Back
Home » ಸಮ್ಮಿಲನ
ಚಿಕ್ಕ ವಯಸ್ಸಿನಲ್ಲೇ ನೀವು ಸಹ ರೋಲ್ ಮಾಡೆಲ್‌ ಆಗಬೇಕಾ? ಈ ಸಲಹೆಗಳನ್ನು ಪಾಲಿಸಿ
Boldsky | 7th Nov, 2019 04:41 PM
 • ಇವುಗಳನ್ನು ತಪ್ಪದೆ ಪಾಲಿಸಿ

  ನಿಮ್ಮದೇ ಆದ ಶೈಲಿಯನ್ನು ಬೆಳೆಸಿಕೊಳ್ಳಿರಿ. ಓರ್ವ ವ್ಯಕ್ತಿಯಾಗಿ, ನಿಮ್ಮಲ್ಲಿಯೇ ನೀವು ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುತ್ತಾ ಸಾಗಿದಂತೆಲ್ಲಾ, ಅದಕ್ಕೆ ತಕ್ಕುದಾದ ವರ್ತನೆಯನ್ನೂ ರೂಢಿಸಿಕೊಳ್ಳಿರಿ. ಹತ್ತರೊಳಗೆ ಹನ್ನೊಂದನೆಯರಾಗುವ ಜಾಯಮಾನದವರು ನೀವಾಗಬೇಡಿರಿ. ಸಮಾನ ಆಸಕ್ತಿ, ಅಭಿರುಚಿಗಳಿರುವ ಮಿತ್ರರ ಗುಂಪನ್ನು ಹೊಂದಿರುವುದು ತಪ್ಪೇನಲ್ಲ. ಆದರೆ, ನೀವು ನೀವಾಗಿರುವುದನ್ನು ಮರೆಯಬೇಡಿರಿ. ಯಾರನ್ನೇ ಆಗಲೀ ಅಥವಾ ಯಾವುದನ್ನೇ ಆಗಲೀ ಬಲವಂತ ಮಾಡಲು ಹೋಗಬೇಡಿರಿ.

  ಇತರರು ನಿಮ್ಮ ಕುರಿತು ಏನೆಂದುಕೊಳ್ಳುತ್ತಾರೋ ಎಂದು ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ನೀವು ಕೇವಲ ನಿಮ್ಮ ಬಗ್ಗೆಯಷ್ಟೇ ಚಿಂತಿಸಿದರೆ ಅಷ್ಟೇ ಸಾಕು. ಇತರರು ನಿಮ್ಮನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಬೇಕೆಂದು ನೀವು ಒತ್ತಾಯಪಡಿಸುವಂತಿಲ್ಲ ಮತ್ತು ಹಾಗೆ ಯಾವ ರೂಪದಲ್ಲಿಯಾದರೂ ಒತ್ತಾಯಪಡಿಸುವುದು ಸರಿಯೂ ಅಲ್ಲ. ನೀವು ನೀವಾಗಿಯೇ ಇದ್ದರಷ್ಟೇ ಸಾಕು. ಆದರೆ ನೆನಪಿಡಿ, ಇವ್ಯಾವುವೂ ನಿಮ್ಮ ಮನಶಾಂತಿ, ನೆಮ್ಮದಿಗಳನ್ನು ಕದಡುವಂತಾಗಬಾರದು. ಯಾರಿಗೋಸ್ಕರವಾಗಿಯಾದರೋ ನೀವು ಬದಲಾಗುವುದು ಬೇಡ. ಪ್ರತಿದಿನವೂ ನಿಮ್ಮೊಳಗೆಯೇ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವತ್ತ ಮುಂದೆ ಸಾಗಿರಿ.


