Back
Home » ಆರೋಗ್ಯ
ಈ ಸೂಚನೆಗಳು ನಿಮ್ಮಲ್ಲಿ ಕಂಡು ಬಂದ್ರೆ ನಿಮ್ಮನ್ನು ನೀವು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದರ್ಥ
Boldsky | 24th Oct, 2019 11:25 AM
 • 1. ಮೆದುಳಿಗೆ ಮೋಡ ಕವಿಯುವುದು

  ಏನಪ್ಪಾ ಇದು ಮೆದುಳಿಗೆ ಮೋಡ ಕವಿಯುವುದು ಎಂದು ನೀವು ತಲೆ ಕೆರೆದುಕೊಳ್ಳಬಹುದು. ಆದರೆ ಇದು ಒಂದು ರೀತಿಯ ದೈಹಿಕ ಲಕ್ಷಣ. ನೀವು ರಾತ್ರಿ ಪೂರ್ತಿಯಾಗಿ ನಿದ್ರೆ ಮಾಡಿದ್ದರೂ ಬೆಳಗ್ಗೆ ಎದ್ದ ವೇಳೆ ಉಲ್ಲಾಸಿತರಾಗಿ ಇರದೇ ಇರುವುದು ಮತ್ತು ವ್ಯಾಲೆಟ್ ಮರೆತು ಹೋಗುವುದು. ವಯಸ್ಸಾಗುತ್ತಿರುವ ಕಾರಣದಿಂದಾಗಿ ಹೀಗೆ ಆಗುತ್ತಿದೆ ಎಂದು ಭಾವಿಸಬೇಡಿ. ಇದು ಮೆದುಳಿಗೆ ಮೋಡ ಕವಿದ ಪರಿಣಾಮವಾಗಿರಬಹುದು. ಮೆದುಳಿನ ಮೋಡ ಕವಿಯುವ ಸಮಸ್ಯೆಯು ತುಂಬಾ ಗಂಭೀರವಾಗಿರುವುದು. ಇದು ಹಾರ್ಮೋನ್ ಅಸಮತೋಲದಿಂದಾಗಿ ನರ ವ್ಯವಸ್ಥೆಗೆ ಹಾನಿ ಉಂಟು ಮಾಡಿದಷ್ಟೇ ಪರಿಣಾಮ ಬೀರುವುದು. ವಿಶೇಷವಾಗಿ ಮಹಿಳೆಯರಲ್ಲಿ ಮೆದುಳು ಸರಿಯಾಗಿ ಕೆಲಸ ಮಾಡದ ಪರಿಣಾಮವಾಗಿ ಥೈರಾಯ್ಡ್ ಕಾರ್ಯನಿರ್ವಹಿಸದೆ ಇರಬಹುದು. ರಕ್ತ ಪರೀಕ್ಷೆ ಮಾಡಿಕೊಂಡು ಎಲ್ಲಾ ರೀತಿಯ ಹಾರ್ಮೋನ್ ಮತ್ತು ಬಯೋಮಾರ್ಕರ್ ಅಳತೆ ಮಾಡಿ. ಸಂಪೂರ್ಣ ಥೈರಾಯ್ಡ್ ಪರೀಕ್ಷೆಯಿಂದ ಥೈರಾಯ್ಡ್ ಹಾರ್ಮೋನ್ ಅಳತೆ ಮಾಡುವುದು ಮಾತ್ರವಲ್ಲದೆ, ಥೈರಾಯ್ಡ್ ಪ್ರತಿಕಾಯವನ್ನು ಗುರುತಿಸಿ ಮೆದುಳಿನ ಮೋಡಕ್ಕೆ ಕಾರಣವೇನೆಂದು ಪತ್ತೆ ಮಾಡುವುದು.

