Back
Home » ಇತ್ತೀಚಿನ
ಟಾಟಾಸ್ಕೈ ಡಿ2ಎಚ್‌ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯಲ್ಲಿ ಭರ್ಜರಿ ಇಳಿಕೆ!
Gizbot | 19th Oct, 2019 04:01 PM
 • ಟಾಟಾಸ್ಕೈ ಡಿ2ಎಚ್‌

  ಹೌದು, ಟಾಟಾಸ್ಕೈ ಡಿ2ಎಚ್‌ ಸಂಸ್ಥೆಯು ದೀಪಾವಳಿ ಹಬ್ಬಕ್ಕಾಗಿ ಗ್ರಾಹಕರಿಗೆ ಬೆಲೆ ಇಳಿಕೆಯ ಗಿಫ್ಟ್‌ ನೀಡಲು ಮುಂದಾಗಿದೆ. ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯಲ್ಲಿ 300ರೂ.ಗಳನ್ನು ಹಾಗೂ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಬೆಲೆಯಲ್ಲಿ 200ರೂ.ಗಳನ್ನು ಕಡಿತ ಮಾಡಿದೆ. ಇದರೊಂದಿಗೆ ಇತ್ತೀಚಿಗೆ ಜನಪ್ರಿಯ ಚಾನೆಲ್‌ ಪ್ಯಾಕ್‌ಗಳ ದರದಲ್ಲಿಯೂ ರಿಯಾಯಿತಿ ಮಾಡಿದೆ. ಹಾಗಾದರೇ ಟಾಟಾಸ್ಕೈ ಕೊಡುಗೆಗಳ ಬಗ್ಗೆ ಇನ್ನಷ್ಟು ಮಾಹಿತಿ ಮುಂದೆ ನೋಡೋಣ ಬನ್ನಿರಿ.


 • ಸೆಟ್‌ಟಾಪ್‌ ಬಾಕ್ಸ್ ಬೆಲೆ ಇಳಿಕೆ

  ಟಾಟಾಸ್ಕೈ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಆರಂಭಿಕ ಬೆಲೆಯು 1399ರೂ.ಗಳಾಗಿದ್ದು, ಇದೀಗ 300ರೂ.ಇಳಿಕೆ ಮಾಡಿದೆ. ಹೀಗಾಗಿ ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್‌ 1099ರೂ.ಗಳಿಗೆ ಲಭ್ಯವಾಗಲಿದೆ. ಇನ್ನು ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನ ಆರಂಭಿಕ ಬೆಲೆಯು 1,499ರೂ.ಗಳಾದ್ದು, ಸಂಸ್ಥೆಯು ಇದರಲ್ಲಿ 200ರೂ. ಇಳಿಕೆ ಮಾಡಿದೆ. ಹೀಗಾಗಿ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್ ಅನ್ನು 1,299ರೂ.ಗಳಿಗೆ ಪಡೆಯಬಹುದಾಗಿದೆ.


 • ಹೆಡ್‌ಡಿ ಸೆಟ್‌ಟಾಪ್‌ ಬಾಕ್ಸ್‌ ಉತ್ತಮ

  ಎಸ್‌ಡಿ ಸೆಟ್‌ಟಾಪ್‌ ಬಾಕ್ಸ್ ಡಿವಿಡಿ ಕ್ವಾಲಿಟಿಯ ವಿಡಿಯೊ ಗುಣಮಟ್ಟ ಪಡೆದಿರುತ್ತದೆ. ಆಡಿಯೊ ಗುಣಮಟ್ಟವು ಸಿಡಿ ಕ್ವಾಲಿಟಿಯಲ್ಲಿರುತ್ತದೆ. ಹಾಗೆಯೇ ಹೆಚ್‌ಡಿ ಸೆಟ್‌ಟಾಪ್‌ ಬಾಕ್ಸ್‌ನಲ್ಲಿ 1080i ವಿಡಿಯೊ ಕ್ವಾಲಿಟಿ ಹೊಂದಿರುವುದರೊಂದಿಗೆ, 16:9 ಅನುಪಾತ ರಚನೆ ಇರುತ್ತದೆ. ಜೊತೆಗೆ ಡಾಲ್ಬಿ ಸರೌಂಡ್‌ ಸೌಂಡ್‌ ಸೌಲಭ್ಯವನ್ನು ಹೊಂದಿರುತ್ತದೆ. ಹೊಸ ಮಾದರಿಯ ಸ್ಮಾರ್ಟ್‌ಟಿವಿ ಇದ್ದರೇ ಹೆಚ್‌ಡಿ ಸೆಟ್‌ಟಾಪ್‌ ಆಯ್ಕೆಯೇ ಉತ್ತಮ.


