Back
Home » ಆರೋಗ್ಯ
ರೋಮಾಂಚನದ ಬಗ್ಗೆ ನಿಮಗೆ ತಿಳಿಯದೆ ಇರುವ ರಹಸ್ಯಗಳು
Boldsky | 7th Nov, 2019 04:42 PM
 • ರೋಮಾಂಚನ ಆಗುವುದು ಹೇಗೆ?

  ದೇಹಕ್ಕೆ ತುಂಬಾ ಚಳಿಯ ಅನುಭವವಾದ ವೇಳೆ ರೋಮಾಂಚನವಾಗುವುದು. ಇದು ಮಾತ್ರವಲ್ಲದೆ ಪ್ರಬಲ ಭಾವನಾತ್ಮಕ ಭಾವನೆಗಳಾಗಿರುವಂತಹ ಭೀತಿ, ಬೇಸರ, ಸಂತೋಷ ಮತ್ತು ಲೈಂಗಿಕ ಉದ್ರೇಕದ ವೇಳೆ ಕೂಡ ರೋಮಾಂಚನವಾಗುವುದು. ಕೆಲವೊಂದು ದೈಹಿಕ ಚಟುವಟಿಕೆ ವೇಳೆ ಕೂಡ ರೋಮಾಂಚನವಾಗುವುದು ಇದೆ. ಇದರಲ್ಲಿ ಕೆಲವು ಸಲ ಮಲ ವಿಸರ್ಜನೆಂದು ಕುಳಿತಾಗಲೂ ರೋಮಾಂಚನವಾಗುವುದು ಇದೆ. ಯಾಕೆಂದರೆ ದೈಹಿಕ ಚಟುವಟಿಕೆಯು ನಿಮ್ಮ ಸಹಾನುಭೂತಿ ಅಥವಾ ಸಹಜತೆಯಿಂದಲಾದರೂ ಅದರು ನರಮಂಡಲದ ಚಟುವಟಿಕೆ ಸಕ್ರಿಯಗೊಳಿಸುವುದು. ಕೆಲವೊಂದು ಸಂದರ್ಭದಲ್ಲಿ ರೋಮಾಂಚನವು ಯಾವುದೇ ಕಾರಣವಿಲ್ಲದೆಯೂ ಬರಬಹುದು. ಮುಳ್ಳುಹಂದಿ ಮತ್ತು ನಾಯಿಗಳಂತಹ ಕೆಲವು ಪ್ರಾಣಿಗಳಿಗೆ ಕೂಡ ಈ ರೀತಿ ಆಗುವುದು ಮತ್ತು ಇದನ್ನು ರೋಮಾಂಚನದ ಪಟ್ಟಿಗೆ ಸೇರಿಸಲಾಗಿದೆ. ಪ್ರಾಣಿಗಳಿಗೆ ತಮ್ಮ ಶತ್ರು ಅಥವಾ ಬೇರೆ ಏನಾದರೂ ಸಮಸ್ಯೆಯು ಎದುರಾದರೆ ಆಗ ಅದರ ದೇಹವು ರೋಮಾಂಚನವಾಗುವಂತಹ ರೀತಿಯಲ್ಲಿ ಪ್ರತಿಕ್ರಿಯಿಸುವುದು ಎಂದು ಹೇಳಲಾಗುತ್ತದೆ.


 • ರೋಮಾಂಚನದ ಲಕ್ಷಣಗಳು ಯಾವುದು?

  ತುಂಬಾ ಚಳಿಯಿರುವಂತಹ ಸಮಯದಲ್ಲಿ ರೋಮಾಂಚನದಿಂದಾಗಿ ದೇಹವು ಬಿಸಿಯಾಗುವುದು. ಚಳಿಯ ಸಮಯದಲ್ಲಿ ಸ್ನಾಯುಗಳ ಚಲನೆಯಿಂದಾಗಿ ರೋಮಾಂಚನವು ಉಂಟಾಗಿ ದೇಹವು ಬಿಸಿಯಾಗುವುದು. ಮನುಷ್ಯರಲ್ಲಿ ಇದು ಹೆಚ್ಚಿನ ಪ್ರಭಾವ ಬೀರುವುದು. ಯಾಕೆಂದರೆ ಮನುಷ್ಯರಲ್ಲಿ ಪ್ರಾಣಿಗಳಷ್ಟು ಕೂದಲು ಇರುವುದಿಲ್ಲ.

  ದೇಹವು ಬಿಸಿಯಾಗುತ್ತಿರುವಂತೆ ರೋಮಾಂಚನವು ಹಾಗೆ ಕರಗುವುದು. ದೈಹಿಕ ಕ್ರಿಯೆಯಾಗಿರುವಂತಹ ಮಲವಿಸರ್ಜನೆ ವೇಳೆ ಉಂಟಾಗುವಂತಹ ರೋಮಾಂಚನವು ಕೂಡ ಇದೇ ರೀತಿ ಕರಗುವುದು.


