Back
Home » ಸಮ್ಮಿಲನ
ಮಂಗಳವಾರದ ದಿನ ಭವಿಷ್ಯ (05-11-2019)
Boldsky | 5th Nov, 2019 04:00 AM
 • ಮೇಷ (ಮಾರ್ಚ್ 20 ರಿಂದ ಏಪ್ರಿಲ್ 18)

  ಇಂದು ಹಣಕಾಸಿನ ವಿಷಯಗಳಲ್ಲಿ ಯಾವುದೇ ಸಮಸ್ಯೆಯನ್ನು ನೀವು ಎದುರಿಸುವುದಿಲ್ಲ ಮತ್ತು ಹಣ ವಹಿವಾಟು ಸ್ಥಿರವಾಗಿರುವ ಕಾರಣ ಚಿಂತೆಯಿಲ್ಲ. ಸಾಲದ ಮೇಲೆ ಹೊಸ ಮನೆ ಅಥವಾ ವಾಹನವನ್ನು ಖರೀದಿಸಲು ಯೋಜಿಸುತ್ತಿದ್ದರೆ ಅರ್ಜಿ ಸಲ್ಲಿಸಲು ಇಂದು ಅನುಕೂಲಕರ ದಿನ. ಇಂದು ಕೆಲಸದಲ್ಲಿ ಉತ್ತಮ ದಿನವಾಗಿರುತ್ತದೆ. ನೌಕರರು ಕಚೇರಿಯಲ್ಲಿ ಬೋನಸ್ ಪಡೆಯುವ ನಿರೀಕ್ಷೆಯಿದೆ ಮತ್ತು ನಿಮ್ಮ ಕಠಿಣ ಪರಿಶ್ರಮವು ಹೆಚ್ಚು ಮೆಚ್ಚುಗೆ ಪಡೆಯುತ್ತದೆ. ಅಲ್ಲದೆ, ನಿಮ್ಮ ಬಾಸ್‌ನಿಂದ ನೀವು ಮೆಚ್ಚುಗೆಯನ್ನು ಸಹ ಸ್ವೀಕರಿಸುತ್ತೀರಿ. ಉದ್ಯಮಿಗಳಿಗೆ ಲಾಭಕರ ದಿನ. ಪ್ರೀತಿಯ ವಿಷಯಗಳಲ್ಲಿ ಇಂದು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ನಿಮ್ಮ ಕುಟುಂಬದಲ್ಲಿ ನಿಮ್ಮ ಪ್ರೇಮ ಅಥವಾ ಸಂಬಂಧವನ್ನು ಅಂಗೀಕರಿಸದಿರಬಹುದು, ಚಿಂತಿಸಬೇಡಿ ಮತ್ತು ಸರಿಯಾದ ಸಮಯಕ್ಕಾಗಿ ಕಾಯಿರಿ. ಆರೋಗ್ಯದ ದೃಷ್ಟಿಯಿಂದ ದಿನ ಸಾಮಾನ್ಯವಾಗಲಿದೆ.
  ಅದೃಷ್ಟ ಬಣ್ಣ: ಹಸಿರು
  ಅದೃಷ್ಟ ಸಂಖ್ಯೆ: 1
  ಅದೃಷ್ಟ ಸಮಯ: ಬೆಳಿಗ್ಗೆ 9:20 ರಿಂದ ಸಂಜೆ 6:00 ರವರೆಗೆ


