Back
Home » ಸಮ್ಮಿಲನ
ನವೆಂಬರ್‌ನಲ್ಲಿ ರಾಶಿಗೆ ಅನುಗುಣವಾಗಿ ನಿಮ್ಮ ಪ್ರೇಮ ಬದುಕು ಹೇಗಿರುತ್ತೆ?
Boldsky | 3rd Nov, 2019 11:05 AM
 • ಮೇಷ

  ಕೆಲವರು ಹದಿಹರೆಯದಲ್ಲೇ ಪ್ರಣಯದಲ್ಲಿ ಬಿದ್ದು, ಪ್ರೀತಿಸಿದ ವ್ಯಕ್ತಿಯನ್ನು ಯೌವನ ಪ್ರಾಯದಲ್ಲಿ ತಮ್ಮ ಸಂಗಾತಿಯ್ನಾಗಿಸಿಕೊಳ್ಳುತ್ತಾರೆ. ಆದರೆ ಮೇಷ ರಾಶಿಯವರೇ ನೀವು ಆ ವರ್ಗದವರಲ್ಲ. ಈ ರಾಶಿಯವರುಭಗ್ನ ಪ್ರೇಮದ ನೋವನ್ನು ಅನುಭವಿಸಿ, ಪ್ರೀತಿಸಿದ ವ್ಯಕ್ತಿ ಸಿಗದೆ ತುಂಬಾ ನೋವನ್ನು ಅನುಭವಿಸಿದರೆ ಅವುಗಳನ್ನೆಲ್ಲಾ ಮರೆತು ಬಿಡಿ. ಏಕೆಂದರೆ ಈ ನವೆಂಬರ್‌ನಲ್ಲಿ ನಿಮ್ಮ ಬದುಕಿನಲ್ಲಿ ವ್ಯಕ್ತಿಯೊಬ್ಬರ ಆಗಮನವಾಗಲಿದೆ. ಇದರಿಂದ ಮುಂಬರುವ ದಿನಗಳಲ್ಲಿ ಒಳಿತಾಗುವುದು.


 • ವೃಷಭ

  ಎಲ್ಲಿ ಪ್ರೀತಿಯಿರುತ್ತದೋ ಅಲ್ಲಿ ಜಗಳವಿರುತ್ತದೆ ಎಂಬ ಮಾತು ಈ ತಿಂಗಳು ವೃಷ್ಭ ರಾಶಿಯವರಿಗೆ ಅನ್ವಯಿಸುತ್ತದೆ. ನಿಮ್ಮ ಪ್ರೇಮದಲ್ಲಿ Ego ಸಮಸ್ಯೆ ಕಾಣಿಸಬಹುದು. ಆದರೆ ಈಗೋ ಬಿಟ್ಟರೆ ನಿಮ್ಮ ಪ್ರಣಯ ಮಧುರವಾಗಿಯೆ ಸಾಗುವುದು, ಆದರೆ ಅದಕ್ಕಾಗಿ ನೀವು ಪ್ರಯತ್ನಿಸಬೇಕಷ್ಟೇ. ಇನ್ನು ನಿಮಗೆ ಕೋಪ ತರಿಸುವಂಥ ಘಟನೆಗಳು ನಡೆಯಬಹುದು, ಬೇರೆಯವರು ನಿಮ್ಮ ಮನಸ್ಸಿಗೆ ನೋವುಂಟು ಮಾಡಬಹುದು, ಪ್ರೇಮ ಭಗ್ನವಾಗುವ ಪರಿಸ್ಥಿತಿಯೂ ಉಂಟಾಗಬಹುದು. ನಿಮಗೆ ಮನಸ್ಸಿಗೆ ಸರಿ ಅನಿಸದ್ದನ್ನು ಮಾಡಿ. ಕೆಡಕನ್ನು ನೆನೆಸಿ ಮನಸ್ಸು ಹಾಳು ಮಾಡಿಕೊಳ್ಳಬೇಡಿ, ಮುಂದೆ ಖಂಡಿತ ಒಳಿತಾಗುವುದು.