 • ಸ್ವಂತ ವ್ಯಕ್ತಿತ್ವ ಕಾಪಾಡಿಕೊಳ್ಳಿ

  ಈಗಾಗಲೇ ತಿಳಿಸಿರುವ ಹಾಗೆ ನೀವು ನೀವಾಗಿಯೇ ಇರಿ ಹಾಗೂ ನೀವೇನನ್ನು ಮಾಡುವಿರೋ ಅದರಲ್ಲಿ ನಿಮಗೆ ಆತ್ಮವಿಶ್ವಾಸವಿರಲಿ. ಇನ್ನೊಬ್ಬರನ್ನು ನಕಲು ಮಾಡಲು ನೀವು ಮುಂದಾಗುವುದು ಬೇಡ, ಈ ದೃಷ್ಟಿಯಲ್ಲಿ ಗುಂಪಿನಿಂದ ಪ್ರತ್ಯೇಕವಾಗಿ ನಿಲ್ಲಿ. ಯಾರೇ ಆಗಲೀ, ಇನ್ನ್ಯಾರನ್ನೋ ಸುಮ್ಮನೇ ಅಂಧಾನುಕರಣೆ ಮಾಡುತ್ತಾರೆಯೆಂದರೆ, ಅದರರ್ಥ ಅವರ ಮಾನಸಿಕ ಸ್ಥಿತಿಯು ಅಭದ್ರವಾಗಿದೆ ಎಂದಷ್ಟೇ ಆಗಿರುತ್ತದೆ ಹಾಗೂ ಅವರಿಗೆ ನಿಮ್ಮಂತೆ ಅವರದ್ದೇ ಆದ ವ್ಯಕ್ತಿತ್ವವಿಲ್ಲ ಎಂದಾಗಿರುತ್ತದೆ!


 • ಹೊಸ ದಾರಿ ಸೃಷ್ಟಿಸಿ

  ತನ್ನದೇ ಆದ ಹೊಸ ದಾರಿಯನ್ನು ಕಂಡುಕೊಳ್ಳುವವನಷ್ಟೇ ಇತರರಿಗೆ ಮಾದರಿ ಎನಿಸಿಕೊಳ್ಳುತ್ತಾನೆಯೇ ಹೊರತು, ಇನ್ನೊಬ್ಬರನ್ನು ಅಂಧಾನುಕರಣೆ ಮಾಡುವವನಲ್ಲ. ತಮ್ಮ ಕುರಿತಂತೆ ಸ್ವಯಂ ತಾವೇ ನಿರ್ಣಯವನ್ನು ತೆಗೆದುಕೊಳ್ಳುವವರನ್ನಷ್ಟೇ ಜನರು ಗೌರವಿಸುತ್ತಾರೆಯೇ ಹೊರತು, ಇನ್ನೊಬ್ಬರ ತಾಳಕ್ಕೆ ತಕ್ಕಂತೆ ಕುಣಿಯುವವರನ್ನಲ್ಲ. ನಿಮ್ಮ ಯೋಚನೆಯು ಸದಾ ನೀವು ಹೇಗಿರಬೇಕೆಂಬುದರ ಕುರಿತಷ್ಟೇ ಇರಲಿ. ಸ್ವಯಂ ನಿಮಗೋಸ್ಕರ ನೀವು ಇನ್ನಷ್ಟು ಉತ್ತಮರಾಗುವತ್ತ ಪ್ರಯತ್ನಿಸಬೇಕೇ ಹೊರತು ಇನ್ಯಾರಿಗೋಸ್ಕರವಾಗಿಯೋ ಅಲ್ಲ. ಸುಧಾರಣೆಗೆ ಯಾವಾಗಲೂ ಕಾಲಾವಕಾಶ ಇದ್ದೇ ಇರುತ್ತದೆ. ಆದರೆ, ಸುಧಾರಣೆ ಹೊಂದುವ ಮನಸ್ಸು ನಮ್ಮದಾಗಿರಬೇಕಷ್ಟೇ.


