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಅನುಕೂಲಕರ ಪರಿಸ್ಥಿತಿಯನ್ನು ಎದುರಿಸುವಿರಿ. ಇದರಿಂದಾಗಿ ನೀವು ಆಪ್ತರೊಂದಿಗೆ ಅಥವಾ ಸ್ನೇಹಿತರೊಂದಿಗೆ ಹೊಸ ಹೂಡಿಕೆ ಮಾಡಲು ಮುಂದಾಗಬಹುದು. ಕುಟುಂಬದ ವಿಷಯದಲ್ಲಿ ನಿಮಗೆ ಒಂದು ಪ್ರಣಯದ ದಿನವಾಗುವುದು. ಸಂಗಾತಿಯು ನಿಮಗೆ ವಿಶೇಷ ಅನುಭವ ಹಾಗೂ ಭಾವನೆಯನ್ನು ತುಂಬುವರು. ದೂರದ ಊರಿಗೆ ದೀರ್ಘ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ಯಾವುದಾದರೂ ಹೊಸ ಸಂಗತಿಯನ್ನು ಕೈಗೊಳ್ಳುವ ಮೊದಲು ಎರಡು ಬಾರಿ ಯೋಚಿಸಿ.
  ಅದೃಷ್ಟ ಬಣ್ಣ: ಸ್ಕಾರ್ಲೆಟ್
  ಅದೃಷ್ಟ ಸಂಖ್ಯೆ: 38
  ಅದೃಷ್ಟ ಸಮಯ: ಸಂಜೆ 5:30 ರಿಂದ 9:15 ರವರೆಗೆ


 • ಕರ್ಕ: 21 ಜೂನ್ 22 ಜುಲೈ

  ಕೆಲಸಕ್ಕಾಗಿ ನೀವು ಕಾಯುವುದು ಅಂತ್ಯಗೊಳ್ಳುವುದು. ಇಂದು ಬಹುತೇಕ ವಿಷಯಗಳು ನಿಮ್ಮ ಪಾಲಿಗೆ ಯಶಸ್ಸನ್ನು ತಂದುಕೊಡುವುದು. ಒಟ್ಟಾರೆಯಾಗಿ ವಿಷಯಗಳು ಸಹ ನಿಮ್ಮ ಪರವಾಗಿ ಹಾಗೂ ಅನುಕೂಲಕರವಾಗಿಯೂ ಇರುತ್ತದೆ. ನಿಮ್ಮ ಸಕಾರಾತ್ಮಕ ವರ್ತನೆಗಳು ಇತರರಿಗೆ ಸಹಾಯವಾಗುವುದು. ಹಣಕಾಸಿನ ವಿಷಯದಲ್ಲಿ ಉತ್ತಮ ಸ್ಥಿತಿಯನ್ನು ಪಡೆದುಕೊಳ್ಳುವಿರಿ. ಪೋಷಕರ ಆರೋಗ್ಯವು ಉತ್ತಮಗೊಳ್ಳುವುದು. ಇದು ಕುಟುಂಬದ ಪರಿಸ್ಥಿತಿಯನ್ನು ಬದಲಾಯಿಸುತ್ತದೆ. ಉತ್ತಮ ಜೀವನೋಪಾಯಕ್ಕೆ ನೀವು ಹೆಚ್ಚುವರಿ ಆದಾಯದ ಮೂಲವನ್ನು ಯೋಜಿಸಬಹುದು. ಸಂಗಾತಿಯು ನಿಮಗೆ ಉತ್ತಮ ಬೆಂಬಲ ನೀಡುವುದರಿಂದ ಉತ್ತಮ ಭವಿಷಯಕ್ಕೆ ಯೋಜಿಸಲು ಅನುಕೂಲವಾಗುತ್ತದೆ. ದಾಂಪತ್ಯದಲ್ಲಿ ಉಂಟಾಗುವ ಉತ್ತಮ ಹೊಂದಾಣಿಕೆಯ ಸ್ಥಿತಿಯು ನಿಮ್ಮನ್ನು ಹೆಚ್ಚು ಬಲಶಾಲಿಯನ್ನಾಗಿಸುವುದು. ಜಾಲಿಯಾಗಿರುವ ನಿಮ್ಮ ಸ್ವಭಾವವು ಕುಟುಂಬಕ್ಕೆ ಕೆಲವು ಗೊಂದಲವನ್ನು ಉಂಟುಮಾಡಬಹುದು. ಆದರೆ ಸಮಸ್ಯೆಗಳಿಗೆ ಸೂಕ್ತ ಪರಿಹಾರವನ್ನು ಕಂಡುಕೊಳ್ಳುವಿರಿ. ಉದ್ಯಮಿಗಳಿಗೆ ಇಂದು ಲಾಭದಾಯಕವಾದ ದಿನವಾಗಿರುತ್ತದೆ. ಸಂಜೆಯ ಹೊತ್ತಿಗೆ ಶಾಂತಿ ಹಾಗೂ ಆಹ್ಲಾದಕರವಾದ ಸ್ಥಿತಿಯನ್ನು ಅನುಭವಿಸುವಿರಿ.
  ಅದೃಷ್ಟ ಬಣ್ಣ: ಕಿತ್ತಳೆ
  ಅದೃಷ್ಟ ಸಂಖ್ಯೆ: 25
  ಅದೃಷ್ಟ ಸಮಯ: ಸಂಜೆ 4:20 ರಿಂದ 8:30 ರವರೆಗೆ