  ಪುರುಷರು ಹಾಗೂ ಮಹಿಳೆಯರಲ್ಲಿ ಹೊಟ್ಟೆಯಲ್ಲಿನ ಬ್ಯಾಕ್ಟೀರಿಯ ಸಂಖ್ಯೆಯಿಂದಾಗಿ ಚದುರಿದ ಆಲೋಚನೆಗಳು ಬರುವುದು. ಯಾಕೆಂದರೆ ಕರುಳಿನ ಸೂಕ್ಷ್ಮಜೀವಿಯು ನೇರವಾಗಿ ಮೆದುಳಿಗೆ ಸಂಬಂಧ ಹೊಂದಿದೆ. ಆಹಾರ ಕ್ರಮದಲ್ಲಿ ಸುಧಾರಣೆ ಮಾಡಿದರೆ, ಆಗ ಸ್ಪಷ್ಟತೆ ಮತ್ತು ಏಕಾಗ್ರತೆ ಬರುವುದು. ಆರೋಗ್ಯಕಾರಿ ಹೊಟ್ಟೆಯಿಂದಾಗಿ ನೆನಪಿನ ಶಕ್ತಿಯು ಹೆಚ್ಚಾಗಿರುವ ಬಗ್ಗೆ ಹಲವಾರು ರೋಗಿಗಳು ಹೇಳಿರುವರು. ಇಂತಹ ರೋಗಿಗಳು ತುಂಬಾ ಸೂಕ್ಷ್ಮ, ಚತುರ ಮತ್ತು ವೇಗವಾಗಿ ಗಮನ ಹರಿಸುವುದು, ವಿಷಯಗಳನ್ನು ನೆನಪಿಸಿಕೊಳ್ಳುವುದು ಮತ್ತು ಮಾನಸಿಕ ಸವಾಲುಗಳನ್ನು ಪೂರೈಸಿರುವುದು ವರದಿಯಾಗಿದೆ. ಪ್ರೊಬಯೋಟಿಕ್ ಆಹಾರ ತಿಂದರೆ ಆಗ ಸೂಕ್ಷ್ಮಾಣು ಜೀವಿಗಳ ಸಮತೋಲನ ಕಾಪಾಡಬಹುದು.


 • 2. ಕಾಮಾಸಕ್ತಿ ಕುಂದುವುದು

  ಕೆಲವು ದಂಪತಿಗಳು ಮದುವೆಯಾಗಿ ದಶಕವಾದರೂ ಮಕ್ಕಳು ಆಗುವುದೇ ಇಲ್ಲ. ನಿಮ್ಮಲ್ಲಿ ಕಾಮಾಸಕ್ತಿಯು ಕುಂದುತ್ತಲಿದ್ದರೆ ಆಗ ನೀವು ವೈದ್ಯರನ್ನು ಭೇಟಿ ಮಾಡಿ ಸಲಹೆ ಪಡೆದುಕೊಳ್ಳಿ. ಟೆಸ್ಟೋಸ್ಟೆರಾನ್, ಎಸ್ಟ್ರಾಡಿಯೋಲ್, ಎಸ್ಟ್ರಿಯೋಲ್, ಪ್ರೊಜೆಸ್ಟರಾನ್ ಇತ್ಯಾದಿ ಹಾರ್ಮೋನ್ ಗಳ ಪರೀಕ್ಷೆ ಮಾಡಿಸಿಕೊಳ್ಳಬೇಕು. ಹಾರ್ಮೋನ್ ಅಸಮತೋಲನದಿಂದಾಗಿ ನಿಮ್ಮಲ್ಲಿ ನಿಶ್ಯಕ್ತಿ, ಖಿನ್ನತೆ, ತೂಕ ಹೆಚ್ಚಾಗುವುದು ಮತ್ತು ಹೃದಯದ ಸಮಸ್ಯೆಯು ಬರಬಹುದು. ಹಾರ್ಮೋನ್ ಪರೀಕ್ಷೆ ಮಾಡಿಸಿಕೊಂಡರೆ ಆಗ ಇದಕ್ಕೆ ಮೂಲ ಸಮಸ್ಯೆ ಯಾವುದು ಎಂದು ಸರಿಯಾಗಿ ತಿಳಿದುಬರುವುದು.