 • ವಿನಯಶೀಲರಾಗಿರಿ

  ರೋಲ್ ಮಾಡೆಲ್ ಗಳೆನಿಸಿಕೊಂಡವರು ಯಾವಾಗಲೂ ತಮ್ಮ ಸಾಧನೆಗಳ ಬಗ್ಗೆ ತಾವೇ ತುತ್ತೂರಿ ಊದಲಾರರು. ರೋಲ್ ಮಾಡೆಲ್ ಆಗಬೇಕೆನ್ನುವ ದಿಶೆಯಲ್ಲಿ ನೀವು ಕೈಗೊಳ್ಳುವ ಕೆಲಸಗಳ ಫಲಿತಾಂಶವು ಧುತ್ತನೆ ಇನ್ನೊಬ್ಬರಲ್ಲಿ ಕಂಡುಬರಬೇಕೆಂಬ ನಿರೀಕ್ಷೆಯನ್ನು ಎಂದೂ ಇಟ್ಟುಕೊಳ್ಳಬೇಡಿರಿ. ಈಗಾಗಲೇ ತಿಳಿಸಿರುವಂತೆ, "ನನ್ನನ್ನು ರೋಲ್ ಮಾಡೆಲ್ ಅಂತಾ ಒಪ್ಪಿಕೋ" ಎಂದು ನೀವು ಯಾರನ್ನೂ ಒತ್ತಾಯ ಮಾಡಲಾಗದು. ಅನೇಕ ಸಂದರ್ಭಗಳಲ್ಲಿ, ನಿಮ್ಮನ್ನು ಮೆಚ್ಚಿಕೊಳ್ಳುವವರು ಸಂಕೋಚ ಸ್ವಭಾವದವರಾಗಿದ್ದಾರು ಮತ್ತು ಅಂತಹವರಲ್ಲಿ ಆತ್ಮವಿಶ್ವಾಸದ ಕೊರತೆಯೂ ಇದ್ದಿರಬಹುದು. ರೋಲ್ ಮಾಡೆಲ್ ಅಂತಾ ಅನ್ನಿಸಿಕೊಳ್ಳುವವರು "ಅಭಿಮಾನಿ" ಗಳ ಅಥವಾ ಜನಪ್ರಿಯತೆಯ ಬೆನ್ನಹಿಂದೆ ಬೀಳಲಾರರು; ಬದಲಿಗೆ ಅವರು ಕೇವಲ ಓರ್ವ ಸಭ್ಯ, ಸುಸಂಸ್ಕೃತ ವ್ಯಕ್ತಿಯಾಗಿರುವತ್ತಲಷ್ಟೇ ಗಮನಹರಿಸುವರು. ನೀವು ನಿಮ್ಮಲ್ಲಿ ಆತ್ಮವಿಶ್ವಾಸವನ್ನು ಕಂಡುಕೊಂಡ ಬಳಿಕ, ಇತರ ಜನರನ್ನು ಹೀನಾಯವಾಗಿ ಕಾಣುವ ಪರಿಯು, ರೋಲ್ ಮಾಡೆಲ್ ಆಗಬೇಕೆಂದು ಬಯಸುವ ನಿಮಗೆ ಶೋಭೆ ತರುವಂತಹದ್ದಲ್ಲ. ಇಂತಹ ಜನರು ಇತರ ಜನರನ್ನು ಕೇವಲ ನೋಯಿಸಿಯಾರೇ ಹೊರತು, ಅವರೆಂದೂ ಇತರರಿಗೆ ರೋಲ್ ಮಾಡೆಲ್ ಆಗಲಾರರು. ಅಹಂಕಾರಿಯಾಗುವುದು ಬೇಡ. ಇತರರಿಗೆ ನೀವು ತೋರಿಸುವ ಗೌರವವೇ "ನಿಮ್ಮತನದ" ಹಾಗೂ ನಿಮ್ಮ ವ್ಯಕ್ತಿತ್ವದ ಮೊದಲ ಹೆಜ್ಜೆಯಾಗಿರಬೇಕು. ರೋಲ್ ಮಾಡೆಲ್ ಆಗುವುದೆಂದರೆ, ನಿಮ್ಮ ತಲೆಗೊಂದು ಕಿರೀಟ ಬಂದಿತೆಂಬ ಭ್ರಮೆ ನಿಮ್ಮನ್ನು ಕಾಡದಿರಲಿ.