 • ಮಿಥುನ

  ನಿಮ್ಮ ಹಳೆಯ ಕಹಿ ನೆನಪಗಳನ್ನು ಮರೆತು ಹೊಸದೊಂದು ಜೀವನ ಪ್ರಾರಂಭಿಸಲು ಈ ತಿಂಗಳು ಸಾಧ್ಯವಾಗದೇ ಇರಬಹುದು. ನಿಮ್ಮ ಆಪ್ತರು ನಿಮಗೆ 'ನಡೆದಿರುವುದನ್ನೆಲ್ಲಾ ಮರೆತು ಬಿಡು' ಎಂದು ನಿಮ್ಮ ಒಳ್ಳೆಯದಕ್ಕೆ ಹೇಳಿದರೂ ನಿಮಗೆ ಅಷ್ಟು ಸುಲಭವಾಗಿ ಮರೆಯಲು ಸಾಧ್ಯವಿಲ್ಲ. ಕೆಲವೊಮ್ಮೆ ಕೆಲವೊಂದು ವಿಷಯಗಳು ನಮ್ಮ ಅರಿವು ಇಲ್ಲದಂತೆಯೇ ನಡೆಯುತ್ತದೆ, ಮತ್ತೆ ಕೆಲವೊಂದು ನಾವು ಪ್ರಯತ್ನಿಸಿದಾಗ ನಡೆಯುತ್ತದೆ. ಹಳೆ ನೆನಪುಗಳನ್ನು ಮರೆಯಲು ನೀವು ಪ್ರಯತ್ನಸಿದರೆ ನೋವಿನಿಂದ ಹೊರಬರಲು ಈ ತಿಂಗಳ 30 ದಿನಗಳು ಸಾಕಾಗುವುದು. ನಿಮ್ಮ ಒಳಿತಿಗಾಗಿ ನೀವು ಪ್ರಯತ್ನಿಸಬೇಕು. ನಿಮಗೆ ಸಿಕ್ಕಿರುವ ಜೀವನ ಹಾಗೂ ಅವಕಾಶಗಳಿಗೆ ಕೃತಜ್ಞರಿರಿ.


 • ಕರ್ಕ

  ಮಿಥುನ ರಾಶಿಯವರಂತೆಯೇ ನಿಮಗು ಕೂಡ ಭಗ್ನ ಪ್ರೇಮದ ನೋವು, ಹತಾಶೆಯಿಂದ ಹೊರಬರು ಕಷ್ಟವಾಗಬಹುದು, ಅದರೆ ಅದಕ್ಕಾಗಿ ನೀವು ಪ್ರಯತ್ನಿಸಲೇಬೇಕು. ನಿಮ್ಮಲ್ಲಾ ನೋವು ಮರೆಯಲು ಯತ್ನಿಸಿ. ಕಂಬಳಿ ಹುಳವಾದ ಬಳಿಕವಷ್ಟೇ ತಾನೆ ಸುಂದರ ಚಿಟ್ಟೆಯಾಗಲು ಸಾಧ್ಯ? ಹಾಗೆಯೇ ನಿಮ್ಮ ಜೀವನ ಕೂಡ. ಮುಂದೆ ಸುಂದರವಾದ, ಸಂತೋಷಕರವಾದ ಜೀವನ ನಿಮ್ಮದಾಗುವುದು. ಮುಂದೆ ಒಳಿತಾಗುವುದು ಎಂಬ ನಂಬಿಕೆಯಿಡಿ. ಎಲ್ಲವೂ ಒಳ್ಳೆಯದೇ ಆಗುವುದು.


 • ಸಿಂಹ

  ಈ ತಿಂಗಳು ನಿಮಗೆ ಹಲವಾರು ಅಚ್ಚರಿಗಳು ಕಾದಿವೆ. ನೀವು ನಿರೀಕ್ಷಿಸದಿರುವುದು ನಿಮ್ಮ ಬದುಕಿನಲ್ಲಿ ನಡೆಯಲಿದೆ. ನಿಮ್ಮ ಪ್ರೇಮ ಮತ್ತಷ್ಟು ಗಟ್ಟಿಯಾಗಲಿದೆ. ನಿಮ್ಮ ಪ್ರೇಮ ಮದುವೆಯ ಬಂಧದವರೆಗೂ ಮುಂದುವರೆಯುವ ಸಾಧ್ಯತೆ ಇದೆ. ನೀವು ಒಬ್ಬರನ್ನೊಬ್ಬರು ಮತ್ತಷ್ಟು ಚೆನ್ನಾಗಿ ಅರಿತುಕೊಳ್ಳುವಿರಿ, ನಿಮ್ಮ ಪ್ರೀತಿ ಗಾಢವಾಗುವುದು.