 • ವೃಷಭ ರಾಶಿ: 20 ಏಪ್ರಿಲ್ - 20 ಮೇ

  ಇಂದು ನಿಮ್ಮ ಜೀವನದಲ್ಲಿ ದೊಡ್ಡ ಬದಲಾವಣೆಯೊಂದು ಬರಬಹುದು, ಈ ಬದಲಾವಣೆಯು ನಿಮ್ಮ ಜೀವನಕ್ಕೆ ಹೊಸ ದಿಕ್ಕನ್ನು ನೀಡುತ್ತದೆ ಎಂದು ಭಯಪಡಬೇಡಿ. ನಿಮ್ಮ ಚಿಂತನೆಗಳನ್ನು ಸಾಕಾರಗೊಳಿಸಲು ಶ್ರಮಿಸಿ. ಕೌಟುಂಬಿಕ ಜೀವನವು ಸಂತೋಷವಾಗಿರುತ್ತದೆ. ಕುಟುಂಬದೊಂದಿಗಿನ ಪ್ರೀತಿ ಮತ್ತು ಪರಸ್ಪರ ಸಂವಹನ ಹೆಚ್ಚಾಗುತ್ತದೆ. ಸಂಗಾತಿಯೊಂದಿಗಿನ ಸಂಬಂಧವೂ ಸಾಮರಸ್ಯದಿಂದ ಇರುತ್ತದೆ. ಎಲ್ಲಾ ಜವಾಬ್ದಾರಿಗಳನ್ನು ಪೂರೈಸುವಲ್ಲಿ ಇಬ್ಬರೂ ಪರಸ್ಪರ ಬೆಂಬಲಿಸುವಿರಿ. ನಿಮ್ಮ ಮಗುವಿನಿಂದ ಸಂತೋಷವನ್ನು ನಿರೀಕ್ಷಿಸಬಹುದು. ಕೆಲಸದ ಸ್ಥಳದಲ್ಲಿ ಶ್ರಮ ವಹಿಸುತ್ತೀರಿ. ಸಾಕಷ್ಟು ತೊಂದರೆಗಳ ನಂತರ ಹಣವನ್ನು ಗಳಿಸುತ್ತೀರಿ. ಕಷ್ಟಪಟ್ಟು ಸಂಪಾದಿಸಿದ ಹಣವನ್ನು ಸರಿಯಾಗಿ ಬಳಸುವುದು ಉತ್ತಮ, ಇದು ಭವಿಷ್ಯದಲ್ಲಿ ಪ್ರಯೋಜನಕಾರಿಯಾಗಲಿದೆ. ಆರೋಗ್ಯವು ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ಕಡುಕೆಂಪು
  ಅದೃಷ್ಟ ಸಂಖ್ಯೆ: 11
  ಅದೃಷ್ಟ ಸಮಯ: ಸಂಜೆ 5:00 ರಿಂದ 10:00 ರವರೆಗೆ


 • ಮಿಥುನ: 21 ಮೇ - 20 ಜೂನ್

  ದಿನವು ಹಣದ ದೃಷ್ಟಿಯಿಂದ ಉತ್ತಮ ಫಲಿತಾಂಶವನ್ನು ನೀಡುತ್ತದೆ. ದೀರ್ಘಕಾಲದಿಂದ ಸಿಲುಕಿರುವ ಹಣ ಇಂದು ನಿಮ್ಮದಾಗುವ ಸಂಭವವಿದೆ. ಇಂದು ಆಸ್ತಿಯನ್ನು ಮಾರಾಟ ಮಾಡಬಹುದು ಅಥವಾ ಖರೀದಿಸಬಹುದು. ಕೆಲಸದಲ್ಲಿ ಜಾಗರೂಕರಾಗಿರಬೇಕು ಮತ್ತು ಪದಗಳನ್ನು ಬಹಳ ಚಿಂತನಶೀಲವಾಗಿ ಬಳಸಬೇಕು. ನಿಮ್ಮ ಹಿರಿಯರು ನಿಮ್ಮ ಕೆಲಸದಲ್ಲಿ ತಪ್ಪನ್ನು ಸೂಚಿಸಿದರೆ, ವಾದ ಮಾಡುವ ಬದಲು ಮಾತುಗಳತ್ತ ಗಮನಹರಿಸಿ ಮತ್ತು ಅವರಿಂದ ಕಲಿಯಿರಿ. ನಿಮ್ಮ ತಪ್ಪನ್ನು ಬಹಿರಂಗವಾಗಿ ಒಪ್ಪಿಕೊಳ್ಳಿ. ಭವಿಷ್ಯದಲ್ಲಿ ನೀವು ವಿಷಾದಿಸಬೇಕಾಗಿರುವುದರಿಂದ ಅತಿಯಾದ ಆತ್ಮವಿಶ್ವಾಸದಿಂದ ಏನನ್ನೂ ಮಾಡಬೇಡಿ. ಕುಟುಂಬದಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ ಮತ್ತು ಕುಟುಂಬದ ಸಂಪೂರ್ಣ ಪ್ರೀತಿ ಮತ್ತು ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಸಂಗಾತಿಯೊಂದಿಗೆ ಸಣ್ಣ ವ್ಯತ್ಯಾಸಗಳು ಉಂಟಾಗಬಹುದು, ಸಂಜೆಯ ಹೊತ್ತಿಗೆ ಎಲ್ಲವೂ ಶಮನವಾಗಿರುತ್ತದೆ. ಇಂದು ನಿಮಗೆ ತಲೆನೋವು ಬರಬಹುದು.
  ಅದೃಷ್ಟ ಬಣ್ಣ: ನೀಲಿ
  ಅದೃಷ್ಟ ಸಂಖ್ಯೆ: 27
  ಅದೃಷ್ಟ ಸಮಯ: ಬೆಳಿಗ್ಗೆ 7:45 ರಿಂದ ಸಂಜೆ 4:30 ರವರೆಗೆ