 • ಬದ್ಧವಾಗಿರಿ

  ನಿಮಗಾಗಿ ನೀವು ಅಂದುಕೊಂಡಿರುವ ಪಾತ್ರವನ್ನು ನಿರ್ವಹಿಸಿರಿ. ನಿಮ್ಮ ಕುರಿತಾಗಿ ಮತ್ತು ಇತರರೊಡನೆ ನಿಮ್ಮ ಸಂಬಂಧದ ಕುರಿತಾಗಿ ಒಂದು ಒಳ್ಳೆಯ ಸಕಾರಾತ್ಮಕ ಚಿತ್ರಣವನ್ನು ನೀವು ಕಂಡುಕೊಂಡ ಬಳಿಕ, ಅದಕ್ಕೆ ಬದ್ಧರಾಗಿರಿ! ನೆನಪಿಡಿ, ಇದು ಕೇವಲ ಒಂದು ಕ್ರಿಯೆಯಾಗಿರಬಾರದು, ಬದಲಿಗೆ ಅದು ನಿಮ್ಮ ಜೀವನ ವಿಧಾನವಾಗಿರಬೇಕು. ರೋಲ್ ಮಾಡೆಲ್ ಅಥವಾ ಓರ್ವ ಆದರ್ಶವ್ಯಕ್ತಿಯಾಗಬೇಕೆಂಬ ನಿಮ್ಮ ಇಚ್ಛೆಯು, ಮಾದಕ ದ್ರವ್ಯಗಳು ಹಾಗೂ ಮದ್ಯಪಾನದ ಕುರಿತು ನೀವು ತಳೆಯುವ ನಿರ್ಧಾರಗಳಿಂದ ಆರಂಭಿಸಿ, ಕ್ರೀಡೆಗಳಲ್ಲಿ ನೀವು ಹಾಕುವ ಪ್ರಯತ್ನಗಳವರೆಗೂ, ನೀವು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ನಿಮಗೆ ಮಾರ್ಗದರ್ಶಿಯಾಗಿರಲಿ. ಸ್ಪೂರ್ತಿದಾಯಕವಲ್ಲದ ಯಾವುದೇ ಆಯಾಮವೂ ನಿಮ್ಮ ಜೀವನದಲ್ಲಿರಲು ಸಾಧ್ಯವೇ ಇಲ್ಲ!

  ಸಲಹೆಗಳು

  ಅಹಂಕಾರಿಯಾಗುವುದು ಬೇಡ. ಇತರರಿಗೆ ನೀವು ತೋರಿಸುವ ಗೌರವವೇ "ನಿಮ್ಮತನದ" ಹಾಗೂ ನಿಮ್ಮ ವ್ಯಕ್ತಿತ್ವದ ಮೊದಲ ಹೆಜ್ಜೆಯಾಗಿರಬೇಕು. ರೋಲ್ ಮಾಡೆಲ್ ಆಗುವುದೆಂದರೆ, ನಿಮ್ಮ ತಲೆಗೊಂದು ಕಿರೀಟ ಬಂದಿತೆಂಬ ಭ್ರಮೆ ನಿಮ್ಮನ್ನು ಕಾಡದಿರಲಿ.