 • ಕನ್ಯಾ

  ನಿಮ್ಮ ಪ್ರಣಯ ಬದುಕಿನಲ್ಲಿ ಈ ವರ್ಷ ಕೆಲವೊಂದು ಏಳು-ಬೀಳುಗಳನ್ನು ಕಂಡಿರುತ್ತೀರಿ. ಆದರೂ ನಿಮ್ಮ ಪ್ರೇಮವನ್ನು ಮುರಿಯಲು ನೀವು ಸಿದ್ಧವಿರುವುದಿಲ್ಲ, ನಿಮ್ಮ ಬದುಕಿನಲ್ಲಿ ಬರುವ ಬದಲಾವಣೆಗಳನ್ನು ಸ್ವೀಕರಿಸಿ, ಆದರೆ ನಿಮ್ಮ ಬದುಕು ಯಾವಾಗಲೂ ಒಂದೇ ಇರಲು ಸಾಧ್ಯವಿಲ್ಲ ಎಂಬುವುದನ್ನು ನಂಬಿ. ನಿಮ್ಮಿಂದ ದೂರವಾದ ಪ್ರೇಮಿ ಮತ್ತೆ ನಿಮ್ಮ ಬದುಕಿನಲ್ಲಿ ಪ್ರೇಮದ ತಂಗಾಳಿ ಬೀಸಬಹುದು, ನಿಮ್ಮ ಪ್ರೇಮ ಎತ್ತ ಸಾಗುತ್ತಿದೆ ಎಂದು ನಿಮಗೇ ಹೇಳಲು ಸಾಧ್ಯವಾಗುವುದಿಲ್ಲ, ಏನೇ ಆಗಲಿ ವಾಸ್ತವದಲ್ಲಿರಿ. ಎಲ್ಲವೂ ದೈವೇಚ್ಛೆ ಎನ್ನುವಂತೆ ಇರಿ.


 • ತುಲಾ

  ಈ ತಿಂಗಳು ನೀವೊಂದು ರೀತಿಯ ದ್ವಂದ್ವದಲ್ಲಿರುತ್ತೀರಿ. ಪ್ರೀತಿ, ನಿರ್ಲಕ್ಷ್ಯ, ಖುಷಿ ಎಲ್ಲವೂ ಒಂದೊಂದಾಗಿ ಬರುವುದು, ನಿಮ್ಮ ಕನಸನ್ನು ಸಾಕಾರಗೊಳಿಸಲು ಪ್ರಮುಖ ನಿರ್ಧಾರವನ್ನು ನೀವು ತೆಗೆದುಕೊಳ್ಳುವಿರಿ ಎಂಬುವುದು ನೆನಪಿರಲಿ. ನಿಮ್ಮ ನಿರ್ಧಾರವು ಪರೀಕ್ಷೆಗೆ ಒಳಪಡುವುದು, ಪ್ರೀತಿ ವಿಷಯಕ್ಕೆ ಬಂದಾಗ ತುಂಬಾ ಗೊಂದಲಕ್ಕೆ ಬೀಳಬೀಡಿ, ಪ್ರೀತಿಯೇ ಗೆಲ್ಲುವಂತೆ ನೋಡಿಕೊಳ್ಳಿ, ಒಳ್ಳೆಯದೇ ಅಗುತ್ತದೆ.


 • ವೃಶ್ಚಿಕ

  ನಿಮ್ಮ ಪ್ರಣಯಕ್ಕೆ ನೀವೇ ಅಡ್ಡಿಯಾದರೆ ಹೇಗೆ? ನಿಮ್ಮಲ್ಲಿರುವ ಭಯವನ್ನು ಬಿಡಿ, ಹಳೆಯ ಕಹಿ ನೆನಪುಗಳನ್ನು ಮರೆತು ಬಿಡಿ, ಆಗ ಸರಿಯಾದ ನಿರ್ಧಾರ ತೆಗೆದುಕೊಳ್ಳಲು ಸಾಧ್ಯವಾಗುತ್ತದೆ. ನೀವು ನಿಮ್ಮ ಮನಸ್ಸಿನ ಮಾತು ಕೇಳಿ, ಹಳೆಯ ಕಹಿ ಮರುಕಳಿಸುವುದಿಲ್ಲ. ನಿಮ್ಮಲ್ಲಿ ಕೆಲವರು ಭಗ್ನ ಪ್ರೇಮದಿಂದ ಹೊರಬರುವಿರಿ, ಹೊಸದೊಂದು ಪ್ರೇಮರಾಗ ಹಾಡುವಿರಿ. ನಿಮ್ಮಲ್ಲಿ ನಿಮ್ಮ ಬಗೆಯೇ ಇರುವ ಸಂಶಯವನ್ನು ಮೊದಲು ಹೊರದೂಡಿ, ಎಲ್ಲವೂ ಸರಿಯಾಗುತ್ತದೆ.