 • ಚಾನೆಲ್ ಬೆಲೆ ಇಳಿಕೆ

  ಟಾಟಾಸ್ಕೈ ಸಂಸ್ಥೆಯು ಇತ್ತೀಚಿಗೆ ಕೆಲವು ಜನಪ್ರಿಯ ಚಾನೆಲ್‌ಗಳ ತಿಂಗಳ ಬೆಲೆಯಲ್ಲಿ ಇಳಿಕೆ ಮಾಡಿದ್ದು, ಗ್ರಾಹಕರಿಗೆ ಹಬ್ಬದ ವೇಳೆ ಡಬಲ್ ಧಮಾಕಾ ಸಿಕ್ಕಂತಾಗಿದೆ. ಜೀ, ಸೋನಿ ಮತ್ತು ಸ್ಟಾರ್‌ ಇಂಡಿಯಾ ಬ್ರಾಡ್‌ಕಾಸ್ಟರ್‌ಗಳು ತಮ್ಮ ಕೆಲವು ಜನಪ್ರಿಯ ಚಾನೆಲ್‌ಗಳ ತಿಂಗಳ ದರದಲ್ಲಿ 7ರೂ.ಗಳ ವರೆಗೂ ಕಡಿತ ಘೋಷಿಸಿವೆ. ಜೀ ಕನ್ನಡ ಚಾನೆಲ್‌ನ ತಿಂಗಳ ದರವು 19ರೂ. ಆಗಿದ್ದು, ಇದೀಗ 12ರೂ.ಗೆ ಲಭ್ಯವಾಗಲಿದೆ. ಹಾಗೆಯೇ ಟಾಟಾಸ್ಕೈ ಇತ್ತೀಚಿಗೆ ಸ್ಮಾರ್ಟ್‌ ಪ್ಲ್ಯಾನ್‌ಗಳನ್ನು ಪರಿಚಯಿಸಿದೆ.


 • ಕನ್ನಡ ಭಾಷೆಯ ಚಾನೆಲ್ಸ್‌ಗಳು

  ಕನ್ನಡ ಭಾಷೆಯ ಚಾನೆಲ್ಸ್‌ಗಳು ಮತ್ತು FTA ಚಾನೆಲ್ಸ್‌ಗಳ ಗುಚ್ಛದ ಕನ್ನಡ ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು 249ರೂ.ಗಳಾಗಿದ್ದು, ಅದೇ ರೀತಿ ತೆಲಗು ಚಾನೆಲ್ಸ್‌ಗಳನ್ನು ಒಳಗೊಂಡಿರುವ ತೆಲಗು ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು ಸಹ 249ರೂ.ಗಳೆಂದು ನಿಗದಿ ಮಾಡಲಾಗಿದೆ. ಗುಜರಾತಿ ಸ್ಮಾರ್ಟ್‌ ಪ್ಲ್ಯಾನ್‌ ಸಹ 249ರೂ ಆಗಿದೆ. ತಮಿಳ ಸ್ಮಾರ್ಟ್‌ ಪ್ಲ್ಯಾನ್‌ ದರವು 249ರೂ. ಆಗಿದ್ದು, ಈ ಪ್ಲ್ಯಾನಿನಲ್ಲಿ ತಮಿಳ ಪ್ರಾದೇಶಿಕ ಚಾನೆಲ್‌ಗಳು ಲಭ್ಯವಾಗಲಿವೆ.