 • ಕರ್ಕ: 21 ಜೂನ್ - 22 ಜುಲೈ

  ನಿಮ್ಮ ಕೋಪದ ಬಗ್ಗೆ ಎಚ್ಚರವಿರಲಿ ಮತ್ತು ನೆರೆಹೊರೆಯವರೊಂದಿಗೆ ವಾದಿಸುವುದನ್ನು ತಪ್ಪಿಸಿ. ದೀರ್ಘಕಾಲದವರೆಗೆ ಕೆಲವು ಕಾನೂನು ಪ್ರಕರಣಗಳಲ್ಲಿ ಸಿಲುಕಬಹುದು. ನಿಮ್ಮ ಆಕ್ರಮಣಕಾರಿ ಸ್ವಭಾವವು ಸಂಗಾತಿಯೊಂದಿಗೆ ಜಗಳಕ್ಕೆ ಕಾರಣವಾಗಬಹುದು. ಅಂತಹ ಸಂದರ್ಭಗಳನ್ನು ತಪ್ಪಿಸಲು ನಿಮ್ಮ ನಡವಳಿಕೆಯನ್ನು ಸಮತೋಲನದಲ್ಲಿರಿಸಿಕೊಳ್ಳಿ. ಕೆಲಸದ ಸ್ಥಳದಲ್ಲಿ ಮಾನಸಿಕ ಒತ್ತಡದಿಂದಾಗಿ ನಿಮ್ಮ ಕೆಲಸದ ಮೇಲೆ ನೀವು ಗಮನಹರಿಸುವುದಿಲ್ಲ, ಅದು ಕೆಲಸದ ಮೇಲೆ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭಗಳಲ್ಲಿ ಶಾಂತವಾಗಿರಿ ಮತ್ತು ಶಾಂತಿಯುತ ಮನಸ್ಸಿನಿಂದ ಕೆಲಸ ಮಾಡಿ. ಆರ್ಥಿಕ ಪರಿಸ್ಥಿತಿಗಳು ಇಂದು ಉತ್ತಮವಾಗಿರುವುದಿಲ್ಲ. ವೆಚ್ಚಗಳ ಹೆಚ್ಚಳವು ನಿಮ್ಮ ಬಜೆಟ್ ಅನ್ನು ಅಸಮತೋಲನಗೊಳಿಸುತ್ತದೆ. ಪ್ರೀತಿಯ ವಿಷಯಗಳಲ್ಲಿ ದಿನ ಸಾಮಾನ್ಯವಾಗಿರುತ್ತದೆ.
  ಅದೃಷ್ಟ ಬಣ್ಣ: ಬಿಳಿ
  ಅದೃಷ್ಟ ಸಂಖ್ಯೆ: 12
  ಅದೃಷ್ಟ ಸಮಯ: ಸಂಜೆ 5:20 ರಿಂದ 9:30 ರವರೆಗೆ


 • ಸಿಂಹ: 23 ಜುಲೈ - 22 ಆಗಸ್ಟ್

  ಪ್ರೀತಿಯ ವಿಷಯಗಳಲ್ಲಿ ಪರಿಸ್ಥಿತಿ ಅನುಕೂಲಕರವಾಗಿರುತ್ತದೆ. ನೀವು ಒಬ್ಬಂಟಿಯಾಗಿದ್ದರೆ ಸಂಗಾತಿಗಾಗಿ ಹುಡುಕಾಟವು ಇಂದು ಅಂತ್ಯವಾಗಬಹುದು. ನಿಮ್ಮ ಸಂಗಾತಿಯನ್ನು ಮದುವೆಗೆ ಪ್ರಸ್ತಾಪಿಸಲು ಸಹ ನೀವು ಮನಸ್ಸು ಮಾಡಬಹುದು. ವಿವಾಹಿತ ದಂಪತಿಗಳಿಗೂ ದಿನ ಒಳ್ಳೆಯದು. ಸಂಗಾತಿಯಿಂದ ನಿಮಗೆ ಸಂಪೂರ್ಣ ಪ್ರೀತಿ ಮತ್ತು ಬೆಂಬಲ ಸಿಗುತ್ತದೆ. ಹೆತ್ತವರ ಆರೋಗ್ಯ ಚೆನ್ನಾಗಿಯೇ ಇರುತ್ತದೆ. ಹಣಕಾಸಿನ ಪರಿಸ್ಥಿತಿ ಸುಧಾರಿಸುವ ಸಾಧ್ಯತೆಯಿದೆ ಮತ್ತು ಸಣ್ಣ ಕಾರ್ಯವನ್ನು ಪೂರ್ಣಗೊಳಿಸಿದ ನಂತರ ನೀವು ದೊಡ್ಡ ಲಾಭವನ್ನು ಪಡೆಯಬಹುದು. ದಿನವು ವ್ಯಾಪಾರಿಗಳಿಗೆ ಪ್ರಯೋಜನಕಾರಿಯಾಗಿದೆ. ಆರೋಗ್ಯ ಇಂದು ಉತ್ತಮವಾಗಿರಲಿದೆ.
  ಅದೃಷ್ಟ ಬಣ್ಣ: ಕೆಂಪು
  ಅದೃಷ್ಟ ಸಂಖ್ಯೆ: 8
  ಅದೃಷ್ಟ ಸಮಯ: ಬೆಳಿಗ್ಗೆ 4:50 ರಿಂದ ಮಧ್ಯಾಹ್ನ 12:05