 • ಸಿಂಹ: 23 ಜುಲೈ-22 ಆಗಸ್ಟ್

  ಕೆಲಸದ ವಿಷಯದಲ್ಲಿ ಇಂದು ನಿಮಗೆ ಅನಾನುಕೂಲಕರವಾದ ದಿನ. ವೃತ್ತಿ ಕ್ಷೇತ್ರದಲ್ಲಿ ಇರುವ ರಾಜಕಾರಣವು ನಿಮಗೆ ಬೇಸರವನ್ನು ಉಂಟುಮಾಡುತ್ತದೆ. ಕಾರ್ಪೋರೇಟ್ ಉದ್ಯೋಗಿಗಳು ಗುರಿ ಸಾಧನೆಗೆ ಸೆಣಸಾಡಬಹುದು. ಜನರು ನಿಮ್ಮ ಜ್ಞಾನ ಮತ್ತು ಅನುಭವವನ್ನು ದುರುಪಯೋಗಪಡಿಸಿಕೊಳ್ಳಬಹುದು. ನೀವು ಆದಷ್ಟು ಕೆಟ್ಟ ವ್ಯಕ್ತಿಗಳಿಂದ ದೂರವಿರಿ. ಇಲ್ಲವಾದರೆ ಅವರು ನಿಮ್ಮನ್ನು ಹಾಗೂ ನಿಮ್ಮ ಶಕ್ತಿಯನ್ನು ದುರುಪಯೋಗ ಪಡಿಸಿಕೊಳ್ಳಬಹುದು. ವಿಷಯಗಳು ತಪ್ಪಾಗುವುದರಿಂದ ಇತರರ ಮೇಲೆ ಅನುಮಾನವನ್ನು ವ್ಯಕ್ತಪಡಿಸದಿರಿ. ನಿಮ್ಮ ವ್ಯವಹಾರದಲ್ಲಿ ನೀವು ಹೊಸದನ್ನು ಕಲಿಯುವಿರಿ. ಅದು ದೀರ್ಘಾವಧಿಯಲ್ಲಿ ಪ್ರಯೋಜನಕಾರಿಯಾಗಿರುತ್ತದೆ. ಹಣಕಾಸಿನ ವಿಷಯದಲ್ಲಿ ಸಾಮಾನ್ಯವಾದ ದಿನ. ನಿಮ್ಮಲ್ಲಿ ಕೆಲವರು ಉದ್ಯೋಗಕ್ಕಾಗಿ ವಿದೇಶಕ್ಕೆ ಹೋಗಬಹುದು. ನಿಮ್ಮ ಪ್ರೀತಿ ಪಾತ್ರರಿಗೆ ವಿಶೇಷ ಅನುಭವವನ್ನು ನೀಡುವಿರಿ. ಅದು ನಿಮಗೆ ದಿನವನ್ನು ಅತ್ಯುತ್ತಮವಾಗಿರಿಸುವಂತೆ ಮಾಡುವುದು. ಈ ದಿನವು ನೀವು ಉತ್ತಮವಾಗಿರಿಸಿಕೊಳ್ಳಲು ದಿನವನ್ನು ಧ್ಯಾನದೊಂದಿಗೆ ಪ್ರಾರಂಭಿಸಿ. ನಿಮ್ಮ ಪ್ರೀತಿಯು ನಿಮ್ಮ ಕಡೆಗೆ ಹೆಚ್ಚು ಸ್ವಾಮ್ಯ ಸೂಚಕವಾಗಿರುತ್ತದೆ.
  ಅದೃಷ್ಟ ಬಣ್ಣ: ನೇರಳೆ
  ಅದೃಷ್ಟ ಸಂಖ್ಯೆ: 13
  ಅದೃಷ್ಟ ಸಮಯ: 12: 45 ರಿಂದ 10:30 ರವರೆಗೆ