 • 3. ಅತಿಯಾಗಿ ಒತ್ತಡಕ್ಕೆ ಒಳಗಾಗುವುದು

  ಉದ್ಯೋಗ, ಕುಟುಂಬ, ಸಂಬಂಧ ಅಥವಾ ಸಾಮಾನ್ಯ ಚಿಂತೆಗಳು ನಮ್ಮನ್ನು ಇಂದು ಒತ್ತಡಕ್ಕೆ ಸಿಲುಕಿಸುವುದು. ಕಾರ್ಟಿಸಲ್ ಮಟ್ಟವು ಅಸಮತೋಲನಗೊಂಡ ವೇಳೆ ಅಥವಾ ಹೆಚ್ಚಾದಾಗ ಅದು ನಮ್ಮ ಮನಸ್ಥಿತಿ ಬದಲಾಗುವಂತೆ, ಆತಂಕ, ಖಿನ್ನತೆ ಅಥವಾ ಅರಿವಿನ ಸಮಸ್ಯೆಯಿಂದ ಬಳಲಬಹುದು. ಇದೆಲ್ಲವೂ ಕಾಮಾಸಕ್ತಿ ಕಡಿಮೆ ಮಾಡಿದಷ್ಟೇ ಸಮಾನವಾಗಿದೆ. ಕಾರ್ಟಿಸಲ್ ಮಟ್ಟವು ಅಧಿಕವಾದರೆ ಆಗ ದೇಹದಲ್ಲಿ ಕೊಬ್ಬು ಮತ್ತು ಉರಿಯೂತ ಹೆಚ್ಚಾಗಬಹುದು. ಇದರಿಂದ ಆತ್ಮವಿಶ್ವಾಸ ಕುಂದುವುದು, ಹತಾಶೆ ಮತ್ತು ಶಕ್ತಿ ಕಡಿಮೆ ಆಗುವುದು. ಆಹಾರದಲ್ಲಿ ಸಮತೋಲನ ಕಾಪಾಡಿಕೊಂಡರೆ ಆಗ ಕಾರ್ಟಿಸಲ್ ಮಟ್ಟವನ್ನು ನಿಯಂತ್ರಣದಲ್ಲಿ ಇಟ್ಟುಕೊಳ್ಳಬಹುದು. ಖಿನ್ನತೆಯನ್ನು ಸರಿಯಾದ ನೆರವಿನಿಂದ ನಿವಾರಣೆ ಮಾಡಬಹುದು ಮತ್ತು ಒತ್ತಡ ಕಡಿಮೆ ಮಾಡಿಕೊಂಡರೆ ಆಗ ಸಂಪುರ್ಣ ಆರೋಗ್ಯವು ಸುಧಾರಣೆ ಆಗುವುದು ಮತ್ತು ಜೀವನದ ಗುಣಮಟ್ಟವು ಉತ್ತಮವಾಗುವುದು.