 • ಹಿಂದಿ ಸ್ಮಾರ್ಟ್ ಪ್ಲ್ಯಾನ್‌ ದರ

  ಹಿಂದಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಹಿಂದಿ ಸ್ಮಾರ್ಟ್ ಪ್ಲ್ಯಾನ್‌' 249ರೂ. ಶುಲ್ಕವನ್ನು ನಿಗದಿ ಪಡಿಸಲಾಗಿದೆ. ಹಾಗೆಯೇ ಪಂಜಾಬಿ ಪ್ರಾದೇಶಿಕ ಚಾನೆಲ್ಸ್‌ಗಳನ್ನೊಳಗೊಂಡ 'ಪಂಜಾಬಿ ಸ್ಮಾರ್ಟ್ ಪ್ಲ್ಯಾನ್‌' ಸಹ 249ರೂ. ಬೆಲೆಯನ್ನು ಹೊಂದಿದೆ. ಇನ್ನು ಬಂಗಾಳಿ ಭಾಷೆಯ ಚಾನೆಲ್ಸ್‌ಗಳನ್ನು ಹೊಂದಿರುವ ಬಂಗಾಳಿ ಸ್ಮಾರ್ಟ್‌ ಪ್ಲ್ಯಾನ್ 220ರೂ.ಗಳಾಗಿದ್ದು, ಇವುಗಳೊಂದಿಗೆ FTA ಚಾನೆಲ್ಸ್ಗಳು ಸೇರಿಸಲಿವೆ.


 • ಸ್ಮಾರ್ಟ್‌ ಪ್ಲ್ಯಾನ್

  ಇನ್ನು ಓಡಿಸಾ ಸ್ಮಾರ್ಟ್‌ ಪ್ಲ್ಯಾನ್ ಬೆಲೆಯು 211ರೂ.ಗಳಾಗಿದ್ದು, ಮರಾಠಿ ಸ್ಮಾರ್ಟ್‌ ಪ್ಲ್ಯಾನ್‌ ಶುಲ್ಕವು 206ರೂ.ಗಳಾಗಿದೆ. ಹಾಗೆಯೇ ಮಲಿಯಾಳಂ ಸ್ಮಾರ್ಟ್‌ ಪ್ಲ್ಯಾನ್‌ ಬೆಲೆಯು ಸಹ 249ರೂ.ಗಳಾಗಿದೆ. ಈ ಎಲ್ಲ ಹೊಸ ಸ್ಮಾರ್ಟ್‌ ಪ್ಲ್ಯಾನ್‌ಗಳು DRP ಮತ್ತು NCF ಶುಲ್ಕವನ್ನು ಒಳಗೊಂಡಿರುತ್ತವೆ. ಗ್ರಾಹಕರು ಈ ಪ್ಲ್ಯಾನ್‌ಗಳ ಚಂದಾದಾರಿಕೆಯನ್ನು ಪಡೆದುಕೊಳ್ಳಬಹುದಾಗಿದೆ. ಇದರೊಂದಿಗೆ ಆಡ್‌ ಆನ್ ಚಾನೆಲ್ಸ್‌ಗಳ ಆಯ್ಕೆಯು ಗ್ರಾಹಕರಿಗೆ ಲಭ್ಯ ಇರಲಿದೆ. ಹೆಚ್ಚುವರಿಯಾಗಿ ಚಾನೆಲ್ಸ್‌ಗಳಿಗೆ ಸಬ್‌ಸ್ಕ್ರೈಬ್ ಆಗಬಹುದಾಗಿದೆ.
ಭಾರತದಲ್ಲಿ 'ಡಿ2ಎಚ್‌' ಸೇವೆಯು ಈಗಾಗಲೇ ಹಲವು ಆಯಾಮಗಳಲ್ಲಿ ಬದಲಾವಣೆಯನ್ನು ಕಂಡಿದ್ದು, ಪ್ರಸ್ತುತ ಡಿ2ಎಚ್‌ ಸಂಸ್ಥೆಗಳು ವಿಡಿಯೊ ಸ್ಟ್ರಿಮಿಂಗ್ ಸೇವೆಯನ್ನು ಸಹ ಪರಿಚಯಿಸುತ್ತಿವೆ. ಸದ್ಯ ಡಿ2ಎಚ್‌ ಸಂಸ್ಥೆಗಳಲ್ಲಿಯೇ ಮುಂಚೂಣಿಯಲ್ಲಿ ಮಿಂಚುತ್ತಿರುವ 'ಟಾಟಾಸ್ಕೈ' ಸಂಸ್ಥೆಯು ವಿಭಿನ್ನ ಆಫರ್‌ಗಳಿಂದ ಗ್ರಾಹಕರನ್ನು ಸೆಳೆದಿದೆ. ಟಾಟಾಸ್ಕೈ ದೀಪಾವಳಿ ಹಬ್ಬದ ಪ್ರಯುಕ್ತ ಹೊಸ ಗ್ರಾಹಕರಿಗೆ ಭರ್ಜರಿ ಉಡುಗೊರೆ ಘೋಷಿಸಿದೆ.

 
ಹೆಲ್ತ್