 • ಕನ್ಯಾ: 23 ಆಗಸ್ಟ್ -22 ಸಪ್ಟೆಂಬರ್

  ಅತಿಯಾಗಿ ಚಿಂತಿಸುವುದನ್ನು ನಿಲ್ಲಿಸಿ. ಏಕೆಂದರೆ ಅದು ನಿಮ್ಮ ಸಮಯವನ್ನು ವ್ಯರ್ಥ ಮಾಡುವುದು ಅಷ್ಟೆ. ಯಾವುದೇ ವಿಷಯಕ್ಕೂ ಅತಿಯಾದ ಆತುರ ತೋರದಿರಿ. ಉದ್ಯೋಗ ಕ್ಷೇತ್ರದಲ್ಲಿ ಉಂಟಾಗುವ ಸಂಘರ್ಷವನ್ನು ತಪ್ಪಿಸಿಕೊಳ್ಳಿ. ಹಣಕಾಸಿನ ಸೆಳೆತವು ನಿಮಗೆ ಚಿಂತೆಯನ್ನು ಉಂಟುಮಾಡುವುದು. ನಿಮ್ಮ ಸಂಗಾತಿಯ ಸಂಶಯ ಸ್ವಭಾವದಿಂದಾಗಿ ನೀವು ಕೆಲವು ಪ್ರಮುಖ ವಸ್ತುಗಳನ್ನು ಖರೀದಿಸದೆ ಇರಬಹುದು. ಇಲ್ಲವೇ ಅಂತಹ ಯಾವುದಾದರೂ ದೊಡ್ಡ ಯೋಜನೆಯನ್ನು ಹೊಂದಿದ್ದರೆ ಅದನ್ನು ಕೈಬಿಡಬಹುದು. ನಿಕಟ ಸಂಬಂಧಿಯೊಬ್ಬರು ಅಚ್ಚರಿ ಹುಟ್ಟಿಸುವಂತಹ ಭೇಟಿಯನ್ನು ನೀಡುವರು. ನಿಮ್ಮ ಸ್ನೇಹಿತ ಅಥವಾ ಆಪ್ತ ವ್ಯಕ್ತಿಯು ವಿಶೇಷ ಭಾವನೆಯನ್ನು ಮೂಡಿಸಬಹುದು. ಕೆಲವು ನಿರ್ಧಾರಗಳಿಗೆ ಸಹೋದ್ಯೋಗಿಯು ಸಹಾಯ ಮಾಡಬಹುದು. ಆಕ್ರಮಣಕಾರಿ ವರ್ತನೆಯು ನಿಮ್ಮ ಖ್ಯಾತಿಗೆ ಕಳಂಕ ತರುವುದು. ಹಾಗಾಗಿ ಅಂತಹ ವರ್ತನೆಯನ್ನು ನೀವು ನಿಯಂತ್ರಿಸಿಕೊಳ್ಳಬೇಕು. ಇಂದು ಕುಟುಂಬದ ವಿಷಯದಲ್ಲಿ ಆಶೀರ್ವಾದದ ದಿನವಾಗಿರುತ್ತದೆ.
  ಅದೃಷ್ಟ ಬಣ್ಣ: ನೀಲಿ
  ಅದೃಷ್ಟ ಸಂಖ್ಯೆ: 16
  ಅದೃಷ್ಟ ಸಮಯ: ಮಧ್ಯಾಹ್ನ 1:45 ರಿಂದ 8:55 ರವರೆಗೆ