 • 4. ಎಲ್ಲಾ ಸಮಯದಲ್ಲೂ ನಿದ್ರೆ ಬರುವುದು

  ವ್ಯಾಯಮ ನಿಯಮಿತವಾಗಿ ಮಾಡುವುದು ಮತ್ತು ಆಹಾರ ಕ್ರಮವನ್ನು ಸರಿಯಾಗಿ ಇಟ್ಟುಕೊಳ್ಳುವುದರ ಜತೆಗೆ ರಾತ್ರಿ ವೇಳೆ ಸರಿಯಾಗಿ ನಿದ್ರೆ ಮಾಡುವುದು ನಮ್ಮ ಆರೋಗ್ಯಕ್ಕೆ ಅತೀ ಅಗತ್ಯವಾಗಿದೆ. ನಿಮಗೆ ನಿದ್ರೆ ಹತ್ತದೆ ಇದ್ದರೆ ಅಥವಾ ತಡರಾತ್ರಿ ತನಕ ನಿದ್ರಿಸದೆ ಇದ್ದರೆ ಅಥವಾ ಸರಿಯಾಗಿ ನಿದ್ರೆ ಬರದೆ ಇದ್ದರೆ ನೀವು ವೈದ್ಯರನ್ನು ಆದಷ್ಟು ಬೇಗ ಸಂಪರ್ಕಿಸಬೇಕು. ನಿಮಗೆ ನಿದ್ರಾಹೀನತೆ ಸಮಸ್ಯೆಯು ಕಾಣಿಸಿಕೊಳ್ಳಬಹುದು, ಉಸಿರಾಟದ ಕುಸಿತದಿಂದಾಗಿ ನಿದ್ರಾಭಂಗವಾಗಬಹುದು. ಇದಕ್ಕೆ ಅಧಿಕ ರಕ್ತದೊತ್ತಡ, ತೂಕ ಹೆಚ್ಚಳ ಮತ್ತು ಹೃದಯದ ಸಮಸ್ಯೆಯು ಕಾರಣವಾಗಿರಬಹುದು. ನಮ್ಮ ಆಂತರಿಕ ಗಡಿಯಾರವನ್ನು ಮರುಸ್ಥಾಪಿಸಲು ನಿದ್ರೆಯು ಅತೀ ಅಗತ್ಯವಾಗಿದೆ. ಪರಿಪೂರ್ಣ ಸನ್ನಿವೇಶದಲ್ಲಿ, ನಮ್ಮ ದೇಹವು ಅದ್ಭುತ ಪುನರುತ್ಪಾದಕ ಮಲಗುವ ಮಾದರಿ ಹೊಂದಿರುತ್ತದೆ. ನಮಗೆ ವಯಸ್ಸಾಗುತ್ತಿದ್ದಂತೆ ಮತ್ತು ಹಾರ್ಮೋನ್ ಅಸಮತೋಲನ ಉಂಟಾದರೆ ಆಗ ಕೆಲವೊಂದು ಕೊರತೆ ಮತ್ತು ಅಸಮತೋಲನ ಕಂಡುಬಂದು ನಿದ್ರಾ ಹೀನತೆ ಬರಬಹುದು. ವೈದ್ಯರಿಗೆ ನೀವು ಇದರ ಬಗ್ಗೆ ತಿಳಿಸಿದರೆ ಅವರು ಸರಿಯಾದ ಪರೀಕ್ಷೆ ಮಾಡಿಕೊಂಡು ನಿಮಗೆ ನಿದ್ರೆಗೆ ನೆರವಾಗಲಿದೆ.


 • 5. ಕಾಲುಗಳಲ್ಲಿ ಪದೇ ಪದೇ ಸೆಳೆತ ಕಾಣಿಸುವುದು

  ಇಂದಿನ ದಿನಗಳಲ್ಲಿ ಹೆಚ್ಚಾಗಿ ಕಂಪ್ಯೂಟರ್ ಅಥವಾ ಟಿವಿ ಮುಂದೆ ಕುಳಿತು ಸಮಯ ಕಳೆಯುತ್ತೇವೆ. ಕಾಲಿನಲ್ಲಿ ಯಾವಾಗಲೊಮ್ಮೆ ಬರುವಂತಹ ಸೆಳೆತದ ಬಗ್ಗೆ ಚಿಂತಿಸುವುದಿಲ್ಲ. ಆದರೆ ನಿಮ್ಮ ಕಾಲಿನಲ್ಲಿ ಪದೇ ಪದೇ ಸೆಳೆತ ಕಂಡುಬಂದರೆ ಆಗ ದೇಹದಲ್ಲಿ ಮೆಗ್ನಿಶಿಯಂ ಕೊರತೆ ಇದೆ ಎಂದು ಹೇಳಬಹುದು. ಇದು ತುಂಬಾ ಗಂಭೀರ ಆರೋಗ್ಯ ಸಮಸ್ಯೆಯ ಕಾರಣದಿಂದಲೂ ಬರಬಹುದು. ಅಸಾಮಾನ್ಯ ಎದೆಬಡಿತದಿಂದ ಹೀಗೆ ಆಗಬಹುದು. ಇದರಿಂದಾಗಿ ಹೃದಯಾಘಾತ ಅಥವಾ ಹಠಾತ್ ಸಾವು ಸಂಭವಿಸಬಹುದು. ನಿಮಗೆ ಹೀಗೆ ಆದರೆ ಬಾದಾಮಿ, ಕುಂಬಳಕಾಯಿ ಬೀಜಗಳು ಮತ್ತು ಬಾಳೆಹಣ್ಣು ತಿನ್ನಿ. ಅಧಿಕ ಮಟ್ಟದಲ್ಲಿ ವಿಟಮಿನ್ ಬೇಕೆಂದು ವೈದ್ಯರು ಹೇಳಿದ್ದರೆ ಆಗ ನೀವು ಸಪ್ಲಿಮೆಂಟ್ ಸೇವಿಸಬಹುದು.