 • ಭಾವನೆಯಿಂದ ಉಂಟಾದ ರೋಮಾಂಚನ

  ನಾವು ಅತಿಯಾದ ಭಾವನೆಗೆ ಒಳಗಾದ ವೇಳೆ ದೇಹವು ಅದಕ್ಕೆ ವಿಭಿನ್ನ ರೀತಿಯಿಂದ ಪ್ರತಿಕ್ರಿಯಿಸುವುದು. ಚರ್ಮದ ಕೆಳಗಿನ ಭಾಗದಲ್ಲಿ ಇರುವ ಸ್ನಾಯುಗಳಲ್ಲಿ ಇಲೆಕ್ಟ್ರಿಕ್ ಚಟುವಟಿಕೆ ಮತ್ತು ಉಸಿರಾಟವು ದೀರ್ಘವಾಗುವುದು ಅಥವಾ ಭಾರವಾಗುವುದು ಇದರ ಎರಡು ಸಾಮಾನ್ಯ ಲಕ್ಷಣಗಳು. ಈ ಎರಡು ಲಕ್ಷಣಗಳಿಂದಾಗಿ ರೋಮಾಂಚನವು ಉಂಟಾಗುವುದು.

  ಈ ಸಂದರ್ಭದಲ್ಲಿ ದೇಹವು ಬೆವರುವುದು ಅಥವಾ ಹೃದಯಬಡಿತವು ಹೆಚ್ಚಾಗುವುದು. ತೀವ್ರವಾದ ಭಾವನೆಗಳು ಮತ್ತು ಅದಕ್ಕೆ ಸಂಬಂಧಿಸಿದ ಪ್ರತಿಕ್ರಿಯೆಗಳು ನಿಮ್ಮ ಆಲೋಚನೆ, ಕೇಳುವುದು, ನೋಡುವುದು, ವಾಸನೆ, ರುಚಿ ಅಥವಾ ಸ್ಪರ್ಶವನ್ನು ಒಳಗೊಂಡಿರಬಹುದು.

  ಯಾವುದೇ ವ್ಯಕ್ತಿಯನ್ನು ನೀವು ತುಂಬಾ ಸಂತೋಷ ಅಥವಾ ಬೇಸರದಿಂದ ಸ್ಪರ್ಶಿಸಿದ ವೇಳೆ ರೋಮಾಂಚನವು ಆಗುವುದು. ಕೆಲವೊಂದು ಸಲ ಇದು ಎರಡೂ ಒಂದೇ ಸಲ ಆಗುವುದು.

  ಕೆಲವೊಂದು ಅಧ್ಯಯನಗಳು ಕಂಡುಕೊಂಡಿರುವ ಪ್ರಕಾರ ಸಿನಿಮಾದಲ್ಲಿ ಇಬ್ಬರು ಕಲಾವಿದರು ತುಂಬಾ ಭಾವನಾತ್ಮಕವಾಗಿ ಸಂಭಾಷಿಸುತ್ತಿದ್ದರೆ ಆಗ ಕಂಡುಬರುವಂತಹ ರೋಮಾಂಚನವು ನಾವು ಕೇಳುವುದಕ್ಕಿಂತಲೂ ಹೆಚ್ಚಿನದ್ದಾಗಿರುವುದು. ಕೆಲವೊಂದು ಸಲ ಭಾವನಾತ್ಮಕವಾಗಿ ಮನಸ್ಸಿಗೆ ನಾಟುವಂತಹ ಹಾಡುಗಳು ಕೂಡ ಈ ರೀತಿ ಮಾಡುವುದು.


 • ರೋಮಾಂಚನವು ಯಾವುದೇ ಕಾಯಿಲೆಯ ಲಕ್ಷಣವೇ?

  ಹೆಚ್ಚಿನ ಸಂದರ್ಭದಲ್ಲಿ ರೋಮಾಂಚನವೆನ್ನುವುದು ಕೇವಲ ತಾತ್ಕಾಲಿಕ ರಗಳೆ ಅಷ್ಟೇ. ಅದಾಗ್ಯೂ, ತುಂಬಾ ಅಪರೂಪದಲ್ಲಿ ಇದು ಗಂಭೀರ ರೋಗ ಅಥವಾ ತೀವ್ರ ಆರೋಗ್ಯ ಸಮಸ್ಯೆಯ ಲಕ್ಷಣವಾಗಿರಬಹುದು. ಉದಾಹರಣೆಗೆ ರೋಮಾಂಚನವು ಈ ಕೆಳಗಿನ ಕಾಯಿಲೆಯ ಲಕ್ಷಣವಾಗಿರಬಹುದು....