 • ಕನ್ಯಾರಾಶಿ: 23 ಆಗಸ್ಟ್ - 22 ಸೆಪ್ಟೆಂಬರ್

  ಕೆಲಸದಲ್ಲಿ ಉತ್ತಮ ಫಲಿತಾಂಶಗಳನ್ನು ನಿರೀಕ್ಷಿಸಲಾಗಿದೆ. ನಿಮ್ಮ ಹಿರಿಯರು ಮತ್ತು ಉನ್ನತ ಅಧಿಕಾರಿಗಳಿಂದ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ನಿಮ್ಮ ಮಾತುಗಳಿಗೆ ಅವರು ಸಹ ಗಮನಕೊಡುತ್ತಾರೆ ಅದು ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತದೆ. ಕೌಟುಂಬಿಕ ಸಮಸ್ಯೆಗಳು ಇಂದು ಕೊನೆಗೊಳ್ಳಬಹುದು ಮತ್ತು ನೀವು ಶಾಂತತೆ ಮತ್ತು ತೃಪ್ತಿಯನ್ನು ಅನುಭವಿಸುವಿರಿ. ನಿಮ್ಮ ಪ್ರೀತಿಪಾತ್ರರೊಂದಿಗಿನ ಸಂಬಂಧ ಸುಧಾರಿಸುತ್ತದೆ. ಒಡಹುಟ್ಟಿದವರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ. ಹಣಕಾಸಿನ ಸನ್ನಿವೇಶಗಳು ಇಂದು ಉತ್ತಮವಾಗಿರುತ್ತವೆ, ಆದರೆ ನಂತರದ ತೊಂದರೆಗಳಿಗೆ ಕಾರಣವಾಗುವುದರಿಂದ ಹೆಚ್ಚು ಖರ್ಚು ಮಾಡುವುದನ್ನು ತಪ್ಪಿಸಿ. ದಂಪತಿಗಳಿಗೆ ದಿನ ಒಳ್ಳೆಯದಲ್ಲ. ಮೂರನೇ ವ್ಯಕ್ತಿಯ ಹಸ್ತಕ್ಷೇಪವು ನಿಮ್ಮಿಬ್ಬರ ನಡುವೆ ತಪ್ಪು ತಿಳುವಳಿಕೆಗೆ ಕಾರಣವಾಗಬಹುದು. ಇಂದು ನೀವು ದಣಿದಿರಿ. ಆರಾಮಕ್ಕೆ ಹೆಚ್ಚಿನ ಗಮನ ಕೊಡಿ.
  ಅದೃಷ್ಟ ಬಣ್ಣ: ತಿಳಿ ಬಣ್ಣ
  ಅದೃಷ್ಟ ಸಂಖ್ಯೆ: 15
  ಅದೃಷ್ಟ ಸಮಯ: ಬೆಳಿಗ್ಗೆ 10:10 ರಿಂದ ಮಧ್ಯಾಹ್ನ 3:15 ರವರೆಗೆ


