ಹೌದು, ಸ್ಯಾಮ್ಸಂಗ್, ಆಪಲ್ ಮತ್ತು ಒನ್ಪ್ಲಸ್ ಭರಾಟೆಯಲ್ಲಿ ಮುಳುಗಿರುವ ಪ್ರೀಮಿಯಂ ಮೊಬೈಲ್ ಮಾರುಕಟ್ಟೆಗೆ ಬಹುದಿನಗಳ ನಂತರ ಗೂಗಲ್ ಎಂಟ್ರಿ ನೀಡುತ್ತಿದೆ. ಈಗಾಗಲೇ ಗೂಗಲ್ ಪಿಕ್ಸೆಲ್ 4 ಬಗೆಗೆ ಅನೇಕ ಮಾಹಿತಿಗಳು ಸೋರಿಕೆಯಾಗಿದ್ದು, ಪ್ರೀಮಿಯಂ ಮಾರುಕಟ್ಟೆಯಲ್ಲಿ ಸಂಚಲನ ಮೂಡಿದೆ ಎನ್ನಬಹುದು. ಏಕೆಂದರೆ, ಗೂಗಲ್ ಈ ಬಾರಿ ಸಾಕಷ್ಟು ತಯಾರಿ ಮಾಡಿಕೊಂಡು ಮೊಬೈಲ್ ಮಾರುಕಟ್ಟೆಗೆ ಪಿಕ್ಸೆಲ್ 4 ತರುತ್ತಿದೆ ಎಂದು ಹೇಳಲಾಗಿದ್ದು, ಬಿಡುಗಡೆಗೂ ಮುನ್ನವೇ ಪಿಕ್ಸೆಲ್ 4 ಬೆಲೆ, ಫೀಚರ್ಸ್ ಮತ್ತು ಬಣ್ಣಗಳಿಂದ ಮಾರುಕಟ್ಟೆಯನ್ನು ಸೆಳೆದಿದೆ.
ಪಿಕ್ಸೆಲ್ 4 ಫೋನ್ ಹೇಗೆ ಕಾಣುತ್ತದೆ ಎಂದು ನಮಗೆ ಈಗಾಗಲೇ ತಿಳಿದಿದೆ. ಬಾಗಶಃ ಪಿಂಕ್', 'ಸ್ಕೈ ಬ್ಲೂ', 'ನಿಜವಾದ ಹಳದಿ', 'ಸ್ವಲ್ಪ ಹಸಿರು', 'ಸ್ಪಷ್ಟ ಬಿಳಿ', 'ಜಸ್ಟ್ ಬ್ಲ್ಯಾಕ್' ಮತ್ತು 'ಓ ಸೋ ಆರೆಂಜ್' ಎಂಬ ಏಳು ಬಣ್ಣಗಳಲ್ಲಿ ಸ್ಮಾರ್ಟ್ಫೋನ್ ಮಾರುಕಟ್ಟೆಗೆ ಬರುತ್ತಿದೆ ಎಂದುವರದಿಗಳು ತಿಳಿಸಿದೆ. ಈ ಮೊದಲಿನ ಪಿಕ್ಸೆಲ್ ಸರಣಿ ಫೋನ್ ಪಿಕ್ಸೆಲ್ 3 ಕೇವಲ ಮೂರು ಬಣ್ಣ ಆಯ್ಕೆಗಳಲ್ಲಿ ಮಾತ್ರ ಬಂದಿತ್ತು. ಆದರೆ, ಇದೀಗ ಗೂಗಲ್ ತನ್ನ ಪಿಕ್ಸೆಲ್ 4 ಫೋನಿನಲ್ಲಿ ಹೆಚ್ಚಿನ ಬಣ್ಣ ಆಯ್ಕೆಗಳನ್ನು ನೀಡುತ್ತಿದೆ. ಈ ಮೂಲಕ ಹೆಚ್ಚು ಗ್ರಾಹಕರನ್ನು ಸೆಳೆಯಲು ಗೂಗಲ್ ಮುಂದಾಗಿದೆ.
ಈಗಾಗಲೇ ಹಲವು ವದಂತಿಗಳು ಬಹಿರಂಗಪಡಿಸಿರುವಂತೆ, ಪಿಕ್ಸೆಲ್ 4 ಕ್ವಾಲ್ಕಾಮ್ ಸ್ನಾಪ್ಡ್ರಾಗನ್ 855 SoC ಮತ್ತು 5.7 ಇಂಚಿನ HD ಒಎಲ್ಇಡಿ ಡಿಸ್ಪ್ಲೇ 90Hz ಪ್ರದರ್ಶನವನ್ನು ಹೊಂದಿರಲಿದೆ ಎಂದು ಹೇಳಲಾಗಿದೆ. ಇನ್ನು 6ಜಿಬಿ RAM ಸಾಮರ್ಥ್ಯ ಹೊಂದಿದ್ದು, 64GB ಮತ್ತು 128GB ಸ್ಟೋರೇಜ್ ಆಯ್ಕೆಯಲ್ಲಿ ಇರಲಿದೆ. ಸ್ಮಾರ್ಟ್ಫೋನ್ ಹಿಂಭಾಗದಲ್ಲಿ 12 ಮೆಗಾಫಿಕ್ಸೆಲ್ ಸೆನ್ಸಾರ್ ಹೊಂಡಿರುವ ಡ್ಯುಯೆಲ್ ಪಿಕ್ಸೆಲ್ ಕ್ಯಾಮೆರಾವನ್ನು ಅಳವಡಿಸಲಾಗಿದೆ. ಜೊತೆಗೆ ಸೆಲ್ಫಿಗಾಗಿ 16 ಮೆಗಾಫಿಕ್ಸೆಲ್ ಟೆಲಿಫೋಟೋ ಲೆನ್ಸ್ ಕ್ಯಾಮೆರಾ ಇರಲಿದೆ ಎಂದು ಹೇಳಲಾಗಿದೆ.