 • ತುಲಾ: 23 ಸಪ್ಟೆಂಬರ್-22 ಅಕ್ಟೋಬರ್

  ನವ ವಿವಾಹಿತರಿಗೆ ಇಂದು ವಿಶೇಷವಾದ ದಿನ ಎಂದು ಹೇಳಬಹುದು. ಅವರು ಸಣ್ಣ ಪ್ರವಾಸವನ್ನು ಸಹ ಕೈಗೊಳ್ಳಬಹುದು. ಮಕ್ಕಳು ಸ್ನೇಹಿತರೊಂದಿಗೆ ಪಿಕ್ನಿಕ್ ಹೋಗುವ ಸಾಧ್ಯತೆಗಳಿವೆ. ನಿಮ್ಮ ಸ್ನೇಹಿತರೊಂದಿಗೆ ಶಾಪಿಂಗ್ ಹೋಗುವುದು ಹೆಚ್ಚಿನ ಸಂತೋಷ ನೀಡುವುದು. ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ವಿಷಯಗಳು ಇಂದು ಸಾಮಾನ್ಯವಾಗಿರುತ್ತದೆ. ಹತ್ತಿರದವರಿಂದ ಆರ್ಥಿಕ ಸಹಾಯವನ್ನು ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪೋಷಕರ ಆರೋಗ್ಯದ ಬಗ್ಗೆ ಒಂದಿಷ್ಟು ಕಾಳಜಿಯನ್ನು ತೋರಿಸಿ. ಸಂಬಂಧದ ಮಹತ್ವವನ್ನು ಅರಿಯುವಿರಿ. ನಿಮ್ಮ ಗುರಿ ಸಾಧಿಸುವಲ್ಲಿ ಯಶಸ್ವಿಯಾಗುವಿರಿ. ಮಾರುಕಟ್ಟೆಯು ಸ್ಪರ್ಧಾತ್ಮಕ ಸ್ಥಿತಿಯಿಂದ ಕೂಡಿರುವುದಕ್ಕೆ ನೀವು ಹೆಚ್ಚಿನ ಶ್ರಮವನ್ನು ತೋರಿಸಬೇಕಾಗುವುದು.
  ಅದೃಷ್ಟ ಬಣ್ಣ: ಕ್ರೀಮ್
  ಅದೃಷ್ಟ ಸಂಖ್ಯೆ: 6
  ಅದೃಷ್ಟ ಸಮಯ: ಬೆಳಿಗ್ಗೆ 8:30 ರಿಂದ ಮಧ್ಯಾಹ್ನ 2:40


