Back
Home » ಇತ್ತೀಚಿನ
ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ಹಬ್ಬದ ಸೇಲ್: ಇ-ಕಾಮರ್ಸ್ ವಲಯದಲ್ಲಿ ದಾಖಲೆ ಸೃಷ್ಟಿ!
Gizbot | 9th Oct, 2019 10:46 AM
 • ಶೇ.50 ರಷ್ಟು ಹೆಚ್ಚಳ

  2018ರ ಬಿಗ್‌ ಬಿಲಿಯನ್ ಡೇಸ್ ಸೇಲ್ ಹೋಲಿಸಿದರೆ 2019 ರಲ್ಲಿ ಮಾರಾಟಗಾರರ ಸಂಖ್ಯೆಯಲ್ಲಿ ಶೇ.50 ರಷ್ಟು ಹೆಚ್ಚಳವಾಗಿದ್ದು, ಇ-ಕಾಮರ್ಸ್ ಮಾರಾಟಗಾರರಲ್ಲಿ ಫ್ಲಿಪ್‍ಕಾರ್ಟ್‍ನ ವಾಲೆಟ್ ಶೇರ್‌ನಲ್ಲಿನ ಮಾರಾಟಗಾರರಲ್ಲಿ ಶೇ.70 ರಷ್ಟು ಹೆಚ್ಚಳ ಮತ್ತು ಫ್ಯಾಶನ್ & ಹೋಂ ವಾಲೆಟ್ ವಿಭಾಗದಲ್ಲಿ ಶೇ.80 ರಷ್ಟು ಹೆಚ್ಚಳಗೊಂಡಿದೆ. ಹಾಗೆಯೇ ,2019 ರ ಬಿಗ್‌ ಬಿಲಿಯನ್ ಡೇ ಸೇಲ್ ವೇಳೆ ಬಿಎಯುನಿಂದ ಫ್ಲಿಪ್‍ಕಾರ್ಟ್ ಮೂಲಕ ಕುಶಲಕರ್ಮಿಗಳು ನೂರಕ್ಕೆ ನೂರರಷ್ಟು ವ್ಯಾಪಾರವನ್ನು ಹೆಚ್ಚಿಸಿಕೊಂಡಿದ್ದಾರೆ. ಈ ಮಾರಾಟ ಮಾಡಿದ ಮಾರಾಟಗಾರರ ಪೈಕಿ 2 ನೇ ಹಂತದ ನಗರಗಳು ಮತ್ತು ಪಟ್ಟಣಗಳಲ್ಲಿ ಶೇ.40 ರಷ್ಟು ಮಂದಿ ಇದ್ದಾರೆ ಎಂದು ಫ್ಲಿಪ್‌ಕಾರ್ಟ್ ತಿಳಿಸಿದೆ.


 • ಶೇ.50 ರಷ್ಟು ಹೆಚ್ಚಳ

  ಬಿಗ್ ಬಿಲಿಯನ್ ಡೇಸ್‌ ಸೇಲ್‌ನಲ್ಲಿ ಖಾಸಗಿ ಬ್ರ್ಯಾಂಡ್‍ಗಳ ಉತ್ಪನ್ನಗಳನ್ನು ಖರೀದಿ ಮಾಡಿದ ಗ್ರಾಹಕರ ಪೈಕಿ ಮೂರನೇ ಒಂದು ಭಾಗ ಮಹಿಳಾ ಗ್ರಾಹಕರು ಇದ್ದದ್ದು ಗಮನಾರ್ಹ. 16,000 ಕ್ಕೂ ಅಧಿಕ ಸ್ಥಳಗಳ ಗ್ರಾಹಕರು ಭಾರತದ ಅತಿದೊಡ್ಡ ಫರ್ನಿಚರ್ ಬ್ರ್ಯಾಂಡ್ ಆಗಿರುವ ಫ್ಲಿಪ್‍ಕಾರ್ಟ್‍ನಿಂದ ಫರ್ನಿಚರ್ ಖರೀದಿಸಿದ್ದಾರೆ. ಎಲೆಕ್ಟ್ರಾನಿಕ್ಸ್ ವಿಭಾಗದಲ್ಲಿ ಒಟ್ಟಾರೆ ಹೊಸ ಗ್ರಾಹಕರಲ್ಲಿ ಶೇ.50 ರಷ್ಟು ಹೆಚ್ಚಳ ಕಂಡುಬಂದಿದೆ. ಸೇಲ್ ಆರಂಭಿಕ ಹಂತದಲ್ಲಿಯೇ ಪ್ರತಿ ಸೆಕೆಂಡಿಗೆ 34 ಎಲೆಕ್ಟ್ರಾನಿಕ್ ಉತ್ಪನ್ನಗಳು ಮಾರಾಟವಾಗಿವೆ. ಲ್ಯಾಪ್‍ಟಾಪ್, ಹೆಡ್‍ಫೋನ್ಸ್, ಕ್ಯಾಮೆರಾಗಳು ಮತ್ತು ಟ್ಯಾಬ್ಲೆಟ್‍ಗಳು ಹೆಚ್ಚು ಮಾರಾಟ ಕಂಡಿವೆ.