 • 6. ಕೈಗಳು ಮತ್ತು ಕಾಲುಗಳು ಜುಮ್ಮೆನ್ನಿಸುವುದು

  ಯಾವಾಗಲೊಮ್ಮೆ ಕೈಗಳು ಅಥವಾ ಕಾಲು ಜಮ್ಮೆನಿಸುವುದು ಸಾಮಾನ್ಯ. ಆದರೆ ನಿಮ್ಮ ಕೈಗಳು ಹಾಗೂ ಕಾಲುಗಳು ಯಾವಾಗಲೂ ಜುಮ್ಮೆನ್ನಿಸುತ್ತಿದ್ದರೆ ಆಗ ನಿಮ್ಮಲ್ಲಿ ವಿಟಮಿನ್ ಬಿ12 ಕೊರತೆ ಇದೆ ಹೇಳಬಹುದು. ಈ ವಿಟಮಿನ್ ಕೊರತೆಯಿಂದಾಗಿ ರಕ್ತ ಹೀನತೆ ಕಾಡಬಹುದು ಮತ್ತು ಕೆಲವೊಂದು ಸಂದರ್ಭದಲ್ಲಿ ನರದ ಸಮಸ್ಯೆಗಳು ಬರಬಹುದು. ನೀವು ನೀಲಿ ಹಾಗೂ ಹಸಿ ಇರುವಂತಹ ಆಹಾರಗಳು, ಮೊಟ್ಟೆ ಮತ್ತು ಹಾಲಿನ ಉತ್ಪನ್ನಗಳನ್ನು ಸೇವಿಸಿ. ಸಸ್ಯಾಹಾರಿಗಳು ಬಿ12 ಸಪ್ಲಿಮೆಂಟ್ ತೆಗೆದುಕೊಂಡರೆ ಆಗ ಒಳ್ಳೆಯ ಜೀವನ ನಡೆಸಬಹುದು.


 • 7. ಚರ್ಮವು ಅತಿಯಾಗಿ ಒಣಗಿರುವುದು

  ಚಳಿಗಾಲವು ಬರುತ್ತಿರುವ ವೇಳೆ ಚರ್ಮವು ಒಣಗುವುದು ಸಾಮಾನ್ಯ ಸಂಗತಿ. ಆದರೆ ಕೆಲವೊಂದು ಬಿಸಿ ದದ್ದುಗಳು, ಕೆರೆತ ಉಂಟಾಗುವಂತಹ ಸ್ಥಳಗಳು ನಿಮ್ಮಲ್ಲಿ ಕೊಬ್ಬಿನ ಕೊರತೆ ಇದೆ ಎಂದು ಹೇಳುತ್ತದೆ. ದಿನನಿತ್ಯವು ಮೊಶ್ಚಿರೈಸರ್ ಹಚ್ಚಿಕೊಳ್ಳಬೇಕು ಮತ್ತು ಆಹಾರ ಕ್ರಮದಲ್ಲಿ ಕೊಬ್ಬಿನಾಂಶ ಹೆಚ್ಚಿರುವ ಆಹಾರ ಸೇವನೆ ಮಾಡಬೇಕು. ಅವಕಾಡೊ, ಅಕ್ರೋಟ, ಆಲೀವ್ ಇತ್ಯಾದಿಗಳನ್ನು ಸೇವಿಸಿ.