ಪಿಕ್ಸೆಲ್ 4 ಸ್ಮಾರ್ಟ್ಫೋನಿನ ಬಗೆಗೆ ಸೋರಿಕೆಯಾದ ಬೆಲೆಯ ಮಾಹಿತಿ ಪ್ರಕಾರ 64GB ವೇರಿಯಂಟ್ ಬೆಲೆಯ ಫೋನಿನ ಬೆಲೆ 56,000 ರೂ.ಗಳಿಂದ ಆರಂಭವಾಗಲಿದೆ ಎನ್ನಲಾಗಿದೆ. 128GB ವೇರಿಯಂಟ್ ಸ್ಮಾಟ್ಪೋನ್ ಬೆಲೆ 64,000 ರೂ. ಇರಬಹುದು ಎಂದು ಅಂದಾಜಿಸಲಾಗಿದೆ. ಇನ್ನುಳಿದಂತೆ ಸ್ಮಾರ್ಟ್ಪೋನ್ನಲ್ಲಿ 2,800mAh ಬ್ಯಾಟರಿ ಶಕ್ತಿ , ಸ್ಟಿತಿಯೋ ಸ್ಪೀಕರ್ಸ್, ಮೋಷನ್ ಸೆನ್ಸ್, ಇತ್ತೀಚಿನ ಫೇಸ್ ಅನ್ಲಾಕ್ ಫೀಚರ್, ಡಿಸ್ಪ್ಲೇ ಫಿಂಗರ್ ಪ್ರಿಂಟ್ ಸ್ಕ್ಯಾನರ್ ಅಳವಡಿಸಲಾಗಿದೆ ಎಂಬ ವದಂತಿಗಳು ಹರಿದಾಡುತ್ತಿರುವುದನ್ನು ನಾವು ನೋಡಬಹುದು.
ಜನಪ್ರಿಯ ಟಿಪ್ಸ್ಟರ್ ಇವಾನ್ ಬ್ಲಾಸ್ ಗೂಗಲ್ ಪಿಕ್ಸೆಲ್ 4 ಎಕ್ಸ್ಎಲ್ನ ರೆಂಡರ್ಗಳನ್ನು ಸ್ಪಷ್ಟವಾಗಿ ವೈಟ್ ಮತ್ತು ಓಹ್ ಸೋ ಆರೆಂಜ್ ನಲ್ಲಿ ಸೋರಿಕೆ ಮಾಡಿದ್ದರು. ಪಿಕ್ಸೆಲ್ 2 ಮತ್ತು ಪಿಕ್ಸೆಲ್ 3 ಸಾಧನಗಳು 'ಸ್ಪಷ್ಟವಾಗಿ ಬಿಳಿ' ಮತ್ತು 'ಜಸ್ಟ್ ಬ್ಲ್ಯಾಕ್' ಬಣ್ಣ ಆವೃತ್ತಿಗಳನ್ನು ಹೊಂದಿದ್ದು, ಇವುಗಳನ್ನು ನಾವು ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್ಎಲ್ ಎರಡರಲ್ಲೂ ನಿರೀಕ್ಷಿಸಬಹುದು. ಇನ್ನುಳಿದ ಬಣ್ಣಗಳ ಸೋರಿಕೆಯು ಆಲಿಕ್ಸಾರ್ ಮೂಲಕ ಆಗಿದೆ. ಯುಕೆ ಸ್ಟೋರ್ ಮೊಬೈಲ್ ಫನ್ ಮಾಹಿತಿಯ ಆಧಾರದ ಮೇಲೆ ಏಳು ವಿಭಿನ್ನ ಬಣ್ಣ ರೂಪಾಂತರಗಳನ್ನು ವರದಿ ಮಾಡಿದೆ.
ವಿಶ್ವ ಮೊಬೈಲ್ ಮಾರುಕಟ್ಟೆ ಬಹು ನಿರೀಕ್ಷೆಯಿಂದ ಕಾಯುತ್ತಿರುವ ಗೂಗಲ್ ಪಿಕ್ಸೆಲ್ 4 ಸರಣಿಯು ಇಂದು ಮಾರುಕಟ್ಟೆಗೆ ಎಂಟ್ರಿ ನೀಡುತ್ತಿದೆ. ನ್ಯೂಯಾರ್ಕ್ನಲ್ಲಿ ಇಂದು ಸಂಜೆ 7.30 ಕ್ಕೆ ಗೂಗಲ್ ಕಂಪೆನಿಯು ಮೇಡ್ ಬೈ ಗೂಗಲ್ ಈವೆಂಟ್ ಆಯೋಜಿಸಿದ್ದು, ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್ಎಲ್ ಫೋನ್ಗಳು, ಹೋಮ್ ಮಿನಿಗೆ ನೆಸ್ಟ್ ಬ್ರಾಂಡ್ ಉತ್ತರಾಧಿಕಾರಿಯಾಗಿ ಹೊಸ ನೆಸ್ಟ್ ವೈ ಸೇರಿದಂತೆ ಹಲವಾರು ಉತ್ಪನ್ನಗಳನ್ನು ಬಿಡುಗಡೆ ಮಾಡುವ ಸಾಧ್ಯತೆಗಳಿವೆ. ಆದರೆ, ಇವುಗಳಲ್ಲಿ ಪಿಕ್ಸೆಲ್ 4 ಮತ್ತು ಪಿಕ್ಸೆಲ್ 4 ಎಕ್ಸ್ಎಲ್ ಫೋನ್ಗಳು ಹೆಚ್ಚು ಗಮನಸೆಳೆದಿವೆ.