 • ತುಲಾ: 23 ಸೆಪ್ಟೆಂಬರ್ - 22 ಅಕ್ಟೋಬರ್

  ಇಂದು ನಿಮ್ಮ ಆರೋಗ್ಯ ಹದಗೆಡಬಹುದು. ಕೆಲವು ಅಲರ್ಜಿಯಿಂದ ತೊಂದರೆಗೊಳಗಾಗುತ್ತೀರಿ, ಆದ್ದರಿಂದ ನಿಮ್ಮ ಬಗ್ಗೆ ಕಾಳಜಿ ವಹಿಸುವುದು ಉತ್ತಮ. ಪ್ರಯಾಣವು ಆಯಾಸವನ್ನು ಹೆಚ್ಚಿಸುತ್ತದೆ ಮತ್ತು ಆರೋಗ್ಯದ ಮೇಲೂ ಪರಿಣಾಮ ಬೀರುತ್ತದೆ. ಆದ್ದರಿಂದ ಪ್ರಯಾಣವನ್ನು ತಪ್ಪಿಸುವುದು ಒಳಿತು. ಕೆಲವು ಪ್ರಮುಖ ಕೆಲಸಗಳನ್ನು ಪೂರ್ಣಗೊಳಿಸಲು ಸಾಲವನ್ನು ತೆಗೆದುಕೊಳ್ಳಬೇಕಾಗಬಹುದು. ಹಣಕಾಸಿನ ನಿರ್ಧಾರಗಳನ್ನು ಎಚ್ಚರಿಕೆಯಿಂದ ತೆಗೆದುಕೊಂಡರೆ, ಮುಂದಿನ ದಿನಗಳಲ್ಲಿ ಉತ್ತಮ ಫಲಿತಾಂಶಗಳನ್ನು ಪಡೆಯಬಹುದು. ಕುಟುಂಬವು ಅಸ್ಥಿರವಾಗಿ ಉಳಿಯುತ್ತದೆ. ಕುಟುಂಬ ಸದಸ್ಯರೊಂದಿಗಿನ ಭಿನ್ನಾಭಿಪ್ರಾಯಗಳು ಇನ್ನಷ್ಟು ಹೆಚ್ಚಾಗಬಹುದು. ತಾಳ್ಮೆಯಿಂದಿರಿ ಮತ್ತು ಪ್ರಾಮಾಣಿಕವಾಗಿ ನಿಮ್ಮ ಅನಿಸಿಕೆಯನ್ನು ಅವರಿಗೆ ತಿಳಿಸಿ, ನಿಮ್ಮ ದೃಷ್ಟಿಕೋನವನ್ನು ಅರ್ಥಮಾಡಿಕೊಳ್ಳಬಹುದು.
  ಅದೃಷ್ಟ ಬಣ್ಣ: ತಿಳಿ ನೀಲಿ
  ಅದೃಷ್ಟ ಸಂಖ್ಯೆ: 26
  ಅದೃಷ್ಟ ಸಮಯ: ಮಧ್ಯಾಹ್ನ 3:00 ರಿಂದ 8:00 ರವರೆಗೆ


 • ವೃಶ್ಚಿಕ: 23 ಅಕ್ಟೋಬರ್ - 21 ನವೆಂಬರ್

  ಕೆಲಸಕ್ಕೆ ಸಂಬಂಧಿಸಿದ ಕೆಲವು ದೊಡ್ಡ ಸಮಸ್ಯೆಗಳನ್ನು ಇಂದು ಪರಿಹರಿಸಬಹುದು. ಉದ್ಯಮಿಗಳಳು ಹಾಗೂ ಉದ್ಯೋಗಿಗಳಿಗೆ ಉತ್ತಮ ಲಾಭದ ನಿರೀಕ್ಷೆಯಿದೆ. ದಿನವು ಸಾಮಾನ್ಯ ದಿನವಾಗಿರುತ್ತದೆ. ಇಂದು ನಿಮ್ಮ ಎಲ್ಲಾ ಕೆಲಸಗಳು ಯಾವುದೇ ಅಡೆತಡೆಯಿಲ್ಲದೆ ಪೂರ್ಣಗೊಳ್ಳುತ್ತವೆ. ಪ್ರೀತಿಯ ವಿಷಯಗಳಲ್ಲಿ ಇಂದು ವಿಶೇಷ ದಿನವಾಗಿರುತ್ತದೆ. ನೀವು ಒಬ್ಬಂಟಿಯಾಗಿದ್ದರೆ ಇಂದು ನಿಮ್ಮ ಜೋಡಿ ಸಿಗುವ ಸಾಧ್ಯತೆಯಿದೆ. ವಿವಾಹಿತ ದಂಪತಿಗಳಿಗೆ ಶುಭದಿನ. ಸಂಗಾತಿಯೊಂದಿಗಿನ ನಿಮ್ಮ ಬಾಂಧವ್ಯ ಹೆಚ್ಚಾಗುತ್ತದೆ. ಇಬ್ಬರೂ ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಬಹುದು. ವಿದ್ಯಾರ್ಥಿಗಳಿಗೆ ಒಳ್ಳೆಯ ದಿನ. ಆರ್ಥಿಕ ಪರಿಸ್ಥಿತಿ ಸಾಮಾನ್ಯಕ್ಕಿಂತ ಉತ್ತಮವಾಗಿರುತ್ತದೆ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 20
  ಅದೃಷ್ಟ ಸಮಯ: ಬೆಳಿಗ್ಗೆ 11:30 ರಿಂದ 9 ರವರೆಗೆ