 • ವೃಶ್ಚಿಕ: 23 23 ಅಕ್ಟೋಬರ್-21 ನವೆಂಬರ್

  ನಿಮ್ಮ ಪ್ರಬುದ್ಧತೆಯು ವೃತ್ತಿ ಕ್ಷೇತ್ರದಲ್ಲಿ ಜನರಿಗೆ ಉತ್ತಮ ಮಾರ್ಗದರ್ಶನವನ್ನು ನೀಡುವುದು. ಬಹುತೇಕ ಮಂದಿ ಇಂದು ಆನಂದವನ್ನು ಅನುಭವಿಸುವರು. ವಿಷಯಗಳು ಹೇಗೆ ಬರುತ್ತವೋ ಹಾಗೇ ಸ್ವೀಕರಿಸುವ ಪ್ರವೃತ್ತಿ ನಿಮ್ಮದಾಗಿರಬೇಕು. ಜನರನ್ನು ಟೀಕಿಸುವ ಗೋಜಿಗೆ ಹೋಗದಿರಿ. ಕೆಲವರು ನಿಮ್ಮ ಆಕರ್ಷಣೆಗೆ ಒಳಗಾಗಬಹುದು. ಸಾರ್ವಜನಿಕ ಸಾರಿಗೆಯಲ್ಲಿ ನೀವು ಕೆಲವು ಪ್ರದೇಶಗಳಿಗೆ ಪ್ರಯಾಣವನ್ನು ಕೈಗೊಳ್ಳುವ ಸಾಧ್ಯತೆಗಳಿವೆ. ನಿಮ್ಮ ನಡವಳಿಕೆಯ ಬಗ್ಗೆ ಸೂಕ್ತ ನಿಯಂತ್ರಣ ಹೊಂದಿರಬೇಕು. ನಿಮ್ಮ ಸಂಗಾತಿಯು ಕೆಲವು ವಿಷಯದಲ್ಲಿ ಸೂಕ್ತ ಆಯ್ಕೆಯನ್ನು ಹೊಂದಿರುತ್ತಾರೆ. ಅದರಿಂದ ನಿಮಗೆ ಕೊಂಚ ಕಿರಿಕಿರಿ ಉಂಟಾಗಬಹುದು. ಆರ್ಥಿಕ ಸ್ಥಿತಿಗೆ ಸಂಬಂಧಿಸಿದಂತೆ ನಿಮ್ಮ ಪೋಷಕರ ಸಲಹೆ ಅಗತ್ಯವಾಗಿರುತ್ತದೆ. ಜೊತೆಗೆ ಉತ್ತಮ ಪ್ರಯೋಜನವನ್ನು ತಂದುಕೊಡುವುದು. ಒಡಹುಟ್ಟಿದವರ ನಡುವೆ ಸಮನ್ವಯತೆ ಕಡಿಮೆಯಾಗುವುದು. ಅದು ನಿಮ್ಮ ನಡುವೆ ಕಳವಳವನ್ನು ಉಂಟುಮಾಡುತ್ತದೆ. ಆರೋಗ್ಯದ ಕಡೆಗೆ ಹೆಚ್ಚಿನ ಗಮನ ನೀಡಿ.
  ಅದೃಷ್ಟ ಬಣ್ಣ: ಹಸಿರು
  ಅದೃಷ್ಟ ಸಂಖ್ಯೆ: 22
  ಅದೃಷ್ಟ ಸಮಯ: ಬೆಳಿಗ್ಗೆ 10:30 ರಿಂದ ಸಂಜೆ 4:15 ರವರೆಗೆ


