Back
Home » ಪ್ರವಾಸ
ಸುರಕ್ಷಿತ ಮತ್ತು ಆರಾಮದಾಯಕ ಚಳಿಗಾಲದ ಟ್ರೆಕ್ಕಿಂಗ್ ಗೆ ಇಲ್ಲಿದೆ ಸಲಹೆಗಳು
Native Planet | 7th Nov, 2019 05:00 PM
 • 1. ಈರುಳ್ಳಿ ರೀತಿ ಡ್ರೆಸ್ ಮಾಡಿಕೊಳ್ಳಿ

  ನಾವೆಲ್ಲರೂ ಇದನ್ನು ಮೊದಲೇ ಕೇಳಿದ್ದೇವೆ, ಶೀತ ವಾತಾವರಣದಲ್ಲಿ ಸಕ್ರಿಯವಾಗಿರುವಾಗ ಆರಾಮವಾಗಿರಲು ಉತ್ತಮ ಮಾರ್ಗವೆಂದರೆ ಬಟ್ಟೆಗಳ ಮೇಲೆ ಬಟ್ಟೆ ಧರಿಸುವುದು. ಮತ್ತು ಇದು ನಿಜ! ಬೆಚ್ಚಗಿನ, ಆರಾಮದಾಯಕ ಮತ್ತು ಸುರಕ್ಷಿತವಾಗಿರಲು ನೀವು ಸರಿಯಾದ ಬಟ್ಟೆಗಳನ್ನು ಧರಿಸುವುದು ಅತ್ಯಗತ್ಯ.

  ಪರಿಸ್ಥಿತಿಗಳಿಗೆ ಅನುಗುಣವಾಗಿ ಬಟ್ಟೆಗಳನ್ನು ಧರಿಸಿ

  ಎ. ಒಳಗೆ : ತೇವಾಂಶ-ಹೀರಿಕೊಳ್ಳುವ ಅಥವಾ ಬೆಚ್ಚಗಿನ ಬಟ್ಟೆಯನ್ನು ಧರಿಸಿ.

  ಬಿ. ಮಧ್ಯ: ಉಣ್ಣೆಯಿಂದ ಮಾಡಿದಂತ ಬಟ್ಟೆ ಧರಿಸಿ .

  ಸಿ. ಹೊರಗೆ : ನೀರು / ಗಾಳಿ ಹೀರಿಕೊಳ್ಳುವ ಬಟ್ಟೆಯನ್ನು ಧರಿಸಿ.

  ಡಿ. ಟೋಪಿ ಮತ್ತು ಕೈಗವಸುಗಳು

  ಇ. ಉತ್ತಮ ಸಾಕ್ಸ್‌ ಜಲನಿರೋಧಕ ಬೂಟುಗಳು

  ಎಫ್. ನಿಮ್ಮ ಮುಖಕ್ಕೆ ತಲೆ, ಕುತ್ತಿಗೆ ಮತ್ತು ಅರ್ಧ ಮುಖವನ್ನು ಆವರಿಸುವ ಕ್ಯಾಪ್ ಬಳಸಿ, ನಿಮ್ಮ ಕನ್ನಡಕ ಮತ್ತು ಮೂಗಿಗೆ ಉಸಿರಾಡಲು ಜಾಗವನ್ನು ಬಿಡಿ.


 • 2. ಸಣ್ಣದಾಗಿ ಪ್ರಾರಂಭಿಸಿ ಮತ್ತು ಮುಂಚಿತವಾಗಿ ಪ್ರಾರಂಭಿಸಿ

  ನಿಮ್ಮ ಮೊದಲ ಚಳಿಗಾಲದ ಚಾರಣವನ್ನು ಪ್ರಾರಂಭಿಸುವ ಮುನ್ನ, ಅದರ ದೂರ ಮತ್ತು ಅಲ್ಲಿನ ಕಷ್ಟಗಳ ಬಗ್ಗೆ ಸಮಂಜಸವಾಗಿ ತಿಳಿದುಕೊಳ್ಳಿ. ನೀವು ಕಷ್ಟವಿಲ್ಲದೆ ನಿಭಾಯಿಸಬಹುದೆಂದು ನಿಮಗೆ ತಿಳಿದಿರುವ ಜಾಡು ಆಯ್ಕೆಮಾಡಿಕೊಳ್ಳಿ..