 • ಧನು: 22 ನವೆಂಬರ್ - 21 ಡಿಸೆಂಬರ್

  ಇಂದು ಹಣಕಾಸಿನ ವಿಷಯದಲ್ಲಿ ಕಷ್ಟದ ದಿನವಾಗಿರಲಿದೆ. ಅನಗತ್ಯ ವೆಚ್ಚಗಳು ನಿಮ್ಮ ಬಜೆಟ್ ಅನ್ನು ಹಾಳುಮಾಡುತ್ತವೆ, ಆದರಿಂದಾಗಿ ಬಹಳಷ್ಟು ಸಮಸ್ಯೆಗಳನ್ನು ಸಹ ಎದುರಿಸಬೇಕಾಗಬಹುದು. ನಿಮ್ಮ ದುಬಾರಿ ಸ್ವಭಾವದಿಂದ ಇಂದು ಸಂಗಾತಿಯೊಂದಿಗೆ ಸಂಘರ್ಷವನ್ನು ಎದುರಿಸಬೇಕಾಗುತ್ತದೆ. ಯೋಚಿಸದೆ ಹಣಕಾಸಿನ ನಿರ್ಧಾರಗಳನ್ನು ಇದೇ ರೀತಿಯಲ್ಲಿ ತೆಗೆದುಕೊಂಡರೆ ಭವಿಷ್ಯದ ಯೋಜನೆಗಳಿಗೆ ತೊಂದರೆಯಾಗಬಹುದು. ಕುಟುಂಬ ಸದಸ್ಯರಲ್ಲಿ ಸಂಘರ್ಷ ಉಂಟಾಗುತ್ತದೆ ಮತ್ತು ಇದು ಮನೆಯ ಪರಿಸರದ ಮೇಲೆ ನೇರವಾಗಿ ಪರಿಣಾಮ ಬೀರುತ್ತದೆ. ಅಂತಹ ಪರಿಸ್ಥಿತಿಯಲ್ಲಿ ಮಾತುಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ. ಕೆಲಸದ ಸ್ಥಳದಲ್ಲಿ ಸಹೋದ್ಯೋಗಿಗಳನ್ನು ಟೀಕಿಸುವುದನ್ನು ತಪ್ಪಿಸಿ, ಅದು ನಿಮ್ಮ ಕೆಲಸ ಮತ್ತು ಖ್ಯಾತಿಗೆ ಧಕ್ಕೆ ತರುತ್ತದೆ. ಇತರರ ತಪ್ಪುಗಳನ್ನು ಎತ್ತಿ ತೋರಿಸುವ ಮೊದಲು, ನಿಮ್ಮ ತಪ್ಪುಗಳಿಂದ ಕಲಿಯಿರಿ. ಆರೋಗ್ಯ ಇಂದು ಕ್ಷೀಣಿಸಬಹುದು. ನಿಮ್ಮ ಆಹಾರ ಮತ್ತು ಪಾನೀಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಿ.
  ಅದೃಷ್ಟ ಬಣ್ಣ: ಕಂದು
  ಅದೃಷ್ಟ ಸಂಖ್ಯೆ: 3
  ಅದೃಷ್ಟ ಸಮಯ: ಸಂಜೆ 6 ರಿಂದ 11:05