 • ಧನು: 22 ನವೆಂಬರ್ -21 ಡಿಸೆಂಬರ್

  ದಿನವಿಡೀ ನೀವು ಸೋಮಾರಿ ವರ್ತನೆಯನ್ನು ತೋರುವಿರಿ. ನಿಮ್ಮ ಪರಿಸ್ಥಿತಿಗಳು ಅನುಕೂಲಕರವಾಗಿ ಇರುವುದಿಲ್ಲ. ಹಣಕಾಸಿನ ತೊಂದರೆಯಿಂದಾಗಿ ನೀವು ನಿಮ್ಮ ಕೆಲಸವನ್ನು ಪೂರೈಸಲು ಸಾಧ್ಯವಾಗದೆ ಇರಬಹುದು. ನಿಮ್ಮ ನಿರೀಕ್ಷೆಗೆ ಅನುಗುಣವಾಗಿ ವಿಷಯಗಳನ್ನು ವಿಂಗಡಿಸಲು ಕಷ್ಟವಾಗುತ್ತದೆ. ಮಕ್ಕಳು ಶೈಕ್ಷಣಿಕ ಕ್ಷೇತ್ರದಲ್ಲಿ ಸಾಧನೆ ಮಾಡುವುದರಿಂದ ಅದು ನಿಮಗೆ ಹೆಮ್ಮೆಯ ಭಾವನೆಯನ್ನು ತಂದುಕೊಡುತ್ತದೆ. ಪೋಷಕರು ತೀರ್ಥ ಕ್ಷೇತ್ರಕ್ಕೆ ಸಣ್ಣ ಪ್ರವಾಸ ಕೈಗೊಳ್ಳಬಹುದು. ಗ್ರಾಹಕರು ತೀವ್ರವಾದ ಭೇಟಿ ನೀಡುವುದರಿಂದ ಉದ್ಯಮಿಗಳಿಗೆ ಇಂದು ಬಿಡುವಿಲ್ಲದ ದಿನವಾಗುತ್ತದೆ. ಸಂಗಾತಿಯ ಮೇಲೆ ನೀವು ಪ್ರಾಬಲ್ಯ ತೋರಿಸಲು ಮುಂದಾಗುವಿರಿ. ಅದನ್ನು ಕುಟುಂಬದಲ್ಲಿ ಯಾರೂ ಸ್ವೀಕರಿಸುವುದಿಲ್ಲ. ಸ್ನೇಹಿತರೊಂದಿಗೆ ಸಂಜೆ ಒಂದಿಷ್ಟು ಸಮಯವನ್ನು ಕಳೆಯುವ ಸಾಧ್ಯತೆಗಳಿವೆ. ಪರಿಸ್ಥಿತಿಯನ್ನು ನಿಯಂತ್ರಣದಲ್ಲಿ ಇಡಲು ನೀವು ನಿಮ್ಮ ವರ್ತನೆಯನ್ನು ಹಿಡಿತದಲ್ಲಿ ಇಟ್ಟುಕೊಳ್ಳಬೇಕು. ಒತ್ತಡದಿಂದ ಮುಕ್ತರಾಗಲು ದಿನವನ್ನು ಧ್ಯಾನದಿಂದ ಪ್ರಾರಂಭಿಸಿ.
  ಅದೃಷ್ಟ ಬಣ್ಣ: ಕಪ್ಪು ಹಸಿರು
  ಅದೃಷ್ಟ ಸಂಖ್ಯೆ: 7
  ಅದೃಷ್ಟ ಸಮಯ: ಬೆಳಿಗ್ಗೆ 9: 25 ರಿಂದ ಮಧ್ಯಾಹ್ನ 2:55 ರವರೆಗೆ


 • ಮಕರ: 22 ಡಿಸೆಂಬರ್ -19 ಜನವರಿ

  ಕೆಲಸದ ವಿಷಯಕ್ಕೆ ಸಂಬಂಧಿಸಿದಂತೆ ಇಂದು ನಿಮಗೆ ಸಂತೋಷಕರವಾದ ದಿನವಾಗಿರುತ್ತದೆ. ಕೆಲಸದ ಕಾರಣದಿಂದ ನೀವು ದೂರದ ಕ್ಷೇತ್ರಕ್ಕೆ ಪ್ರಯಾಣ ಕೈಗೊಳ್ಳುವ ಸಾಧ್ಯತೆಗಳಿವೆ. ಕೆಲಸವನ್ನು ಸೂಕ್ತ ರೀತಿಯಲ್ಲಿ ನಿರ್ವಹಿಸುವುದರಿಂದ ಎಲ್ಲರಿಂದಲೂ ಪ್ರಶಂಸೆ ದೊರೆಯುವುದು. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ವಿಷಯದಲ್ಲಿ ಉತ್ತಮ ಯಶಸ್ಸು ದೊರೆಯುವುದು. ಉದ್ಯಮಿಗಳು ಭಾರಿ ಲಾಭವನ್ನು ಪಡೆದುಕೊಳ್ಳುವರು. ಸಂಗಾತಿಯ ಬೆಂಬಲ ದೊರೆಯುವುದರಿಂದ ನೀವು ಇತರರಿಗೆ ಆರ್ಥಿಕ ಸಹಾಯ ಮಾಡಬಹುದು. ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವುದು ಉತ್ತಮ ಲಾಭವನ್ನು ತಂದುಕೊಡುವುದು. ಅನಿರೀಕ್ಷಿತ ಕಾರಣಗಳಿಗೆ ಪ್ರಯಾಣ ಕೈಗೊಳ್ಳಬೇಕಾಗುವುದು. ಹಾಗಾಗಿ ಇಂದು ನಿಮಗೆ ಬಿಡುವಿಲ್ಲದ ದಿನ ಆಗಬಹುದು. ಸಂಜೆಯ ಹೊತ್ತಿಗೆ ಬಿಡುವನ್ನು ಪಡೆದುಕೊಳ್ಳುವಿರಿ. ಪ್ರೀತಿ ಪಾತ್ರರೊಂದಿಗೆ ಉತ್ತಮ ಸಮಯವನ್ನು ಕಳೆಯುವುದರ ಮೂಲಕ ಸಂತೋಷವನ್ನು ಪಡೆದುಕೊಳ್ಳುವಿರಿ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 6
  ಅದೃಷ್ಟ ಸಮಯ: ಮಧ್ಯಾಹ್ನ 2:45 ರಿಂದ 9:30 ರವರೆಗೆ