  ಅಲ್ಲದೆ, ಆದಷ್ಟು ಮುಂಜಾನೆ ಸಿದ್ಧರಾಗಿರಿ. ಏಕೆಂದರೆ ಚಳಿಗಾಲದಲ್ಲಿ ಸೂರ್ಯನು ಬೇಗನೆ ಮುಳುಗುತ್ತಾನೆ ಎಂಬುದನ್ನು ಮರೆಯಬೇಡಿ. ಕಳೆದುಹೋಗುವುದನ್ನು ಅಥವಾ ಅಪಘಾತವನ್ನು ತಪ್ಪಿಸಲು ಕತ್ತಲೆಯಾಗುವ ಮೊದಲೇ ನಿರ್ಧರಿಸಿರುವ ಜಾಗ ತಲುಪುವ ದಾರಿ ಹಿಡಿಯಲು ಯೋಜಿಸಿ.


 • 3. ಚಾರಣಕ್ಕೆ ಸೂಕ್ತವಾದ ಬೂಟುಗಳನ್ನು ಧರಿಸಿ

  ಚಳಿಗಾಲದಲ್ಲಿ ಒಂದು ಜೋಡಿ ಬೆಚ್ಚಗಿನ, ಗಟ್ಟಿಮುಟ್ಟಾದ ಚಾರಣಕ್ಕೆ ಸೂಕ್ತವಾದ ಬೂಟುಗಳನ್ನು ಹಾಕಿಕೊಂಡು ಹೋಗುವುದನ್ನು ಮರೆಯಬೇಡಿ. ಹೊರಡುವ ಮೊದಲು ಬೂಟುಗಳು ಸರಿಯಾಗಿ ಹೊಂದಿಕೊಳ್ಳುತ್ತವೆಯೆ ಎಂದು ಖಚಿತಪಡಿಸಿಕೊಳ್ಳುವುದು ಬಹಳ ಮುಖ್ಯ. ಹಿಮಭರಿತ ಇಳಿಜಾರಿನ ಮೇಲೆ ಭಾರವಾದ ಹೊರೆಯನ್ನು ಹೊತ್ತೊಯ್ಯುವಾಗ ಸರಿಯಾದ ಬೂಟ್‌ಗಳು ಹೆಚ್ಚುವರಿ ಬೆಂಬಲವನ್ನು ನೀಡುತ್ತವೆ, ಆಲ್ಲದೆ ಅವುಗಳು ಇತರ ಶೂಸ್ ಗಳಿಗಿಂತ ಹೆಚ್ಚು ಬೆಚ್ಚಗಿರುತ್ತವೆ. ಹೆಚ್ಚಿನ ಉಷ್ಣತೆಗಾಗಿ ದಪ್ಪ ಜೋಡಿ ಉಣ್ಣೆ ಅಥವಾ ಸಾಕ್ಸ್ ಧರಿಸಲು ಮರೆಯಬೇಡಿ.


 • 4. ನೀರು ಕುಡಿಯಿರಿ

  ಚಳಿಗಾಲದಲ್ಲಿ ಯಾರು ಸಹ ಸಾಕಷ್ಟು ನೀರು ಕುಡಿಯುವುದಿಲ್ಲ. ಆದರೆ, ನೀವು ಚಾರಣಕ್ಕೆ ಹೋದಾಗ, ಸಾಕಷ್ಟು ನೀರು ಕುಡಿದು ನಿಮ್ಮನ್ನು ನೀವು ನಿರ್ಜಲೀಕರಣವಾಗದಂತೆ ನೋಡಿಕೊಳ್ಳಿ. ನಿಮ್ಮ ಬಾಟಲಿನ ವಾಟರ್ ಘನೀಕರಿಸದಂತೆ ಮಾಡಲು ಇನ್ಸುಲೇಟೆಡ್ ವಾಟರ್ ಬಾಟಲಿಗಳು ಅಥವಾ ಥರ್ಮೋಸ್ ಬಳಸಿ.


