Back
Home » ಇತ್ತೀಚಿನ
ಬಿಎಸ್‌ಎನ್‌ಎಲ್‌ ಹೊಸ ಆಫರ್‌ : ಅಧಿಕ ಡೇಟಾ, ವ್ಯಾಲಿಡಿಟಿಯಲ್ಲಿ ಹೆಚ್ಚಳ!
Gizbot | 7th Nov, 2019 10:08 AM
 • ಬಿಎಸ್‌ಎನ್‌ಎಲ್‌

  ಹೌದು, ಬಿಎಸ್‌ಎನ್‌ಎಲ್‌ ತನ್ನ 1699ರೂ ಪ್ರೀಪೇಡ್‌ ವಾರ್ಷಿಕ ಯೋಜನೆಯಲ್ಲಿ ಇದೀಗ ಎರಡು ತಿಂಗಳ ವ್ಯಾಲಿಡಿಟಿ ಅವಧಿಯನ್ನು ಹೆಚ್ಚಿಸಿದೆ. ಹೀಗಾಗಿ ಪ್ರಸ್ತುತ ಇದ್ದ 365 ದಿನಗಳ ವ್ಯಾಲಿಡಿಟಿಗೆ ಬದಲಾಗಿ 425 ದಿನಗಳು ಲಭ್ಯವಾಗಲಿವೆ. ಹಾಗೆಯೇ ಪ್ರತಿದಿನ 2GB ಡೇಟಾ ಬದಲಿಗೆ 3GB ಡೇಟಾ ಸೌಲಭ್ಯ ದೊರೆಯಲಿದೆ. ಆದ್ರೆ ಈ ಕೊಡುಗೆ ಸೀಮಿತ ಅವಧಿಯದ್ದಾಗಿದ್ದು, ಇದೇ ನವಂಬರ್‌ 7 ರಿಂದ ಇದೇ ನವಂಬರ್‌ 30ರ ವರೆಗೆ ಮಾತ್ರ ಇರಲಿದೆ.


 • 1699ರೂ. ಯೋಜನೆ

  ಬಿಎಸ್‌ಎನ್‌ಎಲ್‌ನ ಹೊಸ 1699ರೂ. ಯೋಜನೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ಪ್ರತಿದಿನ ಒಟ್ಟು 3GB ಡೇಟಾ ಸಿಗಲಿದ್ದು, ಜೊತೆಗೆ ಅನಿಯಮಿತ ಕರೆಗಳ ಸೌಲಭ್ಯ ಸಹ ಇರಲಿದೆ. ಹಾಗೆಯೇ ಪ್ರತಿದಿನ 100 ಉಚಿತ ಎಸ್‌ಎಮ್‌ಎಸ್‌ಗಳು, ಲಭ್ಯ ಇರಲಿದ್ದು, ಒಟ್ಟು 425 ದಿನಗಳ ವ್ಯಾಲಿಡಿಟಿ ಅವಧಿಯಲ್ಲಿ ಗ್ರಾಹಕರಿಗೆ ಸಿಗಲಿದೆ. ಸೀಮಿತ ಅವಧಿಗೆ ಮಾತ್ರ (ಇದೇ ನ.30) ಈ ಆಫರ್ ಗ್ರಾಹಕರಿಗೆ ದೊರೆಯಲಿದೆ.