 • ಅತಿದೊಡ್ಡ ಸೀಸನ್

  ಆನ್‌ಲೈನಿನಲ್ಲಿ ಹೆಚ್ಚು ಮಾರಾಟವಾಗುತ್ತಿರುವ ಮೊಬೈಲ್ ವಿಭಾಗದಲ್ಲಿ ಇದು ಅತಿದೊಡ್ಡ ಸೀಸನ್ ಎನಿಸಿದೆ. 2018 ರ ಬಿಗ್ ಬಿಲಿಯನ್ ಡೇಸ್‌ ಸೇಲ್‌ಗೆ ಹೋಲಿಸಿದರೆ ಈ ಬಾರಿ 2 ಪಟ್ಟು ಹೆಚ್ಚಳ ಸಾಧಿಸಲಾಗಿದೆ. ಮೊಬೈಲ್ ಎಕ್ಸ್‍ಚೇಂಜ್‍ನಲ್ಲಿ 2.5 ಪಟ್ಟು ಹೆಚ್ಚಳ ಕಂಡುಬಂದಿದ್ದು, ಈ ಬಾರಿ 20 ಕ್ಕೂ ಹೆಚ್ಚು ಮಾಡೆಲ್‍ಗಳ 100ಕೆ ಮೊಬೈಲ್‍ಗಳು ಮಾರಾಟವಾಗಿವೆ. ಇಷ್ಟೊಂದು ಪ್ರಮಾಣದಲ್ಲಿ ಮಾರಾಟ ಕಂಡಿರುವುದು ಇದೇ ಮೊದಲು ಎಂದು ತಿಳಿಸಿದೆ. ಇನ್ನು ಒಂದು ಗಂಟೆಯಲ್ಲಿ ಪ್ರತಿ ಸೆಕೆಂಡಿಗೆ 10 ಟಿವಿಗಳು ಮಾರಾಟವಾಗಿವೆ.ಪ್ರತಿ 10 ಗ್ರಾಹಕರಲ್ಲಿ 7 ಮಂದಿ ಟಿವಿಗಳನ್ನು ಪ್ರೀಪೇಯ್ಡ್ ಪಾವತಿ ಆಧಾರದಲ್ಲಿ ಖರೀದಿ ಮಾಡಿದ್ದಾರೆ ಎಂದು ಕಂಪೆನಿ ಹೇಳಿದೆ.