 • ಧನು

  ಒಳ್ಳೆಯದಾಗಲು ಸ್ವಲ್ಪ ಸಮಯ ತೆಗೆದುಕೊಳ್ಳುತ್ತದೆ' ಎಂಬ ನಾಣ್ಣುಡಿ ನಿಮಗೆ ಸರಿಯಾಗಿ ಒಪ್ಪುತ್ತದೆ. ನೀವು ಇಷ್ಟಪಡುತ್ತಿರುವ ವ್ಯಕ್ತಿ ಅವರ ನಿರ್ಧಾರ ಹೇಳಲು ಸ್ವಲ್ಪ ಸಮಯ ತೆಗೆದುಕೊಳ್ಳಬಹುದು. ಆದರೆ ಇದರಿಂದ ಯಾವುದೇ ಗೊಂದಲಕ್ಕೊಳಗಾಗಬೇಡಿ. ಅವರು ನಿಮಗೆ ಸಿಗುತ್ತಾರೆ ಎಂಬ ನಂಬಿಕೆ ಇಡಿ, ಮುಂದೆ ಪ್ರೀತಿ, ಸಂತೋಷ ನಿಮ್ಮದಾಗುವುದು. ನೀವಿಬ್ಬರು ಒಟ್ಟಿಗೆ ಬಾಳುವಿರಿ, ನಿಮ್ಮ ಪ್ರೀತಿ ಗಾಢವಾಗುವುದು.


 • ಮಕರ

  ನೀವು ಹಾಗೂ ನಿಮ್ಮ ಪ್ರೇಮಿಯ ನಡುವೆ ಮನಸ್ತಾಪವಾದಾಗ ಕಟುಮಾತುಗಳನ್ನಾಡಬೇಡಿ, ಅವರ ಮನೆಯವರ ಬಗ್ಗೆ ಏನೂ ಹೇಳಬೇಡಿ, ನಿಮ್ಮ ಜಗಳಕ್ಕೆ ಮನೆಯವರನ್ನು ಎಳೆದು ತರಬೇಡಿ. ನೀವು ಮಾಡಿದ್ದೇ ಸರಿ ಎಂಬಂತೆ ವರ್ತಿಸಬೇಡಿ. ಏನೋ ಚಿಕ್ಕ ಕಾರಣಕ್ಕೆ ನಿಮ್ಮ ಪ್ರೀತಿ ಬಲವಾಗಿದ್ದಲ್ಲ ಎಂದು ಭಾವಿಸಬೇಡಿ. ಸಮಸ್ಯೆಗಳನ್ನು ಬಗೆಹರಿಸಲು ಪ್ರಯತ್ನಿಸಿ. ಪ್ರೀತಿ ಹಾಗೂ ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವುದರಿಂದ ಎಂಥ ಸಮಸ್ಯೆಯಾದರೂ ಬಗೆಹರಿಸಬಹುದು ನೋಡಿ.


 • ಕುಂಭ

  ಪ್ರೀತಿಯೆಂದರೆ ಯಾವಾಗಲೂ ಮಧುರವಾಗಿರಬೇಕೆಂದು ಬಯಸಲು ಸಾಧ್ಯವೇ? ಪ್ರೀತಿಯೆಂದರೆ ಬರೀ ಹೂವಿನ ತೋಟವಲ್ಲ, ಆ ತೋಟದಲ್ಲಿ ಮುಳ್ಳುಗಲೂ ಇರುತ್ತದೆ. ಏಕೆ ಈ ಮಾತು ಹೇಳುತ್ತಿದ್ದೇವೆ ಎಂದರೆ ಪ್ರೀತಿಸುವ ವ್ಯಕ್ತಿಯನ್ನು ತುಂಬಾ ನಿರೀಕ್ಷೆ ಮಾಡಬೇಡಿ. ಏಕೆಂದರೆ ಅವರು ತಮ್ಮ ವೃತ್ತಿ ಬದುಕಿನ ಒತ್ತಡದಲ್ಲಿ ಇರುವಾಗ ನಿಮ್ಮ ನಿರೀಕ್ಷೆ ಕಡೆ ಗಮನ ಕೊಡಲು ಸಾಧ್ಯವಾಗದೆ ಹೋಗಬಹುದು, ಹಾಗಂತ ನಿಮ್ಮ ಮೇಲೆ ಅವರಿಟ್ಟ ಪ್ರೀತಿ ಕಡಿಮೆಯಾಗಿರುವುದಿಲ್ಲ, ಆದ್ದರಿಂದ ತುಂಬಾ ನಿರೀಕ್ಷೆ ಮಾಡದೆ ಇದ್ದರೆ ನಿಮ್ಮ ಪ್ರೀತಿಯಲ್ಲಿ ಖುಷಿಯನ್ನು ಕಾಣಬಹುದು.