 • 8. ಮೊಡವೆಗಳು ಮೂಡುವುದು

  ಮೊಡವೆಗಳು ಅತಿಯಾಗಿ ಮೂಡುವುದು ಹಾರ್ಮೋನ್ ಅಸಮತೋಲನ ಮತ್ತು ಅನುವಂಶೀಯತೆ ಕಾರಣವಾಗಿರಬಹುದು. ಈ ಕಾರಣಗಳಿಂದಾಗಿ ಮೊಡವೆಗಳು ಮುಖ ಅಥವಾ ದೇಹದ ಕೆಲವೊಂದು ಭಾಗದಲ್ಲಿ ಅತಿಯಾಗಿ ಮೂಡಬಹುದು. ಒತ್ತಡವು ಇದನ್ನು ಮತ್ತಷ್ಟು ಹೆಚ್ಚಿಸಬಹುದು. ಉದ್ಯೋಗ ಅಥವಾ ಶಾಲೆಯಲ್ಲಿನ ಒತ್ತಡವು ಮೊಡವೆಯನ್ನು ಹೆಚ್ಚು ಮಾಡುವುದು. ನಿದ್ರಿಸುವ ವೇಳೆ ಕಾರ್ಟಿಸಲ್ ಮಟ್ಟವು ನೈಸರ್ಗಿಕವಾಗಿ ತಗ್ಗುವುದು. ಅತಿಯಾಗಿ ಸಕ್ಕರೆ ಮತ್ತು ಪಿಷ್ಠವಿರುವಂತಹ ಆಹಾರ ಸೇವನೆ ಮಾಡಿದರೆ ಅದರಿಂದ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಿ, ಉರಿಯೂತಕ್ಕೆ ಕಾರಣವಾಗುವುದು. ಹಸುವಿನ ಹಾಲು ಕೂಡ ಕೆಲವೊಂದು ಸಲ ಮೊಡವೆ ಮೂಡಲು ಕಾರಣವಾಗುವುದು ಎಂದು ಹೇಳಲಾಗುತ್ತದೆ.