 • ಕುಂಭ: 20 ಜನವರಿ -18 ಫೆಬ್ರವರಿ

  ಇಂದು ನೀವು ಒಟ್ಟಾರೆಯಾಗಿ ಹೆಚ್ಚು ಜಾಗರೂಕತೆಯಿಂದ ಇರಬೇಕು. ಜಗಳಗಳಿಂದ ದೂರವಿರಿ. ಹೂಡಿಕೆಗೆ ಯೋಜಿಸಲು ಇಂದು ಅತ್ಯುತ್ತಮವಾದ ದಿನ. ನಿರ್ಧಾರವನ್ನು ಆತುರಗಳಿಂದ ಕೈಗೊಳ್ಳದಿರಿ. ವಿಷಯಗಳು ತಪ್ಪಾಗಬಹುದು. ಆದಷ್ಟು ಶಾಂತಿ ಹಾಗೂ ತಾಳ್ಮೆಯ ಪ್ರವೃತ್ತಿಯನ್ನು ಹೊಂದಿರಿ. ಸಂಗಾತಿಯ ಶ್ರಮದಾಯಕ ಕೆಲಸವನ್ನು ಪರಿಗಣಿಸಿ ಅವರಿಗಾಗಿ ನೀವು ದುಬಾರಿ ವಸ್ತುಗಳ ಖರೀದಿ ಮಾಡಬಹುದು. ನಿಕಟ ಸಂಬಂಧದಲ್ಲಿ ಇದ್ದ ಹಿಂದಿನ ದ್ವೇಷದಿಂದ ದೂರವಿರಿ. ಆಗ ವಿಷಯಗಳು ಸಾಮಾನ್ಯವಾಗಿಯೇ ಉತ್ತಮವಾಗಿರುತ್ತದೆ. ಸಂಗಾತಿಯೊಂದಿಗಿನ ಪರಸ್ಪರ ತಿಳುವಳಿಕೆಯು ನಿಮಗೆ ಪ್ರಕಾಶಮಾನವಾದ ಫಲಿತಾಂಶವನ್ನು ನೀಡುತ್ತದೆ. ವಿದ್ಯಾರ್ಥಿಗಳು ಸ್ಪರ್ಧಾತ್ಮಕವಾಗಿ ಇರುತ್ತಾರೆ. ಆರೋಗ್ಯದಲ್ಲಿ ಸುಧಾರಣೆ ಹೊಂದುವುದರ ಮೂಲಕ ವಿಶ್ರಾಂತ ಮನಸ್ಸನ್ನು ಹೊಂದುವರು. ಪ್ರೀತಿ ಪಾತ್ರರೊಂದಿಗೆ ಸಂಜೆ ಉತ್ತಮ ಸಮಯವನ್ನು ಕಳೆಯುವಿರಿ.
  ಅದೃಷ್ಟ ಬಣ್ಣ: ಬಿಳಿ
  ಅದೃಷ್ಟ ಸಂಖ್ಯೆ: 17
  ಅದೃಷ್ಟ ಸಮಯ: ಬೆಳಿಗ್ಗೆ 10:20 ರಿಂದ ಮಧ್ಯಾಹ್ನ 3:30 ರವರೆಗೆ