  ನೀವು ನೀವಾಗಿರಿ - ಅರ್ಥಾತ್ ನಿಮ್ಮತನವಷ್ಟೇ ನಿಮ್ಮ ಅಭಿವ್ಯಕ್ತಿಯಾಗಿರಲಿ. ಆದರೆ ನೆನಪಿಡಿ, ಇವ್ಯಾವುವೂ ನಿಮ್ಮ ಮನಶಾಂತಿ, ನೆಮ್ಮದಿಗಳನ್ನು ಕದಡುವಂತಾಗಬಾರದು. ಯಾರಿಗೋಸ್ಕರವಾಗಿಯಾದರೋ ನೀವು ಬದಲಾಗುವುದು ಬೇಡ. ಪ್ರತಿದಿನವೂ ನಿಮ್ಮೊಳಗೆಯೇ ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳುವತ್ತ ಮುಂದೆ ಸಾಗಿರಿ.

  ಈಗಾಗಲೇ ತಿಳಿಸಿರುವ ಹಾಗೆ ನೀವು ನೀವಾಗಿಯೇ ಇರಿ ಹಾಗೂ ನೀವೇನನ್ನು ಮಾಡುವಿರೋ ಅದರಲ್ಲಿ ನಿಮಗೆ ಆತ್ಮವಿಶ್ವಾಸವಿರಲಿ. ಇನ್ನೊಬ್ಬರನ್ನು ನಕಲು ಮಾಡಲು ನೀವು ಮುಂದಾಗುವುದು ಬೇಡ, ಈ ದೃಷ್ಟಿಯಲ್ಲಿ ಗುಂಪಿನಿಂದ ಪ್ರತ್ಯೇಕವಾಗಿ ನಿಲ್ಲಿ. ಯಾರೇ ಆಗಲೀ, ಇನ್ನ್ಯಾರನ್ನೋ ಸುಮ್ಮನೇ ಅಂಧಾನುಕರಣೆ ಮಾಡುತ್ತಾರೆಯೆಂದರೆ, ಅದರರ್ಥ ಅವರ ಮಾನಸಿಕ ಸ್ಥಿತಿಯು ಅಭದ್ರವಾಗಿದೆ ಎಂದಷ್ಟೇ ಆಗಿರುತ್ತದೆ ಹಾಗೂ ಅವರಿಗೆ ನಿಮ್ಮಂತೆ ಅವರದ್ದೇ ಆದ ವ್ಯಕ್ತಿತ್ವವಿಲ್ಲ ಎಂದಾಗಿರುತ್ತದೆ!

  ಯಾರನ್ನೇ ಆಗಲೀ ಅಥವಾ ಯಾವುದನ್ನೇ ಆಗಲೀ ಬಲವಂತ ಮಾಡಲು ಹೋಗಬೇಡಿರಿ. ಇತರರು ನಿಮ್ಮ ಕುರಿತು ಏನೆಂದುಕೊಳ್ಳುತ್ತಾರೋ ಎಂದು ನೀವು ಚಿಂತಿಸಬೇಕಾದ ಅಗತ್ಯವಿಲ್ಲ. ನೀವು ಕೇವಲ ನಿಮ್ಮ ಬಗ್ಗೆಯಷ್ಟೇ ಚಿಂತಿಸಿದರೆ ಅಷ್ಟೇ ಸಾಕು. ಇತರರು ನಿಮ್ಮನ್ನು ರೋಲ್ ಮಾಡೆಲ್ ಆಗಿ ಸ್ವೀಕರಿಸಬೇಕೆಂದು ನೀವು ಒತ್ತಾಯಪಡಿಸುವಂತಿಲ್ಲ ಮತ್ತು ಹಾಗೆ ಯಾವ ರೂಪದಲ್ಲಿಯಾದರೂ ಒತ್ತಾಯಪಡಿಸುವುದು ಸರಿಯೂ ಅಲ್ಲ.