 • ಮಕರ: 22 ಡಿಸೆಂಬರ್ - 19 ಜನವರಿ

  ಇಂದು ನೀವು ಕೆಲವು ಸಂದಿಗ್ಧತೆಗೆ ಒಳಗಾಗುತ್ತೀರಿ ಮತ್ತು ಆಲೋಚನೆಗಳಿಂದ ಸುತ್ತುವರಿಯುತ್ತೀರಿ. ಅಂತಹ ಪರಿಸ್ಥಿತಿಯಲ್ಲಿ, ನಿಮ್ಮ ಪ್ರಶ್ನೆಗಳಿಗೆ ಉತ್ತರಗಳನ್ನು ಪಡೆಯುವುದರಿಂದ ನಿಮ್ಮ ಹತ್ತಿರ ಇರುವವರೊಂದಿಗೆ ಮಾತನಾಡಿ ಅಥವಾ ಸಲಹೆ ಪಡೆಯಿರಿ. ಕೆಲಸದ ಬಗ್ಗೆ ನೀವು ಯಾವುದೇ ಪ್ರಮುಖ ನಿರ್ಧಾರವನ್ನು ತೆಗೆದುಕೊಳ್ಳಲಿದ್ದರೆ ಅನುಭವಿ ವ್ಯಕ್ತಿಯ ಅಭಿಪ್ರಾಯವನ್ನು ಪರಿಗಣಿಸಿ. ಕುಟುಂಬದಲ್ಲಿ ಶಾಂತಿ ಇರುತ್ತದೆ ಮತ್ತು ಕುಟುಂಬ ಸದಸ್ಯರೊಂದಿಗಿನ ಸಂಬಂಧವೂ ಸುಧಾರಿಸುತ್ತದೆ. ಹೆತ್ತವರ ಆಶೀರ್ವಾದವು ನಿಮ್ಮನ್ನು ಪ್ರೇರೇಪಿಸುತ್ತದೆ. ಸಂಗಾತಿಯೊಂದಿಗಿನ ಸಂಘರ್ಷವು ಕೊನೆಗೊಳ್ಳುತ್ತದೆ ಮತ್ತು ನಿಮ್ಮಿಬ್ಬರ ನಡುವಿನ ಸಂಬಂಧವು ಗಾಢವಾಗುತ್ತದೆ. ಇಬ್ಬರೂ ಒಟ್ಟಿಗೆ ಸ್ಮರಣೀಯ ದಿನವನ್ನು ಕಳೆಯುವಿರಿ. ಮಗುವಿನ ಕಡೆಯಿಂದ ಸಂತೋಷವನ್ನು ಸಹ ನಿರೀಕ್ಷಿಸಲಾಗಿದೆ. ಆರ್ಥಿಕ ಪರಿಸ್ಥಿತಿಗಳು ಉತ್ತಮವಾಗಿರುತ್ತವೆ.
  ಅದೃಷ್ಟ ಬಣ್ಣ: ಹಳದಿ
  ಅದೃಷ್ಟ ಸಂಖ್ಯೆ: 18
  ಅದೃಷ್ಟ ಸಮಯ: ಬೆಳಿಗ್ಗೆ 7:30 ರಿಂದ ಮಧ್ಯಾಹ್ನ 2:00 ರವರೆಗೆ


 • ಕುಂಭ: 20 ಜನವರಿ - 18 ಫೆಬ್ರವರಿ

  ಕುಟುಂಬದಲ್ಲಿ ಸಂತೋಷ ಇರುತ್ತದೆ. ನಿಮ್ಮ ಮನೆಯಲ್ಲಿ ಧಾರ್ಮಿಕ ಆಚರಣೆಯನ್ನು ಆಯೋಜಿಸಬಹುದು ಅದು ಪರಿಸರವನ್ನು ಉತ್ತಮಗೊಳಿಸುತ್ತದೆ. ಬಹಳ ಸಮಯದ ನಂತರ ನಿಮ್ಮ ಕುಟುಂಬದೊಂದಿಗೆ ಶಾಂತ ಮತ್ತು ಆನಂದದಾಯಕ ದಿನವನ್ನು ಕಳೆಯಲು ನಿಮಗೆ ಸಾಧ್ಯವಾಗುತ್ತದೆ. ಆರ್ಥಿಕ ಪರಿಸ್ಥಿತಿ ಬಲಗೊಳ್ಳುತ್ತದೆ. ನಿಮ್ಮ ಎಲ್ಲಾ ಹಣಕಾಸಿನ ಪ್ರಯತ್ನಗಳು ಇಂದು ಯಶಸ್ವಿಯಾಗಲಿದ್ದು ಹಣಕ್ಕೆ ಸಂಬಂಧಿಸಿದ ಚಿಂತೆಗಳನ್ನು ಕೊನೆಗೊಳಿಸುತ್ತದೆ. ನಿಮ್ಮ ಸಂಗಾತಿಯೊಂದಿಗೆ ಪರಸ್ಪರ ತಿಳುವಳಿಕೆ ಹೆಚ್ಚಾಗುತ್ತದೆ ಮತ್ತು ನೀವಿಬ್ಬರೂ ವೈವಾಹಿಕ ಜೀವನವನ್ನು ಪೂರ್ಣವಾಗಿ ಆನಂದಿಸುವಿರಿ. ಸ್ನೇಹಿತರಿಂದ ಸಂಪೂರ್ಣ ಬೆಂಬಲವನ್ನು ಸಹ ನಿರೀಕ್ಷಿಸಲಾಗಿದೆ. ಅಗತ್ಯವಿದ್ದಾಗ ಅವರು ನಿಮಗೆ ಸಹಾಯ ಮಾಡಲು ಮುಂದೆ ಬರಬಹುದು. ದಂಪತಿಗಳಿಗೆ ದಿನ ಅದ್ಭುತವಾಗಿದೆ.
  ಅದೃಷ್ಟ ಬಣ್ಣ: ಕಡುಕೆಂಪು
  ಅದೃಷ್ಟ ಸಂಖ್ಯೆ: 35
  ಅದೃಷ್ಟ ಸಮಯ: ಬೆಳಿಗ್ಗೆ 5:05 ರಿಂದ ಮಧ್ಯಾಹ್ನ 3:40