 • ಮೀನ: 19 ಫೆಬ್ರುವರಿ-20 ಮಾರ್ಚ್

  ಉದ್ಯಮಿಗಳು ಭಾರಿ ಲಾಭವನ್ನು ಗಳಿಸುತ್ತಾರೆ. ನಕ್ಷತ್ರಗಳು ಅನುಕೂಲಕರವಾದ ಸ್ಥಿತಿಯಲ್ಲಿ ಇರುವುದರಿಂದ ಬಹುತೇಕ ವಿಷಯಗಳಲ್ಲಿ ಯಶಸ್ಸನ್ನು ಹಾಗೂ ಆನಂದವನ್ನು ಪಡೆಯುವಿರಿ. ನಿಮ್ಮ ಕಠಿಣ ಶ್ರಮಕ್ಕೆ ಸೂಕ್ತ ಪ್ರತಿಫಲ ದೊರೆಯುವುದು. ಅನೇಕ ವಿಷಯಗಳು ಅನುಕೂಲಕರವಾದ ಸ್ಥಿತಿಯನ್ನು ಒದಗಿಸುತ್ತವೆ. ಮಕ್ಕಳು ತಮ್ಮ ಕಾರ್ಯಕ್ಷಮತೆಯ ಬಗ್ಗೆ ಹೆಮ್ಮೆ ಪಡುವರು. ಹಿರಿಯರಿಂದಲೂ ಸೂಕ್ತ ಬೆಂಬಲ ದೊರೆಯುವುದು. ಪ್ರೀತಿಪಾತ್ರರೊಂದಿಗೆ ಸಣ್ಣ ಪ್ರವಾಸ ಕೈಗೊಳ್ಳುವಿರಿ. ಅದು ನಿಮಗೆ ಉಲ್ಲಾಸವನ್ನು ನೀಡುವುದು. ಮೇಲಾಧಿಕಾರಿಗಳ ವರ್ತನೆಯೂ ಅನುಕೂಲಕರವಾಗಿರುತ್ತದೆ. ಭವಿಷ್ಯಕ್ಕೆ ಸಂಬಂಧಿಸಿದಂತೆ ಕೆಲವು ಸಂಗತಿಗಳ ಕುರಿತು ಸಂಗಾತಿಯೊಂದಿಗೆ ಚರ್ಚೆಯನ್ನು ನಡೆಸಬಹುದು. ಸಂಬಂಧದಲ್ಲಿ ಇರುವವರು ಪ್ರೀತಿಯ ಗಾಳಿಯಲ್ಲಿ ತೇಲುವರು. ಉತ್ತಮ ಆರೋಗ್ಯ ಹಾಗೂ ಮನಃಸ್ಥಿತಿಯನ್ನು ಹೊಂದಲು ಉತ್ತಮ ವ್ಯಾಯಾಮದಿಂದ ದಿನವನ್ನು ಆರಂಭಿಸಿ.
  ಅದೃಷ್ಟ ಬಣ್ಣ: ಮರೂನ್
  ಅದೃಷ್ಟ ಸಂಖ್ಯೆ: 6
  ಅದೃಷ್ಟ ಸಮಯ: ಮಧ್ಯಾಹ್ನ 1:30 ರಿಂದ 10:45 ರವರೆಗೆ
ನಮ್ಮ ನಿತ್ಯದ ಬದುಕಿಗೆ ಒಂದು ನೀತಿ ನಿಯಮ ಎನ್ನುವುದು ಇರಬೇಕು. ನಾವು ವಾಸಿಸುವ ಮನೆಯ ಉದ್ದಳತೆ ಚಿಕ್ಕದಾಗಿದ್ದರೂ ಮನಸ್ಸು ವಿಶಾಲವಾಗಿರಬೇಕು. ನಮ್ಮ ಸುತ್ತಲಿರುವ ಜನರೊಂದಿಗೆ ಬೆರೆಯಬೇಕು, ಹಣದಲ್ಲಿ ಬಡತನ ಇದ್ದರೂ ನಮ್ಮ ಮನಸ್ಸು ಶ್ರೀಮಂತಿಕೆಯಿಂದ ಕೂಡಿರಬೇಕು. ನಮ್ಮವರು-ತನ್ನವರು ಎನ್ನುವ ಪ್ರೀತಿ ವಿಶ್ವಾಸದಿಂದ ಕೂಡಿರಬೇಕು. ಆಗಲೇ ಆ ಭಗವಂತ ನಮಗೆ ಒಳ್ಳೆಯದನ್ನು ಕರುಣಿಸುತ್ತಾನೆ.

   
 
ಹೆಲ್ತ್