  ಎಚ್ಚರಿಕೆಗಳು

  ಕೆಲವೊಮ್ಮೆ, ರೋಲ್ ಮಾಡೆಲ್ ಗಳು ಅಸೂಯೆ ಮತ್ತು ಅತೃಪ್ತಿಯನ್ನೂ ಹುಟ್ಟುಹಾಕುವುದುಂಟು. ನಿಮ್ಮದೇ ಜೀವನದ ಕುರಿತಾಗಿ ನೀವು ತೆಗೆದುಕೊಳ್ಳುವ ಕಾಳಜಿಯ ಕುರಿತು ಇತರರು ಅಸೂಯೆಗೊಳ್ಳುವ ಸಾಧ್ಯತೆಯೂ ಇಲ್ಲದಿಲ್ಲ. ಆದರೆ ಇತರರ ಅಂತಹ ವರ್ತನೆಯು ನಿಮ್ಮನ್ನು ಅಧೀರರನ್ನಾಗಿಸಕೂಡದು.

  "ರೋಲ್ ಮಾಡೆಲ್" ಆಗುವ ದಿಶೆಯಲ್ಲಿ ಇನ್ನ್ಯಾರೋ ಒಬ್ಬರು ಇನ್ನ್ಯಾವುದೋ ವಿಚಾರದಲ್ಲಿ ನಿಮ್ಮನ್ನು ಒತ್ತಾಯಿಸುವುದಕ್ಕೆ ಸರ್ವಥಾ ಅವಕಾಶವನ್ನು ಮಾಡಿಕೊಡಬೇಡಿರಿ. ಯಾವುದಾದರೊಂದಿಗೆ ಮಾಡಿಕೊಳ್ಳುವ ಹೊಂದಾಣಿಕೆಗಿಂತಲೂ ಸ್ವತಂತ್ರ ಮನೋಭಾವವೇ ಪ್ರೇರೇಪಣೆಯನ್ನು, ಸ್ಫೂರ್ತಿಯನ್ನುಂಟು ಮಾಡುವಂತಹದ್ದು ಎಂಬುದನ್ನು ನೆನಪಿನಲ್ಲಿಟ್ಟುಕೊಳ್ಳಿರಿ.

  * ನೀವು ಯಾರನ್ನು ಅನುಸರಿಸಬೇಕೆನ್ನುವುದನ್ನು ಜನರು ನಿರ್ಧರಿಸುವಂತಾಗುವುದು ಬೇಡ. ಈ ವಿಚಾರದಲ್ಲಿ ಇತರರಿಂದ ಬರುವ ಒತ್ತಡದ ವಿರುದ್ಧ ಹೋರಾಡಿರಿ!

  * ನಿಮ್ಮ ರೋಲ್ ಮಾಡೆಲ್ ಯಾರಾಗಿರಬೇಕೆಂಬುದನ್ನು ಸ್ವತ: ನೀವೇ ನಿರ್ಧರಿಸಿರಿ!

  * ಇತರರು ನಿಮ್ಮನ್ನೇ ಅನುಸರಿಸಬೇಕೆಂದು ಒತ್ತಾಯಪಡಿಸಲು ಎಂದೆಂದಿಗೂ ಮುಂದಾಗಬೇಡಿರಿ!