 • 5. ಹವಾಮಾನವನ್ನು ಪರಿಶೀಲಿಸಿ

  ನಿಮ್ಮ ಪ್ರವಾಸದ ಪರಿಸ್ಥಿತಿಗಳ ಸಂಪೂರ್ಣ ಚಿತ್ರಣವನ್ನು ಪಡೆಯುವುದು ಅತಿ ಮುಖ್ಯವಾದುದು. ಸ್ಥಳದ ಪರಿಸ್ಥಿತಿ ಬಗ್ಗೆ ಮೊದಲೇ ತಿಳಿದುಕೊಳ್ಳುವುದು ನಿಮಗೆ ಒಳ್ಳೆಯದು. ಪರಿಸ್ಥಿಗಳನ್ನು ಸರಿಯಾಗಿ ನಿರ್ವಹಿಸಬಹುದಾದ ಸಮಯದಲ್ಲಿ ಮಾತ್ರ ಚಾರಣವನ್ನು ಕೈಗೊಳ್ಳಿ


 • 6. ಸದಾ ಎಚ್ಚರವಾಗಿರಿ

  ನಿಮ್ಮ ಇರುವಿಕೆ, ನಿಮ್ಮ ಸುತ್ತಮುತ್ತಲಿನ ಸ್ಥಳಗಳು, ಹವಾಮಾನ, ಹವಾಮಾನ ಬದಲಾವಣೆ ಮತ್ತು ನಿಮಗೆ ಆಗಿರುವ ಗಾಯಗಳ ಬಗ್ಗೆ ಎಚ್ಚರವಾಗಿರಿ. ನಿಮ್ಮ ಗಾಯಗಳು ತೀವ್ರಗೊಳ್ಳುವ ಮೊದಲು ಯಾವಾಗಲೂ ಜಾಗರೂಕರಾಗಿರಿ ಮತ್ತು ಸರಿಯಾದ ಚಿಕಿತ್ಸೆ ಮಾಡಿಕೊಳ್ಳಿ .


 • 7. ಪೋಷಣೆ

  ಉತ್ತಮ ಉಪಹಾರ ಮತ್ತು ಭೋಜನವನ್ನು ನೀವು ನಡೆಯುವ ದಾರಿಯಲ್ಲೂ ಸಹ ತಿನ್ನಬೇಕು. ಆದ್ದರಿಂದ ನಿಮ್ಮೊಂದಿಗೆ ಚಾಕೊಲೇಟ್ ಗಳು, ನಟ್ಸ್ , ಡ್ರೈ ಫ್ರೂಟ್ಸ್ , ತಿಂಡಿಗಳು ಮತ್ತು ಇತ್ಯಾದಿಗಳನ್ನು ಒಯ್ಯಿರಿ. ಇವು ನಿಮ್ಮ ಪ್ರವಾಸದುದ್ದಕ್ಕೂ ಶಕ್ತಿಯುತವಾಗಿಯೂ ಮತ್ತು ದೃಢವಾಗಿರಲು ಇದು ನಿಮಗೆ ಸಹಾಯ ಮಾಡುತ್ತದೆ.