 • 9. ಮಧ್ಯಾಹ್ನ ವೇಳೆ ಯಾವಾಗಲೂ ಬಳಲಿರುತ್ತೀರಿ

  ಬೆಳಗ್ಗೆ ಕೆಲವೊಂದು ಮೀಟಿಂಗ್ ನಲ್ಲಿ ಭಾಗಿಯಾದ ಬಳಿಕ ನೀವು ತುಂಬಾ ಆಯಾಸಕ್ಕೆ ಒಳಗಾಗಬಹುದು. ಮುಂದಿನ ಮೀಟಿಂಗ್ ನಲ್ಲಿ ಭಾಗಿಯಾಗಲು ನಿಮಗೆ ಆಗದೆ ಇರಬಹುದು. ನೀವು ತಿಂಡಿ ಅಥವಾ ಕಾಫಿ ಯಾವಾಗ ಬರುತ್ತದೆ ಹಾಗೂ ಆರಾಮ ಯಾವಾಗ ಸಿಗುವುದು ಎಂದು ಕಾಯುತ್ತಿರಬಹುದು. ಆದರೆ ಮಧ್ಯಾಹ್ನ ವೇಳೆ ನೀವು ಸರಿಯಾದ ಆಹಾರ ಸೇವನೆ ಮಾಡದೆ ಇದ್ದರೆ ಆಗ ನೀವು ಮನೆಗೆ ಹೋಗುವ ಮೊದಲು ಸಂಪೂರ್ಣವಾಗಿ ದೇಹದ ಶಕ್ತಿ ಕಳೆದುಕೊಳ್ಳಲಿದ್ದೀರಿ. ಕಾರ್ಬೋಹೈಡ್ರೇಟ್ಸ್ ಅಧಿಕವಾಗಿರುವ, ಫಿಜ್ಜಾ, ಸ್ಯಾಂಡ್ ವಿಚ್ ಅಥವಾ ಬ್ರೆಡ್ ಇರುವಂತಹ ಆಹಾರ ಸೇವನೆ ಮಾಡಿದರೆ ಆಗ ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚುವುದು ಮತ್ತು ಕೆಲವು ಗಂಟೆಗಳ ಬಳಿಕ ಅಪ್ಪಳಿಸಬಹುದು. ರಕ್ತದಲ್ಲಿ ಸಕ್ಕರೆ ಮಟ್ಟವು ಕಡಿಮೆ ಆದರೆ ಆಗ ಇದನ್ನು ಹೈಪೊಗ್ಲಿಸಿಮಿಯಾ ಎಂದು ಕರೆಯಲಾಗುತ್ತದೆ. ಇದರಿಂದಾಗಿ ನಿದ್ರಾಹೀನತೆ ಮತ್ತು ನಿಶ್ಯಕ್ತಿಯು ಬರುವುದು. ಹೀಗಾಗಿ ಹೆಚ್ಚಿನವರಲ್ಲಿ ಮಧ್ಯಾನ ವೇಳೆ ಹೀಗೆ ಆಗುವುದು. ಸಿಹಿ ಹಾಗೂ ಕೆಫಿನ್ ಸೇವನೆ ಮಾಡುವ ಬದಲು ನೀವು ಮಧ್ಯಾಹ್ನ ವೇಳೆ ಪ್ರೋಟೀನ್, ಕೊಬ್ಬು ಮತ್ತು ನಾರಿನಾಂಶ ಅಧಿಕವಾಗಿರುವ ಆಹಾರಗಳನ್ನು ಸೇವಿಸಿದರೆ ರಕ್ತದಲ್ಲಿನ ಸಕ್ಕರೆ ಮಟ್ಟ ಕಾಪಾಡಬಹುದು.
ಪ್ರತಿಯೊಬ್ಬರು ಇಂದು ಕೈತುಂಬಾ ಸಂಪಾದನೆ ಮಾಡುವ ವೇಳೆ ತಮ್ಮ ಆರೋಗ್ಯ ಹಾಗೂ ದೇಹದ ಬಗ್ಗೆ ಕಾಳಜಿ ವಹಿಸಲು ಮರೆಯುವರು. ಹೀಗಾಗಿ ಹಲವಾರು ಆರೋಗ್ಯ ಸಮಸ್ಯೆಗಳು ಬಂದು ದುಡಿದ ಅರ್ಧದಷ್ಟು ಹಣವು ಔಷಧಿಗೆ ಖರ್ಚಾಗುವುದು. ಕೇವಲ ದುಡಿಮೆಯ ಬದಲು ಆರೋಗ್ಯದ ಕಡೆಗೂ ಗಮನಹರಿಸಿದ್ದರೆ ಆಗ ಖಂಡಿತವಾಗಿಯೂ ಇಂತಹ ಸಮಸ್ಯೆಯು ಬಂದಿರಲಿಕ್ಕಿಲ್ಲ. ನಮ್ಮ ದೇಹದ ಬಗ್ಗೆ ಸರಿಯಾಗಿ ಕಾಳಜಿ ವಹಿಸುತ್ತಿಲ್ಲ ಎನ್ನುವ ಕೆಲವೊಂದು ಸೂಚನೆಗಳು ನಮ್ಮ ದೇಹದಿಂದಲೇ ಸಿಗುವುದು. ಇದರಲ್ಲಿ ಒಂಭತ್ತು ಪ್ರಮುಖ ಲಕ್ಷಣಗಳನ್ನು ನಾವು ನಿಮಗೆ ಈ ಲೇಖನದಲ್ಲಿ ತಿಳಿಸಿಕೊಡಲಿದ್ದೇವೆ. ಇದನ್ನು ನೀವು ಓದಿಕೊಂಡು ಮುಂದೆ ದೇಹ ಹಾಗೂ ಆರೋಗ್ಯದ ಬಗ್ಗೆ ಕಾಳಜಿ ವಹಿಸಿ.

 
ಹೆಲ್ತ್