  * ನಿಮ್ಮ ಬುದ್ಧಿಯಮಾತನ್ನೇ ಕೇಳಿರಿ, ಆದರೆ ನಿಮ್ಮ ಹೃದಯ ಹೇಳಿದಂತೆ ಕಾರ್ಯಾಚರಿಸಿರಿ!
ಬಹುತೇಕ ಜನರ ಪಾಲಿಗೆ ರೋಲ್ ಮಾಡೆಲ್ ಗಳೆಂದರೆ ಅವರು ಖ್ಯಾತನಾಮರೋ ಅಥವಾ ಐತಿಹಾಸಿಕ ವ್ಯಕ್ತಿಗಳೋ ಆಗಿರುತ್ತಾರೆ. ಆದರೆ, ನಮ್ಮ ದೈನಂದಿನ ಜೀವನದಲ್ಲಿ ಪ್ರತಿಯೊಬ್ಬರಿಗೂ ಕೂಡಾ ಹೀಗೆ ಇನ್ನೊಬ್ಬರ ಪಾಲಿನ ರೋಲ್ ಮಾಡೆಲ್ ಆಗುವ ಅವಕಾಶವನ್ನು ಜೀವನವು ಕೊಟ್ಟೇ ಕೊಟ್ಟಿರುತ್ತದೆ ಎಂದು ಅದೆಷ್ಟು ಜನರಿಗೆ ಗೊತ್ತು?! ಓರ್ವ ಹದಿಹರೆಯದವರಾಗಿಯೂ ಕೂಡಾ, ನಿಮ್ಮ ಓರಗೆಯವರ ಹಾಗೂ ನಿಮಗಿಂತಲೂ ಕಿರಿಯರೆನಿಸಿಕೊಂಡವರ ಪಾಲಿಗೆ ನೀವೂ ಸ್ಫೂರ್ತಿದಾಯಕರಾಗುವ ಸಾಮರ್ಥ್ಯವು ನಿಮಗಿದ್ದೇ ಇರುತ್ತದೆ. ಕಿರಿಯ ವಯಸ್ಸಿನಲ್ಲಿಯೇ ರೋಲ್ ಮಾಡೆಲ್ ಎಂದು ಕರೆಯಲ್ಪಡುವುದಕ್ಕೆ ಸಹಕಾರಿಯಾಗಬಹುದಾದ ಕೆಲವು ಸಲಹೆಗಳನ್ನು ನಾವು ನಿಮ್ಮ ಮುಂದಿಡುತ್ತಿದ್ದೇವೆ:

ಖುದ್ದು ನಿಮಗಾಗಿಯೇ ಓರ್ವ ರೋಲ್ ಮಾಡೆಲ್ ಅನ್ನು ಆಯ್ದುಕೊಳ್ಳಿರಿ. ನೀವೋರ್ವ ಪ್ರೇರಣಾದಾಯೀ ವ್ಯಕ್ತಿತ್ವದವರಾಗಬೇಕೆಂದಿದ್ದರೆ, ನಿಮ್ಮನ್ನು ಪ್ರೇರೇಪಿಸಬಲ್ಲ ಜನರ ಕುರಿತು ಆಲೋಚಿಸಿರಿ. ಸ್ವಯಂ ನೀವೂ ಒಂದಿಷ್ಟು ಆತ್ಮಾವಲೋಕನದಲ್ಲಿ ತೊಡಗಿಸಿಕೊಳ್ಳಿರಿ. ರೋಲ್ ಮಾಡೆಲ್ ಎಂದು ನೀವು ನೆಚ್ಚಿಕೊಂಡಿರುವ ಆ ವ್ಯಕ್ತಿಯನ್ನು ನೀವು ಅಷ್ಟೆಲ್ಲಾ ಆರಾಧಿಸಲು ಕಾರಣವೇನು? ಅವರ ಕಾರ್ಯ/ಕೃತ್ಯಗಳ ಮೂಲಕ ವ್ಯಕ್ತಿಯು ನೀಡುವ ಸಂದೇಶವಾದರೂ ಏನು ? ನಿಮ್ಮಲ್ಲಿ ಆ ವ್ಯಕ್ತಿಯು ಸ್ಪೂರ್ತಿಯ ಕಿಡಿಯನ್ನು ಹೊತ್ತಿಸಿದಂತೆಯೇ, ನೀವೂ ಇತರರ ಮೇಲೆ ಅದೇ ರೀತಿ ಹೇಗೆ ಪ್ರಭಾವಿಸಬಲ್ಲಿರಿ? -ಈ ಪ್ರಶ್ನೆಗಳಿಗೆ ಆತ್ಮಾವಲೋಕನದ ಮೂಲಕ ಉತ್ತರವನ್ನು ಕಂಡುಕೊಳ್ಳಿರಿ.

 
ಹೆಲ್ತ್