 • 8. ಅನುಭವಿ ಸ್ನೇಹಿತ ಅಥವಾ ಒಂದು ಗುಂಪಿನೊಂದಿಗೆ ಪ್ರಯಾಣಿಸಿ

  ವಿಶೇಷವಾಗಿ ಚಳಿಗಾಲದಲ್ಲಿ ಸ್ನೇಹಿತನೊಂದಿಗೆ ಸಾಹಸಕ್ಕೆ ಹೋಗುವುದು ಯಾವಾಗಲೂ ಮೋಜಿನ ಮಾರ್ಗವಾಗಿದೆ, ಸಾಹಸವನ್ನು ಇತರರೊಂದಿಗೆ ಹಂಚಿಕೊಳ್ಳುವುದು ಹೆಚ್ಚು ಖುಷಿಯಾಗುವುದು ಮಾತ್ರವಲ್ಲ, ಗುಂಪಿನೊಂದಿಗೆ ಇರುವುದು ಸಹ ಸುರಕ್ಷಿತವಾಗಿದೆ. ಅನುಭವಿ ಸ್ನೇಹಿತ ನಿಮಗೆ ಗೇರ್ ಆಯ್ಕೆ ಮಾಡಲು, ಕ್ರಾಂಪನ್ಸ್ ಅಥವಾ ಸ್ನೋಶೂಗಳನ್ನು ಬಳಸಲು ಮತ್ತು ಅಪಾಯಕಾರಿ ಪರಿಸ್ಥಿತಿಗಳನ್ನು ಗುರುತಿಸಲು ನಿಮಗೆ ಸಹಾಯ ಮಾಡಬಹುದು. ಅಲ್ಲದೆ, ಚಳಿಗಾಲದ ಚಾರಣಿಗರಲ್ಲಿ ಸಾಮಾನ್ಯವಾಗಿ ಹೆಚ್ಚುವರಿ ಕೈಗವಸುಗಳು, ಪಾದರಕ್ಷೆಗಳು ಮತ್ತು ಕನ್ನಡಕಗಳನ್ನು ಹೊಂದಿರುತ್ತಾರೆ ಅವುಗಳನ್ನು ನೀವು ಎರವಲು ಪಡೆಯಬಹುದು.
ಚಾರಣವು ಸಂತೋಷಕರ ಮತ್ತು ಸರಳ ಚಟುವಟಿಕೆಯಾಗಿದೆ. ನೀವು ಯಾವ ಹವಾಮಾನಕ್ಕೆ ಹೋದರೂ ಚಾರಣ ಮಾಡುವುದು ಯಾವಾಗಲೂ ಒಂದು ಮೋಜಿನ ಚಟುವಟಿಕೆಯಾಗಿದೆ! ಸಾಹಸ ಪ್ರವಾಸಕ್ಕೆ ಹೋಗುವುದು, ಪ್ರಕೃತಿಗೆ ಹತ್ತಿರವಾಗಲು ಮತ್ತು ಇತ್ತೀಚಿನ ತಂತ್ರಜ್ಞಾನಗಳು, ಗ್ಯಾಜೆಟ್‌ಗಳ ಹೊರತಾಗಿಯೂ ನಾವು ಎಷ್ಟು ದುರ್ಬಲರಾಗಿದ್ದೇವೆ ಎಂಬುದನ್ನು ಅರಿತುಕೊಳ್ಳಲು ಸಹಾಯ ಮಾಡುತ್ತದೆ.

ವಿಶೇಷವಾಗಿ ನೀವು ಚಳಿಗಾಲದ ಸಮಯದಲ್ಲಿ ಸಾಹಸ ಚಾರಣ ಪ್ರವಾಸಕ್ಕೆ ಹೋಗುತ್ತಿದ್ದಾರೆ ಸಂಪೂರ್ಣವಾಗಿ ಸಿದ್ಧರಾಗಿರಬೇಕು, ಚಳಿಗಾಲದಲ್ಲಿ ಸುರಕ್ಷಿತ ಮತ್ತು ಆರಾಮದಾಯಕ ಚಾರಣಕ್ಕೆ ಸಹಾಯ ಮಾಡಲು 10 ಸಲಹೆಗಳು ಇಲ್ಲಿವೆ.

 
ಹೆಲ್ತ್