 • ಕಂಡರಿಯದ ರೀತಿಯಲ್ಲಿ

  ಫ್ಲಿಪ್‍ಕಾರ್ಟ್ ಗ್ರೂಪ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕಲ್ಯಾಣ್ ಕೃಷ್ಣಮೂರ್ತಿ ಅವರು ಈ ಬಿಗ್‌ಬಿಲಿಯನ್ ಡೇಸ್ ಬಗ್ಗೆ ಪ್ರತಿಕ್ರಿಯೆ ನೀಡಿ ಈ ಹಿಂದಿಗಿಂತಲೂ ಅಥವಾ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಗ್ರಾಹಕರು ಗೇಮಿಂಗ್ ಸೇರಿದಂತೆ ಅತ್ಯುತ್ತಮ ಬ್ರ್ಯಾಂಡ್‍ಗಳ ಮೇಲಿನ ಪ್ರೀತಿಯನ್ನು ಈ ಬಾರಿ ತೋರಿಸಿದ್ದಾರೆ ಎಂದು ಹೇಳಿದ್ದರೆ, ಗ್ರೇಟ್ ಇಂಡಿಯನ್ ಫೆಸ್ಟಿವಲ್ ನಂತಹ ಘಟನೆಗಳು ಮುಂದಿನ 100 ಮಿಲಿಯನ್ ಗ್ರಾಹಕರನ್ನು ಆನ್‌ಲೈನ್‌ನಲ್ಲಿ ತರಲು ಸಂಸ್ಥೆಗೆ ಸಹಾಯ ಮಾಡಿದೆ ಎಂದು ಅಮೆಜಾನ್ ಇಂಡಿಯಾದ ವರ್ಗ ನಿರ್ವಹಣೆಯ ಉಪಾಧ್ಯಕ್ಷ ಮನೀಶ್ ತಿವಾರಿ ಅವರು ಇಟಿಗೆ ನೀಡಿದ ವರದಿಯಲ್ಲಿ ತಿಳಿಸಿದ್ದಾರೆ.
ದೇಶದ ಪ್ರಮುಖ ಇ ಕಾಮರ್ಸ್ ತಾಣಗಳಾದ ಫ್ಲಿಪ್‍ಕಾರ್ಟ್ ಮತ್ತು ಅಮೆಜಾನ್ ಈ ವರ್ಷದ ಹಬ್ಬದ ಸೇಲ್‌ನಲ್ಲಿ ದಾಖಲೆ ಪ್ರಮಾಣದ ಮಾರಾಟ ನಡೆಸಿವೆ. ಇ-ಕಾಮರ್ಸ್ ವಲಯವು ಆಯೋಜಿಸಿದ್ದ ಹಬ್ಬದ ಮಾರಾಟವು ಕಳೆದ ವಾರ ಕೊನೆಗೊಂಡಂತೆ, ಭಾರತದಲ್ಲಿ ಇ-ಟೈಲರ್‌ಗಳು ಈ ಅವಧಿಯಲ್ಲಿ (ಸೆಪ್ಟೆಂಬರ್ 29-ಅಕ್ಟೋಬರ್ 4) ಒಟ್ಟು $ 3 ಬಿಲಿಯನ್ (ಸುಮಾರು 19,000 ಕೋಟಿ ರೂ.)ಗೂ ಹೆಚ್ಚು ಮೌಲ್ಯದ ವ್ಯವಹಾರ ನಡೆಸಿವೆ. ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್ ನೇತೃತ್ವದಲ್ಲಿ ನಡೆದ 6 ದಿನಗಳ ಹಬ್ಬದ ಮಾರಾಟದಲ್ಲಿ ಇ-ಟೈಲರ್‌ಗಳ ವಾರ್ಷಿಕ ಬೆಳವಣಿಗೆ 30% ಎಂದು ವರದಿಯಲ್ಲಿ ತಿಳಿಸಲಾಗಿದೆ.

ಸೆಪ್ಟೆಂಬರ್‌ 29ರಿಂದ ಅಕ್ಟೋಬರ್‌ 4ರ ಅವಧಿಯಲ್ಲಿಉಭಯ ಇ-ಕಾಮರ್ಸ್‌ ಕಂಪನಿಗಳು ಭರ್ಜರಿ ವಹಿವಾಟು ನಡೆಸಿವೆ. ವಾಲ್‌ಮಾರ್ಟ್‌ ಒಡೆತನದ ಫ್ಲಿಪ್‌ಕಾರ್ಟ್‌ ಮತ್ತು ಅಮೆಜಾನ್‌ ಈ 6 ದಿನಗಳಲ್ಲಿನಡೆದ ಒಟ್ಟು ಇ-ಕಾಮರ್ಸ್‌ ಬಿಸಿನೆಸ್‌ನ ಶೇ.90ರಷ್ಟು ಪಾಲನ್ನು ತಮ್ಮದಾಗಿಸಿವೆ ಎಂದು ಬೆಂಗಳೂರು ಮೂಲದ ರಿಸರ್ಚ್ ಸಂಸ್ಥೆ ರೆಡ್‌ಸೀರ್‌ ಕನ್ಸಲ್ಟೆನ್ಸಿ ತಿಳಿಸಿದೆ. ಹಬ್ಬಗಳ ತಿಂಗಳಾದ ಅಕ್ಟೋಬರ್‌ ಮಾಸದಲ್ಲಿ ಒಟ್ಟಾರೆ 39,000 ಕೋಟಿ ರೂ. ಮೌಲ್ಯದ ಆನ್‌ಲೈನ್‌ ಬಿಸಿನೆಸ್‌ ಆಗಬಹುದು ಎಂದು ನಿರೀಕ್ಷಿಸಲಾಗಿದೆ. ಆರ್ಥಿಕ ಮಂದಗತಿಯ ಹೊರತಾಗಿಯೂ ಆನ್‌ಲೈನ್‌ ಶಾಪಿಂಗ್‌ನಲ್ಲಿಭಾರತೀಯ ಗ್ರಾಹಕರು ಉತ್ಸಾಹದಿಂದ ಭಾಗವಹಿಸಿರುವುದನ್ನು ಇದು ಬಿಂಬಿಸಿದೆ ಎಂದು ರೆಡ್‌ಸೀರ್‌ ಕನ್ಸಲ್ಟಿಂಗ್‌ ಸಿಇಒ ಅನಿಲ್‌ ಕುಮಾರ್‌ ತಿಳಿಸಿದ್ದಾರೆ.

   
 
ಹೆಲ್ತ್