 • ವ್ಯಾಲಿಡಿಟಿ

  ಈ ಮೊದಲು ಬಿಎಸ್‌ಎನ್‌ಎಲ್‌ನ 1699ರೂ.ಗಳ ವಾರ್ಷಿಕ ಪ್ಲ್ಯಾನಿನಲ್ಲಿ ಗ್ರಾಹಕರಿಗೆ 365 ದಿನಗಳ ವ್ಯಾಲಿಡಿಟಿ ಅವಧಿ ದೊರೆಯುತ್ತಿತ್ತು, ಈ ಅವಧಿಯಲ್ಲಿ ಪ್ರತಿದಿನ 1.5GB ಡೇಟಾ ಲಭ್ಯ ಪ್ರಯೋಜನವಿತ್ತು. ಹಾಗೆಯೇ ಉಚಿತ 100 ಎಸ್‌ಎಮ್‌ಎಸ್‌ಗಳು, ಉಚಿತ ಕರೆಗಳ ಸೌಲಭ್ಯ ಸಹ ಲಭ್ಯವಿತ್ತು. ಇದೇ ರೀತಿ ಬಿಎಸ್‌ಎನ್‌ಎಲ್‌ ಈ ಹಿಂದೆ ತನ್ನ ವಾರ್ಷಿಕ ಪ್ಲ್ಯಾನಿನಲ್ಲಿ ಅಕ್ಟೋಬರ್ ಆಫರ್‌ ಹೆಸರಿನಲ್ಲಿ 455 ವ್ಯಾಲಿಡಿಟಿ ಅವಧಿ ಘೋಷಿಸಿತ್ತು.


 • ಖಾಸಗಿ ಟೆಲಿಕಾಂ

  ಬಹುತೇಕ ಗ್ರಾಹಕರು ವಾರ್ಷಿಕ ಅವಧಿಯ ಪ್ಲ್ಯಾನ್‌ಗಳನ್ನು ಬಯಸುತ್ತಾರೆ ಹೀಗಾಗಿಯೇ ಇತರೆ ಟೆಲಿಕಾಂಗಳು ಸಹ 1699ರೂ.ಗಳಿಗೆ ವಾರ್ಷಿಕ ಪ್ಲ್ಯಾನ್‌ ಪರಿಚಯಿಸಿವೆ. ಆದ್ರೆ ಖಾಸಗಿ ಟೆಲಿಕಾಂಗಳ ವಾರ್ಷಿಕ ಪ್ಲ್ಯಾನಿನಲ್ಲಿ 365 ದಿನಗಳ ವ್ಯಾಲಿಡಿಟಿ ನೀಡುತ್ತವೆ. ಉಳಿದಂತೆ ಪ್ರತಿದಿನ ಉಚಿತ ಡೇಟಾ(ಏರ್‌ಡೆಲ್ 1.4GB, ಜಿಯೋ1.5GB), ಉಚಿತ ಕರೆಗಳ ಸೌಲಭ್ಯ, ಉಚಿತ ಎಸ್‌ಎಮ್‌ಎಸ್‌ ಪ್ರಯೋಜನಗಳನ್ನು ನೀಡುತ್ತಿವೆ.
ದೇಶದ ಟೆಲಿಕಾಂ ಕ್ಷೇತ್ರದಲ್ಲಿ ಸರ್ಕಾರಿ ಸ್ವಾಮ್ಯದ ಬಿಎಸ್‌ಎನ್‌ಎಲ್‌ ಸಂಸ್ಥೆಯು ಈಗಾಗಲೇ ಕೆಲವು ಪ್ರೀಪೇಡ್‌ ಪ್ಲ್ಯಾನ್‌ಗಳ ಮೂಲಕ ಖಾಸಗಿ ಟೆಲಿಕಾಂ ಸಂಸ್ಥೆಗಳಿಗೆ ಸೆಡ್ಡು ಹೊಡೆದಿದೆ. ಹೆಚ್ಚಿನ ಡೇಟಾ ಸೌಲಭ್ಯ, ಅಧಿಕ ವ್ಯಾಲಿಡಿಟಿ ಸೌಲಭ್ಯ ಸೇರಿದಂತೆ ಅಗತ್ಯ ಪ್ರಯೋಜನಗಳನ್ನು ನೀಡಿದೆ. ಇದೀಗ ತನ್ನ ವಾರ್ಷಿಕ ಪ್ರೀಪೇಡ್‌ ಪ್ಲ್ಯಾನಿನಲ್ಲಿ ಭಾರಿ ಮಹತ್ತರ ಬದಲಾವಣೆಯನ್ನು ಬಂದದ್ದು ಗ್ರಾಹಕರಿಗೆ ಸಂಭ್ರಮ ಡಬಲ್ ಮಾಡಿದೆ.

   
 
ಹೆಲ್ತ್