 • ಮೀನ: 19 ಫೆಬ್ರವರಿ - 20 ಮಾರ್ಚ್

  ನಿಮ್ಮ ಆರೋಗ್ಯದ ಬಗ್ಗೆ ಇಂದು ನಿರ್ಲಕ್ಷ್ಯ ವಹಿಸುತ್ತಿದ್ದರೆ ಭವಿಷ್ಯದಲ್ಲಿ ನೀವು ವಿಷಾದಿಸಬೇಕಾಗಬಹುದು. ಮದ್ಯ ಸೇವಿಸುವುದನ್ನು ತಪ್ಪಿಸಲು ನಿಮಗೆ ಸೂಚಿಸಲಾಗಿದೆ, ವಿಶೇಷವಾಗಿ ವಾಹನಗಳನ್ನು ಚಲಾಯಿಸುವಾಗ ಅಪಘಾತದ ಹೆಚ್ಚಿನ ಸಾಧ್ಯತೆ ಇದೆ. ಕಚೇರಿಯಲ್ಲಿ ಕೆಲಸದ ಹೊರೆ ನಿಮ್ಮ ಒತ್ತಡವನ್ನು ಹೆಚ್ಚಿಸುತ್ತದೆ. ಮನಸ್ಸನ್ನು ಶಾಂತವಾಗಿರಿಸಿಕೊಳ್ಳಿ ಮತ್ತು ಎಲ್ಲಾ ಕಾರ್ಯಗಳನ್ನು ಸಮರ್ಥವಾಗಿ ನಿರ್ವಹಿಸಲು ಪ್ರಯತ್ನಿಸಿ. ಸಮಯಕ್ಕೆ ಸರಿಯಾಗಿ ಕೆಲಸ ಪೂರ್ಣಗೊಳ್ಳದಿದ್ದರೆ ನಿಮ್ಮ ಉನ್ನತ ಅಧಿಕಾರಿಗಳಿಗೆ ಕೋಪ ಬರಬಹುದು. ಉದ್ಯಮಿಗಳಿಗೆ ನಿರೀಕ್ಷಿತ ಫಲಿತಾಂಶಗಳನ್ನು ಪಡೆಯದಿರಬಹುದು. ಆದರೆ, ನಾಳೆ ಏನಾದರೂ ಒಳ್ಳೆಯದು ಸಭವಿಸಬಹುದು ನೆನಪಿನಲ್ಲಿಡಿ. ನೀವು ಕಷ್ಟಪಟ್ಟು ಕೆಲಸ ಮಾಡಿ ಮತ್ತು ಆಶಾವಾದಿಯಾಗಿರಿ. ಹಣದ ವಿಷಯದಲ್ಲಿ ದಿನ ಸಾಮಾನ್ಯವಾಗಿರುತ್ತದೆ.
  ಅದೃಷ್ಟ ಬಣ್ಣ: ಗುಲಾಬಿ
  ಅದೃಷ್ಟ ಸಂಖ್ಯೆ: 5
  ಅದೃಷ್ಟ ಸಮಯ: ಸಂಜೆ 6:00 ರಿಂದ 9:00 ರವರೆಗೆ
ಮಂಗಳವಾರದ ದಿನ ಅಂದರೆ ನವಗ್ರಹಗಳಲ್ಲಿ ಒಬ್ಬರಾದ ಮಂಗಳನ ದಿನ. ಈತನನ್ನೇ ಕುಜ ಎಂದು ಕರೆಯಲಾಗುತ್ತದೆ. ಅಂಗಾರಕನೆಂದು ಈತನನ್ನೇ ಕರೆಯಲಾಗುವುದು.ಪುರಾಣಗಳ ಪ್ರಕಾರ ಕುಜ ಎಂದರೆ ವಿಪತ್ತುಗಳನ್ನು ಉಂಟು ಮಾಡುವನು.

ಪುರಾಣಗಳಲ್ಲಿ ವಿಶೇಷವಾದ ಧಾರ್ಮಿಕವಾದ ಪ್ರಾಮುಖ್ಯತೆಯಿದೆ. ಮಂಗಳವಾರ ಸಾಮಾನ್ಯವಾಗಿ ಕಾಳಿ, ಗಣಪತಿ,ಆದಿಶಕ್ತಿಯನ್ಶು ಆರಾಧನೆಯನ್ನು ಮಾಡುತ್ತಾರೆ.ಮಂಗಳವಾರದ ದಿನವು ದೈವವನ್ನು ಆರಾಧಿಸುತ್ತಾ ಬೋಲ್ಡ್ ಸ್ಕೈ ನಿಮಗಾಗಿ ನೀಡಿರುವ ದಿನದ ಭವಿಷ್ಯವನ್ನು ತಿಳಿಯೋಣ.

   
 
ಹೆಲ್ತ್