  ಕೆರಾಟೋಸಿಸ್ ಪಿಲಾರಿಸ್ ನ ಲಕ್ಷಣವಾಗಿರಬಹುದು. ಇದು ದೀರ್ಘ ಕಾಲದ ತನಕ ಚರ್ಮದ ಮೇಲೆ ರೋಮಾಂಚನವು ಉಳಿಯುವಂತೆ ಮಾಡುವುದು.

  ಅಟೊನೊಮಿಕ್ ಡಿಸ್ರೆಫ್ಲೆಕ್ಸಿಯಾ: ಬೆನ್ನುಹುರಿಯ ಗಾಯದ ಸಮಸ್ಯೆಯಿಂದಾಗಿ ನರಮಂಡಲದ ಮೇಲೆ ಉಂಟಾಗಿರುವ ಅತಿಯಾದ ಪ್ರಕ್ರಿಯೆ ಆಗಿದೆ.

  ಟೆಂಪೊರಲ್ ಲೋಬ್ ಎಪಿಲೆಪ್ಸಿ: ದೀರ್ಘಕಾಲದ ಸೆಳವು ಅಸ್ವಸ್ಥತೆ.

  ಚಳಿ: ಉದಾಹರಣೆಗೆ ಜ್ವರದಿಂದಾಗಿ ಕಂಡುಬರುವಂತಹ ಚಳಿ.
ಆ ಘಟನೆ, ಸ್ಥಳ, ದೃಶ್ಯ ನೋಡಿ ನನಗೆ ರೋಮಾಂಚನವಾಯಿತು ಎಂದು ಹೇಳುವುದನ್ನು ನಾವು ಕೇಳುತ್ತೇವೆ. ಹೆಚ್ಚಾಗಿ ಕ್ರೀಡೆಗಳಲ್ಲಿ ತುಂಬಾ ರೋಮಾಂಚನಕಾರಿಯಾಗಿ ಪಂದ್ಯವನ್ನು ಈ ತಂಡವು ಗೆದ್ದಿತ್ತು ಎಂದು ವರದಿಯಲ್ಲಿ ಬರೆಯಲಾಗುತ್ತದೆ. ಆದರೆ ಈ ರೋಮಾಂಚನ (ಮೈ ನಿಮಿರೇಳುವುದು) ಎಂದರೆ ಏನು? ನಿಮಗೆ ಯಾವುದೇ ಮಾತು ಅಥವಾ ಘಟನೆಯಿಂದ ರೋಮಾಂಚನವಾದರೆ ಆಗ ಕೈ, ಕಾಲುಗಳು ಅಥವಾ ಹಣೆಯ ಕೂದಲುಗಳು ನೆಟ್ಟಗಾಗುವುದು. ಇದೇ ವೇಳೆ ಕೂದಲು ಚರ್ಮದ ಭಾಗವನ್ನು ಕೂಡ ಮೇಲೆಕೆತ್ತಿ ಉಬ್ಬು ಬಂದಂತೆ ಮಾಡುವುದು. ರೋಮಾಂಚನವನ್ನು ವೈದ್ಯಕೀಯವಾಗಿ ಪಿಲೊಯಿರಕ್ಷನ್, ಕ್ಯುಟಿಸ್ ಅನಸೆರಿನಾ ಮತ್ತು ಹಾರಿಪಿಲೇಷನ್ ಎಂದು ಕರೆಯಲಾಗುತ್ತದೆ. ರೋಮಾಂಚನ ಎನ್ನುವ ಪದವನ್ನು ಹೆಚ್ಚಾಗಿ ತುಂಬಾ ಆಕಸ್ಮಿಕವಾಗಿ ಬರುವ ಘಟನೆಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳಲು ಬಳಸಲಾಗುತ್ತದೆ. ರೋಮಾಂಚನವಾದ ವೇಳೆ ಚರ್ಮದಲ್ಲಿ ಕೂದಲುಗಳು ನೆಟ್ಟಗಾಗುವುದು. ಪ್ರತಿಯೊಬ್ಬರಿಗೂ ಜೀವನದಲ್ಲಿ ಒಂದು ಸಲವಾದರೂ ರೋಮಾಂಚನದ ಅನುಭವವನ್ನು ಅನುಭವಿಸಿಯೇ ಇರುತ್ತಾರೆ. ಹಾಗಾದರೆ ಈ ರೋಮಾಂಚನ ಎಂದರೇನು ಎನ್ನುವ ಬಗ್ಗೆ ಮಾಹಿತಿ ತಿಳಿಯುವ.

 
ಹೆಲ್ತ್