 • ಮೀನ

  ಒಂಟಿಯಾಗುತ್ತಿದ್ದೇನೆ ಎಂಬ ಭಯ ಕಾಡುತ್ತಿದೆಯೇ? ಹಾಗಾದರೆ ನಿಮ್ಮ ಹೃದಯ ಏನು ಹೇಳುತ್ತಿದೆ ಅದನ್ನು ಕೇಳಿ. ನಿಮ್ಮಷ್ಟೇ ನಿಷ್ಠೆ ಅವರಲ್ಲಿದ್ದರೆ ಅವರು ನಿಮ್ಮನ್ನು ಉಳಿಸಿಕೊಳ್ಳಲು ಖಂಡಿತ ಪ್ರಯತ್ನ ಮಾಡುತ್ತಾರೆ. ಈ ರಾಶಿಯವರು ತಮ್ಮ ಒಂಟಿತನವನ್ನು ಹೊರದೂಡಲು ಸಂಬಂಧವನ್ನು ಬಯಸುತ್ತಾರೆ. ಪ್ರೀತಿಸುವುದರಿಂದ ಒಂಟಿತನ ಹೋಗಲಾಡಿಸಬಹುದೆಮದು ಅನಿಸುತ್ತಿದೆಯೇ? ನಿಮ್ಮ ಹೃದಯ ಮಾತನ್ನು ಕೇಳಿ.
ನಮ್ಮ ಬದುಕು ಹೇಗೆ ರೂಪಿಸಬೇಕು ಎಂಬುವುದು ನಮ್ಮ ಕೈಯಲ್ಲಿದೆ. ಒಂದು ಪ್ರೇಮ ಸಂಬಂಧವನ್ನು ಮತ್ತಷ್ಟು ಸುಂದರವಾಗಿಸುವುದು, ಇಲ್ಲ ಮುರಿದು ಹಾಕುವುದು ನಮ್ಮ ಕೈಯಲ್ಲಿರುತ್ತದೆ. ಆದರೆ ಕೆಲವೊಂದು ಘಟನೆಗಳು ನಮ್ಮ ಊಹೆಯನ್ನೂ ಮೀರಿ ನಡೆಯುತ್ತವೆ. ನಾವು ತುಂಬಾ ಪ್ರೀತಿಸಿದ ವ್ಯಕ್ತಿ ಯಾವುದೋ ಚಿಕ್ಕ ಕಾರಣಕ್ಕೆ ದೂರವಾಗಬಹುದು, ಕೆಲವೊಮ್ಮೆ ನಾವು ಊಹಿಸದೇ ಇರುವ ರ ರೀತಿಯಲ್ಲಿ ನಮ್ಮ ಪ್ರೇಮ ಬದಲಾಗಬಹುದು. ಈ ರೀತಿ ಉಂಟಾಗಲು ರಾಶಿಯ ಪ್ರಭಾವ ಕೂಡ ಒಂದು ಕಾರಣ ಎಂದು ಜ್ಯೋತಿಷ್ಯಶಾಸ್ತ್ರ ಹೇಳುತ್ತದೆ.

ಪ್ರತಿಯೊಂದು ರಾಶಿಯ ಪ್ರಣಯ ಬದುಕಿನಲ್ಲಿ ಆ ತಿಂಗಳ ರಾಶಿಫಲ ಪ್ರಭಾವನ್ನು ಬೀರುವುದು. ಇಲ್ಲಿ ಪ್ರೇಮಿಗಳ ಮೇಲೆ ನವೆಂಬರ್ ತಿಂಗಳ ರಾಶಿಫಲ ಹೇಗಿರುತ್ತದೆ ಎಂದು ನೀಡಲಾಗಿದೆ ನೋಡಿ:

   
 
ಹೆಲ್ತ್